• Home
  • »
  • News
  • »
  • entertainment
  • »
  • Puneeth Rajkumar: ಯುವರತ್ನನಿಗೆ ಕರ್ನಾಟಕ ರತ್ನ ಪ್ರದಾನ ಕಾರ್ಯಕ್ರಮ; ರಜನಿಕಾಂತ್​, ಜ್ಯೂ. ಎನ್​ಟಿಆರ್​ಗೆ ಸರ್ಕಾರದ ಆಹ್ವಾನ

Puneeth Rajkumar: ಯುವರತ್ನನಿಗೆ ಕರ್ನಾಟಕ ರತ್ನ ಪ್ರದಾನ ಕಾರ್ಯಕ್ರಮ; ರಜನಿಕಾಂತ್​, ಜ್ಯೂ. ಎನ್​ಟಿಆರ್​ಗೆ ಸರ್ಕಾರದ ಆಹ್ವಾನ

ರಜನಿಕಾಂತ್​, ಪುನೀತ್​, ಜ್ಯೂ.ಎನ್​ಟಿಆರ್​

ರಜನಿಕಾಂತ್​, ಪುನೀತ್​, ಜ್ಯೂ.ಎನ್​ಟಿಆರ್​

ಪುನೀತ್​ ರಾಜ್​ಕುಮಾರ್​ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಸೂಪರ್​ ಸ್ಟಾರ್ ರಜನಿಕಾಂತ್​ ಅಥವಾ ಜೂನಿಯರ್​ ಎನ್​ಟಿಆರ್​ ಅವರು ಆಗಮಿಸುವ ಸಾಧ್ಯತೆ ಇದೆ ಹೇಳಲಾಗುತ್ತಿದೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Power Star Puneeth Rajkumar) ದೈಹಿಕವಾಗಿ ನಮ್ಮನ್ನು ಅಗಲಿ ಒಂದು ವರ್ಷಗಳೇ ಆಗುತ್ತಾ ಬಂತು. ಆದರೆ ಕನ್ನಡಿಗರು (Kannadigas) ಅವರನ್ನು ಇನ್ನೂ ಮರೆತಿಲ್ಲ, ಮರೆಯುವುದೂ ಇಲ್ಲ. ಅವರ ಅಭಿಮಾನಿಗಳು (Fans) ಅವರನ್ನು ನೆನೆಸಿಕೊಳ್ಳದ ದಿನಗಳೇ ಇಲ್ಲ. ಇದೀಗ ರಾಜ್ಯಾದ್ಯಂತ ಮತ್ತೆ ಅಪ್ಪು ಉತ್ಸವ ಶುರುವಾಗಿದೆ. ಮೊನ್ನೆ ಮೊನ್ನೆಯಷ್ಟೇ ‘ಪುನೀತ ಪರ್ವ’ (Puneetha Parva) ಹೆಸರಲ್ಲಿ ಪುನೀತ್ ರಾಜ್‌ಕುಮಾರ್ ಉತ್ಸವ ನಡೆದಿತ್ತು. ಸೌತ್ ಸೂಪರ್‌ ಸ್ಟಾರ್‌ಗಳು (South Super Stars) ಆಗಮಿಸಿ ‘ದೊಡ್ಮನೆ ಹುಡುಗ’ನ ನೆನಪನ್ನು ಹಂಚಿ ಕೊಂಡಿದ್ದರು. ಜೊತೆಗೆ ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌ಗಳೂ ಸಹ ಅಪ್ಪು ಕೊಂಡಿದ್ದಾಡಿದ್ದರು. ಇದೀಗ ನವೆಂಬರ್​ 01 ರಂದು ಪುನೀತ್ ರಾಜ್‌ಕುಮಾರ್‌ ಅವರಿಗೆ ಮರಣೋತ್ತರವಾಗಿ  ಕರ್ನಾಟಕ ರತ್ನ ಪ್ರಶಸ್ತಿ (Karnataka Ratna Award) ಪ್ರದಾನ ಮಾಡಲಾಗುತ್ತದೆ. 


ನ.01ಕ್ಕೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ


ನವೆಂಬರ್​ 01 ರಂದು ವಿಧಾನಸೌಧದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪುನೀತ್​ ರಾಜ್​ಕುಮಾರ್​ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಸೂಪರ್​ ಸ್ಟಾರ್ ರಜನಿಕಾಂತ್​ ಅಥವಾ ಜೂನಿಯರ್​ ಎನ್​ಟಿಆರ್​ ಅವರು ಆಗಮಿಸುವ ಸಾಧ್ಯತೆ ಇದೆ ಹೇಳಲಾಗುತ್ತಿದೆ. ಈ ಇಬ್ಬರು ಸ್ಟಾರ್​ ಕಲಾವಿದರಿಗೆ ಕರ್ನಾಟಕ ಸರ್ಕಾರದ ಕಡೆಯಿಂದ ಆಹ್ವಾನ ನೀಡಲಾಗಿದೆ.


The 67th Parle Filmfare Awards South 2022 lifetime achievement award Puneeth Raj Kumar see details
ಪುನೀತ್ ರಾಜ್‍ಕುಮಾರ್


ರಾಜ್​ ಕುಟುಂಬಸ್ಥರು ಭಾಗಿಯಾಗಲಿದ್ದಾರೆ


ಪುನೀತ್​ ನಿಧನರಾದಾಗ ಇಡೀ ಕರುನಾಡಿಗೆ ಕತ್ತಲು ಕವಿದಂತಾಯಿತು. ಅವರು ಇಲ್ಲ ಎಂಬುದನ್ನು ಯಾರಿಂದಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮರಣೋತ್ತರವಾಗಿ ಅವರಿಗೆ ರಾಜ್ಯ ಸರ್ಕಾರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿತು. ಪುನೀತ್​ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿರುವುದು ವಿಶೇಷ. ಪುನೀತ್​ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಡಾ. ರಾಜ್​ಕುಮಾರ್​ ​ಕುಟುಂಬದ ಸದಸ್ಯರು ಈ ಕ್ಷಣಕ್ಕೆ ಸಾಕ್ಷಿ ಆಗಲಿದ್ದಾರೆ.


ಇದನ್ನೂ ಓದಿ: Gandhada Gudi: ಅಪ್ಪು ಸಮಾಧಿ ಬಳಿ ಫ್ಯಾನ್ಸ್, ಪುನೀತ್ ಕಟೌಟ್​ಗೆ ಪೂಜೆ ಸಲ್ಲಿಸಿದ ಮಗು


10 ದಿನಗಳ ಕಾಲ ಪುನೀತ್ ಕಾರ್ಯಕ್ರಮ?


ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಬೇಕೆಂಬ ಅಭಿಮಾನಿಗಳ ಬೇಡಿಕೆ ಇರುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ನವೆಂಬರ್ 1 ರ ನಂತರ ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಒಟ್ಟು 3 ಕಾರ್ಯಕ್ರಮಗಳನ್ನು ಸುಮಾರು 10 ದಿನಗಳ ಕಾಲ ಆಯೋಜಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.


ರಾಜ್ಯದ ಪ್ರತಿಷ್ಠಿತ ಗೌರವ ಕರ್ನಾಟಕ ರತ್ನ


ರಾಷ್ಟ್ರ ಮಟ್ಟದಲ್ಲಿ ಭಾರತ ರತ್ನ ಪರಮೋಚ್ಚ ಗೌರವವಾಗಿದೆ. ಹಾಗೆಯೇ ರಾಜ್ಯಮಟ್ಟದಲ್ಲಿ 'ಕರ್ನಾಟಕ ರತ್ನ' ಅತ್ಯುನ್ನತ ಗೌರವವಾಗಿದೆ. ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಗಣ್ಯರಿಗೆ ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ನೀಡುತ್ತದೆ. 1992ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸ್ಥಾಪನೆ ಮಾಡಲಾಯಿತು. 9 ಸಾಧಕರಿಗೆ ಇದುವರೆಗೂ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ. 1992ರಲ್ಲಿ ಡಾ. ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು.


ಇದನ್ನೂ ಓದಿ: Puneeth Rajkumar: ಹಬ್ಬದ ನಡುವೆಯೂ ಅಪ್ಪು ಸಮಾಧಿ ಬಳಿ ಫ್ಯಾನ್ಸ್ ದಂಡು


ಪುನೀತ್​ ರಾಜ್​ ಕುಮಾರ್​ ಅವರ ಕನಸಿನ ಪ್ರಾಜೆಕ್ಟ್​ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಅಕ್ಟೋಬರ್​ 28 ರಂದು ರಿಲೀಸ್​ ಆಗುತ್ತಿದೆ. ಒಂದು ದಿನ ಮುನ್ನ, ಅಂದರೆ ಅ.27 ರಂದು ಹಲವು ಕಡೆಗಳಲ್ಲಿ ಪ್ರೀಮಿಯರ್​ ಪ್ರದರ್ಶನ ಆಯೋಜನೆಗೊಂಡಿದೆ. ಈಗಾಗಲೇ ಟಿಕೆಟ್​ ಬುಕಿಂಗ್​ ಆರಂಭ ಆಗಿದ್ದು, ಅಭಿಮಾನಿಗಳು ಮುಗಿಬಿದ್ದು ಟಿಕೆಟ್​ ಬುಕ್ ಮಾಡಿದ್ದಾರೆ. ಪುನೀತ್​ ರಾಜ್​ಕುಮಾರ್​ನನ್ನು ತೆರೆಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ.

Published by:ಪಾವನ ಎಚ್ ಎಸ್
First published: