ಡಿಸ್ನಿ+ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾದ ಭೂಲ್ ಭುಲೈಯಾ 2 ಹಾಗೂ ಫ್ರೆಡ್ಡಿ ಚಿತ್ರಗಳೊಂದಿಗೆ ನಟ ಕಾರ್ತಿಕ್ ಆರ್ಯನ್ಗೆ (Kartik Aaryan) ಈ ವರ್ಷ ಹೆಚ್ಚು ಹರ್ಷದಾಯಕವಾಗಿದೆ. ಭೂಲ್ ಭುಲೈಯಾ ಚಿತ್ರದ ಭಾಗ 2 ರಲ್ಲಿ ಕಾರ್ತಿಕ್ ರೂಹ್ ಬಾಬಾ ಪಾತ್ರವನ್ನು ಮಾಡಿದ್ದು, ವಿಶ್ವದಾದ್ಯಂತ ರೂ 250 ಕೋಟಿಗಿಂತಲೂ ಹೆಚ್ಚಿನ ಗಳಿಕೆಯನ್ನು ಮಾಡಿದ ಚಿತ್ರವೆಂಬ ಹೆಗ್ಗಳಿಕೆಯೊಂದಿಗೆ ಚಿತ್ರ ವಿಮರ್ಶಕರು (Critics) ಕಾರ್ತಿಕ್ ಆರ್ಯನ್ ನಟನೆಗೆ ಪಾಸಿಟಿವ್ (Positive) ಕಾಮೆಂಟ್ಗಳನ್ನು ನೀಡಿದ್ದಾರೆ. ಫ್ರೆಡ್ಡಿಯಲ್ಲಿ ನಾಚಿಕೆಯ ಏಕಾಂಗಿಯಾದ ಡೆಂಟಿಸ್ಟ್ (Dentist) ಕಥಾಪಾತ್ರದಲ್ಲಿ ಕಾರ್ತಿಕ್ ನಂತರ ಒಬ್ಬ ಹುಚ್ಚು ಪ್ರೇಮಿಯಾಗಿ (Lover) ಹೇಗೆ ಬದಲಾಗುತ್ತಾನೆ ಎಂಬ ಕಥಾಹಂದರವನ್ನು ಸಿನಿ ಪ್ರೇಕ್ಷಕರ ಮುಂದೆ ತೆರೆದಿಟ್ಟಿದೆ. ಹಿಂದೆಂದೂ ಮಾಡಿರದ ವಿಭಿನ್ನ ಕಥಾಪಾತ್ರಗಳಿರುವ ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಕಾರ್ತಿಕ್ಗೆ ಉತ್ತಮ ಕಾಮೆಂಟ್ಗಳೂ ಹರಿದುಬಂದಿವೆ.
ಟಾಪ್ ನಟನಾಗಿ ಕಾರ್ತಿಕ್ ಆರ್ಯನ್
ಸಿನಿ ವಿಮರ್ಶಕರ ಪ್ರಕಾರ ಕಾರ್ತಿಕ್ ವರ್ಷದ ಟಾಪ್ ನಟರಾಗಿ ಹೆಸರುವಾಸಿಯಾಗಿದ್ದು, ಬಾಲಿವುಡ್ನ ()Bollywood ಬೇಡಿಕೆಯ ನಟ ಕೂಡ ಹೌದು ಎಂದೇ ಹೊಗಳಿದ್ದಾರೆ. ತಮ್ಮ ನೀಲಿ ಕಣ್ಣುಗಳು ಹಾಗೂ ಮೋಹಕ ಭಂಗಿಯಿಂದ ಬಹುಸಂಖ್ಯೆಯ ಪ್ರೇಕ್ಷಕರನ್ನು ಹಿಡಿದಿಡುವ ಮೋಡಿಗಾರ ಕಾರ್ತಿಕ್ ಆರ್ಯನ್ ಎಂದೇ ಬಾಲಿವುಡ್ ಸಿನಿ ಪಂಡಿತರು ಭವಿಷ್ಯ ನುಡಿದಿದ್ದಾರೆ.
ಆತ್ಮವಿಶ್ವಾಸವೇ ನನಗೆ ಪ್ರೇರೇಪಣೆ
ನ್ಯೂಸ್ 18 ಜೊತೆಗಿನ ಸಂದರ್ಶನದಲ್ಲಿ ಕಾರ್ತಿಕ್ ಆರ್ಯನ್ ತಮ್ಮ ಮನಸ್ಸಿನ ಮಾತುಗಳನ್ನು ಬಿಚ್ಚಿಟ್ಟಿದ್ದು, ತಮ್ಮ ಮುಂದಿರುವ ಗುರಿಗಳು, ವಿವಾಹ, ಒಪ್ಪಿಕೊಂಡಿರುವ ಸಿನಿಮಾಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಬಹಳಷ್ಟು ಚಲನಚಿತ್ರ ನಿರ್ಮಾಪಕರಿಗೆ ಮೊದಲ ಆಯ್ಕೆಯಾಗಿರುವ ಕಾರ್ತಿಕ್ ಆಯರ್ನ್, ಈ ಟ್ರೆಂಡ್ ಹೀಗೆಯೇ ಮುಂದುವರಿಯಬೇಕೆಂಬ ಆಸೆ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ನನ್ನಲ್ಲಿರುವ ಅತಿಯಾದ ಆತ್ಮವಿಶ್ವಾಸ ನನಗೆ ಪ್ರೇರೇಪಣೆ ನೀಡುತ್ತದೆ ಎಂಬುದು ಬಾಲಿವುಡ್ನ ಬೇಡಿಕೆಯ ನಟನ ಮನಸ್ಸಿನ ಮಾತಾಗಿದೆ.
2023 ರ ಅದೃಷ್ಟಶಾಲಿ ನಟ ಕಾರ್ತಿಕ್ ಆರ್ಯನ್
ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿಯಾಗಿರುವ ನಟ ತಮ್ಮ ಲಿಸ್ಟ್ನಲ್ಲಿ ಶೆಹಜಾದಾ, ಸತ್ಯಪ್ರೇಮ್ ಕಿ ಕಥಾ, ಕ್ಯಾಪ್ಟನ್ ಇಂಡಿಯಾ ಮತ್ತು ಹೇರಾ ಫೇರಿ 3 ಯಂತಹ ದೊಡ್ಡ ಬಜೆಟ್ನ ಚಿತ್ರಗಳನ್ನೇ ಹೊಂದಿದ್ದಾರೆ. ಹೀಗಾಗಿ 2023 ಕೂಡ ಕಾರ್ತಿಕ್ಗೆ ಅದೃಷ್ಟದ ವರ್ಷವಾಗಿರುವುದಲ್ಲಿ ಸಂದೇಹವೇ ಇಲ್ಲ ಎಂಬುದು ಖಾತ್ರಿಯಾಗುತ್ತದೆ. ತಾನು ನಂಬರ್ ಒನ್ ನಟನಾಗಬೇಕೆಂಬ ಬಯಕೆ ಹೊಂದಿರುವುದಾಗಿ ಹೇಳುವ ನಟ, ನನಗಿಂತ ಇನ್ನೂ ಚೆನ್ನಾಗಿ ಈ ಪಾತ್ರವನ್ನು ನಿಭಾಯಿಸಲಾರರು ಎಂಬುದಾಗಿ ಚಿತ್ರನಿರ್ಮಾಪಕರು ನಂಬುವಂತಾಗಬೇಕು ಎಂದು 32 ರ ಹರೆಯದ ಕಾರ್ತಿಕ್ ಹೇಳಿದ್ದಾರೆ.
ನನ್ನ ಹೊರತಾಗಿ ಬೇರೆ ಯಾವ ನಟರೂ ಅವರಿಗೆ ಕಾಣಿಸಬಾರದು ಹಾಗೂ ನಾನು ಆ ಸ್ಥಾನಕ್ಕೆ ತಲುಪುತ್ತಿದ್ದೇನೆ ಎಂಬುದು ನನ್ನ ವಿಶ್ವಾಸವಾಗಿದೆ ಎಂದು ತಿಳಿಸಿದ್ದಾರೆ. ಮುಂದಿನ ವರ್ಷದೊಳಗೆ ನನ್ನ ಹೊರತಾಗಿ ಬೇರಾವುದೇ ಆಯ್ಕೆ (ಚಿತ್ರಗಳಿಗೆ ಮೊದಲ ಆಯ್ಕೆ) ಅವರಿಗೆ ಕಾಣಬಾರದು ಎಂಬುದು ಕಾರ್ತಿಕ್ ಮನದಿಂಗಿತವಾಗಿದೆ.
ಕಾರ್ತಿಕ್ ಬಾಲಿವುಡ್ ಮಾತ್ರವಲ್ಲದೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಖ್ಯಾತಿಗಳಿಸಬೇಕೆಂಬ ಆಸೆ ಹೊಂದಿದ್ದಾರೆ. ದಕ್ಷಿಣದ ಚಲನಚಿತ್ರಗಳಲ್ಲಿ ಕೂಡ ನಾನು ನನ್ನ ಅದೃಷ್ಟ ಪರೀಕ್ಷೆ ನಡೆಸುತ್ತೇನೆ ಎಂದು ಹೇಳುವ ಕಾರ್ತಿಕ್ ಯಾವುದೇ ಭಾಷೆಯಲ್ಲಿ ಕೂಡ ಚಿತ್ರಗಳನ್ನು ಮಾಡಲು ಸಿದ್ಧನಾಗಿರುವೆ ಎಂದು ಧೈರ್ಯದಿಂದ ಹೇಳಿದ್ದಾರೆ.
ವಿವಾಹಕ್ಕೆ ಆತುರವಿಲ್ಲ ಆದರೆ ಪ್ರೀತಿಗೆ ಆಹ್ವಾನವಿದೆ
ಇನ್ನು ಕಾರ್ತಿಕ್ ಪ್ರೇಮ ಜೀವನ ಅರಿಯದೇ ಇರುವವರು ಯಾರೂ ಇರಲಾರರು ಅವರ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಉತ್ತಮ ಜೋಡಿಯಾಗಿ ಇಂಡಸ್ಟ್ರಿಯ ಯಾವ ನಟಿ ಸೂಕ್ತ ಎಂಬ ಲೆಕ್ಕಾಚಾರ ಮಾಡುತ್ತಿದ್ದರೆ ಕಾರ್ತಿಕ್ ಗಂಭೀರವಾಗಿ ತಮ್ಮ ವೃತ್ತಿಯತ್ತ ಗಮನ ಹರಿಸಿದ್ದಾರೆ.
ಕುಟುಂಬದವರು ಪ್ರೀತಿಯ ವಿಷಯದಲ್ಲಿ ಯಾವುದೇ ಅಡ್ಡಿಯನ್ನುಂಟು ಮಾಡದೇ ಇದ್ದರೂ ವಿವಾಹಕ್ಕೆ ಒತ್ತಡವನ್ನು ಹೇರಿಲ್ಲ ಎಂದು ತಿಳಿಸಿದ್ದಾರೆ. ನಾನು ಜೀವನದಲ್ಲಿ ಸೆಟಲ್ ಆಗುವ ಮೊದಲು ಮೂರರಿಂದ ನಾಲ್ಕು ವರ್ಷಗಳ ಕಾಲ ದುಡಿಯಬೇಕು ಎಂಬುದು ನನ್ನ ತಾಯಿಯ ಆಸೆಯಾಗಿದೆ. ಆದರೆ ನನ್ನ ಬದುಕಿನಲ್ಲಿ ಪ್ರೀತಿಗಾಗಿ ಒಂದು ಕೋಣೆ ಖಂಡಿತಾ ಇದ. ಹಾಗಾಗಿ ವಿವಾಹದ ಕಡೆಗೆ ಸದ್ಯ ನನ್ನ ಗಮನವಿಲ್ಲ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ