Katrina-Vicky Wedding: ಒಂದು ಚಿತ್ರದಲ್ಲೂ ಜೊತೆಯಾಗಿ ನಟಿಸಿಲ್ಲ, ಕತ್ರಿನಾ-ವಿಕ್ಕಿ ನಡುವೆ ಪ್ರೀತಿ ಹುಟ್ಟಿದ ಕತೆ ಸಖತ್ತಾಗಿದೆ!

Katrina Kaif And Vicky Kaushal: ಇವರಿಬ್ಬರೂ ಒಟ್ಟಿಗೆ ಚಿತ್ರದಲ್ಲಿ ಕೆಲಸ ಮಾಡಿಲ್ಲ, ಇಬ್ಬರ ನಡುವೆ ಪ್ರೀತಿ ಹೇಗೆ ಅರಳಿತು ಎಂದು ಅನೇಕರು ಆಶ್ಚರ್ಯ ಪಡುತ್ತಿದ್ದಾರೆ.

ವಿಕ್ಕಿ ಮತ್ತು ಕತ್ರೀನಾ

ವಿಕ್ಕಿ ಮತ್ತು ಕತ್ರೀನಾ

  • Share this:
ಬಾಲಿವುಡ್ ನಟ ವಿಕ್ಕಿ ಕೌಶಲ್ ( Vicky Kaushal )ಮತ್ತು ನಟಿ ಕತ್ರೀನಾ ಕೈಫ್ (Katrina Kaif)ಯಾವುದೇ ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸಿಲ್ಲ ಮತ್ತು ಯಾವುದೇ ಚಿತ್ರಕ್ಕಾಗಿ ಒಟ್ಟಾಗಿ ಪರದೆಯ ಹಿಂದೆ ಕೆಲಸವೂ ಮಾಡಿಲ್ಲ. ಮತ್ತೆ ಈ ಜೋಡಿ ಭೇಟಿಯಾದದ್ದು ಎಲ್ಲಿ ಮತ್ತು ಇವರಿಬ್ಬರ ನಡುವೆ ಪ್ರೀತಿ (Love)ಹುಟ್ಟಿದ್ದು ಯಾವಾಗ ಎನ್ನುವ ವಿಷಯ ಅನೇಕ ಅಭಿಮಾನಿಗಳ ನಿದ್ದೆಯಂತೂ ಕೆಡಿಸಿರುತ್ತದೆ (Blossom).ಅದರಲ್ಲೂ ಮುಂಬರುವ ಕೆಲವೇ ದಿನಗಳಲ್ಲಿ ಇವರಿಬ್ಬರ ವಿವಾಹವಾಗಲಿರುವ ಸುದ್ದಿಯೂ ಅನೇಕ ಅಭಿಮಾನಿಗಳಲ್ಲದೆ, ಬಾಲಿವುಡ್ (Bollywood)ಮಂದಿಗೂ ಸಹ ಆಶ್ಚರ್ಯಚಕಿತರನ್ನಾಗಿಸಿದೆ ಎಂದು ಹೇಳಿದರೆ ತಪ್ಪಾಗಲಾರದು. ಕಳೆದ ಕೆಲವು ದಿನಗಳಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ ಇವರಿಬ್ಬರ ಮದುವೆ ವಿಷಯವನ್ನು ಇನ್ನೂ ಇವರಿಬ್ಬರು ಖಚಿತಪಡಿಸಿಲ್ಲ. ವಿಕ್ಕಿ ಮತ್ತು ಕತ್ರೀನಾ ಈ ವರ್ಷದ ಡಿಸೆಂಬರ್ 9ರಂದು ( December 9)ಮದುವೆ(Wedding)ಯಾಗಲಿದ್ದಾರೆ ಎಂಬ ವದಂತಿಗಳು ಬಲವಾಗಿ ಹರಡಿವೆ.

ಪ್ರೀತಿ ಹೇಗೆ ಅರಳಿತು
ಒದಗಿಸಲಾದ ವಿವಿಧ ವರದಿಗಳು ಮತ್ತು ಮಾಹಿತಿಯ ಪ್ರಕಾರ, ಇವರಿಬ್ಬರು ರಾಜಸ್ಥಾನದಲ್ಲಿ ವಿವಾಹವನ್ನು ಯೋಜಿಸಿದ್ದಾರೆ. ಅವರ ಅಭಿಮಾನಿಗಳು ಅಧಿಕೃತ ಮಾಹಿತಿ ಮತ್ತು ಇವರಿಬ್ಬರ ಮದುವೆಯ ಫೋಟೋಗಳನ್ನು ನೋಡಲು ತಮ್ಮ ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ ಎಂದು ಹೇಳಬಹುದು. ಹೌದು, ಇವರಿಬ್ಬರೂ ಒಟ್ಟಿಗೆ ಚಿತ್ರದಲ್ಲಿ ಕೆಲಸ ಮಾಡಿಲ್ಲ, ಇಬ್ಬರ ನಡುವೆ ಪ್ರೀತಿ ಹೇಗೆ ಅರಳಿತು ಎಂದು ಅನೇಕರು ಆಶ್ಚರ್ಯ ಪಡುತ್ತಿದ್ದಾರೆ.

ಇದನ್ನು ಓದಿ: Private Planeನಲ್ಲಿ ರಾಜಸ್ಥಾನಕ್ಕೆ ಹೊರಟ ವಿಕ್ಕಿ, ಕತ್ರಿನಾ ಕೈಫ್

ಚೆನ್ನಾಗಿ ಕಾಣುತ್ತೀರಿ ಎಂದ ಕರಣ್
ಇವರಿಬ್ಬರೂ ಕರಣ್ ಜೋಹರ್ ಅವರ ಚಾಟ್ ಶೋ ‘ಕಾಫಿ ವಿತ್ ಕರಣ್’ ನಲ್ಲಿ ಇದೆಲ್ಲಾ ಪ್ರಾರಂಭವಾಯಿತು ಎಂದು ಹೇಳಲಾಗುತ್ತಿದೆ. 2019ರ ಒಂದು ಎಪಿಸೋಡ್‌ನಲ್ಲಿ ಕರಣ್ ಕತ್ರೀನಾರನ್ನು ತಮ್ಮ ಮುಂದಿನ ಯೋಜನೆಯಲ್ಲಿ ಯಾರೊಂದಿಗೆ ಕೆಲಸ ಮಾಡಲು ಬಯಸುತ್ತೀರಿ ಎಂದು ಪ್ರಶ್ನೆಯೊಂದನ್ನು ಕೇಳಿದರು. ಕತ್ರಿನಾ ಅದಕ್ಕೆ ವಿಕ್ಕಿ ಎಂದು ಹೇಳಿದಳು, ನೀವಿಬ್ಬರೂ ಒಟ್ಟಿಗೆ ನಿಜವಾಗಿಯೂ ಚೆನ್ನಾಗಿ ಕಾಣುತ್ತೀರಿ ಎಂದು ಕರಣ್ ಹೇಳಿದರು. ನಂತರ, ವಿಕ್ಕಿ ಮತ್ತು ಆಯುಷ್ಮಾನ್ ಖುರಾನಾ ಇದೇ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಂದಾಗ, ಕರಣ್ ಕತ್ರೀನಾ ಹೇಳಿಕೆಯನ್ನು ನಟನೊಂದಿಗೆ ಹಂಚಿಕೊಂಡರು. ವಿಕ್ಕಿ ಸಾಕಷ್ಟು ಆಶ್ಚರ್ಯಚಕಿತನಾಗಿದ್ದರು ಮತ್ತು ಮೂರ್ಛೆ ಹೋಗುವಂತೆ ನಟಿಸಿದರು.

ಚಾಟ್ ಶೋ ಸಮಯ
ಮೊದಲ ಬಾರಿಗೆ, ಫಿಲ್ಮ್ ಕಂಪ್ಯಾನಿಯನ್‌ನ ಟೇಪ್ ಕಾಸ್ಟ್‌ನ ಸಂಚಿಕೆಗಾಗಿ ಇಬ್ಬರೂ ಒಟ್ಟಿಗೆ ಸೇರಿದರು. ಇದು ಅವರ ಮೊದಲ ವ್ಯಕ್ತಿಗತ ಭೇಟಿ ಎಂದು ಹೇಳಲಾಗಿದೆ. ಚಾಟ್ ಶೋ ಸಮಯದಲ್ಲಿ, ಅವರು ತಮ್ಮ ಕುಟುಂಬ, ಸ್ನೇಹಿತರು ಮತ್ತು ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿದ ಅನುಭವದ ಬಗ್ಗೆ ಪರಸ್ಪರ ಪ್ರಶ್ನೆಗಳನ್ನು ಕೇಳಿದರು. ಫಿಲ್ಮ್ ಕಂಪ್ಯಾನಿಯನ್ ಎಂದಿಗೂ ಒಟ್ಟಿಗೆ ಕೆಲಸ ಮಾಡದ ಅಥವಾ ಪರಸ್ಪರ ಚೆನ್ನಾಗಿ ತಿಳಿದಿಲ್ಲದ ನಟರ ನಡುವೆ ಐಸ್ ಬ್ರೇಕರ್ ಆಗಿ ಕಾರ್ಯನಿರ್ವಹಿಸುವ ಗುರಿ ಹೊಂದಿರುತ್ತದೆ.

ಮನೆಗೆ ಹೋಗಿ ಭೇಟಿ
ನಂತರ, ವಿವಿಧ ಪ್ರಶಸ್ತಿ ಸಮಾರಂಭಗಳಲ್ಲಿ ಈ ಇಬ್ಬರು ಕಂಡು ಬಂದರು, ಆದರೆ ಅವರು ತಮ್ಮ ಸಂಬಂಧವನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ. ಕೆಲವು ಬಾರಿ, ವಿಕ್ಕಿ ಕತ್ರೀನಾ ಅವರೊಂದಿಗೆ ವೇದಿಕೆಯಲ್ಲಿ ಚೆಲ್ಲಾಟವಾಡಿದರು. ಒಮ್ಮೆ ವಿಕ್ಕಿ ಕತ್ರೀನಾರನ್ನು ಒಳ್ಳೆಯ ವಿಕ್ಕಿ ಕೌಶಲ್‌ನನ್ನು ಹುಡುಕಿ ಮದುವೆಯಾಗುವಂತೆ ಹೇಳಿದರು.

ಇದನ್ನೂ ಓದಿ: ಇವ್ರ ಮದ್ವೆಗೆ ಫೋನ್​ ತರಂಗಿಲ್ಲ..ಕೋಡ್​ ಕೊಟ್ರೆ ಮಾತ್ರ ಎಂಟ್ರಿ: ಕತ್ರಿನಾ-ವಿಕ್ಕಿ ವಿವಾಹಕ್ಕೆ ಹೈ ಸೆಕ್ಯೂರಿಟಿ!

ವಿಕ್ಕಿ ಮತ್ತು ಕತ್ರೀನಾ ಸ್ನೇಹಿತನ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಒಟ್ಟಿಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ವಿಕ್ಕಿ ಆಗಾಗ್ಗೆ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಕತ್ರೀನಾರ ಮನೆಗೆ ಹೋಗಿ ಭೇಟಿ ಮಾಡುತ್ತಿದ್ದರು ಎಂದು ಹೇಳಲಾಗುತ್ತಿತ್ತು.
Published by:vanithasanjevani vanithasanjevani
First published: