Katrina Kaif: ಆಲಿಯಾ-ರಣಬೀರ್​ ಕುರಿತು ಮಾಜಿ ಪ್ರಿಯತಮೆ ಕತ್ರೀನಾ ಕೈಫ್​ ಏನಂದ್ರು?

Ranbir Kapoor: ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ಆಲಿಯಾ ಭಟ್​ ತಾನು ರಣಬೀರ್​ ಅವರನ್ನು ಮದುವೆಯಾಗಲು ಬಯಸುವುದಾಗಿ ಹೇಳಿಕೊಂಡಿದ್ದರು. ರಣಬೀರ್​ ಮುದ್ದಾಗಿ ಕಾಣುತ್ತಾನೆ ಅವನನ್ನು ವಿವಾಹವಾಗುತ್ತೇನೆ ಎಂದಿದ್ದರು.

Alia Bhatt, Ranbir Kapoor, katrina kaif,

Alia Bhatt, Ranbir Kapoor, katrina kaif,

 • Share this:
  Alia Bhatt-Katrina Kaif: ಬಾಲಿವುಡ್​ ನಟಿಯರಾದ ಆಲಿಯಾ ಭಟ್(Alia Bhatt)​ ಮತ್ತು ಕತ್ರೀನಾ ಕೈಫ್​​ ಉತ್ತಮ ಸ್ನೇಹಿತರಾಗಿದ್ದರು. ಒಟ್ಟಿಗೆ ಜಿಮ್​ಗೆ ತೆರಳುವುದರಿಂದ ಹಿಡಿದು, ಸುತ್ತಾಡುವುದು, ಪಾರ್ಟಿಗೆ ತೆರಳುವುದು, ನಿಯತಕಾಲಿಕೆಗಳ ಫೋಟೋಶೂಟ್​ನಲ್ಲಿ ಕಾಣಿಸಿಕೊಳ್ಳುವರೆಗೆ ಒಟ್ಟಿಗೆ ಇರುತ್ತಿದ್ದರು. ಆದರೆ ಆಲಿಯಾ ಯಾವಾಗ ರಣಬೀರ್​ ಕಪೂರ್​ ಜೊತೆಗೆ ಡೇಟಿಂಗ್​ ಆರಂಭಿಸಿದರೋ ಅಲ್ಲಿಂದ ಎಲ್ಲವೂ ಬದಲಾಯಿತು.

  ರಣ್​ಬೀರ್​ ಕಪೂರ್​ (Ranbir Kapoor) ಮತ್ತು ಕತ್ರೀನಾ ಕೈಫ್ (Katrina Kaif)​ ಉತ್ತಮ ಸ್ನೇಹಿತರಾಗಿ ಮಾತ್ರವಲ್ಲದೆ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎಂಬುದು ಬಾಲಿವುಡ್​ನ ಹಳೆಯ ಸುದ್ದಿಗಳಲ್ಲಿ ಒಂದು. ಇವರಿಬ್ಬರು 6 ವರ್ಷಗಳಿಗಿಂತ ಹೆಚ್ಚು ಕಾಲ ಡೇಟಿಂಗ್​ ಮಾಡಿದ್ದಾರೆ ಎಂಬ ಮಾತಿದೆ. ಆದರೀಗ ಇವರಿಬ್ಬರು ದೂರವಾಗಿದ್ದು, ಕತ್ರೀನಾ ಜಾಗದಲ್ಲಿ ಆಲಿಯಾ ಬಂದಿದ್ದಾಳೆ.

  ಇನ್ನು ಕತ್ರೀನಾ ಕೈಫ್​ ಹೆಸರಿನ ಜೊತೆಗೆ ವಿಕ್ಕಿ ಕೌಶಲ್​ ಹೆಸರು ಓಡಾಡುತ್ತಿದ್ದೆ. ಇವರಿಬ್ಬರು ಪ್ರೀತಿಗೆ ಬಿದ್ದಿದ್ದು, ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಇತ್ತೀಚೆಗೆ ವೈರಲ್​ ಆಗಿತ್ತು. ಅಷ್ಟೇ ಏಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬುದು ಕೇಳಿಬಂದಿತ್ತು. ಆದರೆ ಕತ್ರೀನಾ ಅಥವಾ ವಿಕ್ಕಿ ಕೌಶಲ್​ ಆಗಲಿ ಈ ವಿಚಾರದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  ಸದ್ಯ ಆಲಿಯಾ- ರಣಬೀರ್​ ಡೇಟಿಂಗ್​ ವಿಚಾರ ಸದಾ ಸುದ್ದಿಯಲ್ಲಿದೆ. ಇದರಿಂದಾಗಿ ಸ್ನೇಹಿತರಾಗಿದ್ದ ಕತ್ರೀನಾ ಮತ್ತು ಆಲಿಯಾ ನಡುವೆ ಸಣ್ಣ ಬಿರುಕು ಉಂಟಾಗಿದೆ. ಆಲಿಯಾ ಮಾತ್ರ ಕಪೂರನ ಪ್ರೀತಿಯಲ್ಲಿದ್ದಾಳೆ. ಹೀಗಿರುವಾಗ ಮಾಜಿ ಪ್ರಿಯಕರನ ಬಗ್ಗೆ ಕತ್ರೀನಾ ಏನೆಂದು ಪ್ರತಿಕ್ರಿಯಿಸಿದ್ದಾರೆ ಗೊತ್ತಾ?

  ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ಆಲಿಯಾ ಭಟ್​ ತಾನು ರಣಬೀರ್​ ಅವರನ್ನು ಮದುವೆಯಾಗಲು ಬಯಸುವುದಾಗಿ ಹೇಳಿಕೊಂಡಿದ್ದರು. ರಣಬೀರ್​ ಮುದ್ದಾಗಿ ಕಾಣುತ್ತಾನೆ ಅವನನ್ನು ವಿವಾಹವಾಗುತ್ತೇನೆ ಎಂದಿದ್ದರು.

  ಇದನ್ನು ಓದಿ ⇒ Reality Show ವೇದಿಕೆಯಲ್ಲಿ ಸ್ಪರ್ಧಿಗೆ ಕಿಸ್​ ಮಾಡಿ ಕೆನ್ನೆ ಕಚ್ಚಿದ ಕನ್ನಡದ ನಟಿ! ವಿಡಿಯೋ ವೈರಲ್​​

  ಇದೇ ವಿಚಾರವಾಗಿ ಕತ್ರೀನಾ ಕೂಡ ಪ್ರತಿಕ್ರಿಯಿಸಿದ್ದಾರೆ. ಜೂಮ್​ಗೆ ನೀಡಿದ ಸಂದರ್ಶನ ಕಾರ್ಯಕ್ರಮದಲ್ಲಿ ರರಬೀರ್​​ ಕಪೂರ್​ ಕುರಿತಾದ ಪ್ರಶ್ನೆಯೊಂದು ಬರುತ್ತದೆ. ಅದಕ್ಕೆ ಉತ್ತರ ನೀಡಿದ ಕ್ಯಾಟ್​, 15-35 ವರ್ಷದೊಳಗಿನ ಪ್ರತಿಯೊಬ್ಬ ಹುಡುಗಿಯರು ರಣಬೀರ್​ ಅವರನ್ನು ಕ್ರಶ್​ ಆಗಿ ಸ್ವೀಕರಿಸಿಕೊಂಡಿರುತ್ತಾರೆ ಎಂದು ಹೇಳಿದ್ದಾರೆ.

  ಸದ್ಯ ಆಲಿಯಾ ಮತ್ತು ರಣಬೀರ್​ ಪ್ರೀತಿಯ ಬಗ್ಗೆ ಬಾಲಿವುಡ್​ನಾದ್ಯಂತ ಗೊತ್ತಿದೆ. ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲು ಯೋಚಿಸುವ ಬಗ್ಗೆ ಸ್ವತಃ ರಣಬೀರ್​ ಒಪ್ಪಿಕೊಂಡಿದ್ದಾರೆ. ಕೊರೋನಾ ಸಾಂಕ್ರಾಮಿಕ ರೋಗವು ದೇಶದಲ್ಲಿ ಗದ್ದಲ ಮಾಡದಿದ್ದರೆ ಈ ಜೋಡಿ ಈಗಾಗಲೇ ದಾಂಪತ್ಯ ಜೀವನದತ್ತ ಸುಳಿಯುತ್ತಿದ್ದರು.

  ರಣಬೀರ್​​ ಕಫೂರ್​ ಅವರು ರಾಜೀವ್ ಮಸಂದ್ ನಡೆಸಿದ ಸಂದರ್ಶನ ಕಾರ್ಯಕ್ರಮದಲ್ಲಿ ವಿವಾಹ ಬಗ್ಗೆ ಮಾತನಾಡಿದ್ದರು. ಸಾಂಕ್ರಾಮಿಕ ರೋಗವು ದೇಶದತ್ತ ಬಾರದಿದ್ದರೆ ಈಗಾಗಲೇ ಮೊಹರು ಮಾಡಲಾಗುತ್ತಿತ್ತು ಎಂದು ನಾನು ಭಾವಿಸುತ್ತೇನೆ. ನಾನು ಶೀಘ್ರದಲ್ಲೇ ಮದುವೆ ಆಗುತ್ತೇನೆ ಎಂದು ಹೇಳಿದರು.

  ರಣಬೀರ್​ ಆಲಿಯಾ ಅವರನ್ನು ತುಂಬಾ ಇಷ್ಟಪಡುತ್ತಾರೆ ಮಾತ್ರವಲ್ಲದೆ 'ಅತಿ-ಸಾಧಕಿ' ಎಂದೂ  ಆಲಿಯಾನನ್ನು ರಣಬೀರ್​ ಕರೆದಿದ್ದರು.

  ಇದನ್ನು ಓದಿ ⇒ Don’t drink: ನಂಬಿದ್ರೆ ನಂಬಿ…ಈ ತಾರೆಯರು ಎಣ್ಣೆ ಕುಡಿಯಲ್ಲ, ಸಿಗರೇಟ್ ಮುಟ್ಟಲ್ವಂತೆ!

  ಒಟ್ಟಿನಲ್ಲಿ ಪ್ರೀತಿಯಲ್ಲಿ ಬಿದ್ದ ಜೋಡಿಗಳು ವಿವಾಹವಾಗುವ ಮೂಲಕ ಒಂದಾಗುವದನ್ನು ನೋಡುವುದೇ ಚೆಂದ. ಅಭಿಮಾನಿಗಳು ಕೂಡ ಈ ಘಟನೆಯನ್ನು ಕಣ್ಣಾರೆಯಾಗಿ ಕಾಣಲು ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಕೊರೋನಾ ಇಲ್ಲದಿದ್ದರೆ ರನಬೀರ್-ಆಲಿಯಾ ವಿವಾಹವಾಗುತ್ತಿದ್ದರು. ಆದರೆ ಕೊರೋನಾದಿಂದಾಗಿ ಅನೇಕ ಕಾರ್ಯಕ್ರಮಗಳು ಸ್ಥಗಿತಗೊಂಡಿದೆ ಎಂಬುದನ್ನು ನೆನಪಿನಲ್ಲಿಡಬೇಕಾಗಿದೆ.

  ಇತ್ತೀಚೆಗೆ ರಣಬೀರ್​ ಅವರು ಆಲಿಯಾ ಭಟ್​ ಮನೆಗೆ ಹೋಗಿದ್ದಾರೆ. ತಂದೆ ಮಹೇಶ್​ ಭಟ್​ ಅವರ ಹುಟ್ಟುಹಬ್ಬದ ಪ್ರಯುಕ್ತ ಆಲಿಯಾ ಮನೆಗೆ ಹೋಗಿ ಶುಭಾಶಯ ತಿಳಿಸಿ ಬಂದಿದ್ದಾರೆ. ಈ ವೇಳೆ ಸೆಲ್ಫಿ ತೆಗೆದಿದ್ದು. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡಲಾಗಿದೆ.
  Published by:Harshith AS
  First published: