ಬಹುತೇಕ ಬಾಲಿವುಡ್ ತಾರೆಯರು ತಮ್ಮ ಮದುವೆಗೆ ಸಬ್ಯಸಾಚಿ ಡಿಸೈನ್ ಮಾಡಿದ ಬಟ್ಟೆಗಳನ್ನೇ ಯಾಕೆ ಆಯ್ದುಕೊಳ್ತಾರೆ? ಇದರ ಹಿಂದಿದೆ ಇಂಟರೆಸ್ಟಿಂಗ್ ವಿಚಾರ

Sabyasachi Dress: ಸಬ್ಯಸಾಚಿ ವಿನ್ಯಾಸ ಮಾಡಿದ್ದ ರೆಡ್ ಬ್ರೈಡೆಲ್ ಲೆಹಂಗಾದ ಜೊತೆಗೆ ಟಿಲ್ಲಾ ವರ್ಕ್ ಮತ್ತು ವೆಲ್ವೆಟ್‌ನಲ್ಲಿ ಹಾಗೂ ಚಿನ್ನದ ಲೇಪನವಿದ್ದು ಪಂಜಾಬಿ ಸೈಲ್ ನಲ್ಲಿ ಮಾಡಿದ ಜ್ಯುವೆಲರಿ ತೊಟ್ಟು ಕತ್ರೀನಾ ಮಧು ಮಗಳಾಗಿ ಕಂಗೊಳಿಸಿದ್ದಾರೆ

ಕತ್ರೀನಾ ಮದುವೆ

ಕತ್ರೀನಾ ಮದುವೆ

 • Share this:
  ಸದ್ಯ ಎಲ್ಲಾ ಕಡೆ ಬಾಲಿವುಡ್(Bollywood) ನವಜೋಡಿ ವಿಕ್ಕಿ ಕೌಶಲ್(Vicky kaushal) ಹಾಗೂ ಕತ್ರೀನಾ ಕೈಫ್(Katrina kaif) ಅವರ ಮದೆಯದ್ದೆ ಮಾತು. ಹಲವು ವರ್ಷಗಳ ಕಾಲ ಪ್ರೀತಿಸಿದ ಬಳಿಕ ಕತ್ರೀನಾ ಹಾಗೂ ವಿಕ್ಕಿ ಕೌಶಲ್ ನಿನ್ನೆ ರಾಜಸ್ಥಾನದಲ್ಲಿ(Rajasthan) ಸಿಕ್ಸ್ ಸೆನ್ಸಸ್ ಹೆರಿಟೇಜ್ ಹೋಟೆಲ್‌(Heritage Hotel) ಆಗಿ ಬದಲಾಗಿರುವ ಐತಿಹಾಸಿಕ ಬಾರ್ವಾರ ಕೋಟೆಯಲ್ಲಿ ರಾಯಲ್ ವೆಡ್ಡಿಂಗ್(Wedding) ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಈ ಜೋಡಿಯ ಮದುವೆ ನಿಶ್ಚಯವಾಗಿರೋ ಸುದ್ದಿ ತಿಳಿದಾಗಿನಿಂದ ಇಲ್ಲಿಯವರೆಗೆ ಸದಾ ಒಂದೊಲ್ಲೊಂದು ಕಾರಣಕ್ಕೆ. ವಿಕ್ಕಿ ಹಾಗೂ ಕತ್ರೀನಾ ಜೋಡಿ ಸಾಕಷ್ಟು ಸದ್ದು ಮಾಡ್ತಾ ಇತ್ತು. ಅದ್ರಲ್ಲೂ ಈ ಜೋಡಿ ಎಲ್ಲಿ ಮದುವೆ ಆಗುತ್ತೆ.. ಹೇಗೆ ಮದುವೆ ಆಗುತ್ತೆ.. ಈ ಜೋಡಿಯ ಮದುವೆಗೆ ಯಾರು ಬರ್ತಾರೆ..ಏನೆಲ್ಲಾ ಕಾರ್ಯಕ್ರಮ ಇರುತ್ತೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಈ ಊಹಾಪೂಹಗಳಿಗೆ ನಿನ್ನೆ ಬ್ರೇಕ್ ಬಿದ್ದು ಈ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿದ್ದು ಆಯ್ತು.. ಸದ್ಯಕ್ಕೆ ಈ ಜೋಡಿ ಸುದ್ದಿಯಾಗ್ತಾ ಇರೋದು ಮದುವೆಯಲ್ಲಿ ಧರಿಸಿದ್ದಾ ಈ ಧಿರಿಸಿನಿಂದ.. ಕತ್ರೀನಾ ಮದುವೆಯಲ್ಲಿ ಧರಿಸಿದ್ದ ಬಟ್ಟೆ ಡಿಸೈನ್ ಮಾಡಿದ್ದು ಯಾರು.. ಅನ್ನೋ ಮಾಹಿತಿ ಇಲ್ಲ

  ಸಬ್ಯಸಾಚಿ ಡಿಸೈನರ್ ವೇರ್ ನಲ್ಲಿ ವಿಕ್ಕಿ-ಕತ್ರೀನಾ ಮಿಂಚು

  ರಾಜಸ್ಥಾನದಲ್ಲಿ ಸಿಕ್ಸ್ ಸೆನ್ಸಸ್ ಹೆರಿಟೇಜ್ ಹೋಟೆಲ್‌ ಆಗಿ ಬದಲಾಗಿರುವ ಐತಿಹಾಸಿಕ ಬಾರ್ವಾರ ಕೋಟೆಯಲ್ಲಿ ನಿನ್ನೆ ಅದ್ಧೂರಿಯಾಗಿ ಮದುವೆಯಾದ ವಿಕ್ಕಿ ಹಾಗೂ ಕತ್ರೀನಾ ತಮ್ಮ ಮದುವೆ ಉಡುಗೊರೆಯಿಂದಲೂ ಗಮನ ಸೆಳೆದಿದ್ದಾರೆ. ಈ ಜೋಡಿ ಧರಿಸಿದ್ದ ದುಬಾರಿ ಬಟ್ಟೆ ಹೇಳಿ ಮಾಡಿಸಿದಂತಿತ್ತು. ಈ ಬಟ್ಟೆಯನ್ನ ಅಷ್ಟಕ್ಕೂ ಡಿಸೈನ್ ಮಾಡಿದ್ದು, ಬಾಲಿವುಡ್ ನ ಖ್ಯಾತ ಡಿಸೈನರ್ ಸಬ್ಯಸಾಚಿ ಮುಖರ್ಜಿ..

  ಇದನ್ನೂ ಓದಿ: ವಿರುಷ್ಕಾ ನೆರೆ ಮನೆಯವರಾಗಲಿದ್ದಾರೆ ವಿಕ್ಕಿ & ಕ್ಯಾಟ್; ಮುಂಬೈನಲ್ಲಿ ಐಷಾರಾಮಿ ಅಪಾರ್ಟ್​ಮೆಂಟ್ ಖರೀದಿ

  ಸಬ್ಯಸಾಚಿ ವಿನ್ಯಾಸ ಮಾಡಿದ್ದ ರೆಡ್ ಬ್ರೈಡೆಲ್ ಲೆಹಂಗಾದ ಜೊತೆಗೆ ಟಿಲ್ಲಾ ವರ್ಕ್ ಮತ್ತು ವೆಲ್ವೆಟ್‌ನಲ್ಲಿ ಹಾಗೂ ಚಿನ್ನದ ಲೇಪನವಿದ್ದು ಪಂಜಾಬಿ ಸೈಲ್ ನಲ್ಲಿ ಮಾಡಿದ ಜ್ಯುವೆಲರಿ ತೊಟ್ಟು ಕತ್ರೀನಾ ಮಧು ಮಗಳಾಗಿ ಕಂಗೊಳಿಸಿದ್ದಾರೆ. ಐವರಿ ಸಿಲ್ಕ್ ನಿಂದ ಮಾಡಿದ್ದ ಶರ್ವಾನಿ, ಚಿನ್ನದ ಲೇಪಿತ ಬೆಂಗಾಲ್ ಟೈಗರ್ ಬಟನ್‌ ಇದ್ದ ಶರ್ವಾನಿ, ಕಟ್ ಮತ್ತು ರೋಸ್ ಕಟ್ ವಜ್ರಗಳು, ಸ್ಫಟಿಕ ಶಿಲೆ ಬಳಸಿ ಮಾಡಿದ್ದ ಜ್ಯುವೆಲರಿ ಧರಿಸಿ ವಿಕ್ಕಿ ಕೌಶಲ್ ವರನಾಗಿ ಮಿಂಚಿದ್ರು.
  ಯಾರು ಈ ಸಬ್ಯಸಾಚಿ ಮುಖರ್ಜಿ..?

  ಬಾಲಿವುಡ್ ಹಾಗೂ ವಿಶ್ವದ ಪ್ರಸಿದ್ಧ ವಸ್ತ್ರವಿನ್ಯಾಸಕಿಯಾಗಿರುವ ಸಬ್ಯಸಾಚಿ ಮುಖರ್ಜಿ ಬಾಲಿವುಡ್ ನ ಪ್ರತಿಯೊಬ್ಬ ಸೆಲೆಬ್ರಿಟಿಗಳಿಗೂ ವಸ್ತ್ರವಿನ್ಯಾಕಿ.. ಬಾಲಿವುಡ್ ನ ಯಾವುದೇ ಪಾರ್ಟಿ ಇರಲಿ, ಸಿನಿಮಾ ಇರಲಿ, ಮದುವೆ ಸಮಾರಂಭ ಇರಲಿ, ಅಲ್ಲಿ ಸಬ್ಯಸಾಚಿ ಮುಖರ್ಜಿ ಬಟ್ಟೆಗಳು ಬೇಕೆ ಬೇಕು..

  ಮೂಲತಃ ಕೋಲ್ಕತ್ತಾ ಮೂಲದ ಸಬ್ಯಸಾಚಿ ಮುಖರ್ಜಿ 90ರ ದಶಕದಿಂದಲೂ ಭಾರತೀಯ ಚಿತ್ರರಂಗದಲ್ಲಿ ವಸ್ತ್ರ ವಿನ್ಯಾಸಕರಾಗಿ ಗುರತಿಸಿಕೊಂಡಿದ್ದಾರೆ. ನ್ಯಾಷನಲ್ ಇನ್ಸುಟಿಟ್ಯೂಟ್ ಆಫ್ ಇಂಡಿಯಾದಿಂದ ಫ್ಯಾಷನ್ ಡಿಸೈನಿಂಗ್ ಪದವಿ ಪಡೆದೊಕೊಂಡಿರೋ ಸಭ್ಯಸಾಚಿ ನ್ಯೂಯಾರ್ಕ್, ಲಂಡನ್, ಸಿಂಗಾಪೂರ ಸೇರಿ ವಿವಿಧ ದೇಶಗಳಲ್ಲಿ ತಾವು ಡಿಸೈನ್ ಮಾಡಿದ ಬಟ್ಟೆ ಪ್ರಸ್ತುತ ಪಡಿಸಿ ಸಾಕಾಷ್ಟು ಖ್ಯಾತಿಗಳಿಸಿದ್ದಾರೆ.

  ಬಾಬುಲ್, ಲಾಗಾ ಚುನಾರಿ ಮೇ ದಾಗ್, ರಾವನ್, ಗುಜಾರಿಶ್, ಪಾ, ನೋ ಒನ್ ಕಿಲ್ಡ್ ಜೆಸ್ಸಿಕಾ, ಇಂಗ್ಲೀಷ್-ವಿಂಗ್ಲೀಷ್ ಸಂಜಯ್ ಲೀಲಾ ಬನ್ಸಾಲಿಯ ಬ್ಲಾಕ್ ಸೇರಿ ಹಲವು ಬಾಲಿವುಡ್ ಸಿನಿಮಾಗಳಿಗೆ ವಸ್ತ್ರವಿನ್ಯಾಸ ಮಾಡಿದ್ದಾರೆ.
  ಇದನ್ನೂ ಓದಿ: ಸತಿ-ಪತಿಗಳಾದ ವಿಕ್ಕಿ-ಕತ್ರಿನಾ; ಇಲ್ಲಿದೆ ಬಾಲಿವುಡ್​ ತಾರಾ ಜೋಡಿ ಮದುವೆ ಫೋಟೋ

  ಅನುಷ್ಕಾ-ದೀಪಿಕಾ ಮದುವೆಗೂ ಸಬ್ಯಸಾಚಿ ವಸ್ತ್ರವಿನ್ಯಾಸ

  ಇನ್ನೂ ಬಾಲಿವುಡ್ ನಲ್ಲಿ ಸಾಕಷ್ಟು ಖ್ಯಾತಿ ಪಡೆದಿರುವ ಸಬ್ಯಸಾಚಿ ಮುಖರ್ಜಿ, ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ-ರಣವೀರ್ ಸಿಂಗ್, ಪ್ರಿಯಾಂಕಾ-ಚೋಪ್ರಾ ನಿಕ್ ಜೋನಸ್, ಹಾಗೂ ಇತ್ತೀಚೆಗೆ ಮದುವೆಯಾದ ಪತ್ರಲೇಖಾ ಹಾಗೂ ರಾಜ್ ಕುಮಾರ್ ರಾವ್ ಅವರ ಮದುವೆಗೂ ವಸ್ತ್ರವಿನ್ಯಾಸ ಮಾಡಿದ್ದಾರೆ.  ಸಬ್ಯಸಾಚಿ ವಸ್ತ್ರವಿನ್ಯಾಸಕ್ಕೆ ಪಿಧಾ ಆಗಿದ್ದ ಕತ್ರೀನಾ

  ಇನ್ನು ಬಾಲಿವುಡ್ ನ ಹಲವು ನಟ-ನಟಿಯರಂತೆ ಸಬ್ಯಸಾಚಿ ಅವರ ವಸ್ತ್ರವಿನ್ಯಾಸಕ್ಕೆ ಫಿಧಾ ಆಗಿದ್ದ ಕತ್ರೀನಾ ಹಲವು ಬಾರಿ ನಾನು ಸಬ್ಯಸಾಚಿ ಅವರ ವಸ್ತ್ರವಿನ್ಯಾಸಗಳಿಂದ ಪ್ರಭಾವಿತಳಾಗಿದ್ದೇನೆ ಅಂತ ಬಹಿರಂಗ ಹೇಳಿಕೆ ಕೊಟ್ಟಿದ್ರು.. ಅಲ್ಲದೆ ಇತ್ತೀಚೆಗೆ ಕತ್ರೀನಾ ಕೈಫ್ ನಟಿಸಿದ್ದ ಸೂರ್ಯವಂಶಿ ಸಿನಿಮಾದ ಪ್ರಮೋಶನ್ ನಲ್ಲಿ ಕತ್ರೀನಾ ಧರಿಸಿದ್ದ
  ಕೆಂಪು ವರ್ಣದ ಪ್ಲೋರಲ್ ಪ್ರಿಂಟೆಡ್ ಲೆಹೆಂಗಾವನ್ನು ಸಹ ಸವ್ಯಸಾಚಿ ಡಿಸೈನ್ ಮಾಡಿದ್ದರು.
  Published by:ranjumbkgowda1 ranjumbkgowda1
  First published: