• Home
  • »
  • News
  • »
  • entertainment
  • »
  • Kartik Aaryan: ಕಾರ್ತಿಕ್ ಆರ್ಯನ್ ಕಿಕೌಟ್ ಮಾಡಿದ್ದ ಕರಣ್! ಬಾಲಿವುಡ್ ನಿರ್ಮಾಪಕನಿಗೆ ನಟ ಕೊಟ್ಟ ಪ್ರತ್ಯುತ್ತರವೇನು?

Kartik Aaryan: ಕಾರ್ತಿಕ್ ಆರ್ಯನ್ ಕಿಕೌಟ್ ಮಾಡಿದ್ದ ಕರಣ್! ಬಾಲಿವುಡ್ ನಿರ್ಮಾಪಕನಿಗೆ ನಟ ಕೊಟ್ಟ ಪ್ರತ್ಯುತ್ತರವೇನು?

ಕಾರ್ತಿಕ್ ಆರ್ಯನ್

ಕಾರ್ತಿಕ್ ಆರ್ಯನ್

ಕಾರ್ತಿಕ್ ಆರ್ಯನ್ ಅವರನ್ನು ಕರಣ್ ಜೋಹರ್ ಅವರ ಸಿನಿಮಾದಿಂದ ಕಿಕೌಟ್ ಮಾಡಿದ್ದು ಎಲ್ಲರಿಗೂ ಗೊತ್ತು. ಈಗ ಕೊನೆಗೂ ಕಾರ್ತಿಕ್ ಆರ್ಯನ್ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

  • Trending Desk
  • 3-MIN READ
  • Last Updated :
  • Share this:

ಬಾಲಿವುಡ್‌ನಲ್ಲಿ (Bollywood) ಗಾಡ್ ಫಾದರ್‌ಗಳಿಲ್ಲ ಎಂದರೆ ಆ ನಟ ಅಥವಾ ನಟಿ ಬೆಳೆಯಲಾಗುವುದಿಲ್ಲ ಎಂಬುದು ಹಿಂದಿನ ಮಾತು. ಏಕೆಂದರೆ ಇತ್ತೀಚೆಗೆ ಚಿತ್ರರಂಗಕ್ಕೆ ಕಾಲಿಡುವ ಅದೆಷ್ಟೋ ನಟ ನಟಿಯರು ತಮ್ಮ ಪ್ರತಿಭೆಯಿಂದಲೇ (Talent) ಮುಂದೆ ಬರುತ್ತಿದ್ದಾರೆ ಹಾಗೂ ಕಠಿಣ ಸ್ಪರ್ಧೆ, ಪೈಪೋಟಿಯ ನಡುವೆಯೂ ಯಶಸ್ವಿ ಚಿತ್ರಗಳನ್ನು ಸಿನಿ ಪ್ರೇಕ್ಷಕರಿಗೆ ನೀಡುತ್ತಿದ್ದಾರೆ.


ಆರ್ಯನ್‌ಗೆ 2022 ಅತ್ಯುತ್ತಮ ವರ್ಷ


ಯುವ ನಟ ಕಾರ್ತಿಕ್ ಆರ್ಯನ್ (Kartik Aaryan) ತಮ್ಮ ಪ್ರತಿಭೆ ಹಾಗೂ ಅತ್ಯುತ್ತಮ ನಟನಾ ಸಾಮರ್ಥ್ಯದಿಂದಲೇ ಬಾಲಿವುಡ್‌ (Bollywood) ಪ್ರೇಕ್ಷಕರ ಮನಗೆದ್ದಿದ್ದಾರೆ. ಭೂಲ್ ಭುಲಯ್ಯಾ 2 ವಿನ ಅಭೂತಪೂರ್ವ ಯಶಸ್ಸಿನಿಂದ ಕಾರ್ತಿಕ್ ಆರ್ಯನ್‌ಗೆ 2022 ಅತ್ಯುತ್ತಮ ವರ್ಷ ಎಂದೆನಿಸಿತ್ತು. ಶೆಹಜಾದಾದಲ್ಲಿ ಅಭಿನಯಿಸುತ್ತಿರುವ ನಟ ಕಾರ್ತಿಕ್ ಯಶಸ್ವಿ ಯುವ ನಟ ಎಂಬ ಬಿರುದು ಪಡೆದುಕೊಂಡಿದ್ದಾರೆ.
ದೋಸ್ತಾನಾ 2 ನಿಂದ ನಟನನ್ನು ಕೈಬಿಟ್ಟಿದ್ದೇಕೆ?


ಇತ್ತೀಚೆಗೆ ಯುವ ನಟ ರಜತ್ ಶರ್ಮ ಅವರ ಆಪ್ ಕಿ ಅದಾಲತ್ ಶೋ ನಲ್ಲಿ ಪಾಲ್ಗೊಂಡಿದ್ದು, ಕರಣ್ ಜೋಹರ್ ಅವರ ದೋಸ್ತಾನಾ 2 ನಿಂದ ತಮ್ಮನ್ನು ಏಕೆ ಕೈಬಿಡಲಾಯಿತು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


ಕರಣ್ ಜೋಹರ್ ಚಿತ್ರದಲ್ಲಿ ಕಾರ್ತಿಕ್ ಇಲ್ಲ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಹೆಚ್ಚು ಚರ್ಚಿತ ಸುದ್ದಿಯೂ ಹೌದು. ಈ ಬಗ್ಗೆ ಕೇಳಿದಾಗ ಉತ್ತರಿಸಿದ ನಟ, ಇದು ಕೆಲವೊಮ್ಮೆ ಸಂಭವಿಸುತ್ತದೆ. ಈ ಬಗ್ಗೆ ನಾನು ಹಿಂದೆಲ್ಲೂ ಮಾತಾಡಿಲ್ಲ ಎಂದು ತಿಳಿಸಿದ್ದಾರೆ.


ನಟ ಕಾರ್ತಿಕ್ ಆರ್ಯನ್


ತಾಯಿ ತಿಳಿಸಿಕೊಟ್ಟ ಜೀವನ ಮೌಲ್ಯಗಳು ನನಗೆ ಆದರ್ಶ


ನಿಜವಾದ ಕಾರಣವನ್ನು ಬಹಿರಂಗಪಡಿಸದ ಕಾರ್ತಿಕ್, ತಮ್ಮ ತಾಯಿ ತಿಳಿಸಿಕೊಟ್ಟ ಜೀವನ ಮೌಲ್ಯಗಳನ್ನು ಈ ಕ್ಷೇತ್ರದಲ್ಲಿಯೂ ತಾನು ಅಳವಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.


ನನ್ನ ತಾಯಿ ತಿಳಿಸಿಕೊಟ್ಟ ಮಾತುಗಳು ನನಗೆ ಅತ್ಯಂತ ಆದರ್ಶಮಯ. ನಾನು ಅದನ್ನು ನಂಬುತ್ತೇನೆ. ಇದು ನನ್ನ ಮೌಲ್ಯಗಳು ಕೂಡ ಹೌದು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Bollywood Heroes: ಬಾಲಿವುಡ್​ ಬಿಯರ್ಡ್​ ಹೀರೋಸ್, ಈ ನಟರ ಸ್ಟೈಲ್​ಗೆ ಯುವತಿಯರು ಫಿದಾ


ಇಬ್ಬರ ನಡುವೆ ಜಗಳವಾದಾಗ ಅದರಲ್ಲಿ ಕಿರಿಯವನು ಆ ಜಗಳ ಇಲ್ಲವೇ ಮನಸ್ತಾಪದ ಬಗ್ಗೆ ಮಾತನಾಡಬಾರದು ಎಂದಿದ್ದರು. ಹಾಗಾಗಿ ನಾನು ಅದೇ ಮೌಲ್ಯಗಳನ್ನು ಅನುಸರಿಸುತ್ತೇನೆ. ಈ ವಿಷಯದ ಕುರಿತು ಎಲ್ಲಿಯೂ ತಿಳಿಸುವುದಿಲ್ಲ ಎಂದು ಹೇಳಿದ್ದಾರೆ.


ಸಂಭಾವನೆ ವಿಷಯಕ್ಕೆ ಕಿರಿಕ್ ಮಾಡಿಕೊಂಡ್ರಾ ಆರ್ಯನ್


ಕಾರ್ತಿಕ್ ಚಿತ್ರದಲ್ಲಿ ನಟಿಸಲು ಹೆಚ್ಚಿನ ಸಂಭಾವನೆ ಕೇಳಿದ್ದಾರೆ. ಹೀಗಾಗಿ ಚಿತ್ರದಿಂದ ಹೊರನಡೆಯಬೇಕಾಯಿತು. ಈ ಮಾತು ಸತ್ಯವೇ ಎಂದು ಕೇಳಿದಾಗ ಇದೊಂಥರಾ ಕಟ್ಟುಕಥೆಯಂತಿದೆ ಎಂದು ಉತ್ತರಿಸಿದ್ದಾರೆ ನಟ.


Bollywood actor Kartik Aaryan house rent
ಕಾರ್ತಿಕ್ ಆರ್ಯನ್


ಹಣದ ಸಲುವಾಗಿ ನಾನು ಎಂದಿಗೂ ಚಿತ್ರವನ್ನು ತೊರೆದಿಲ್ಲ. ನಾನು ತುಂಬಾ ದುರಾಸೆಯವನು ನಿಜ. ಚಿತ್ರಕಥೆ ಹಾಗೂ ಹಣದ ವಿಷಯದಲ್ಲಿ ದುರಾಸೆಯವನಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.


ಕಾರ್ತಿಕ್ ಆರ್ಯನ್ ಹಾಗೂ ಜಾಹ್ನವಿ ಕಪೂರ್ ನಟನೆಯ ದೋಸ್ತಾನಾ 2 ಈಗಾಗಲೇ ಬಿಡುಗಡೆಯಾಗಬೇಕಿತ್ತು.


ಕಾರ್ತಿಕ್ ಆರ್ಯನ್‌ಗೆ 2023 ಕೂಡ ಶುಭವರ್ಷ


ಕಾರ್ತಿಕ್ ಆರ್ಯನ್‌ಗೆ 2023 ಕೂಡ ಶುಭವರ್ಷವಾಗಲಿದೆ ಎಂಬುದು ಶತಸಿದ್ಧವಾಗಿದೆ. ಶೆಹಜಾದಾ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು ಸಿನಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಕೃತಿ ಸನೋನ್, ಪರೇಶ್ ರಾವಲ್, ಮನೀಶಾ ಕೊಯಿರಾಲಾ ಸೇರಿದಂತೆ ಅತಿರಥರ ದಂಡೇ ಚಿತ್ರದಲ್ಲಿದೆ.


2020 ರಲ್ಲಿ ಬಿಡುಗಡೆಯಾದ ಅಲ್ಲು ಅರ್ಜುನ್ ಅಭಿನಯದ ಅಲಾ ವೈಕುಂಠಪುರಮುಲು ಚಿತ್ರದ ರಿಮೇಕ್ ಶೆಹಜಾದಾ ಚಿತ್ರವಾಗಿದ್ದು, ಅಲ್ಲು ಪಾತ್ರದಲ್ಲಿ ಕಾರ್ತಿಕ್ ಮಿಂಚಲಿದ್ದಾರೆ.

Published by:Divya D
First published: