Katrina Kaif-Vicky Kaushal: ಇಷ್ಟೆಲ್ಲಾ ಅದ್ಧೂರಿಯಾಗಿ ಮದ್ವೆಯಾದ್ರೂ, ಹನಿಮೂನ್​ ಮಾತ್ರ ಇಲ್ವಂತೆ: ಏನಾಗಿದ್ಯೋ ಏನೋ..!

ಇಷ್ಟೆಲ್ಲಾ ದುಡ್ಡು ಖರ್ಚು ಮಾಡಿ ಮದುವೆಯಾಗುತ್ತರಿವ ವಿಕ್ಕಿ ಹಾಗೂ ಕತ್ರಿನಾ ಹನಿಮೂನ್​ ಬಗ್ಗೆ ಯಾವುದೆ ಪ್ಲ್ಯಾನ್​ ಮಾಡಿಕೊಂಡಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಮದುವೆ ಮಾತ್ರ ಗ್ರ್ಯಾಂಡ್ ಆಗಿ ಮಾಡಿಕೊಂಡು, ಮುಂಬೈನಲ್ಲಿ ರಿಸೆಪ್ಶನ್​ ನಡೆಸಲು ಡಿಸೈಡ್ ಮಾಡಿದ್ದಾರೆ. ಕತ್ರೀನಾ ಕೈಫ್​ ಮುಂದಿನ ಸಿನಿಮಾದ ಶೂಟಿಂಗ್​ಗಾಗಿ ಈ ಹಿಂದೆಯೇ ಡೇಟ್ಸ್​ ನೀಡಿದ್ದಾರಂತೆ.

ಕತ್ರಿನಾಕೈಫ್​-ವಿಕ್ಕಿ ಕೌಶಲ್​

ಕತ್ರಿನಾಕೈಫ್​-ವಿಕ್ಕಿ ಕೌಶಲ್​

  • Share this:
ಕತ್ರೀನಾ ಕೈಫ್​-ವಿಕ್ಕಿ ಕೌಶಲ್(Katrina Kaif-Vicky Kaushal)​ ಮದುವೆ ವಿಚಾರ ಯಾವ ಮಟ್ಟಿಗೆ ಸುದ್ದಿಯಾಗುತ್ತಿದೆ ಅಂದರೆ, ಅಬ್ಬಬ್ಬಾ..ಎಲ್ಲೇ ನೋಡಿದರು ಇವರದ್ದೆ ಚರ್ಚೆ. ಇಷ್ಟು ಕೋಟಿ ಖರ್ಚು ಮಾಡಿ ಮದುವೆ ಮಾಡ್ತಾ ಇದ್ದಾರಂತೆ. ಹಾಗೇ, ಹೀಗೆ ಅಂತ ಜನ ಮಾತನಾಡುತ್ತಿದ್ದಾರೆ. ರಾಜಸ್ಥಾನದ ಸವಾಯಿ ಮಾಧೋಪುರ(Madhopur)ದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾ(Six Sense Fort Barwara)ದಲ್ಲಿ ನಾಳೆ ಈ ಜೋಡಿ ವಿವಾಹವಾಗಲಿದ್ದಾರೆ. ವಿಕ್ಕಿ ಕೌಶಲ್ ಏಳು ಬಿಳಿ ಕುದುರೆಗಳ ಜೊತೆಗೆ ಕಲ್ಯಾಣ ಮಂಟಪಕ್ಕೆ ಪ್ರವೇಶ ನೀಡಲಿದ್ದಾರೆ. ಇಂದು ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಇದರ ಜೊತೆಗೆ ಮುಂಬೈ ಮೂಲದ ಈವೆಂಟ್ ಕಂಪನಯೊಂದು ಮಾತಾ ಟ್ರಸ್ಟ್ ಧರ್ಮಶಾಲಾದಲ್ಲಿ ಮದುವೆಗೆ ಬರುವ 150 ಅತಿಥಿಗಳಿಗಾಗಿ 27 ಕೊಠಡಿಗಳು ಮತ್ತು ಐದು ಸಭಾಂಗಣಗಳನ್ನು ಕಾಯ್ದಿರಿಸಿದೆ. ಮದುವೆಗೆ ಆಗಮಿಸುತ್ತಿರುವ ಅತಿಥಿಗಳು ಕೋವಿಡ್ ವ್ಯಾಕ್ಸಿನ್(Vaccine) ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ಆರ್ಟಿ-ಪಿಸಿಆರ್ ವರದಿ ತೆಗೆದುಕೊಂಡು ಬರುವಂತೆಯೂ ಸೂಚನೆ ನೀಡಲಾಗಿದೆ. ಆದರೆ, ಇವರ ಮತ್ತೊಂದು ವಿಚಾರ ಸಖತ್​ ವೈರಲ್ ಆಗುತ್ತಿದೆ? ಈ ವಿಚಾರ ಕಂಡು ನೆಟ್ಟಿಗರು ಏನ್​ ಗುರೂ ಯಾಕ್​ ಹಿಂಗ್​ ಅಂತಾ ಪ್ರಶ್ನೆ ಮಾಡುತ್ತಿದ್ದಾರೆ. ಮದುವೆಯಾದ ಬಳಿಕ ನವ ಜೋಡಿಗಳು ಹನಿಮೂನ್(Honeymoon)​ ಪ್ಲಾನ್​ ಮಾಡುವುದು ಸಹಜ. ಆದರೆ ಕತ್ರಿನಾ- ವಿಕ್ಕಿ ಕೌಶಲ್​ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದ್ದಾರೆ. ಆದರೆ, ಹನಿಮೂನ್​ಗೆ ಸದ್ಯಕ್ಕೆ ಹೋಗಲ್ಲ ಎಂಬ ಮಾತುಗಳು ಕೇಳಿ ಬಂದಿದೆ.

ಹನಿಮೂನ್​ಗೆ ಹೋಗಲ್ವಂತೆ ಕ್ಯಾಟ್​- ವಿಕ್ಕಿ

ಇಷ್ಟೆಲ್ಲಾ ದುಡ್ಡು ಖರ್ಚು ಮಾಡಿ ಮದುವೆಯಾಗುತ್ತರಿವ ವಿಕ್ಕಿ ಹಾಗೂ ಕತ್ರಿನಾ ಹನಿಮೂನ್​ ಬಗ್ಗೆ ಯಾವುದೆ ಪ್ಲ್ಯಾನ್​ ಮಾಡಿಕೊಂಡಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಮದುವೆ ಮಾತ್ರ ಗ್ರ್ಯಾಂಡ್ ಆಗಿ ಮಾಡಿಕೊಂಡು, ಮುಂಬೈನಲ್ಲಿ ರಿಸೆಪ್ಶನ್​ ನಡೆಸಲು ಡಿಸೈಡ್ ಮಾಡಿದ್ದಾರೆ. ಕತ್ರೀನಾ ಕೈಫ್​ ಮುಂದಿನ ಸಿನಿಮಾದ ಶೂಟಿಂಗ್​ಗಾಗಿ ಈ ಹಿಂದೆಯೇ ಡೇಟ್ಸ್​ ನೀಡಿದ್ದಾರಂತೆ. ಹೀಗಾಗಿ ಚಿತ್ರೀಕರಣದಲ್ಲಿ ಭಾಗಿಯಾಗಬೇಕಿದೆ. ಹೀಗಾಗಿ ಮದುವೆ ಬಳಿಕ ಹನಿಮೂನ್​ಗೆ ತೆರಳಿ ಎಂಜಾಯ್​ ಮಾಡುವ ಪ್ಯಾನ್​ ಇವರಿಗೆ ಸದ್ಯಕ್ಕಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನು ಓದಿ : ಮದ್ವೆಗೆ ಕರೆಯದಿದ್ರೂ ತನ್ನ ಪರ್ಸನಲ್​ ಬಾಡಿಗಾರ್ಡ್​ ಕಳಿಸಿಕೊಟ್ಟ ಸಲ್ಮಾನ್​ ಖಾನ್​!

ಕತ್ರಿನಾ ಕೈಯಲ್ಲಿ ಸದ್ಯಕ್ಕೆ ಮೂರು ಸಿನಿಮಾಗಳು!

ರಮೇಶ್ ತೌರಾನಿ ನಿರ್ಮಾಣದ ಮತ್ತು ಶ್ರೀರಾಮ್ ರಾಘವನ್ ನಿರ್ದೇಶನದ ಚಿತ್ರಕ್ಕಾಗಿ ಕತ್ರಿನಾ ಚಿತ್ರೀಕರಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ . ಮುಂಬೈನಲ್ಲಿ ಅವರ ವಿವಾಹದ ಆರತಕ್ಷತೆಯ ನಂತರ ವಿಜಯ್ ಸೇತುಪತಿ ಜೊತೆಗಿನ ಮೆರ್ರಿ ಕ್ರಿಸ್‌ಮಸ್ ಎಂಬ ಚಿತ್ರದ ಶೂಟಿಂಗ್​ನಲ್ಲಿ ಕತ್ರಿನಾ ಭಾಗಿಯಾಗಲಿದ್ದಾರಂತೆ. ಇದಾದ ಬಳಿಕ ಸಲ್ಮಾನ್​ ಖಾನ್​ ಜೊತೆ ಟೈಗರ್​ 3 ಸಿನಿಮಾ ಮಾಡಲಿದ್ದಾರೆ. ನವೆಂಬರ್​ನಲ್ಲಿ ಟೈಗರ್​ 3 ಸಿನಿಮಾಗಾಗಿ ಕತ್ರಿನಾ ಡೇಟ್ಸ್​ ನೀಡಿದ್ದರು.ಇದಾದ ಬಳಿಕ ಶಾಹಿದ್​​ ಕಪೂರ್​ ಜೊತೆ ಒಂದು ಸಿನಿಮಾಗೆ ಸಹಿ ಹಾಕಿದ್ದಾರೆ.  ಹೀಗಾಗಿ ಮದುವೆಯಾದ ಬಳಿಕ ಸಿನಿಮಾ ಶೂಟಿಂಗ್​ನಲ್ಲಿ ಕತ್ರಿನಾ  ಬ್ಯುಸಿಯಾಗಲಿದ್ದಾರೆ.

ಇದನ್ನು ಓದಿ : ಈ ಸುಂದರ ಐತಿಹಾಸಿಕ ಕೋಟೆಯಲ್ಲಿ Katrina ಮತ್ತು Vicky ಮದುವೆ: ಫೋಟೋಗಳಲ್ಲಿ ನೋಡಿ

ಪರ್ಸನಲ್​ ಬಾಡಿಗಾರ್ಡ್​ ಕಳಿಸಿಕೊಟ್ಟ ಸಲ್ಮಾನ್ ಖಾನ್​!

ಇನ್ನು ಕ್ಯಾಟ್​ ಹಾಗೂ ವಿಕ್ಕಿ ಮದುವೆ ಕಾರ್ಯಕ್ರಮಕ್ಕೆ,  ನಟ ಸಲ್ಮಾನ್​ ಖಾನ್ ವಯಕ್ತಿಕ ಬಾಡಿಗಾರ್ಡ್​ ಸೆಕ್ಯುರಿಟಿ ನೀಡಲಿದ್ದಾರೆ. ಶೇರಾ ತಮ್ಮದೇ ಆದ ಸೆಕ್ಯುರಿಟಿ ತಂಡವನ್ನು ಹೊಂದಿದ್ದಾರೆ. ಆ ಮೂಲಕ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆಗೆ ಭದ್ರತೆ ನೀಡುತ್ತಿದ್ದಾರೆ.  ಇದರ ಜತೆಗೆ  ಡಿ.9ರವರೆಗೆ ವಿವಾಹ ನಡೆಯುವ ಸ್ಥಳದ ಸುತ್ತಮುತ್ತ ಭದ್ರತೆ ಒದಗಿಸಲಾಗಿದೆ. ಕತ್ರಿನಾ ವಿಕ್ಕಿ ಮದುವೆಗೆ 120 ಜನರನ್ನು ಮಾತ್ರ ಆಹ್ವಾನಿಸಲಾಗಿದೆ. ಮದುವೆಯ ಬಳಿಕ ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

Published by:Vasudeva M
First published: