ಬಾಲಿವುಡ್(Bollywood) ಕ್ಯೂಟ್ ಕಪಲ್(Cute Couple) ಕತ್ರಿನಾ ಕೈಫ್- ವಿಕ್ಕಿ ಕೌಶಲ್(Katrina Kaif - Vicky Kaushal) ಮದುವೆಯಾಗಿ ಮರಳಿ ಮನೆ ಸೇರಿಕೊಂಡಿದ್ದಾರೆ. ಅದ್ಧೂರಿಯಾಗಿ ವಿವಾಹವಾದ ಈ ಜೋಡಿ, ಈಗ ಮತ್ತಷ್ಟು ಅದ್ಧೂರಿಯಾಗಿ ರಿಸೆಪ್ಷನ್(Reception) ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಅವರು ಡಿಸೆಂಬರ್ 9ರಂದು ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ನಲ್ಲಿ ವಿವಾಹವಾಗಿದ್ದರು. ಇವರ ಅದ್ದೂರಿ ಮದುವೆಗೆ ಆಪ್ತರು ಹಾಗೂ ಕುಟುಂಬದವರು ಮಾತ್ರ ಭಾಗಿ ಆಗಿದ್ದರು. ಹೆಚ್ಚು ಜನರಿಗೆ ಈ ಮದುವೆ(Marriage)ಗೆ ಆಹ್ವಾನ ಮಾಡಿರಲಿಲ್ಲ. ಹೀಗಾಗಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಅದ್ಧೂರಿ ಆರತಕ್ಷತೆ ಆಯೋಜಿಸಿದೆ. ಮದುವೆಗೆ ಯಾರಿಗೆಲ್ಲ ಆಹ್ವಾನ ನೀಡಲು ಸಾಧ್ಯವಾಗಲಿಲ್ಲ, ಅವರನ್ನೆಲ್ಲ ಈ ಗ್ರ್ಯಾಂಡ್ ರಿಸೆಪ್ಷನ್ಗೆ ಕರೆಯಲು ಪ್ಲ್ಯಾನ್(Plan) ಮಾಡುತ್ತಿದ್ದಾರೆ. ಡಿಸೆಂಬರ್ 20ರಂದು ಮುಂಬೈ(Mumbai)ನಲ್ಲಿ ಅದ್ಧೂರಿಯಾಗಿ ಇವರಿಬ್ಬರ ಆರತಕ್ಷತೆ ಸಮಾರಂಭ ನಡೆಯಲಿದೆ. ಬಾಲಿವುಡ್ ದಿಗ್ಗಜರು, ರಾಜಕಾರಣಿಗಳು, ಕ್ರಿಕೆಟಿಗರು ಸೇರಿ ಗಣ್ಯರೆಲ್ಲ ಆರತಕ್ಷತೆ ಆಗಮಿಸಲಿದ್ದಾರೆ. ಈ ವಿಚಾರ ಇದೀಗ ಬಾಲಿವುಡ್ ಅಂಗಳದಲ್ಲಿ ಸಾಕಷ್ಟ ಚರ್ಚೆ ಆಗುತ್ತಿದೆ. ಕಾರಣ ಮದುವೆಯಾದ ಬಳಿಕ ಎಲ್ಲೂ ಹೆಚ್ಚು ದಿನ ಹನಿಮೂನ್(Honymoon) ಹೋಗದೇ ಕತ್ರಿನಾ- ವಿಕ್ಕಿ ವಾಪಸ್ ಆಗಿದ್ದಾರೆ. ಕೇವಲ ನಾಲ್ಕೇ ದಿನಕ್ಕೆ ಮನೆಗೆ ವಾಪಸ್ ಆಗಿದ್ದರು.
ಕತ್ರಿನಾ ಕೈಯಲ್ಲಿವೆ ಸಾಲು ಸಾಲು ಸಿನಿಮಾಗಳು!
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಸಿನಿಮಾ ಕೆಲಸಗಳಿಗೆ ಮತ್ತೆ ಚಾಲನೆ ನೀಡಬೇಕಿದೆ. ಈ ಕಾರಣಕ್ಕೆ ಆರತಕ್ಷತೆ ಕಾರ್ಯಕ್ರಮವನ್ನು ಬಹುಬೇಗ ಮುಗಿಸುವ ಆಲೋಚನೆ ಈ ದಂಪತಿಯದ್ದು. ಇದರ ಜತೆಗೆ ಕ್ರಿಸ್ಮಸ್ ಕೂಡ ಆಗಮಿಸುತ್ತಿದೆ. ಅದರ ಬೆನ್ನಲ್ಲೇ ಹೊಸ ವರ್ಷದ ಸೆಲಬ್ರೇಷನ್ ಇರಲಿದೆ. ಅದಕ್ಕೂ ಮೊದಲೇ ಈ ರಿಸೆಪ್ಷನ್ ನಡೆಯುತ್ತಿದೆ. ಶೂಟಿಂಗ್ನಲ್ಲಿ ಭಾಗವಹಿಸುವುದಕ್ಕಿಂತ ಮುಂಚೆ ರಿಸೆಪ್ಷನ್ ಮಾಡಲು ಕತ್ರಿನಾ ಕೈಫ್ - ವಿಕ್ಕಿ ಕೌಶಲ್ ನಿರ್ಧರಿಸಿದ್ದಾರೆ
ಇದನ್ನು ಓದಿ : ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಅದ್ಧೂರಿ ವಿವಾಹ
ಮೂರು ಸಿನಿಮಾ ಶೂಟಿಂಗ್ನಲ್ಲಿ ಕತ್ರಿನಾ ಭಾಗಿ!
ರಮೇಶ್ ತೌರಾನಿ ನಿರ್ಮಾಣದ ಮತ್ತು ಶ್ರೀರಾಮ್ ರಾಘವನ್ ನಿರ್ದೇಶನದ ಚಿತ್ರಕ್ಕಾಗಿ ಕತ್ರಿನಾ ಚಿತ್ರೀಕರಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ . ಮುಂಬೈನಲ್ಲಿ ಅವರ ವಿವಾಹದ ಆರತಕ್ಷತೆಯ ನಂತರ ವಿಜಯ್ ಸೇತುಪತಿ ಜೊತೆಗಿನ ಮೆರ್ರಿ ಕ್ರಿಸ್ಮಸ್ ಎಂಬ ಚಿತ್ರದ ಶೂಟಿಂಗ್ನಲ್ಲಿ ಕತ್ರಿನಾ ಭಾಗಿಯಾಗಲಿದ್ದಾರಂತೆ. ಇದಾದ ಬಳಿಕ ಸಲ್ಮಾನ್ ಖಾನ್ ಜೊತೆ ಟೈಗರ್ 3 ಸಿನಿಮಾ ಮಾಡಲಿದ್ದಾರೆ. ನವೆಂಬರ್ನಲ್ಲಿ ಟೈಗರ್ 3 ಸಿನಿಮಾಗಾಗಿ ಕತ್ರಿನಾ ಡೇಟ್ಸ್ ನೀಡಿದ್ದರು.ಇದಾದ ಬಳಿಕ ಶಾಹಿದ್ ಕಪೂರ್ ಜೊತೆ ಒಂದು ಸಿನಿಮಾಗೆ ಸಹಿ ಹಾಕಿದ್ದಾರೆ. ಹೀಗಾಗಿ ಮದುವೆಯಾದ ಬಳಿಕ ಸಿನಿಮಾ ಶೂಟಿಂಗ್ನಲ್ಲಿ ಕತ್ರಿನಾ ಬ್ಯುಸಿಯಾಗಲಿದ್ದಾರೆ.
ಇದನ್ನು ಓದಿ : ಈ ನಟಿಗೆ ನಿನ್ನ ಸೊಂಟ, ಎದೆ ಸೈಜ್ ಎಷ್ಟಿದೆ ಅಂತ ಕೇಳಿದ್ರಂತೆ ಸೌತ್ ಡೈರೆಕ್ಟರ್ಸ್!
ಕತ್ರಿನಾಗೆ ರೇಂಜ್ ರೋವರ್ ಗಿಫ್ಟ್ ಕೊಟ್ಟ ಸಲ್ಮಾನ್ ಖಾನ್!
ಸಲ್ಮಾನ್ ಖಾನ್ ಅವರು ಕತ್ರಿನಾಗೆ 3 ಕೋಟಿ ರೂಪಾಯಿ ಮೌಲ್ಯದ ರೇಂಜ್ ರೋವರ್ ಕಾರನ್ನು ನೀಡಿದ್ದಾರೆ ಎಂದು ವರದಿ ಆಗಿದೆ. ಈ ಮೂಲಕ ಸಲ್ಮಾನ್ ಖಾನ್ ಅವರು ವಿಕ್ಕಿ ಹಾಗೂ ಕತ್ರಿನಾಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಅಲ್ಲದೆ, ಕತ್ರಿನಾ ಬಗ್ಗೆ ಇರುವ ಫ್ರೆಂಡ್ಶಿಪ್ಅನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಅಂದಹಾಗೆ, ಕತ್ರಿನಾ ಮತ್ತು ವಿಕ್ಕಿ ಮದುವೆ ಆಗುತ್ತಿದ್ದಂತೆ ಸಲ್ಲು ಬಗ್ಗೆ ಸಾಕಷ್ಟು ಟ್ರೋಲ್ಗಳು ಹರಿದಾಡಿದ್ದವು. ಆದರೆ, ಆ ಬಗ್ಗೆ ಸಲ್ಮಾನ್ ತಲೆಕೆಡಿಸಿಕೊಂಡಿಲ್ಲ. ಬದಲಿಗೆ ದುಬಾರಿ ಗಿಫ್ಟ್ ನೀಡಿದ್ದಾರೆ. ಮದುವೆಗೆ ತನ್ನ ವಯಕ್ತಿಕ ಬಾಡಿಗಾರ್ಡ್ ಕೂಡ ಕಳಿಸಿಕೊಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ