• Home
  • »
  • News
  • »
  • entertainment
  • »
  • Katrina Kaif: ಕತ್ರಿನಾ ಕೈಫ್ ತಮಿಳುನಾಡಿನಲ್ಲಿ ಶಾಲೆ ಆರಂಭಿಸಿದ್ದಾರೆ, ಹೇಗಿದೆ ನೋಡಿ ಈ ಸ್ಕೂಲ್

Katrina Kaif: ಕತ್ರಿನಾ ಕೈಫ್ ತಮಿಳುನಾಡಿನಲ್ಲಿ ಶಾಲೆ ಆರಂಭಿಸಿದ್ದಾರೆ, ಹೇಗಿದೆ ನೋಡಿ ಈ ಸ್ಕೂಲ್

ಶಾಲಾ ಸ್ಥಾಪಕರ ದಿನ ಆಚರಿಸಿದ ಕತ್ರಿನಾ ಕೈಫ್‌

ಶಾಲಾ ಸ್ಥಾಪಕರ ದಿನ ಆಚರಿಸಿದ ಕತ್ರಿನಾ ಕೈಫ್‌

ಕತ್ರಿನಾ ಕೈಫ್ (Katrina Kaif) ಅವರ ತಾಯಿ ಸುಝೇನ್ ಟರ್ಕೋಟ್ ಮತ್ತು ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಅವರು ತಮಿಳುನಾಡಿನಲ್ಲಿ ಸ್ಥಾಪನೆ ಮಾಡಿರುವ ಶಾಲೆಯಲ್ಲಿ ಕತ್ರಿನಾ ಕೈಫ್‌ ಅವರು ಸಂಸ್ಥಾಪಕರ ದಿನಾಚರಣೆಯನ್ನು ತಾಯಿ ಮತ್ತು ಸಹೋದರನೊಂದಿಗೆ ಸಂಭ್ರಮಾಚರಣೆಯಿಂದ ಆಚರಿಸಿದರು. ಅವರು ತಮ್ಮ ತಾಯಿಗೆ ಸಹಾಯ ಮಾಡಲೆಂದು ನನ್ನ ಸಹೋದರ ಕಳೆದ ವರ್ಷದಿಂದ ನಿರಂತರವಾಗಿ ಇಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾನೆ ಎಂದು ಸಹೋದರ ಸೆಬಾಸ್ಟಿಯನ್ ಅನ್ನು ತುಂಬು ಮನಸ್ಸಿನಿಂದ ಶ್ಲಾಘಿಸಿದರು.

ಮುಂದೆ ಓದಿ ...
  • Share this:

ಪ್ರಸಿದ್ದ ಬಾಲಿವುಡ್‌ ನಟಿ ಕತ್ರಿನಾ ಕೈಫ್ (Katrina Kaif) ಅವರ ತಾಯಿ ಸುಝೇನ್ ಟರ್ಕೋಟ್ ಮತ್ತು ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಅವರು ತಮಿಳುನಾಡಿನಲ್ಲಿ ಸ್ಥಾಪನೆ ಮಾಡಿರುವ ಶಾಲೆಯಲ್ಲಿ ಕತ್ರಿನಾ ಕೈಫ್‌ ಅವರು ಸಂಸ್ಥಾಪಕರ ದಿನಾಚರಣೆಯನ್ನು (Founder's Day) ತಾಯಿ ಮತ್ತು ಸಹೋದರನೊಂದಿಗೆ ಸಂಭ್ರಮಾಚರಣೆಯಿಂದ ಆಚರಿಸಿದರು. ಅವರು ತಮ್ಮ ತಾಯಿಗೆ ಸಹಾಯ ಮಾಡಲೆಂದು ನನ್ನ ಸಹೋದರ ಕಳೆದ ವರ್ಷದಿಂದ ನಿರಂತರವಾಗಿ ಇಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾನೆ ಎಂದು ಸಹೋದರ ಸೆಬಾಸ್ಟಿಯನ್ ಅನ್ನು (Sebastian) ತುಂಬು ಮನಸ್ಸಿನಿಂದ ಶ್ಲಾಘಿಸಿದರು. ಕತ್ರಿನಾ ಅವರ ತಾಯಿ ಸುಝೇನ್ ಟರ್ಕೋಟ್ ಅವರು ತಮಿಳುನಾಡಿನ ಮೌಂಟೇನ್ ವ್ಯೂ ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದಾರೆ (Teacher). ಇದನ್ನು ಅವರ ಚಾರಿಟಬಲ್ ಟ್ರಸ್ಟ್ ರಿಲೀಫ್ ಪ್ರಾಜೆಕ್ಟ್ಸ್ ಇಂಡಿಯಾದ ಸಹಾಯದಿಂದ ನಿರ್ಮಿಸಲಾಗಿದೆ.


ಮೌಂಟೇನ್ ವ್ಯೂ ಸ್ಕೂಲ್‌
2015 ರಲ್ಲಿ ಪ್ರಾರಂಭವಾದ ಶಾಲೆಯ ಉದ್ದೇಶವು ಹಿಂದುಳಿದ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣವನ್ನು ನೀಡುವುದು. ಹಾಗೆಯೇ ಈ ಶಾಲೆಯು ತನ್ನ ಉದ್ದೇಶದ ಪ್ರಕಾರವೇ ಹಿಂದುಳಿದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದೆ. ಕತ್ರಿನಾ ಕೈಫ್ ಶಾಲೆಯ ಮಕ್ಕಳೊಂದಿಗೆ ನೃತ್ಯ ಮತ್ತು ಆಟವಾಡುತ್ತಿರುವ ಫೋಟೋಗಳು ಮತ್ತು ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.


ಶಾಲಾ ಸ್ಥಾಪಕರ ದಿನ ಆಚರಿಸಿದ ಕೈಫ್‌
 ನಾವು, ಮೌಂಟೇನ್ ವ್ಯೂ ಶಾಲೆಯಲ್ಲಿ, ಕಳೆದ ವರ್ಷ ನಿಧನರಾದ ನಮ್ಮ ಶಾಲೆಯ ಸಂಸ್ಥಾಪಕರ ಜೀವನವನ್ನು ಸ್ಮರಿಸುತ್ತಾ ಆ ದಿನವನ್ನು ಆಚರಿಸುತ್ತಿದ್ದೇವೆ” ಎಂದು ಶೀರ್ಷಿಕೆ ನೀಡಿ ಪೋಸ್ಟ್‌ ಮಾಡಿದ್ದಾರೆ. “ಕೆಲವು ವಿಶೇಷ ಅತಿಥಿಗಳ ಜೊತೆಗೆ ಶಿಕ್ಷಕರು ಮತ್ತು ಮಕ್ಕಳ ಪ್ರದರ್ಶನಗಳು ಈ ದಿನವನ್ನು ಮತ್ತಷ್ಟು ವಿಶೇಷ ದಿನವನ್ನಾಗಿ ಮಾಡಿದೆ. ಮೌಂಟೇನ್ ವ್ಯೂ ಶಾಲೆಯಲ್ಲಿ ಮಕ್ಕಳಿಗಾಗಿ ಮೂರು ಹೊಸ ತರಗತಿ ಕೊಠಡಿಗಳನ್ನು ಉದ್ಘಾಟಿಸಲಾಗಿದೆ” ಎಂದು ಕತ್ರಿನಾ ಕೈಫ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.


ಇದನ್ನೂ ಓದಿ: Rashmika Mandanna - Vijay Deverakona: ವಿಜಯ್ ದೇವರಕೊಂಡ ಜೊತೆ ಮಾಲ್ಡೀವ್ಸ್​ಗೆ ಹಾರಿದ ರಶ್ಮಿಕಾ ಮಂದಣ್ಣ


“ನಮ್ಮ ಶಾಲೆಯ 2021 ರ ನಿಧಿಸಂಗ್ರಹಕ್ಕೆ ಸಹಾಯ ಮಾಡಿದ ಪ್ರತಿಯೊಬ್ಬ ಫಲಾನುಭವಿಗಳ ದೇಣಿಗೆಗೆ ಧನ್ಯವಾದಗಳು. ನಾವು ಆ ನಿಧಿ ಸಂಗ್ರಹದಿಂದ ಮೂರು ಹೊಸ ತರಗತಿ ಕೊಠಡಿಗಳನ್ನು ಸಹ ಉದ್ಘಾಟಿಸಿದ್ದೇವೆ” ಎಂದು ಕತ್ರಿನಾ ಕೈಫ್ ಪೋಸ್ಟ್‌ ನಲ್ಲಿ ತಿಳಿಸಿದ್ಧಾರೆ.


“ನಾನು ಈ ಶಾಲೆಯಲ್ಲಿ ನನ್ನ ತಾಯಿ ನಿರ್ವಹಿಸುವ ಕೆಲಸಕ್ಕೆ ಯಾವಾಗಲೂ ಹೆಮ್ಮೆ ಪಡುತ್ತೇನೆ. ನನ್ನ ತಾಯಿಯ ಜೊತೆ ನನ್ನ ಸಹೋದರ ಕೂಡ ಕಳೆದ ವರ್ಷದಿಂದ ಇಲ್ಲಿಯೇ ಇದ್ದು ಶಾಲೆಯ ಎಲ್ಲ ಕಾರ್ಯಗಳನ್ನು ನಿರ್ವಹಿಸುತ್ತಾ, ನನ್ನ ತಾಯಿಗೆ ಸಹಾಯ ಮಾಡುತ್ತಿದ್ದಾರೆ.


ಇವರಿಬ್ಬರ ಈ ಕೆಲಸಕ್ಕಾಗಿ ನಾನು ಹೆಮ್ಮೆ ಪಡುತ್ತೇನೆ. ನಿಜಕ್ಕೂ ಈ ಶಾಲೆಯು ಸುಂದರವಾದ ಶಾಲೆಯಾಗಿದೆ” ಎಂದು ಕತ್ರಿನಾ ಕೈಫ್‌ ಅವರು ತಮ್ಮ ತಾಯಿ ಸುಝೇನ್ ಮತ್ತು ಸಹೋದರ ಸೆಬಾಸ್ಟಿಯನ್ ಅವರಿಗಾಗಿ ಸುಂದರವಾದ ಟಿಪ್ಪಣಿಯನ್ನು ಬರೆದು ತಮ್ಮ ಪೋಸ್ಟ್ ಅನ್ನು ಮುಕ್ತಾಯಗೊಳಿಸಿದ್ದಾರೆ.


ಕತ್ರಿನಾ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ಪತಿ ವಿಕ್ಕಿ ಕೌಶಲ್‌
ಕತ್ರಿನಾ ಕೈಫ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅವರ ಪತಿ ಮತ್ತು ನಟ ವಿಕ್ಕಿ ಕೌಶಲ್ ಅವರು ಕಮೆಂಟ್‌ನ ವಿಭಾಗದಲ್ಲಿ ಕೆಂಪು ಹೃದಯದ ಐಕಾನ್‌ಗಳ ಚಿತ್ರ ಹಾಕುವುದರ ಮೂಲಕ ಪ್ರೀತಿ ಮತ್ತು ಸಂತೋಷವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

View this post on Instagram


A post shared by Katrina Kaif (@katrinakaif)
ಇವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಹಲವು ಬಾಲಿವುಟ್‌ ನಟ -ನಟಿಯರು
ಬ್ಯಾಂಗ್ ಬ್ಯಾಂಗ್ ಮತ್ತು ಜಿಂದಗಿ ನಾ ಮಿಲೇಗಿ ದೊಬಾರಾ ಮುಂತಾದ ಚಿತ್ರಗಳಲ್ಲಿ ಕತ್ರಿನಾ ಅವರೊಂದಿಗೆ ಕೆಲಸ ಮಾಡಿದ ಬಾಲಿವುಡ್‌ ನಟ ಹೃತಿಕ್ ರೋಷನ್, ಕೈಫ್‌ ಅವರ ಪೋಸ್ಟ್‌ಗೆ "ಅಮೇಜಿಂಗ್" ಎಂದು ಬರೆದು ಪ್ರತಿಕ್ರಿಯೆ ನೀಡಿದ್ದಾರೆ.


ಇದನ್ನೂ ಓದಿ:  Ganesh-Kantara: ಕಾಂತಾರ ಚಿತ್ರ ವೀಕ್ಷಿಸಲು ಕಾತರಿಸ್ತಿರೋ ಗೋಲ್ಡನ್ ಸ್ಟಾರ್!


ಕತ್ರಿನಾ ಕೈಫ್ ಅವರ ಸೂರ್ಯವಂಶಿ ಚಿತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದ ರಣವೀರ್ ಸಿಂಗ್, ಕೆಂಪು ಹೃದಯದ ಎಮೋಜಿಗಳನ್ನು ಹಾಕಿ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ಧಾರೆ.


ನಟಿ ಇಲಿಯಾನಾ ಡಿಕ್ರೂಜ್ ಅವರು "ಅಯ್ಯೋ ಇದು ಅತ್ಯಂತ ಸುಂದರವಾಗಿದೆ” ಎಂದು ಕೆಂಪು ಹೃದಯದ ಐಕಾನ್‌ಗಳನ್ನು ಹಾಕುವುದರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

Published by:Ashwini Prabhu
First published: