Karthik Aaryan-Sara Ali Khan: ಸಾರಾ ಅಲಿ ಖಾನ್- ಕಾರ್ತಿಕ್​ ಆರ್ಯನ್​ರ ಮತ್ತೊಂದು ವಿಡಿಯೋ ವೈರಲ್​..!​

Karthik Aaryan-Sara Ali Khan: ಈ ಹಿಂದೆ ಸಾರಾ ಅಲಿಖಾನ್​ ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ತನಗೆ ಕಾರ್ತಿಕ್​ ಆರ್ಯನ್​ ಜೊತೆ ಡೇಟ್​ ಮಾಡಬೇಕು ಎಂದಿದ್ದರು. ಅದಾದ ನಂತರ ಈ ಜೋಡಿ ತುಂಬಾ ಕಡೆ ಒಟ್ಟಿಗೆ ಕಾಣಿಸಿಕೊಳ್ಳಲಾರಂಭಿಸಿದ್ದರು. ಅಲ್ಲದೆ ಡೇಟಿಂಗ್​ ವಿಷಯಕ್ಕೆ ಕಾರ್ತಿಕ್​ ಸಹ ಸಮ್ಮತಿ ಸೂಚಿಸಿದ್ದರು.

Anitha E | news18-kannada
Updated:February 12, 2020, 8:22 AM IST
Karthik Aaryan-Sara Ali Khan: ಸಾರಾ ಅಲಿ ಖಾನ್- ಕಾರ್ತಿಕ್​ ಆರ್ಯನ್​ರ ಮತ್ತೊಂದು ವಿಡಿಯೋ ವೈರಲ್​..!​
ಕಾರ್ತಿಕ್​ ಆರ್ಯನ್​ ಹಾಗೂ ಸಾರಾ ಅಲಿ ಖಾನ್​
  • Share this:
ಸಾರಾ ಅಲಿ ಖಾನ್ ಹಾಗೂ ಕಾರ್ತಿಕ್ ಆರ್ಯನ್​ ಡೇಟಿಂಗ್​ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಬಿ-ಟೌನ್​ ತುಂಬ ಹರಿದಾಡುತ್ತಿದೆ. ಅಲ್ಲದೆ ಈ ಜೋಡಿ ಇತ್ತೀಚೆಗೆ ಹೆಚ್ಚಾಗಿ ಜೊತೆ ಜೊತೆಗೆ ಕಾಣಿಸಿಕೊಳ್ಳುವುದೂ ಹೆಚ್ಚಾಗುತ್ತಿದೆ. ಇದರಿಂದಾಗಿಯೇ ಇವರ ವಿಡಿಯೋ ಹಾಗೂ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

ಈ ಹಿಂದೆ ಸಾರಾ ಅಲಿಖಾನ್​ ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ತನಗೆ ಕಾರ್ತಿಕ್​ ಆರ್ಯನ್​ ಜೊತೆ ಡೇಟ್​ ಮಾಡಬೇಕು ಎಂದಿದ್ದರು. ಅದಾದ ನಂತರ ಈ ಜೋಡಿ ತುಂಬಾ ಕಡೆ ಒಟ್ಟಿಗೆ ಕಾಣಿಸಿಕೊಳ್ಳಲಾರಂಭಿಸಿದ್ದರು. ಅಲ್ಲದೆ ಡೇಟಿಂಗ್​ ವಿಷಯಕ್ಕೆ ಕಾರ್ತಿಕ್​ ಸಹ ಸಮ್ಮತಿ ಸೂಚಿಸಿದ್ದರು.
View this post on Instagram

I promise you My expression is becoz of the food !


A post shared by KARTIK AARYAN (@kartikaaryan) on


ಇದೇ ವೇಳೆ ಈ ಜೋಡಿ 'ಲವ್​ ಆಜ್​ಕಲ್​' ಸಿನಿಮಾದ ಸೀಕ್ವೆಲ್​ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಇದೇ ಫೆ.14 ಅಂದರೆ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ. ಈ ವೇಳೆ ಸಾರಾ ಹಾಗೂ ಕಾರ್ತಿಕ್​ ಒಟ್ಟಿಗೆ ಇರುವ ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲಿ ಇತ್ತೀಚೆಗಷ್ಟೆ ಕಾರ್ತಿಕ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಚಿತ್ರವೇ ಸಾಕ್ಷಿ.
View this post on Instagram

Kaafi dubli ho gayi ho Aao pehle jaisi sehat banayein


A post shared by KARTIK AARYAN (@kartikaaryan) on


ಇದರಲ್ಲಿ ಕಾರ್ತಿಕ್​ ಸಾರಾಗೆ ಊಟ ಮಾಡಿಸುತ್ತಿದ್ದು, ತುಂಬಾ ಸಪೂರವಾಗಿದ್ದೀಯಾ, ಮೊದಲಿನಂತೆ ಆರೋಗ್ಯಕರವಾಗಿ ಮಾಡೋಣ ಅಂತ ಸಾರಾ ಕಾಲೆಳೆದು ಶೀರ್ಷಿಕೆ ಕೊಟ್ಟಿದ್ದಾರೆ. ಕಾರಣ ಸಾರಾ ಇತ್ತೀಚೆಗಷ್ಟೆ ತಮ್ಮ ಹಳೇ ವಿಡಿಯೋವನ್ನು ಪೋಸ್ಟ್​ ಮಾಡಿದ್ದು, ಅದರಲ್ಲಿ ಅವರು ಸಿಕ್ಕಾಪಟ್ಟೆ ದಪ್ಪಗಿದ್ದಾರೆ.
ಅಷ್ಟೇಅಲ್ಲ 'ಲವ್​ ಆಜ್​ಕಲ್​' ಸಿನಿಮಾದಲ್ಲಿ ಸಾರಾ ಹಾಗೂ ಕಾರ್ತಿಕ್​ ಆರ್ಯನ್​ ನಡುವೆ ಸಿಕ್ಕಾಪಟ್ಟೆ ಇಂಟಿಮೇಟ್​ ದೃಶ್ಯಗಳಿದ್ದು, ಅದರಲ್ಲಿ ಒಂದು ಕಿಸ್ಸಿಂಗ್​ ದೃಶ್ಯವನ್ನು ಈಗಾಗಲೇ ಟ್ರೈಲರ್​ನಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: Bigg Boss: ಎರಡನೇ ಬಾರಿಗೆ ಸಪ್ತಪದಿ ತುಳಿದ ಬಿಗ್​ಬಾಸ್​ ಖ್ಯಾತಿಯ ನಟಿ..!

ಕಾರ್ತಿಕ್​ ಆರ್ಯನ್​ ನಿನ್ನೆ ಸಹ ಸಾರಾ ಜೊತೆ ಬೈಕ್​ನಲ್ಲಿ ಹೋಗುತ್ತಿರುವ ವಿಡಿಯೋ ಪೋಸ್ಟ್​ ಮಾಡಿದ್ದು, ಅದಕ್ಕೆ ಸಖತ್​ ಆಗಿರುವ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಸಹ ನೆಟ್ಟಿಗರಿಗೆ ಇಷ್ಟವಾಗುತ್ತಿದ್ದು, ತುಂಬಾ ಜನ ಕಮೆಂಟ್​ ಮಾಡುತ್ತಿದ್ದಾರೆ.
View this post on Instagram

Challan Katega Aur mera bhi ....


A post shared by KARTIK AARYAN (@kartikaaryan) on


ಇದನ್ನೂ ಓದಿ:ವೈರಲ್​ ಆಗುತ್ತಿದೆ ಕಿಂಗ್​ ಖಾನ್​ ಮಗಳು ಸುಹಾನಾ ಖಾನ್​ರ ಮತ್ತೊಂದು ಸೆಲ್ಫಿ​..!

ಸಿನಿಮಾದ ರಿಲೀಸ್​ ಡೇಟ್​ ಹತ್ತಿರವಾಗುತ್ತಿದ್ದಂತೆಯೇ ಚಿತ್ರ ಪ್ರಚಾರಕ್ಕಾಗಿ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಡಿಯೋ ಹಾಗೂ ಫೋಟೋಗಳನ್ನು ಹೆಚ್ಚು ಹೆಚ್ಚು ಹಂಚಿಕೊಳ್ಳುತ್ತಿದ್ದಾರೆ.

Rashmika Mandanna: ಪ್ರೀತಿಸಿದವರಿಗೆ ದಿನಕ್ಕೆ ನೂರು ಸಲವಾದರೂ ಮುತ್ತು ಕೊಡಿ ಎಂದಿದ್ದೇಕೆ ರಶ್ಮಿಕಾ ಮಂದಣ್ಣ..!


Published by: Anitha E
First published: February 12, 2020, 8:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading