ಕತ್ರಿನಾ, ವಿಕ್ಕಿ ಮದುವೆ ವಿಷಯಗಳನ್ನು ಬಹಿರಂಗಪಡಿಸಿದ ಪೋಸ್ಟ್

ಮದುವೆ ನಿಜವಾಗಿಯೂ ನಡೆಯುತ್ತಿದೆ ಎಂದು ಇಲ್ಲೊಬ್ಬರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ (Instagram Post) ಖಚಿತವಾಗಿ ಹೇಳಿದ್ದಾರೆ. ಯಾರಪ್ಪಾ ಅದು ಅಷ್ಟೊಂದು ಖಚಿತವಾಗಿ ಈ ಸುದ್ದಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಅಂತ ನಿಮಗೆ ತುಂಬಾನೇ ಕುತೂಹಲವಾಗುತ್ತಿರಬೇಕಲ್ಲವೇ? ಬನ್ನಿ ಹಾಗಾದರೆ ಈ ಸ್ಟಾರ್ ನಟರ ವಿವಾಹದ ಬಗ್ಗೆ ಮಾಹಿತಿ ನೀಡಿದವರು ಯಾರು ಅಂತ ನೋಡೋಣ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್

  • Share this:

ಅನೇಕ ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ (Soial Media) ಹರಿದಾಡುತ್ತಿರುವ ಸುದ್ದಿಗಳಲ್ಲಿ ಈ ನಟ ವಿಕ್ಕಿ ಕೌಶಲ್ ಮತ್ತು ನಟಿ ಕತ್ರಿನಾ ಕೈಫ್  (Katrina Kaif And Vicky Kaushal) ವಿವಾಹದ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿದ್ದದ್ದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಈ ಸ್ಟಾರ್ ನಟರ ಮದುವೆಯ (Celebrety Marriage) ಸುತ್ತಲೂ ಸುತ್ತುತ್ತಿರುವ ಸುದ್ದಿಗಳು ಪ್ರತಿದಿನವೂ ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚು ಮಾಡುತ್ತಿದೆ ಎಂದು ಹೇಳಬಹುದು.ಈ ಸ್ಟಾರ್ ನಟರು ತಮ್ಮ ವಿವಾಹದ ಬಗ್ಗೆ ಯಾವುದೇ ಖಚಿತವಾದ ಮತ್ತು ಅಧಿಕೃತವಾಗಿ ಇನ್ನೂ ಏನನ್ನೂ ಹೇಳಿಲ್ಲವಾದರೂ, ಅವರ ಮದುವೆ ನಿಜವಾಗಿಯೂ ನಡೆಯುತ್ತಿದೆ ಎಂದು ಇಲ್ಲೊಬ್ಬರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ (Instagram Post) ಖಚಿತವಾಗಿ ಹೇಳಿದ್ದಾರೆ. ಯಾರಪ್ಪಾ ಅದು ಅಷ್ಟೊಂದು ಖಚಿತವಾಗಿ ಈ ಸುದ್ದಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಅಂತ ನಿಮಗೆ ತುಂಬಾನೇ ಕುತೂಹಲವಾಗುತ್ತಿರಬೇಕಲ್ಲವೇ? ಬನ್ನಿ ಹಾಗಾದರೆ ಈ ಸ್ಟಾರ್ ನಟರ ವಿವಾಹದ ಬಗ್ಗೆ ಮಾಹಿತಿ ನೀಡಿದವರು ಯಾರು ಅಂತ ನೋಡೋಣ.


ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ವದಂತಿಯ ಮದುವೆಯಲ್ಲಿ 'ಮೊಬೈಲ್ ನಿಷೇಧ' ಬಗ್ಗೆ ಒಂದು ಸುದ್ದಿಗೆ ಪ್ರತಿಕ್ರಿಯಿಸಿರುವ ಗಜರಾಜ್ ರಾವ್ ತಮ್ಮ ಇನ್‌‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಮಾಷೆಯಾಗಿ "ನನಗೆ ಸೆಲ್ಫಿ ತೆಗೆದುಕೊಳ್ಳಲು ಅನುಮತಿ ನೀಡದಿದ್ದರೆ ನಾನು ಮದುವೆಗೆ ಬರುತ್ತಿಲ್ಲ” ಎಂದು ದುಃಖದ ಮುಖದ ಎಮೋಜಿಯೊಂದಿಗೆ ಬರೆದು ಆ ಪೋಸ್ಟ್‌ನಲ್ಲಿ ವಿಕ್ಕಿಯನ್ನು ಸಹ ಟ್ಯಾಗ್ ಮಾಡಿದ್ದಾರೆ.
Katrina Kaif And Vicky Kaushal Wedding Gajraj Rao in Viral Post
ವೈರಲ್ ಪೋಸ್ಟ್


ಅತಿಥಿಗಳಿಗೆ ರಹಸ್ಯ ಕೋಡ್‌

ಮನೋರಂಜನೆ ಮಾಧ್ಯಮದ ಇತ್ತೀಚಿನ ವರದಿಯ ಪ್ರಕಾರ, ಕತ್ರಿನಾ ಮತ್ತು ವಿಕ್ಕಿ ಮದುವೆಯ ಅತಿಥಿಗಳಿಗೆ ರಹಸ್ಯ ಕೋಡ್‌ಗಳನ್ನು ನಿಯೋಜಿಸಲಾಗುವುದು. ಇದು ಅವರಿಗೆ ಮದುವೆಯ ಸ್ಥಳ ಮತ್ತು ಸಮಾರಂಭಕ್ಕೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.


ರಾಜಸ್ಥಾನದ ಸವಾಯಿ ಮಾಧೋಪುರದ ರೆಸಾರ್ಟ್ ನಲ್ಲಿ ಮದುವೆ

ಹೋಟೆಲ್ ಕೋಣೆಗಳನ್ನು ಸಹ ಕೋಡ್ ಮೂಲಕ ಮಾತ್ರ ಪ್ರವೇಶಿಸಬಹುದು. ಈ ಇಬ್ಬರು ಬಾಲಿವುಡ್ ನಟರು ಡಿಸೆಂಬರ್ 9ರಂದು ಮದುವೆಯಾಗಲಿದ್ದಾರೆ ಮತ್ತು ಇಡೀ ಭವ್ಯ ವಿವಾಹ ಸಮಾರಂಭವನ್ನು ಡಿಸೆಂಬರ್ 7, 8 ಮತ್ತು 9ರಂದು ರಾಜಸ್ಥಾನದ ಸವಾಯಿ ಮಾಧೋಪುರದ ರೆಸಾರ್ಟ್ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ನಡೆಯಲಿದೆ.


ಇದನ್ನೂ ಓದಿ:  Katrina Kaif, Vicky Kaushal Marriage: ಕತ್ರಿನಾ-ವಿಕ್ಕಿ ಮದುವೆ ಮನೆಯಿಂದ ಹೊರ ಬಂತು ಮತ್ತೊಂದು ಸುದ್ದಿ

ದೀಪಾವಳಿ ಹಬ್ಬದ ದಿನದಂದು ಸೆಲೆಬ್ರಿಟಿ ಮ್ಯಾನೇಜರ್ ರೇಷ್ಮಾ ಶೆಟ್ಟಿ ಕಚೇರಿಯಲ್ಲಿ ವಿಕ್ಕಿ ಮತ್ತು ಕತ್ರಿನಾ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ನಂತರ ಈ ಸ್ಟಾರ್ ನಟರ ಮುಂಬರುವ ಮದುವೆಯ ಬಗ್ಗೆ ಊಹಾಪೋಹಗಳು ಅತಿರೇಕಕ್ಕೆ ಹೋದವು.


ನಿರ್ದೇಶಕ ಕಬೀರ್ ಖಾನ್ ಮನೆಯಲ್ಲಿ ರೋಕಾ

ದೀಪಾವಳಿ ದಿನದಂದು ನಿರ್ದೇಶಕ ಕಬೀರ್ ಖಾನ್ ಮನೆಯಲ್ಲಿ ದಂಪತಿ ರೋಕಾ ಸಮಾರಂಭವನ್ನು ಹೊಂದಿದ್ದರು ಎಂದು ವರದಿಯಾಗಿದೆ. ಈ ಸಮಾರಂಭದಲ್ಲಿ ಕೇವಲ ಹತ್ತಿರದ ಕುಟುಂಬ ಸದಸ್ಯರನ್ನು ಮಾತ್ರವೇ ಆಹ್ವಾನಿಸಲಾಗಿತ್ತು ಎಂದು ವರದಿಯಾಗಿದೆ.


ಈ ಸಮಾರಂಭದಲ್ಲಿ ಕತ್ರೀನಾ ತಾಯಿ ಸುಝೇನ್, ಸಹೋದರಿ ಇಸಬೆಲ್ಲೆ ಕೈಫ್ ಮತ್ತು ವಿಕ್ಕಿ ಪೋಷಕರು, ಶಾಮ್ ಕೌಶಲ್ ಮತ್ತು ವೀಣಾ ಕೌಶಲ್ ಮತ್ತು ಸಹೋದರ ಸನ್ನಿ ಕೌಶಲ್ ಸಮಾರಂಭದಲ್ಲಿ ಹಾಜರಿದ್ದರು ಎಂದು ವರದಿಯು ತಿಳಿಸಿದೆ.


ಇದನ್ನೂ ಓದಿ:  ಸೀರೆಯುಟ್ಟು ಮಿಂಚಿದ Sooryavanshi ನಟಿ: ಹೆಚ್ಚಾಗಿ Traditional ಲುಕ್​ನಲ್ಲೇ ಕಾಣಿಸಿಕೊಳ್ಳುತ್ತಿರುವ Katrina Kaif

ಅತ್ಯಂತ ದುಬಾರಿ ಸೂಟ್ ಅನ್ನು ಬುಕ್

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಗೆ ಬಹುತೇಕ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಈ ವರ್ಷ ಬಾಲಿವುಡ್ ನ ಅತಿ ದೊಡ್ಡ ಮದುವೆಯ ತಯಾರಿಯ ಜವಾಬ್ದಾರಿಯನ್ನು ಡೆಕೋ ಇವೆಂಟ್ ಕಂಪನಿ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಮದುವೆ ವೇಳೆ ಕತ್ರಿನಾ ಮತ್ತು ವಿಕ್ಕಿ ಸಿಕ್ಸ್ ಸೆನ್ಸ್ ಹೋಟೆಲ್ ನಲ್ಲಿ ಉಳಿದುಕೊಳ್ಳಲಿದ್ದಾರೆ. ಈ ಜೋಡಿಗಾಗಿಯೇ ರಾಜಾ ಮಾನ್ ಸಿಂಗ್ ಮತ್ತು ರಾಣಿ ಪದ್ಮಾವತಿಯ ಅತ್ಯಂತ ದುಬಾರಿ ಸೂಟ್ ಅನ್ನು ಬುಕ್ ಮಾಡಲಾಗಿದೆ. ಈ ಸೂಟ್‌ನಲ್ಲಿ ಒಂದು ರಾತ್ರಿ ತಂಗಲು 7 ಲಕ್ಷ ರೂ. ಪಾವತಿಸಬೇಕು.
Published by:Mahmadrafik K
First published: