• Home
  • »
  • News
  • »
  • entertainment
  • »
  • Kartik Aaryan: ಬರೀ 10 ದಿನಗಳ ಚಿತ್ರೀಕರಣಕ್ಕೆ 20 ಕೋಟಿ ರೂಪಾಯಿ ಪಡೆದಿದ್ರಂತೆ ಕಾರ್ತಿಕ್ ಆರ್ಯನ್! ಈ ಬಗ್ಗೆ ಸಮರ್ಥಿಸಿಕೊಂಡ ನಟ ಹೇಳಿದ್ದೇನು ನೋಡಿ

Kartik Aaryan: ಬರೀ 10 ದಿನಗಳ ಚಿತ್ರೀಕರಣಕ್ಕೆ 20 ಕೋಟಿ ರೂಪಾಯಿ ಪಡೆದಿದ್ರಂತೆ ಕಾರ್ತಿಕ್ ಆರ್ಯನ್! ಈ ಬಗ್ಗೆ ಸಮರ್ಥಿಸಿಕೊಂಡ ನಟ ಹೇಳಿದ್ದೇನು ನೋಡಿ

ಕಾರ್ತಿಕ್​ ಆರ್ಯನ್

ಕಾರ್ತಿಕ್​ ಆರ್ಯನ್

ಇಂಡಿಯಾ ಟಿವಿಯ ಆಪ್ ಕಿ ಅದಾಲತ್ ನ ಇತ್ತೀಚಿನ ಸಂಚಿಕೆಯಲ್ಲಿ, ಕಾರ್ತಿಕ್ ಗೆ ಪತ್ರಕರ್ತ ರಜತ್ ಶರ್ಮಾ ಅವರು ಪ್ರಶ್ನೆ ಕೇಳುತ್ತ ಕಾರ್ತಿಕ್ ಸಂಬಳದ ಬಗ್ಗೆ ಮಾತನಾಡಿದ್ದಾರೆ, ತಮ್ಮ ಮೊದಲ ಚಿತ್ರದಲ್ಲಿ 1.25 ಲಕ್ಷ ಗಳಿಸಿದ ನಂತರ, ಅವರು ಈಗ 20 ಕೋಟಿ ಕೇಳುತ್ತಿದ್ದಾರೆ ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಬಂದ ಉತ್ತರ ಹೇಗಿತ್ತು ನೋಡಿ.

ಮುಂದೆ ಓದಿ ...
  • Share this:

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ (Kartik Aaryan) ಇಂದು ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು ಅಂತ ಹೇಳಲಾಗುತ್ತಿದೆ. 2011ರಲ್ಲಿ ಬಿಡುಗಡೆಯಾಗಿದ್ದ ಇವರ ಮೊದಲ ಚಿತ್ರ (Film) ‘ಪ್ಯಾರ್ ಕಾ ಪಂಚ್ನಾಮಾ’ ದಲ್ಲಿ 1.25 ಲಕ್ಷ ರೂಪಾಯಿ ಸಂಭಾವನೆ ಪಡೆದ ಈ ನಟ, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಚಿತ್ರೀಕರಿಸಿದ  ಚಲನಚಿತ್ರಕ್ಕೆ 20 ಕೋಟಿ ಸಂಭಾವನೆ (Salary) ಪಡೆದಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ ನೋಡಿ. ಹೊಸ ಸಂದರ್ಶನವೊಂದರಲ್ಲಿ (Interview), ಈ ನಟ (Actor) ತನ್ನನ್ನು ಬಾಲಿವುಡ್ (Bollywood) ನ ಶೆಹಜಾದಾ (ರಾಜಕುಮಾರ)' ಎಂದು ಕರೆದು ಕೊಳ್ಳುವುದರಿಂದ ಈ ಸಂಭಾವನೆಗೆ ಏಕೆ ಅರ್ಹರಾಗಿದ್ದಾರೆ ಎಂಬುದನ್ನು ವಿವರಿಸಿದ್ದಾರೆ.


10 ದಿನಗಳ ಚಿತ್ರೀಕರಣಕ್ಕೆ ನಟ ಕಾರ್ತಿಕ್ ಆರ್ಯನ್ ಪಡೆದಿದ್ದು 20 ಕೋಟಿ


2021ರಲ್ಲಿ ಬಿಡುಗಡೆಯಾದ ಚಲನಚಿತ್ರ ನಿರ್ಮಾಪಕ ರಾಮ್ ಮಧ್ವಾನಿ ಅವರ ಭಯೋತ್ಪಾದಕ-ಥ್ರಿಲ್ಲರ್ ‘ಧಮಾಕಾ’ ದಲ್ಲಿ ಕಾರ್ತಿಕ್ ಆರ್ಯನ್ ಕೇವಲ 10 ದಿನಗಳ ಚಿತ್ರೀಕರಣಕ್ಕಾಗಿ 20 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ನಟ ಇದನ್ನು ದೃಢಪಡಿಸಿರಲಿಲ್ಲ. ಈಗ, ಅವರು ತಮ್ಮ 20 ಕೋಟಿ ರೂಪಾಯಿಗಳ ಸಂಭಾವನೆಯ ಬಗ್ಗೆ ಮಾತ್ರವಲ್ಲದೇ, ಚಲನಚಿತ್ರ ನಿರ್ಮಾಪಕರು ಅವರಿಗೆ ಇಂತಹ ಭಾರಿ ಸಂಭಾವನೆಯನ್ನು ಏಕೆ ನೀಡುತ್ತಾರೆ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.


ಚಿತ್ರ ನಿರ್ಮಾಪಕರು ಭಾರಿ ಸಂಭಾವನೆ ಏಕೆ ಕೊಡ್ತಾರೆ ಅಂತ ಹೇಳಿರುವ ಕಾರ್ತಿಕ್


ಇಂಡಿಯಾ ಟಿವಿಯ ಆಪ್ ಕಿ ಅದಾಲತ್ ನ ಇತ್ತೀಚಿನ ಸಂಚಿಕೆಯಲ್ಲಿ, ಕಾರ್ತಿಕ್ ಗೆ ಪತ್ರಕರ್ತ ರಜತ್ ಶರ್ಮಾ ಅವರು ಪ್ರಶ್ನೆ ಕೇಳುತ್ತ ಕಾರ್ತಿಕ್ ಸಂಬಳದ ಬಗ್ಗೆ ಮಾತನಾಡಿದ್ದಾರೆ, ತಮ್ಮ ಮೊದಲ ಚಿತ್ರದಲ್ಲಿ 1.25 ಲಕ್ಷ ಗಳಿಸಿದ ನಂತರ, ಅವರು ಈಗ 20 ಕೋಟಿ ಕೇಳುತ್ತಿದ್ದಾರೆ ಎಂದು ಪ್ರಶ್ನೆ ಕೇಳಿದ್ದರು.


ನಟ ಅದಕ್ಕೆ "ಇದು ಕೇವಲ 10 ದಿನಗಳ ಸಂಭಾವನೆ ಆಗಿದೆ” ಅಂತ ಹೇಳಿ ನಂತರ ನೀವು ತಮಾಷೆ ಮಾಡುತ್ತಿದ್ದಾರೆ ಅಂತ ಕೇಳಿದಾಗ , ಇವರೇ ಅವರನ್ನು ಸರಿಪಡಿಸಿ  "ಇಲ್ಲ, ನೀವು ತಮಾಷೆ ಮಾಡುತ್ತಿಲ್ಲ, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ನೀವು 10 ದಿನಗಳಲ್ಲಿ ಚಿತ್ರೀಕರಿಸಿದ ಚಿತ್ರಕ್ಕಾಗಿ 20 ಕೋಟಿ ರೂಪಾಯಿ ಪಡೆದಿದ್ದೆ ಎಂದು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Anup Bhandari Movie: ಬಿಗ್ ಸಿನಿಮಾ ಬಿಗ್ ತಯಾರಿ, ಕಿಚ್ಚನ ಮುಂದಿನ ಚಿತ್ರಕ್ಕೆ ಎಲ್ಲ ರೆಡಿನಾ? ಏನಂತಾರೆ ಅನೂಪ್ ಭಂಡಾರಿ!


ನನ್ನ ನಿರ್ಮಾಪಕರು 20 ದಿನಗಳಲ್ಲಿ ದುಪ್ಪಟ್ಟು ಹಣವನ್ನು ಗಳಿಸುತ್ತಾರೆ, ಆದ್ದರಿಂದ ನನಗೆ ನೀಡಲಾಗುವ ಸಂಭಾವನೆಗೆ ನಾನು ಅರ್ಹನಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ” ಎಂದೂ ಸಹ ಹೇಳಿದರು.


ನಾನು ನಂಬರ್ 1 ನಟ ಅಂತ ಹೇಳಿಕೊಂಡ್ರು ಕಾರ್ತಿಕ್


2022 ರಲ್ಲಿ ತೆರೆಗೆ ಬಂದ ಭೂಲ್ ಭುಲೈಯಾ 2 ಚಿತ್ರದ ನಂತರ ಕಾರ್ತಿಕ್ 'ಹೀರೋ ನಂಬರ್ ಒನ್' ಆಗಿ ನಟಿಸಲು ಪ್ರಾರಂಭಿಸಿದರು.  ಈ ಚಿತ್ರವು 2022 ರಲ್ಲಿ ಬಿಡುಗಡೆಯಾದ ಅತಿ ಹೆಚ್ಚು ಗಳಿಕೆಯ ಬಾಲಿವುಡ್ ಚಲನಚಿತ್ರಗಳಲ್ಲಿ ಒಂದಾಗಿತ್ತು ಅಂತ ಹೇಳಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ನಟ "ನಾನು ಯಾವಾಗಲೂ ನನ್ನನ್ನು ನಂಬರ್ 1 ಎಂದೇ ಭಾವಿಸಿದ್ದೇನೆ ಎಂದು ಹೇಳಿದ್ದಾರೆ.




ನಿಧಾನವಾಗಿ ಜನರು ಸಹ ಅದನ್ನು ತಿಳಿದುಕೊಳ್ಳುತ್ತಿದ್ದಾರೆ ಮತ್ತು ನನ್ನನ್ನು ಆ ರೀತಿ ನೋಡುತ್ತಿದ್ದಾರೆ. ಆದರೆ ಪ್ರೇಕ್ಷಕರ ಪ್ರೀತಿ ನನಗೆ ಹೆಚ್ಚು ಮುಖ್ಯವಾಗಿದೆ” ಎಂದು ಹೇಳಿದರು. ಕಾರ್ತಿಕ್ ಕೊನೆಯ ಬಾರಿಗೆ ಫ್ರೆಡ್ಡಿ ಚಿತ್ರದಲ್ಲಿ ಅಲಯಾ ಎಫ್ ಅವರೊಂದಿಗೆ ಕಾಣಿಸಿಕೊಂಡರು. ಈ ಚಿತ್ರವು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನಲ್ಲಿ ಬಿಡುಗಡೆಯಾಯಿತು. ಕಾರ್ತಿಕ್ ಅವರ ಮುಂಬರುವ ಯೋಜನೆಗಳಲ್ಲಿ ಅನುರಾಗ್ ಬಸು ನಿರ್ದೇಶನದ ‘ಆಶಿಕಿ 3’ ಸೇರಿದೆ. ಅವರು ಕೃತಿ ಸನೋನ್ ಅವರೊಂದಿಗೆ ‘ಶೆಹಜಾದಾ’ ಚಿತ್ರದಲ್ಲೂ ಅಭಿನಯಿಸಲಿದ್ದಾರೆ.

First published: