Katrina -Vicky: ಸೋಷಿಯಲ್ ಮೀಡಿಯಾದಲ್ಲಿ ವಿಕ್ಕಿ- ಕತ್ರಿನಾಗೆ ಜೀವ ಬೆದರಿಕೆ, ತನಿಖೆ ಆರಂಭಿಸಿದ ಪೊಲೀಸರು

Katrina Kaif and Vicky Kaushal Receive Death Threats: ಹೌದು, ಈ ಬಗ್ಗೆ ಮುಂಬೈ ಪೊಲೀಸರು ಮಾಹಿತಿ ನೀಡಿದ್ದು, ಅಪರಿಚಿತ ವ್ಯಕ್ತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ಗೆರ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ಕತ್ರಿನಾ ಕೈಫ್ ಹಾಗೂ ವಿಕ್ಕಿ

ಕತ್ರಿನಾ ಕೈಫ್ ಹಾಗೂ ವಿಕ್ಕಿ

  • Share this:
ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಜನರ ಫೇವರೇಟ್​ ತಾರಾ ಜೋಡಿ. ಈ ಇಬ್ಬರನ್ನು ಒಟ್ಟಿಗೆ ನೋಡುವುದಕ್ಕೆ ಅಭಿಮಾನಿಗಳು (Fans) ಬಹಳ ಇಷ್ಟಪಡುತ್ತಾರೆ. ಇವರಿಬ್ಬರ ಫೋಟೋಗಳು (Photo)  ಕೆಲವೇ ಕ್ಷಣಗಳಲ್ಲಿ ವೈರಲ್​ ಆಗುತ್ತದೆ. ಸದ್ಯ ಈ ಜೋಡಿ ಈಗ ಗಂಭೀರ ವಿಚಾರಕ್ಕಾಗಿ ಸುದ್ದಿಯಲ್ಲಿದೆ. ಹೌದು, ತಾರಾ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರಿಗೆ ಸಾಮಾಜಿಕ ಜಾಲತಾಣದ (Social Media) ಮೂಲಕ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಇದೆ ಎನ್ನುವ ವಿಚಾರ ತಿಳಿದು ಬಂದಿದೆ.

ಮುಂಬೈ ಪೊಲೀಸರಿಂದ ಪ್ರಕರಣ ದಾಖಲು

ಹೌದು, ಈ ಬಗ್ಗೆ ಮುಂಬೈ ಪೊಲೀಸರು ಮಾಹಿತಿ ನೀಡಿದ್ದು, ಅಪರಿಚಿತ ವ್ಯಕ್ತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ಗೆರ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಕಾರ, ಈ ಜೋಡಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬೆದರಿಕೆಗಳು ಬರುತ್ತಿವೆ. ಈ ಆರೋಪಿ ಕತ್ರಿನಾ ಕೈಫ್‌ ಅವರನ್ನು ಹಿಂಬಾಲಿಸುತ್ತಿದ್ದು, ಬೆದರಿಕೆ ಹಾಕುತ್ತಿದ್ದ ಎಂದು ತಿಳಿದು ಬಂದಿದೆ.

ದೂರಿನ ಆಧಾರದ ಮೇಲೆ, ಇಲ್ಲಿನ ಸಾಂತಾಕ್ರೂಜ್ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506-II (ಕ್ರಿಮಿನಲ್ ಬೆದರಿಕೆ) ಮತ್ತು 354-ಡಿ (ಹಿಂಬಾಲಿಸುವಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ, ಇದುವರೆಗೆ ಯಾವ ವ್ಯಕ್ತಿಯನ್ನು ಬಂಧನ ಮಾಡಲಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಇತ್ತೀಚೆಗೆ ತಮ್ಮ ಮಾಲ್ಡೀವ್ಸ್ ಪ್ರವಾಸದಿಂದ ಹಿಂತಿರುಗಿದ್ದಾರೆ. ಕತ್ರಿನಾ ಕೈಫ್  ತನ್ನ 39 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಮಾಲ್ಡೀವ್ಸ್ ಹೋಗಿದ್ದು, ಕುಟುಂಬದ ಸದಸ್ಯರ ಜೊತೆ ತೆರಳಿದ್ದರು.  ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಅವರು 2021ನೇ ಡಿಸೆಂಬರ್ 9ಕ್ಕೆ, ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಬರ್ವಾರ ಕೋಟೆಯ ಸಿಕ್ಸ್ ಸೆನ್ಸ್ ರೆಸಾರ್ಟ್‍ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಸಿನಿಮಾಗಳಲ್ಲಿ ಬ್ಯುಸಿ ಸ್ಟಾರ್ ಜೋಡಿ 

ವಿಜೃಂಭಣೆಯಿಂದ ಮದುವೆಯಾಗಿದ್ದರೂ ಈ ತಾರಾ ಜೋಡಿ ಬಾಲಿವುಡ್‍ನ ಪ್ರತಿಯೊಬ್ಬರಿಗೂ ಆಹ್ವಾನ ನೀಡಿರಲಿಲ್ಲ. ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಮದುವೆಯಲ್ಲಿ ಅವರಿಬ್ಬರ ಕುಟುಂಬದವರು ಮತ್ತು ಹತ್ತಿರದ ಸ್ನೇಹಿತರು ಮಾತ್ರ ಉಪಸ್ಥಿತರಿದ್ದರು.

ಇನ್ನು ಕತ್ರೀನಾ ಕೈಫ್, ಸಲ್ಮಾನ್ ಖಾನ್ ನಾಯಕರಾಗಿರುವ ಟೈಗರ್ 3 ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಕತ್ರೀನಾರ ಮೆರಿ ಕ್ರಿಸ್‍ಮಸ್ ಸಿನಿಮಾ ಕೂಡ ಸರದಿಯಲ್ಲಿದೆ. ಇನ್ನು ವಿಕ್ಕಿ ಕೌಶಲ್, ಲಕ್ಷ್ಮಣ್ ಉಟೇಕರ್ ಅವರ ಪ್ರೀತಿ ಮತ್ತಿ ಕಾಮಿಡಿಯ ಕಥಾ ಹಂದರವುಳ್ಳ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾಗೆ ಸಾರಾ ಅಲಿ ಖಾನ್ ನಾಯಕಿ.

ಕತ್ರಿನಾ ಕೈಫ್ ತನ್ನ ಮುಂದಿನ ಸಿನಿಮಾದ ರಿಹರ್ಸಲ್‌ ಮಾಡುತ್ತಿರುವ ಕೆಲ ಫೋಟೋಗಳನ್ನು ಇಂದು ಶೇರ್ ಮಾಡಿಕೊಂಡಿದ್ದು, ಶ್ರೀರಾಮ್ ರಾಘವನ್ ನಿರ್ದೇಶನದ ಈ ಸಿನಿಮಾದಲ್ಲಿ ದಕ್ಷಿಣ ಸಿನಿರಂಗದ ಸೂಪರ್ ಸ್ಟಾರ್  ವಿಜಯ್ ಸೇತುಪತಿ ಎದುರು ಕೈಫ್ ಜೋಡಿಯಾಗಿ ನಟಿಸುತ್ತಿದ್ದಾರೆ.
Published by:Sandhya M
First published: