Sunita Ahujaರನ್ನು ಕೆಟ್ಟ ಅತ್ತೆ ಎಂದು ಕರೆದ Kashmera Shah - ಬೀದಿಗೆ ಬಂದ ಕುಟುಂಬದ ಕಲಹ ..

Krushna Abhishekh And Govinda : ಇನ್ನೊಂದು ಮೂಲಗಳ ಪ್ರಕಾರ, ದಿ ಕಪಿಲ್ ಶರ್ಮಾ ಶೋ'ನಲ್ಲಿ ಕೃಷ್ಣ ಅಭಿಷೇಕ್ ಇರದಿದ್ದರೆ ಮಾತ್ರ ನಾವು ಬರುತ್ತೇವೆ ಎಂದು ನಟ ಗೋವಿಂದ ಪತ್ನಿ ಶರತ್ತು ಹಾಕಿದ್ದರಂತೆ. ಹಾಗಾಗಿ ಕೃಷ್ಣ ಅವರು ಗೋವಿಂದ ಎಪಿಸೋಡ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಾಲಿವುಡ್​ (Bollywood)ನಟ ಗೋವಿಂದ (Govinda)ಹಾಗೂ ಅವರ ಸೋದರಳಿಯ ಕೃಷ್ಣ ಅಭಿಷೇಕ್ (Krushna Abhishekh)ಕುಟುಂಬದ ನಡುವಿನ ಕಲಹದಲ್ಲಿ ಹಲವಾರು ದಿನಗಳಿಂದ ಸುದ್ದಿ ಹರಿದಾಡುತ್ತಿದೆ.  ಇತ್ತಿಚೆಗಷ್ಟೇ  ಗೋವಿಂದ ಅವರ  ಪತ್ನಿ ಸುನೀತಾ ಅಹುಜಾ (sunita Ahuja)ಅವರು ಕೃಷ್ಣ ಅಭಿಷೇಕ್ ಅವರ ಪತ್ನಿ ಕಾಶ್ಮೀರಾ ಷಾ (Kashmera Shah)ಅವರನ್ನು ಕೆಟ್ಟ ಸೊಸೆ (Bad Daughter In Law) ಎಂದು ಕರೆದ ನಂತರ, ಕಾಶ್ಮೀರ ಕೂಡ  ಸುನೀತಾ ಅವರನ್ನು  ಕೆಟ್ಟ ಅತ್ತೆ ಎಂದು ಕರೆಯುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಎರಡು ಕುಟುಂಬದ ಮಧ್ಯೆ ಶೀತಲ ಸಮರ ನಡೆಯುತ್ತಿದ್ದು, ಒಬ್ಬರು ಒನ್ನೊಂದು ಹೇಳಿಕೆ  ನೀಡುತ್ತಿದ್ದಾರೆ.  ತನ್ನ ಟ್ವಿಟ್ಟರ್​ ಖಾತೆಯಲ್ಲಿ ನಾನು ಈಗಷ್ಟೇ ಟ್ರಿಪ್ ಮುಗಿಸಿ ಬಂದಿದ್ದೇನೆ, ಇಲ್ಲಿ ನೋಡಿದರೆ ಕುಟುಂಬದ ಬಗ್ಗೆ ಇಲ್ಲ ಸಲ್ಲದ ಹೇಳಿಕೆಗಳನ್ನು ಜನ ನೀಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.  

ನಾನು ಈಗಷ್ಟೆ ಕೆಲಸಗಳ ಕಾರಣ ಎಲ್ಲ ಟ್ರಿಪ್ ಮುಗಿಸಿ ಬಂದಿದ್ದೇನೆ. ಇಲ್ಲಿ ನೋಡಿದರೆ ಜನರು ನಮ್ಮ ಕುಟುಂಬದ ವಿಚಾರದಲ್ಲಿ ಕೈ ತೊಳೆಯುತ್ತಿದ್ದಾರೆ. ನನ್ನ ಮಗ ಕೂಡ ನನ್ನ ಕೆಟ್ಟ ಸೊಸೆ ಎಂದರೆ ಯಾರು ಎಂಬುದನ್ನ ಕೇಳಿದಾಗ. ಅದಕ್ಕೆ ನಾನು ಕೆಟ್ಟ ಅತ್ತೆಯನ್ನು ಪಡೆದವರು ಎಂದೆ ಎಂದು  ಸುನೀತಾ ಅಹುಜಾ ವಿರುದ್ದ ಕಿಡಿಕಾರಿದ್ದಾರೆ.

ಸಂದರ್ಶನವೊಂದರಲ್ಲಿ ಸುನೀತಾ ನಾವು ಕೆಟ್ಟ ಸೊಸೆಯನ್ನು ಕರೆತಂದಾಗ ಮನೆಯಲ್ಲಿ ಸಮಸ್ಯೆಗಳು ಆರಂಭವಾಗುತ್ತವೆ. ನಾನು ಯಾರ ಹೆಸರನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ನನ್ನ ಜೀವನದಲ್ಲಿ ನನಗೆ ತುಂಬಾ ಕೆಲಸವಿದೆ. ನಾನು ನನ್ನ ಪತಿ ಗೋವಿಂದ ಅವರ  ಕೆಲಸವನ್ನು ನಿಭಾಯಿಸುತ್ತೇನೆ. ನಾನು ಈ ಅಸಂಬದ್ಧ ವಿಷಯಗಳಿಗೆ ತಲೆ ಹಾಕಲು ಹೋಗಲು ಇಷ್ಟವಿಲ್ಲ ಎಂದು ಹೇಳಿದ್ದು, ಈ ಹೇಳಿಕೆಯ ನಂತರ ಕಾಶ್ಮೀರ ಅತ್ತೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಮುಂಚೆಯೇ ತೆರೆಗಪ್ಪಳಿಸಲಿದೆ "ಪುಷ್ಪ" ! ಡಿ. 17ಕ್ಕೆ ಅಲ್ಲು ಅರ್ಜುನ್ ಸಿನಿಮಾ ರಿಲೀಸ್!

ಕೆಲ ದಿನಗಳ ಹಿಂದೆ ಗೋವಿಂದ ಮತ್ತು ಸುನೀತಾ ಅಹುಜಾ ಅವರು ಕಪಿಲ್ ಶರ್ಮಾ  ಅವರ ದಿ ಕಪಿಲ್ ಶರ್ಮಾ ಶೋನಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಕೃಷ್ಣ ತನ್ನ ಮಾವ  ಮತ್ತು ಅವರ ಹೆಂಡತಿ ಬರುತ್ತಿರುವ  ಈ ಎಪಿಸೋಡ್​ನ ಭಾಗವಾಗಿರುವುದಿಲ್ಲ.  ಆ ದಿನ  ಕೃಷ್ಣ ಕಾಣಿಸಿಕೊಳ್ಳದೆ ಇರಲು ಮುಖ್ಯ ಕಾರಣ ಕೌಟುಂಬಿಕ  ಸಮರ ಎಂದು ಸಾಮಾನ್ಯವಾಗಿ ಜನರು ಅರ್ಥ ಮಾಡಿಕೊಂಡಿದ್ದಾರೆ. ಆದರೂ, ಕೃಷ್ಣ ಇದನ್ನು  ನಿರಾಕರಿಸಿದ್ದು, ಬೇರೆ ಕೆಲಸದಲ್ಲಿ ಬ್ಯುಸಿಯಾಗಿದ್ದ ಕಾರಣ, ಆ ಎಪಿಸೋಡ್​ನಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ, ರಾಯ್‌ಪುರದಲ್ಲಿ ನಡೆಯುತ್ತಿರುವ ಚಿತ್ರದ ಚಿತ್ರೀಕರಣಕ್ಕಾಗಿ ದಿನಾಂಕಗಳನ್ನು ಹೊಂದಿಸಲು ತೊಂದರೆಯಾಗುತ್ತಿದೆ ಎಂದು  ಹೇಳಿದ್ದಾರೆ.

ಇನ್ನೊಂದು ಮೂಲಗಳ ಪ್ರಕಾರ, ದಿ ಕಪಿಲ್ ಶರ್ಮಾ ಶೋ'ನಲ್ಲಿ ಕೃಷ್ಣ ಅಭಿಷೇಕ್ ಇರದಿದ್ದರೆ ಮಾತ್ರ ನಾವು ಬರುತ್ತೇವೆ ಎಂದು ನಟ ಗೋವಿಂದ ಪತ್ನಿ ಶರತ್ತು ಹಾಕಿದ್ದರಂತೆ. ಹಾಗಾಗಿ ಕೃಷ್ಣ ಅವರು ಗೋವಿಂದ ಎಪಿಸೋಡ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. 'ನಮ್ಮ ಮಧ್ಯೆ ಇರುವ ಸಮಸ್ಯೆ ಎಂದಿಗೂ ಬಗೆಹರಿಯೋದಿಲ್ಲ, ನನಗೆ ಎಂದಿಗೂ ಕೃಷ್ಣ ಅಭಿಷೇಕ್ ಮುಖ ನೋಡಲು ಇಷ್ಟವಿಲ್ಲ, ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಸುನೀತಾ ಅಹುಜಾ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Shamita Shetty ಜೊತೆ ತನ್ನ ಸಂಬಂಧ ಮತ್ತು ಆಕೆಯ ಕುಟುಂಬದ ಬಗ್ಗೆ ಮನಬಿಚ್ಚಿ ಮಾತನಾಡಿದ Raqesh Bapat

ಗಣೇಶ ಚತುರ್ಥಿಯ ದಿನ  ಮಾಧ್ಯಮಗಳ ಜೊತೆ ಮಾತನಾಡಿರುವ ಕೃಷ್ಣ ಅಭಿಷೇಕ್ ಅವರು, ಸುನೀತಾ ಹಾಗೂ ಗೋವಿಂದ ಅವರು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದನ್ನು ನಾನು  ಗಮನಿಸಿದ್ದೇನೆ. ಗಣಪತಿ ಈ ಸಮಸ್ಯೆಗೆ ಕೊನೆ ಹಾಡುತ್ತಾನೆ ಎಂದು ನಂಬಿದ್ದೇನೆ. ಏನೇ ಆಂತರಿಕ ವಿಚಾರಗಳಿದ್ದರೂ ಕೂಡ ನಾವು ಪರಸ್ಪರ  ಗೌರವ ನೀಡುತ್ತೇವೆ.  ಈ ಸಮಸ್ಯೆ ಬೇಗ ಬಗೆಹರಿಯಲಿ ಎಂದು ಪ್ರಾರ್ಥಿಸುವೆ ಎಂದು ಹೇಳಿದ್ದಾರೆ.
Published by:Sandhya M
First published: