HOME » NEWS » Entertainment » KATRINA KAIF EXTENDS FINANCIAL SUPPORT TO 100 BOLLYWOOD DANCERS HG

ನೃತ್ಯಗಾರರಿಗೆ ನೆರವಾದ ಕತ್ರಿನಾ ಕೈಫ್; ಡ್ಯಾನ್ಸರ್​ಗಳ​​​ ಖಾತೆಗೆ ಹಣ ವರ್ಗಾವಣೆ

100ಕ್ಕೂ ಅಧಿಕ ಹಿನ್ನೆಲೆ ನೃತ್ಯಗಾರರಿಗೆ ಕತ್ರಿನಾ ಕೈಫ್ ಧನಸಹಾಯ ಮಾಡಿದ್ದಾರೆ. ಅದರ ಬ್ಯಾಂಕ್​ ಖಾತೆಗೆ ಹಣ ವರ್ಗಾಯಿಸಿದ್ದಾರೆ.

news18-kannada
Updated:August 10, 2020, 5:53 PM IST
ನೃತ್ಯಗಾರರಿಗೆ ನೆರವಾದ ಕತ್ರಿನಾ ಕೈಫ್; ಡ್ಯಾನ್ಸರ್​ಗಳ​​​ ಖಾತೆಗೆ ಹಣ ವರ್ಗಾವಣೆ
ಕತ್ರಿನಾ ಕೈಫ್
  • Share this:
ಬಾಲಿವುಡ್​ ನಟಿ ಕತ್ರಿನಾ ಕೈಫ್​ ಮಾನವೀಯತೆ ಕಾರ್ಯಮಾಡುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಕೊರೋನಾ ಕಾಲದಲ್ಲಿ ಸಂಕಷ್ಟದಲ್ಲಿದ್ದ ಹಿನ್ನೆಲೆ ನೃತ್ಯಗಾರರಿಗೆ ಧನ ಸಹಾಯ ಮಾಡುವ ಮೂಲಕ ಅವರಿಗೆ ನೆರವಾಗಿದ್ದಾರೆ.

ಮಹಾಮಾರಿ ಕೊರೋನಾದಿಂದಾಗಿ ಅನೇಕರು ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ಸಿನಿಮಾವನ್ನು ನಂಬಿ ಕೆಲಸ ಮಾಡುವವವರ ಬದುಕು ಅತಂತ್ರವಾಗಿದೆ. ಒಂದೆಡೆ ಕೆಲಸವಿಲ್ಲದೆ ಕತ್ತಲಲ್ಲಿ ಬದುಕು ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಿರುವಾಗ 100ಕ್ಕೂ ಅಧಿಕ ಹಿನ್ನೆಲೆ ನೃತ್ಯಗಾರರಿಗೆ ಕತ್ರಿನಾ ಕೈಫ್ ಧನಸಹಾಯ ಮಾಡಿದ್ದಾರೆ. ಅದರ ಬ್ಯಾಂಕ್​ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಕತ್ರಿನಾ ಅವರ ಮಾನವೀಯತೆ ಕಾರ್ಯಕ್ಕೆ ಹಿನ್ನೆಲೆ ನೃತ್ಯಗಾರರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟಿ ಕತ್ರಿನಾ ಮಾಡಿರುವ ಸಹಾಯದಿಂದಾಗಿ ಕೆಲವರು ಸಣ್ಣ ಉದ್ಯಮವನ್ನು ಪ್ರಾರಂಭಿಸಿದ್ದಾರೆ. ತರಕಾರಿ ಮಾರಾಟ, ರಸ್ತೆ ಬದಿಯಲ್ಲಿ ಹೋಟೆಲ್​ ಉದ್ಯಮ ಮಾಡುತ್ತಿದ್ದಾರೆ.

Katrina Kaif is giving a Dish washing tutorial in self isolation
ಕತ್ರಿನಾ ಕೈಫ್​
ಕೊರೋನಾ ಆರಂಭವಾಗಿನಿಂದ ಅನೇಕ ಜನರು ಸಂಕಷ್ಟದಲ್ಲಿದ್ದಾರೆ. ಬಾಲಿವುಡ್​ನ ಅನೇಕ ಸ್ಟಾರ್​ ನಟರು ಸಿನಿಮಾದಲ್ಲಿ ಕೆಲಸ ಮಾಡುವ ಸಿಬ್ಬಂಧಿಗಳಿಗೆ ಮಾತ್ರವಲ್ಲದೆ, ಸಾವರ್ನಿಜನಿಕರಿಗೂ ತಮ್ಮ ಕೈಯಲ್ಲಾಗುವ ಸಹಾಯ ಮಾಡುತ್ತಾ ಬಂದಿದ್ದಾರೆ. ಅಕ್ಷಯ್​ ಕುಮಾರ್​, ಸಲ್ಮಾನ್​ ಖಾನ್​, ಶಾರುಖ್​ ಖಾನ್​, ರಾಕುಲ್​​ ಪ್ರೀತ್ ಸಿಂಗ್​, ವರುಣ್​​ ಧವನ್​​ ಹೀಗೆ ಅನೇಕರ ಸ್ಟಾರ್​ಗಳು ಬಡಜನರಿಗೆ ಆಹಾರ, ವಸತಿಯನ್ನು ಕಲ್ಪಿಸಿಸುವ ಮೂಲಕ ಮಾನವೀಯ ಕಾರ್ಯವನ್ನು ಮಾಡಿದ್ದಾರೆ.


ಇದೀಗ ಕತ್ರಿನಾ ಕೂಡ ಹಿನ್ನೆಲೆ ನೃತ್ಯಗಾರರ ಕಷ್ಟವನ್ನು ಅರಿತು ಸಹಾಯ ಮಾಡಿದ್ದಾರೆ. ಕೊರೋನಾ ಸಮಯದಲ್ಲಿ ಕೆಲಸವಿಲ್ಲದೆ ಪರದಾಡುತ್ತಿದ್ದ 100ಕ್ಕೂ ಹೆಚ್ಚಿನ ನೃತ್ಯಗಾರರಿಗೆ ಬದುಕು ಕಲ್ಪಿಸಿಕೊಟ್ಟಿದ್ದಾರೆ.
Published by: Harshith AS
First published: August 10, 2020, 5:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories