VIDEO: ಸೈಫ್ ಅಲಿ ಖಾನ್​ ಮಗಳ ಜತೆ ಕಾರ್ತಿಕ್ ಡೇಟಿಂಗ್: ವೈರಲ್ ಆಯ್ತು ಸಾರಾಳ ಕಿಸ್ಸಿಂಗ್ ಸೀನ್

ಈ ಹಿಂದೆ ತಂದೆ ಸೈಫ್ ಅಲಿ ಖಾನ್ ಜತೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಸಾರಾ ಅಲಿ ಖಾನ್ ಪ್ರಶ್ನೋತ್ತರ ವೇಳೆಯಲ್ಲಿ ಕಾರ್ತಿಕ್ ಇಷ್ಟ ಎಂದಿದ್ದರು.

zahir | news18
Updated:March 16, 2019, 6:15 PM IST
VIDEO: ಸೈಫ್ ಅಲಿ ಖಾನ್​ ಮಗಳ ಜತೆ ಕಾರ್ತಿಕ್ ಡೇಟಿಂಗ್: ವೈರಲ್ ಆಯ್ತು ಸಾರಾಳ ಕಿಸ್ಸಿಂಗ್ ಸೀನ್
ಕಾರ್ತಿಕ್ -ಸಾರಾ ಅಲಿ ಖಾನ್
zahir | news18
Updated: March 16, 2019, 6:15 PM IST
ಬಾಲಿವುಡ್​ನ ಭರವಸೆಯ ಯುವ ನಟ ಕಾರ್ತಿಕ್ ಆರ್ಯನ್ ಹಾಗೂ ನಟಿ ಸಾರಾ ಅಲಿ ಖಾನ್ 'ಲವ್​ ಆಜ್​ ಕಲ್ 2' ಸಿನಿಮಾ ಮೂಲಕ ಒಂದಾಗುತ್ತಿರುವುದು ಹಳೆಯ ವಿಷಯ. ಆದರೆ ಇವರಿಬ್ಬರ ನಡುವೆ ಶೂಟಿಂಗ್ ಸ್ಪಾಟ್​ನಲ್ಲಿ ಖುಲ್ಲಂ ಖುಲ್ಲಂ ನಡೆಯುತ್ತಿದೆ. ಇಬ್ಬರೂ ಡೇಟಿಂಗ್ ಕೂಡ ಆರಂಭಿಸಿದ್ದಾರೆಂಬ ಎಂಬ ಸುದ್ದಿ ಇದೀಗ ಬಾಲಿವುಡ್​ ಅಂಗಳದಿಂದ ಕೇಳಿ ಬರುತ್ತಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಇದೀಗ ಸಾರಾ ಅಲಿ ಖಾನ್ ಹಾಗೂ ಕಾರ್ತಿ ಲಿಪ್​ಲಾಕ್ ಸೀನ್​ವಿಡಿಯೋವೊಂದು ವೈರಲ್ ಆಗುತ್ತಿದೆ. ಚಿತ್ರೀಕರಣದ ವೇಳೆ ನಾಯಕಿಯನ್ನು ಚುಂಬಿಸುವ ವಿಡಿಯೋ ಬಗ್ಗೆ ಕೇಳಿದಾಗ, ಆರ್ಯನ್ ಆ ರೀತಿ ಯಾವುದೇ ಸನ್ನಿವೇಶವಿಲ್ಲ. ವಿಡಿಯೋದಲ್ಲಿರುವುದು ನಾವೇನಾ? ಎಂದು ಸೋನು ಕೆ ಟಿಟು ಕಿ ಸ್ವೀಟಿ ನಟ ಕಾರ್ತಿಕ್ ಅಲ್ಲೆಗಳೆದಿದ್ದರು.

ಲೀಕ್ ಆಗಿರುವ ವಿಡಿಯೋದಲ್ಲಿ ಕಾರ್ತಿಕ್ ನಟಿ ಸಾರಾಳನ್ನು ಸಖತ್ ಬೋಲ್ಡ್​ ಆಗಿ ಚುಂಚಿಸುವ ದೃಶ್ಯವಿದೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಕೊನೆಗೂ ಸೈಫ್ ಅಲಿ ಖಾನ್ ಮಗಳನ್ನು ಒಲಿಸಿಕೊಳ್ಳಲು ಕಾರ್ತಿಕ್ ಯಶಕಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ವಿಡಿಯೋವನ್ನು ಕಾರ್ತಿಕ್ ಅಲ್ಲೆಗೆಳೆದರೂ, ಇದೀಗ ಅವರದೇ ಫ್ಯಾನ್​ ಪೇಜ್​ ಈ ವಿಡಿಯೋವನ್ನು ಅಪ್​ಲೋಡ್​ ಮಾಡಿಕೊಂಡಿದೆ. ಈ ಮೂಲಕ ಲವ್​ ಆಜ್ ಕಲ್​ನ ಅಸಲಿ ದೃಶ್ಯಗಳು ಬಹಿರಂಗವಾದಂತಾಗಿದೆ.

ಈ ಹಿಂದೆ ತಂದೆ ಸೈಫ್ ಅಲಿ ಖಾನ್ ಜತೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಸಾರಾ ಅಲಿ ಖಾನ್ ಪ್ರಶ್ನೋತ್ತರ ವೇಳೆಯಲ್ಲಿ ಕಾರ್ತಿಕ್ ಇಷ್ಟ ಎಂದಿದ್ದರು. ಅಲ್ಲದೆ ಬಾಲಿವುಡ್ ನಟರಲ್ಲಿ ಕಾರ್ತಿಕ್ ಆರ್ಯನ್ ಜತೆಯಾಗಿ ಡೇಟಿಂಗ್ ಮಾಡಲು ಇಚ್ಛಿಸುತ್ತಿರುವುದಾಗಿ ತಿಳಿಸಿದ್ದರು.

ಇದನ್ನು ಕೇಳಿಸಿಕೊಂಡಿದ್ದೇ ತಡ 'ಹೈವೇ' ಖ್ಯಾತಿಯ ನಿರ್ದೇಶಕ ಇಮ್ತಿಯಾಜ್ ಅಲಿ 'ಲವ್​ ಆಜ್ ಕಲ್​ 2' ನಲ್ಲಿ ಇಬ್ಬರನ್ನು ಜೋಡಿ ಮಾಡಿಕೊಂಡಿದ್ದರು.  ಈ ಮೂಲಕ ಬಾಲಿವುಡ್​ನಲ್ಲಿ ಮತ್ತೊಂದು ರೋಮ್ಯಾಂಟಿಕ್ ಕಹಾನಿ ತಿಳಿಸುವ ಪ್ರಯತ್ನದಲ್ಲಿದ್ದಾರೆ.
Loading...

ಇದನ್ನೂ ಓದಿ: ರಸ್ತೆಯಲ್ಲಿ ರಾಕೆಟ್​ ವೇಗದಲ್ಲಿ ಸಂಚರಿಸಲಿದೆ ವಿಶ್ವದ ಅತ್ಯಂತ ದುಬಾರಿ ಕಾರು..!

ಸದ್ಯ ಸಾರಾ 'ಸಿಂಬಾ' ಸಿನಿಮಾದ ಸಕ್ಸಸ್​ನಲ್ಲಿದ್ದರೆ, ಕಾರ್ತಿಕ್ ಆರ್ಯನ್ ಅಭಿನಯದ 'ಲುಕಾ ಚುಪ್ಪಿ' ಚಿತ್ರ 75 ಕೋಟಿಗಳಿಸುವ ಮೂಲಕ ಬಿಟೌನ್​ನಲ್ಲಿ ಹೊಸ ಅಲೆಯೆಬ್ಬಿಸಿದೆ. ಇದರ ನಡುವೆ ಇವರಿಬ್ಬರು ನಟಿಸಿರುವ ಹಸಿಬಿಸಿ ದೃಶ್ಯಗಳು 'ಲವ್​ ಆಜ್​ ಕಲ್' ಹೀಗೆನೇ ಎಂದು ಹೇಳುವಂತಿದೆ.



ಇದನ್ನೂ ಓದಿ: ಹುಡುಗರನ್ನು ಕಂಡಾಗ ಹುಡುಗಿಯರು ಮೊದಲು ನೋಡುವುದು ಈ ಅಂಗವನ್ನಂತೆ..!

First published:March 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626