Kartik Aaryan: ಅಂಗಿ ಕಳಚಿ ಅರೆನಗ್ನನಾಗಿ ಹೋಳಿ ಆಡಿದ ನಟನ ಫೋಟೋ ವೈರಲ್​..!

Kartik Aaryan Holi Celebration: ನವಾಬನ ಮಗಳು ಸಾರಾ ಅಲಿಖಾನ್​ ಜೊತೆ ಡೇಟಿಂಗ್​ ವಿಷಯವಾಗಿ ಕಾರ್ತಿಕ್​ ಆರ್ಯನ್​ ಹೆಸರು ತುಂಬಾ ಕೇಳಿ ಬಂದಿತ್ತು. ಅದರಲ್ಲೂ ಸಾರಾ ಹಾಗೂ ಕಾರ್ತಿಕ್​ ಲವ್​ ಆಜ್​ ಕಲ್​ 2 ಸಿನಿಮಾದಲ್ಲಿ ಒಟ್ಟಿಗೆ ನಟಿಸಲು ಆರಂಭಿಸಿದ ಮೇಲೆ. ಈ ಚಿತ್ರ ತೆರೆಕಂಡು ಬಾಕ್ಸಾಫೀಸ್​ನಲ್ಲಿ ಸದ್ದು ಮಾಡಲೇ ಇಲ್ಲ. ಇದಾದ ನಂತರ ಸಾರಾ-ಕಾರ್ತಿಕ್​ ಹೆಸರು ಎಲ್ಲೂ ಕೇಳಿಸುತ್ತಿಲ್ಲ. ಆದರೆ ಕಾರ್ತಿಕ್​ ಈಗ ಬೇರೆಯದ್ದೇ ವಿಷಯದಿಂದಾಗಿ ಸುದ್ದಿಯಲ್ಲಿದ್ದಾರೆ. 

Anitha E | news18-kannada
Updated:March 10, 2020, 4:36 PM IST
Kartik Aaryan: ಅಂಗಿ ಕಳಚಿ ಅರೆನಗ್ನನಾಗಿ ಹೋಳಿ ಆಡಿದ ನಟನ ಫೋಟೋ ವೈರಲ್​..!
ಕಾರ್ತಿಕ್​ ಆರ್ಯನ್​
  • Share this:
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ನಟ ಎಂದರೆ ಅದು ಬಾಲಿವುಡ್​ನ ಉದಯೋನ್ಮುಖ ನಟ ಕಾರ್ತಿಕ್​ ಆರ್ಯನ್​. ಸಿನಿಮಾ ಹಾಗೂ ತಮ್ಮ ಸಹ ನಟಿಯೊಂದಿಗಿನ ಡೇಟಿಂಗ್​ ವಿಚಾರವಾಗಿ ಕಾರ್ತಿಕ್​ ಹೆಸರು ಸುದ್ದಿಯಲ್ಲಿರುತ್ತದೆ.

ನವಾಬನ ಮಗಳು ಸಾರಾ ಅಲಿಖಾನ್​ ಜೊತೆ ಡೇಟಿಂಗ್​ ವಿಷಯವಾಗಿ ಕಾರ್ತಿಕ್​ ಆರ್ಯನ್​ ಹೆಸರು ತುಂಬಾ ಕೇಳಿ ಬಂದಿತ್ತು. ಅದರಲ್ಲೂ ಸಾರಾ ಹಾಗೂ ಕಾರ್ತಿಕ್​ 'ಲವ್​ ಆಜ್​ ಕಲ್​ 2' ಸಿನಿಮಾದಲ್ಲಿ ಒಟ್ಟಿಗೆ ನಟಿಸಲು ಆರಂಭಿಸಿದ ಮೇಲೆ. ಈ ಚಿತ್ರ ತೆರೆಕಂಡು ಬಾಕ್ಸಾಫೀಸ್​ನಲ್ಲಿ ಸದ್ದು ಮಾಡಲೇ ಇಲ್ಲ. ಇದಾದ ನಂತರ ಸಾರಾ-ಕಾರ್ತಿಕ್​ ಹೆಸರು ಎಲ್ಲೂ ಕೇಳಿಸುತ್ತಿಲ್ಲ. ಆದರೆ ಕಾರ್ತಿಕ್​ ಈಗ ಬೇರೆಯದ್ದೇ ವಿಷಯದಿಂದಾಗಿ ಸುದ್ದಿಯಲ್ಲಿದ್ದಾರೆ.

Actor Papa Saif Ali Khan said on Sara Ali Khan and Karthik Aaryan breakup
ಸಾರಾ ಹಾಗೂ ಕಾರ್ತಿಕ್​ ಆರ್ಯನ್​


ಅದೂ ಸಹ ಇಂದು ಹೋಳಿ ಸಂಭ್ರಮದ ಹಿನ್ನೆಲೆಯಲ್ಲಿ ಕಾರ್ತಿಕ್​ ಹೆಸರು ಕೇಳಿ ಬರುತ್ತಿದೆ. ಅದರಲ್ಲೂ ಕಾರ್ತಿಕ್​ ಹೋಳಿ ಆಚರಿಸಿರುವ ರೀತಿಯಿಂದಲೇ ಸುದ್ದಿಯಲ್ಲಿದ್ದಾರೆ. ಕಾರ್ತಿಕ್​ ಅಂಗಿ ಕಳಚಿ ಬಣ್ಣದಾಟ ಆಡಿದ್ದು, ಅವರ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.


ಕಾರ್ತಿಕ್​ ಆರ್ಯನ್​ ಮೂರು ಗಂಟೆಗಳ ಹಿಂದೆಯಷ್ಟೆ ಈ ಚಿತ್ರವನ್ನು ಹಂಚಿಕೊಂಡಿದ್ದು, ಇದಕ್ಕೆ 7.92 ಲಕ್ಷ ಲೈಕ್ಸ್​ ಸಿಕ್ಕಿದೆ. ಕಾರ್ತಿಕ್​ ಆರ್ಯನ್​ ಉತ್ತರ ಪ್ರದೇಶದ ರಾಜಧಾನಿ ಲಕ್ನೊದಲ್ಲಿ ಹೋಳಿ ಆಡಿದ್ದು, ಅಲ್ಲಿ ಈ ಚಿತ್ರ ತೆಗೆಯಲಾಗಿದೆ.

ಇದನ್ನೂ ಓದಿ: Deepika Padukone: ಬೋಲ್ಡ್​ ಫೋಟೋಗಳ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿರುವ ದೀಪಿಕಾ ಪಡುಕೋಣೆ..!

ಸದ್ಯ ಉತ್ತರ ಪ್ರದೇಶದಲ್ಲೇ ಕಾರ್ತಿಕ್​ ನಟಿಸುತ್ತಿರುವ 'ಭೂಲ್​ ಭುಲಯ್ಯ 2' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಇದೇ ವೇಳೆ ಅಲ್ಲೇ ಅವರು ಹೋಳಿ ಆಚರಿಸಿದ್ದಾರೆ. ಅಲ್ಲದೆ ಚಿತ್ರಕ್ಕೆ ಸಖತ್​ ಮಜವಾಗಿರುವ ಸಾಲುಗಳನ್ನು ಶೀರ್ಷಿಕೆಯಾಗಿ ಬರೆದಿದ್ದಾರೆ.

Deepika Padukone: ಕಡಲ ಕಿನಾರೆಯಲ್ಲಿ ದೀಪಿಕಾ ಮಾದಕ ಮೈಮಾಟ: ಮನಸೋತ ಅಭಿಮಾನಿಗಳು..!

Published by: Anitha E
First published: March 10, 2020, 4:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading