Kartik Aaryan: ಕೊರೋನಾ ವಿರುದ್ಧ ಹೋರಾಟಕ್ಕೆ ಒಂದು ಕೋಟಿ ನೆರವು : ನಟ ಕಾರ್ತಿಕ್​ ಆರ್ಯನ್​

Kartik Aaryan Donates One Crore: ಬಾಲಿವುಡ್​ನಲ್ಲಿ ಮಾಡಿರುವುದು ಕೆಲವೇ ಕೆಲವು ಸಿನಿಮಾಗಳಾದರೂ ಕಾರ್ತಿಕ್​ ಈ ಹಿಂದೆ ಮಲ್ಟಿ ಸ್ಟಾರರ್​ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಇತ್ತೀಚೆಗೆ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಹಾಗೆ ನೋಡಿದರೆ ಕಾರ್ತಿಕ್​ ಬಿ-ಟೌನ್​ನಲ್ಲಿ ಉದಯೋನ್ಮುಖ ನಟ. ಇಂತಹ ನಟ ಈಗ ಕೊರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

Anitha E | news18-kannada
Updated:March 30, 2020, 1:22 PM IST
Kartik Aaryan: ಕೊರೋನಾ ವಿರುದ್ಧ ಹೋರಾಟಕ್ಕೆ ಒಂದು ಕೋಟಿ ನೆರವು : ನಟ ಕಾರ್ತಿಕ್​ ಆರ್ಯನ್​
ಕಾರ್ತಿಕ್​ ಆರ್ಯನ್​
  • Share this:
ಸಾರಾ ಅಲಿ ಖಾನ್​ ಜೊತೆ ಡೇಟಿಂಗ್​ ವಿಷಯವಾಗಿ ಸದಾ ಸುದ್ದಿಯಲ್ಲಿದ್ದ ನಟ ಕಾರ್ತಿಕ್​ ಆರ್ಯನ್​. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಐಸೋಲೇಶನ್​ ಆಗಿರುವ ಕಾರ್ತಿಕ್​ ತಮ್ಮ ಕ್ರೇಜಿ ವಿಡಿಯೋಗಳಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಬಾಲಿವುಡ್​ನಲ್ಲಿ ಮಾಡಿರುವುದು ಕೆಲವೇ ಕೆಲವು ಸಿನಿಮಾಗಳಾದರೂ ಕಾರ್ತಿಕ್​ ಈ ಹಿಂದೆ ಮಲ್ಟಿ ಸ್ಟಾರರ್​ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಇತ್ತೀಚೆಗೆ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಹಾಗೆ ನೋಡಿದರೆ ಕಾರ್ತಿಕ್​ ಬಿ-ಟೌನ್​ನಲ್ಲಿ ಉದಯೋನ್ಮುಖ ನಟ. ಇಂತಹ ನಟ ಈಗ ಕೊರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

 
ಕಾರ್ತಿಕ್​ ಆರ್ಯನ್​ ಕೊರೋನಾ ವಿರುದ್ಧ ಹೋರಾಡಲು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ನೀಡುತ್ತಿರುವುದಾಗಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಕೈಲಾದಷ್ಟು ಸಹಾಯ ಮಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. 
View this post on Instagram
 

We need each other now more than ever. Let’s show our support 🙏🏻


A post shared by KARTIK AARYAN (@kartikaaryan) on


ಮೊನ್ನೆಯಷ್ಟೆ ನಟ ಅಕ್ಷಯ್​ ಕುಮಾರ್​ 4 ಕೋಟಿ ಹಣವನ್ನು ಪ್ರಧಾನ ಮಂತ್ರಿ ಅವರ ಪರಿಹಾರ ನಿಧಿಗೆ ನೀಡುತ್ತಿರುವುದಾಗಿ ಟ್ವೀಟ್​ ಮಾಡಿದ್ದರು. ಇದಕ್ಕೆ ಖುದ್ದು ಮೋದಿ ಅವರೇ ಪ್ರತಿಕ್ರಿಯಿಸಿದ್ದರು.

Shraddha Srinath: ಉದ್ಯಮಿಯಾದ ನಟಿ: ಹೊಸ ರೆಸ್ಟೊರೆಂಟ್​ ಆರಂಭಿಸಿದ ಶ್ರದ್ಧಾ ಶ್ರೀನಾಥ್​..!

First published: March 30, 2020, 1:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading