• Home
 • »
 • News
 • »
 • entertainment
 • »
 • Puneeth Rajkumar: ಕರ್ನಾಟಕ ರತ್ನ ಪ್ರದಾನ ಮಾಡಲು ಬರ್ತಿದ್ದಾರೆ ರಜನಿಕಾಂತ್! ಕರುನಾಡಿನ ಬಗ್ಗೆ ಸೂಪರ್‌ ಸ್ಟಾರ್ ಹೇಳಿದ್ದೇನು?

Puneeth Rajkumar: ಕರ್ನಾಟಕ ರತ್ನ ಪ್ರದಾನ ಮಾಡಲು ಬರ್ತಿದ್ದಾರೆ ರಜನಿಕಾಂತ್! ಕರುನಾಡಿನ ಬಗ್ಗೆ ಸೂಪರ್‌ ಸ್ಟಾರ್ ಹೇಳಿದ್ದೇನು?

'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ರಜನಿಕಾಂತ್

'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ರಜನಿಕಾಂತ್

ಯುವರತ್ನನಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವ ದಿನ ಹತ್ತಿರ ಬರುತ್ತಿದೆ. ನ ಭೂತೋ ನ ಭವಿಷ್ಯತಿ ಎನ್ನುವಂತೆ ಅದ್ಧೂರಿ ಕಾರ್ಯಕ್ರಮ ಮಾಡಲು ಸರ್ಕಾರಿ ಸಿದ್ಧತೆ ನಡೆಸಿದೆ. ಮುಖ್ಯ ಅತಿಥಿಗಳಾಗಿ ತೆಲುಗು ನಟ ಜೂ. ಎನ್‌ಟಿಆರ್‌ ಬರೋದು ಪಕ್ಕಾ ಆಗಿದೆ. ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ!

ಮುಂದೆ ಓದಿ ...
 • News18 Kannada
 • Last Updated :
 • Karnataka, India
 • Share this:

  ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿಮಾನಿಗಳನ್ನು ದೇವರಂತೆ ಕಂಡವರು. ಎಷ್ಟೋ ಮನೆಗೆ ಬೆಳಕಾದವರು. ಅವರ ಸಾವು ನೆನೆದ್ರೆ ಈಗ ಕೂಡ ನೋವಾಗುತ್ತೆ. ಪುನೀತ್ ರಾಜ್‍ಕುಮಾರ್ ನಮ್ಮನ್ನು ಅಗಲಿ ಒಂದು ವರ್ಷವಾಗಿದೆ (1 Year). ಅವರ ನೆನಪುಗಳು ಇಂದಿಗೂ ಕಾಡುತ್ತಿವೆ. ಕನ್ನಡ ರಾಜ್ಯೋತ್ಸವದ ದಿನ ಅಂದ್ರೆ ನವೆಂಬರ್ 01ರಂದು ಅಗಲಿದ ಪುನೀತ್ ರಾಜ್‍ಕುಮಾರ್ ಗೆ  ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ಪ್ರದಾನ ಮಾಡಲಾಗುತ್ತೆ. ಆ ಕಾರ್ಯಕ್ರಮಕ್ಕೆ ಜೂನಿಯರ್ ಎನ್‍ಟಿಆರ್ (NTR) ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಅಲ್ಲದೇ ಸೂಪರ್ ಸ್ಟಾರ್ ರಜನಿಕಾಂತ್  (Rajinikanth) ಸಹ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.


  ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ವಿಧಾನಸೌಧದಲ್ಲಿ ಈ ಸಮಾರಂಭ ನಡೆಯಲಿದೆ. ಕನ್ನಡ ರಾಜ್ಯೋತ್ಸವದ ದಿನವೇ ಅಪ್ಪುಗೆ ಮರಣೋತ್ತರ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲು ಸಕಲ ಸಿದ್ಧತೆ ನಡೆದಿದೆ.


  ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
  ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲು ಸರ್ಕಾರ ತೀರ್ಮಾನಿದೆ. ಅದರ ಕನ್ನಡ ರಾಜ್ಯೀತ್ಸವದ ದಿನ. ವಿಧಾನಸೌಧದಲ್ಲಿ ಸಕಲ ತಯಾರಿಗಳು ನಡೆದಿವೆ. ಕಾರ್ಯಕ್ರಮಕ್ಕೆ ಸರ್ಕಾರ ಹಲವು ಗಣ್ಯರಿಗೆ  ಆಹ್ವಾನ ನೀಡಿದೆ. ಜೂನಿಯರ್ ಎನ್‍ಟಿಆರ್ ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ. ಈಗ ರಜನಿಕಾಂತ್ ಸಹ ಕಾರ್ಯಕ್ರಮಕ್ಕೆ ಬರುವುದಾಗಿ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.


  karnataka rathna award to punit rajkumar, november 1st program, rajinikanth guest, ಪುನಿತ್ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ, ನವೆಂಬರ್ 1 ಕಾರ್ಯಕ್ರಮ, ರಜನಿಕಾಂತ್ ಅತಿಥಿ, kannada news, karnataka news,
  'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ರಜನಿಕಾಂತ್


  ರಜನಿಕಾಂತ್ ಸಿಎಂ ಅವರಿಗೆ ಬರೆದ ಪತ್ರದಲ್ಲಿ ಏನಿದೆ?
  'ನವೆಂಬರ್ 1 ರಂದು ನಡೆಯುವ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಿಮಗೆ ಮತ್ತು ನಿಮ್ಮ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.


  ಇದನ್ನೂ ಓದಿ: BBK Season 9: ದೀಪವೊಂದು ಆರಿ ಹೋಗಿ ವರುಷವಾಗಿದೆ! ಅಪ್ಪುಗಾಗಿ ಹಾಡು ಬರೆದ ರೂಪೇಶ್ ಶೆಟ್ಟಿ  


  ಬೆಂಗಳೂರಿನ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ, ನಮ್ಮೆಲ್ಲರಿಗೂ ಪ್ರತಿದಿನ ಸ್ಫೂರ್ತಿ ನೀಡುತ್ತಿರುವ ನಮ್ಮ ಅಪ್ಪು ಅವರ ಈ ಸ್ಮರಣೀಯ ಕಾರ್ಯಕ್ರಮದಲ್ಲಿ ನನ್ನ ಭಾಗವಹಿಸುವಿಕೆಯನ್ನು ಮನದಾಳದಿಂದ, ಗೌರವದಿಂದ ಖಚಿತಪಡಿಸಲು ನಾನು ಇಷ್ಟಪಡುತ್ತೇನೆ.' ನವೆಂಬರ್ 1ರ ಮಧ್ಯಾಹ್ನ 2 ಗಂಟೆಗೆ ನಾನು ಚೆನ್ನೈನಿಂದ ನಿರ್ಗಮಿಸುತ್ತಿದ್ದೇನೆ. ನಾನು ಸುಮಾರು 3 ಗಂಟೆಗೆ ಬೆಂಗಳೂರಿಗೆ ಆಗಮಿಸುತ್ತೇನೆ. ಎಂದು ರಜನಿಕಾಂತ್ ಪತ್ರ ಬರೆದಿದ್ದಾರೆ.


  ಪುನೀತ್ ರಾಜ್‍ಕುಮಾರ್ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಕರ್ನಾಟಕ ರತ್ನ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮಕ್ಕೆ ರಾಜ್‍ಕುಮಾರ್ ಕುಟುಂಬದ ಸದಸ್ಯರು ಬರಲಿದ್ದಾರೆ. ಪುನೀತ್ ರಾಜ್‍ಕುಮಾರ್ ಸ್ಯಾಂಡಲ್‍ವುಡ್ ಮಾತ್ರವಲ್ಲ, ಬೇರೆ ಬೇರೆ ಭಾಷೆಯ ನಟರೊಂದಿಗೂ ಉತ್ತಮ ಬಾಂದವ್ಯ ಹೊಂದಿದ್ದರು. ಎಲ್ಲರಿಗೂ ಅಪ್ಪು ಅಂದ್ರೆ ತುಂಬಾ ಇಷ್ಟ. ಪುನೀತ್ ರಾಜ್‍ಕುಮಾರ್ ನಮ್ಮನ್ನು ಅಗಲಿ 1 ವರ್ಷವಾಗಿದೆ. ನವೆಂಬರ್ 1ರಂದು ಅಪ್ಪುಗೆ ಮರಣೋತ್ತರವಾಗಿ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಲಾಗುವುದು.


  ಇದನ್ನೂ ಓದಿ: Puneeth Rajkumar: ಅಪ್ಪು ಪುಣ್ಯಸ್ಮರಣೆ ದಿನ ಅಭಿಮಾನಿ ಆತ್ಮಹತ್ಯೆ


  ಕರ್ನಾಟಕ ರತ್ನ ಪ್ರಶಸ್ತಿ


  ಕರ್ನಾಟಕ ರತ್ನ ಪ್ರಶಸ್ತಿ ಪೂರ್ಣ ಬೆಳ್ಳಿಯಲ್ಲಿ ಇರಲಿದೆ. 50 ಗ್ರಾಂ ಚಿನ್ನದ ಪದಕ ಕೂಡ ಕೊಡಲಾಗುತ್ತದೆ. ಕುವೆಂಪು, ಡಾ.ರಾಜ್ ಕುಮಾರ್, ಎಸ್.ನಿಜಲಿಂಗಪ್ಪ, ಸಿ.ಎನ್.ಆರ್ ರಾವ್,‌ ಪಂಡಿತ್ ಭೀಮಸೇನ ಜೋಶಿ, ಶಿವಕುಮಾರ ಸ್ವಾಮೀಜಿ, ಜವರೇಗೌಡ ಅವರುಗಳಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಕೊಡಲಾಗಿದೆ.

  Published by:Savitha Savitha
  First published: