Kartik Aaryan: ಅಭಿಮಾನಿಯ ಅಭಿಮಾನಕ್ಕೆ ಮನಸೋತ ಕಾರ್ತಿಕ್​ ಆರ್ಯನ್​

Kartik Aaryan And His Fan: ಅಭಿಮಾನಿಗಳು ನೆಚ್ಚಿನ ಸ್ಟಾರ್​ಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದನ್ನು ನೋಡಿದ್ದೇವೆ. ಆದರೆ ಸ್ಟಾರ್​ಗಳು ಅಭಿಮಾನಿಗಳ ಚಿತ್ರವನ್ನು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವುದನ್ನು ನೋಡುವುದು ವಿರಳ.

Anitha E | news18-kannada
Updated:July 17, 2020, 8:57 PM IST
Kartik Aaryan: ಅಭಿಮಾನಿಯ ಅಭಿಮಾನಕ್ಕೆ ಮನಸೋತ ಕಾರ್ತಿಕ್​ ಆರ್ಯನ್​
ಕಾರ್ತಿಕ್​ ಆರ್ಯನ್ ಹಾಗೂ ಅವರ ಅಭಿಮಾನಿಯ ಚಿತ್ರ
  • Share this:
ಇದು ಸಾಮಾಜಿಕ ಜಾಲತಾಣದ ಯುಗ. ಆಟೋಗ್ರಾಫ್​ ಜಾಗವನ್ನು ಸೆಲ್ಫಿಗಳು ತುಂಬಿವೆ. ನೆಚಚ್ಇನ ನಟ-ನಟಿಯರನ್ನು ಭೇಟಿಯಾಗುವ ಅಭಿಮಾನಿಗಳು ಸೆಲ್ಫಿ ತೆಗೆದುಕೊಂಡು ಅವುಗಳನ್ನು ಪೋಸ್ಟ್ ಮಾಡುತ್ತಾರೆ. 

ಅಭಿಮಾನಿಗಳು ನೆಚ್ಚಿನ ಸ್ಟಾರ್​ಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದನ್ನು ನೋಡಿದ್ದೇವೆ. ಆದರೆ ಸ್ಟಾರ್​ಗಳು ಅಭಿಮಾನಿಗಳ ಚಿತ್ರವನ್ನು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವುದನ್ನು ನೋಡುವುದು ವಿರಳ.

Kartik Aaryan's 'Safety First' post will grab your attention
ಕಾರ್ತಿಕ್​ ಆರ್ಯನ್​


ಕಾರ್ತಿಕ್​ ಆರ್ಯನ್​    ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಯೊಬ್ಬರ ಫೋಟೋವನ್ನು ಹಂಚಿಕೊಂಡಿದ್ದು, ಅವರ ಅಭಿಮಾನಕ್ಕೆ ಮನ ಸೋತಿದ್ದಾರೆ. ಜೊತೆಗೆ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ.



ಬಾಲ್ಯದಲ್ಲಿ ಕಾರ್ತಿಕ್​ ಆರ್ಯನ್​ ಸಹ ತಮ್ಮ ರೂಮಿನಲ್ಲಿ ನೆಚ್ಚಿನ ನಟ ಶಾರುಖ್​ಅವರ ಪೋಸ್ಟರ್ ಹಾಗೂ ಫೋಟೋಗನ್ನು ಗೋಡೆ ತುಂಬ ಅಂಟಿಸಿಕೊಂಡಿದ್ದರಂತೆ. ತಮ್ಮ ಅಭಿಮಾನಿಯ ಫೋಟೋ ನೋಡಿ, ತಮ್ಮ ಬಾಲ್ಯವನ್ನು ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಹೋಂ ಕ್ವಾರಂಟೈನ್​ನಲ್ಲೇ ವರ್ಕೌಟ್​ ಆರಂಭಿಸಿದ ಧ್ರುವ ಸರ್ಜಾ..!

ಪೀಕು ಎಂಬ ಯುವತಿ ಕಾರ್ತಿಕ್​ ಆರ್ಯನ್ ಅವರ ಅಭಿಮಾನಿಯಂತೆ. ಅವರು ತಮ್ಮ ಕೋಣೆಯಲ್ಲಿ ಕಾರ್ತಿಕ್​ ಅವರ ಫೋಟೋಗಳನ್ನು ಇಟ್ಟುಕೊಂಡಿರುವ ಚಿತ್ರವನ್ನು ಕಾರ್ತಿಕ್​ ಜೊತೆ ಹಂಚಿಕೊಂಡಿದ್ದಾರೆ. ಅದಕ್ಕೆ ಆ ಅಭಿಮಾನಿಗೆ ಕಾರ್ತಿಕ್​ ಖುಷಿಯಿಂದ ಧನ್ಯವಾದ ತಿಳಿಸಿದ್ದಾರೆ.

ಇತ್ತೀಚೆಗಷ್ಟೆ ಕಾರ್ತಿಕ್​ ಆರ್ಯನ್​ ಅಭಿಮಾನಿಗಳಿಗೆ ಸುರಕ್ಷಿತರಾಗಿರುವಂತೆ ವಿಭಿನ್ನವಾಗಿ ಮನವಿ ಮಾಡಿದ್ದರು. ತಮ್ಮ ಫೋಟೋನೆಕ್​ ಟಿ-ಶರ್ಟ್​ ಅನ್ನೇ ಮಾಸ್ಕ್​ನಂತೆ ಬಳಸಿಕೊಂಡಿದ್ದ ಫೋಟೋ ಹಂಚಿಕೊಂಡಿದ್ದರು.










View this post on Instagram





Safety First !! #PoseLikeKartikAaryan 😷😎🤫 #KartikxIrus 🔥


A post shared by KARTIK AARYAN (@kartikaaryan) on






ಕಾರ್ತಿಕ್​ ಆರ್ಯನ್​ ಅವರ ಸಿನಿಮಾ ವಿಷಯಕ್ಕೆ ಬಂದರೆ, ಅವರ ನಟನೆಯ 'ದೋಸ್ತಾನ 2' ಹಾಗೂ 'ಭೂಲ್​ ಭುಲಯ್ಯ 2' ಇನ್ನು ರಿಲೀಸ್ ಆಗಬೇಕಿದೆ. ಲಾಕ್​ಡೌನ್​ನಲ್ಲಿ ನಿತ್ಯ ಒಂದೊಂದು ರೀತಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ ಈ ನಟ.



ಇದನ್ನೂ ಓದಿ: Kichcha Sudeep: ಜುಲೈ 15 ಕಿಚ್ಚ ಸುದೀಪ್​ಗೆ ತುಂಬಾ ಖುಷಿ ಕೊಟ್ಟ ದಿನವಂತೆ..!
Published by: Anitha E
First published: July 17, 2020, 8:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading