ಬಾಲಿವುಡ್​ ನಟಿಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಬ್ಯಾರಿಕೇಡ್​ ಜಿಗಿದಿದ್ದ ಕಾರ್ತಿಕ್​ ಆರ್ಯನ್​..!

Kartik Aaryan: ಕಾರ್ತಿಕ್​ ಆರ್ಯನ್​ಗೆ ದೊಡ್ಡ ಫ್ಯಾನ್​ ಫಾಲೋಯಿಂಗ್​ ಇದೆ. ಇಂತಹ ನಟ ಸಹ ಬಿ-ಟೌನ್​ ನಟಿಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಸಖತ್​ ಕ್ರೇಜಿ ಕೆಲಸಗಳನ್ನು ಮಾಡಿದ್ದಾರೆ.

Anitha E | news18-kannada
Updated:July 1, 2020, 8:05 AM IST
ಬಾಲಿವುಡ್​ ನಟಿಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಬ್ಯಾರಿಕೇಡ್​ ಜಿಗಿದಿದ್ದ ಕಾರ್ತಿಕ್​ ಆರ್ಯನ್​..!
ಕಾರ್ತಿಕ್​ ಆರ್ಯನ್​ ಹಾಗೂ ಸಾಗರೀಕಾ ಘಾಟ್ಗೆ
  • Share this:
ಕಾರ್ತಿಕ್​ ಆರ್ಯನ್​ ಸದ್ಯ ಹೆಂಗೆಳೆಯರ ನೆಚ್ಚಿನ ನಾಯಕ ನಟ. ಬಿ-ಟೌನ್​ನಲ್ಲಿ ಉದ್ದುದ್ದ ಡೈಲಾಗ್​ ಹೇಳುವ ಮೂಲಕ ಅಭಿಮಾನಿಗಳನ್ನು ರಂಜಿಸುವ ನಟನನ್ನು ಕಂಡರೆ ಅಭಿಮಾನಿಗಳು ಮುಗಿ ಬೀಳುತ್ತಾರೆ. ಇಂತಹ ನಟನೊಂದಿಗೆ ಒಂದು ಸೆಲ್ಫಿ ಸಿಕ್ಕರೆ ಸಾಕು ಅಂತ ಫ್ಯಾನ್ಸ್ ಕಾಯುತ್ತಿರುತ್ತಾರೆ. 

ಕೆಲ ತಿಂಗಳ ಹಿಂದೆ ಅಭಿಮಾನಿಯೊಬ್ಬರು ಕಾರ್ತಿಕ್​ ಆರ್ಯನ್​ ಅವರ ಮನೆ ಮುಂದೆ ಒಂದು ಫೋಟೋ ಬೇಕೆಂದು ಕಾಯುತ್ತಾ ನಿಂತಿದ್ದರು. ನಂತರ ಈ ವಿಷಯ ತಿಳಿದು ಹೊರ ಬಂದ ನಟ ಅವರೊಂದಿಗೆ ಸೆಲ್ಫಿಗೆ ಪೋಸ್​​ ಕೊಟ್ಟು ಕಳುಹಿಸಿಕೊಟ್ಟಿದ್ದಾರೆ.

Kartik Aaryan is contributing one crore rupees to pm cares fund 
ಕಾರ್ತಿಕ್​ ಆರ್ಯನ್​


ಕಾರ್ತಿಕ್​ ಆರ್ಯನ್​ಗೆ ಇಂತಹ ಫ್ಯಾನ್​ ಫಾಲೋಯಿಂಗ್​ ಇರುವಾಗ ಅವರೂ ಸಹ ಓರ್ವ ನಟಿಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಸಖತ್​ ಕ್ರೇಜಿ ಕೆಲಸಗಳನ್ನು ಮಾಡಿದ್ದಾರೆ. ಹೌದು, ಸಿನಿಮಾಗೆ ಬರುವ ಮೊದಲು ಕಾರ್ತಿಕ್​ ಆರ್ಯನ್​ ಚಕ್​ ದೆ ಇಂಡಿಯಾ ಸಿನಿಮಾದಲ್ಲಿ ಪ್ರೀತಿ ಸಬರ್ವಾಲ್​ ಪಾತ್ರದಲ್ಲಿ ನಟಿಸಿರುವ ಸಾಗರೀಕಾ ಘಾಟ್ಗೆ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಬ್ಯಾರಿಕೇಡ್​ ಜಿಗಿದಿದ್ದರಂತೆ.
2008ರಲ್ಲಿ ಮುಂಬೈ ಮ್ಯಾರಥಾನ್​ ಸಮಯದಲ್ಲಿ ಕಾಣಿಸಿಕೊಂಡಿದ್ದ ಸಾಗರೀಕ ಘಾಟ್ಗೆ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದರು. ಆಗಲೇ ಅವರು ಬ್ಯಾರಿಕೇಡ್ ಜಿಗಿದಿದ್ದು. ಫೋಟೋ ತೆಗೆಸಿಕೊಂಡ ನಂತರ ಕಾರ್ತಿಕ್​, ಶಾರುಖ್​ ಖಾನ್​ ಸಿಕ್ಕರೆ ಹಾಯ್​ ಹೇಳುವಂತೆ ನಟಿಗೆ ಮನವಿ ಮಾಡಿದ್ದರಂತೆ. ಈ ವಿಷಯವನ್ನು ಕಾರ್ತಿಕ್​ ಆರ್ಯನ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Ranjani Raghavan: ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಪುಟ್ಟಗೌರಿ ರಂಜನಿ ರಾಘವನ್..!ಇದನ್ನೂ ಓದಿ: Neha Kakkar: ದೊಡ್ಡ ದೊಡ್ಡ ಸ್ಟಾರ್​ಗಳನ್ನೇ ಹಿಂದಿಕ್ಕಿ ದಾಖಲೆ ಬರೆದ ನೇಹಾ ಕಕ್ಕರ್..!
First published: July 1, 2020, 8:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading