Katrina Kaif - Vicky Kaushal: ಏನ್​ ಗುರೂ.. ವಿಕ್ಕಿ ಕೌಶಲ್​ಗಿಂತ ಸಖತ್​​ ರಿಚ್​ ಅಂತೆ ಕತ್ರಿನಾ ಕೈಫ್​!

ಮಾಧ್ಯಮ ವರದಿಗಳ ಪ್ರಕಾರ ಕತ್ರಿನಾ ಕೈಫ್ ಅವರ ಒಟ್ಟು ಆಸ್ತಿ 224 ಕೋಟಿಗೂ ಹೆಚ್ಚು. ಕತ್ರಿನಾ ಕೈಫ್ ರೇಂಜ್ ರೋವರ್, ಮರ್ಸಿಡಿಸ್ ಬೆಂಜ್, ಆಡಿ ಕ್ಯೂ ಮುಂತಾದ ಹಲವು ಐಷಾರಾಮಿ ವಾಹನಗಳ ಹೊಂದಿದ್ದಾರೆ.

ಕತ್ರಿನಾ ಕೈಫ್​, ವಿಕ್ಕಿ ಕೌಶಲ್​

ಕತ್ರಿನಾ ಕೈಫ್​, ವಿಕ್ಕಿ ಕೌಶಲ್​

  • Share this:
ಬಾಲಿವುಡ್​ನಲ್ಲಿ ಕೆಲ ದಿನಗಳಿಂದ ಕತ್ರಿನಾ ಕೈಫ್​- ವಿಕ್ಕಿ ಕೌಶಲ್​ ಅವರದ್ದೇ ಸಮಾಚಾರ. ಮೆಹಂದಿ, ಸಂಗೀತ, ಮದುವೆ, ಈಗ ಮದುವೆ ಮುಗಿದಿದ್ದರೂ ಅವರದ್ದೇ ಚರ್ಚೆ. ಹೌದು, ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ( Katrina Kaif and Vicky Kaushal) ಅಭಿಮಾನಿಗಳು ಅತ್ಯಂತ ಕೂತೂಹಲದಿಂದ ಕಾಯುತ್ತಿದ್ದ ಸಂಗತಿಗೆ ಕೊನೆಗೂ ತೆರೆ ಬಿದ್ದಿದೆ. ಬಾಲಿವುಡ್‍ನ ಈ ಜನಪ್ರಿಯ ತಾರೆಯರಿಬ್ಬರು ಗುರುವಾರ, ಡಿಸೆಂಬರ್ 9 ರಂದು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಕ್ರತಿನಾ ಮತ್ತು ವಿಕ್ಕಿ , ತಮ್ಮ ಅಧಿಕೃತ ಇನ್‍ಸ್ಟಾಗ್ರಾಂ (Instagram) ಖಾತೆಗಳಲ್ಲಿ ಮದುವೆಯ ಸುದ್ದಿಯನ್ನು(Happy announcement) ಘೋಷಿಸಿದರು ಮತ್ತು ಜೊತೆಗೆ ಮದುವೆಯ ಫೋಟೋಗಳನ್ನು(pictures) ಕೂಡ ಹಂಚಿಕೊಂಡಿದ್ದರು. ಈ ಫೋಟೋಗಳು ಸಾಕಷ್ಟು ವೈರಲ್​ ಆಗಿತ್ತಿದೆ. ಇದರ ನಡುವೆ ಮತ್ತೊಂದು ಬಿಸಿ ಬಿಸಿ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಅದೇನಪ್ಪಾ ಅಂದರೆ ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಕೈಫ್​ ನಡುವೆ ಯಾರು  ಶ್ರೀಮಂತರು ಎಂಬ ಚರ್ಚೆ. ಅದಕ್ಕೆ ಉತ್ತರ ಕೂಡ ಸಿಕ್ಕಿದೆ. ಹಾಗಿದ್ರೆ ಇವರಿಬ್ಬರಲ್ಲಿ ಯಾರು ರಿಚ್(Rich)​? ಇಬ್ಬರ ವಾರ್ಷಿಕ ಆದಾಯವೆಷ್ಟು ಎಂದು ಇಲ್ಲಿದೆ ನೋಡಿ. 

ವಿಕ್ಕಿ ಕೌಶಲ್ ಆಸ್ತಿಯೆಷ್ಟು?

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಅವರ ನಟನೆ ಇಡೀ ಇಂಡಸ್ಟ್ರಿಗೆ ತುಂಬಾ ಇಷ್ಟವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಉರಿ ನಟ ವಿಕ್ಕಿ ಕೌಶಲ್ ಅವರ ವಾರ್ಷಿಕ ಆದಾಯ  $ 3 ಮಿಲಿಯನ್ ಭಾರತದ ಕರೆನ್ಸಿ ಪ್ರಕಾರ ಸುಮಾರು 22 ಕೋಟಿ ರೂ. ವಿಕ್ಕಿ ಕೌಶಲ್ ಖ್ಯಾತ ನಿರ್ದೇಶಕ ಶ್ಯಾಮ್ ಕೌಶಲ್ ಅವರ ಮಗ ಎಂದು ಎಲ್ಲರಿಗೂ ತಿಳಿದಿದೆ.  ವಿಕ್ಕಿ ಕೌಶಲ್ ಮಸಾನ್ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದರ ನಂತರ, ವಿಕ್ಕಿ ಕೌಶಲ್ ಒಂದರ ನಂತರ ಒಂದರಂತೆ ಸೂಪರ್ ಹಿಟ್​ ಚಿತ್ರಗಳ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.

ಇದನ್ನು ಓದಿ: ವಧು ಕತ್ರೀನಾ ಕೈಫ್ ಧರಿಸಿದ್ದ ನಿಶ್ಚಿತಾರ್ಥದ ಉಂಗುರದ ಬೆಲೆ 7.4 ಲಕ್ಷ ರೂ. ಅಂತೆ

ಕತ್ರಿನಾ ಕೈಫ್​  ಆಸ್ತಿಯೆಷ್ಟು?

ಕತ್ರಿನಾ ಕೈಫ್ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. 2003 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಕತ್ರಿನಾ, ಒಂದರ ನಂತರ ಒಂದರಂತೆ ಉತ್ತಮ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಕತ್ರಿನಾ ಕೈಫ್ ಅವರ ಒಟ್ಟು ಆಸ್ತಿ 224 ಕೋಟಿಗೂ ಹೆಚ್ಚು. ಕತ್ರಿನಾ ಕೈಫ್ ರೇಂಜ್ ರೋವರ್, ಮರ್ಸಿಡಿಸ್ ಬೆಂಜ್, ಆಡಿ ಕ್ಯೂ ಮುಂತಾದ ಹಲವು ಐಷಾರಾಮಿ ವಾಹನಗಳ ಹೊಂದಿದ್ದಾರೆ. ಇವರಿಬ್ಬರ  ನಡುವೆ ಸ್ಪಷ್ಟವಾಗಿ ಯಾರು ಶ್ರೀಮಂತರು ಎಂದು ನೀವೇ ತಿಳಿಯಬಹುದು. ಹೌದು, ಕತ್ರಿನಾ ಕೈಫ್​ ವಿಕ್ಕಿ ಕೌಶಲ್​ ಅವರಿಗಿಂತ ತುಂಬಾನೇ ಶ್ರೀಮಂತರು ಎಂಬುದು ಅಂಕಿ ಅಂಶದಿಂದ ತಿಳಿದುಬಂದಿದೆ.

ಇದನ್ನು ಓದಿ : ಸತಿ-ಪತಿಗಳಾದ ವಿಕ್ಕಿ-ಕತ್ರಿನಾ; ಇಲ್ಲಿದೆ ಬಾಲಿವುಡ್​ ತಾರಾ ಜೋಡಿ ಮದುವೆ ಫೋಟೋ

ಎರಡು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದ ಜೋಡಿ

ಕತ್ರೀನಾ ಕೈಫ್ ಕೆಂಪು ಬಣ್ಣದ ಮದುವೆಯ ಲೆಹಂಗಾವನ್ನು ಧರಿಸಿ ಕಂಗೊಳಿಸುತ್ತಿದ್ದರು. ವಿಕ್ಕಿ ಕೌಶಲ್ ಅವರು ದಂತದ ಬಣ್ಣದ ಶೇರ್ವಾನಿಯನ್ನು ಧರಿಸಿ ಮಿಂಚುತ್ತಿದ್ದರು. ಈ ತಾರಾ ಜೋಡಿಯ ಮದುವೆಯ ಉಡುಪನ್ನು ಬಾಲಿವುಡ್ ಸೆಲೆಬ್ರಿಟಿಗಳ ಮೆಚ್ಚಿನ ಫ್ಯಾಷನ್ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಅವರು ವಿನ್ಯಾಸ ಮಾಡಿದ್ದರು.38 ವರ್ಷ ವಯಸ್ಸಿನ ಕತ್ರಿನಾ ಕೈಫ್ ಮತ್ತು 33 ವರ್ಷ ವಯಸ್ಸಿನ ವಿಕ್ಕಿ ಕೌಶಲ್ ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಬಹಳ ದಿನಗಳಿಂದ ಅವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಒಟ್ಟಿನಲ್ಲಿ ಈ ಜೋಡಿ ಮದುವೆಯಾಗಿದ್ದು, ಬಾಲಿವುಡ್​ ನಟ, ನಟಿಯರು ಸೇರಿ ಅಭಿಮಾನಿಗಳು ಶುಭಾಶಯ ಹೇಳುತ್ತಿದ್ದಾರೆ.
Published by:Vasudeva M
First published: