ಪವರ್ಸ್ಟಾರ್ ಪುನೀತ್ ರಾಜ್‍ಕುಮಾರ್ (Puneeth Rajkumar) ಹುಟ್ಟು ಹಬ್ಬ (Birthday) ಹಿನ್ನೆಲೆ ಸಮಾಧಿ ಬಳಿ ಅಭಿಮಾನಿಗಳು (Fans) ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಿದ್ದಾರೆ. ಮಧ್ಯರಾತ್ರಿ ಕೇಕ್ (Cake) ಕತ್ತರಿಸಿ ಅಭಿಮಾನಿಗಳು ಅಪ್ಪು ಬರ್ತಡೇ ಸೆಲಬ್ರೇಟ್ ಮಾಡಿದ್ದಾರೆ. ಪಟಾಕಿ ಸಿಡಿಸಿ ಹುಟ್ಟುಹಬ್ಬ ಆಚರಣೆ (Celebration) ಮಾಡಿದ ಅಭಿಮಾನಿಗಳು ಪವರ್ಸ್ಟಾರ್ನ್ನು (Powerstar) ನೆನಪಿಸಿಕೊಂಡಿದ್ದಾರೆ. ಮಧ್ಯರಾತ್ರಿಯಿಂದಲೇ ಕಂಠೀರವ ಸ್ಟುಡಿಯೋ ಬಳಿ ಅಪ್ಪು ಅಭಿಮಾನಿಗಳು ಬರುತ್ತಿದ್ದಾರೆ. ಸಮಾಧಿ ಬಳಿ ಬಿಗಿಪೊಲೀಸ್ ಬಂದೋಬಸ್ತ್ ಕೂಡಾ ಮಾಡಲಾಗಿದೆ.
ಅಪ್ಪು ಅಗಲಿಕೆ ನಂತರ ಅಭಿಮಾನಿಗಳು ಇಂದು ಎರಡನೇ ವರ್ಷ ಪುನೀತ್ ಬರ್ತ್ಡೇ ಆಚರಿಸುತ್ತಿದ್ದಾರೆ. ಅದ್ದೂರಿಯಾಗಿ ಅಪ್ಪು ಉತ್ಸವ ಆಚರಿಸುತ್ತಿರುವ ಅಭಿಮಾನಿಗಳು ಹಲವು ಸಮಾಜಮುಖಿ ಕಾರ್ಯಗಳನ್ನೂ ಮಾಡುತ್ತಿದ್ದಾರೆ.
ಅಪ್ಪು ಉತ್ಸವಕ್ಕೆ ಅಭಿಮಾನಿಗಳ ಸಿದ್ದತೆ
ಕಂಠೀರವ ಸ್ಟೂಡಿಯೋ ಬಳಿ ಅಪ್ಪು ಉತ್ಸವಕ್ಕೆ ಅಭಿಮಾನಿಗಳ ಸಿದ್ದತೆ ಕೂಡಾ ನಡೆದಿದೆ. ಅಪ್ಪು ಸಮಾಧಿ ದರ್ಶನ ಪಡೆಯಲು ಬೆಳಗ್ಗಿನಿಂದಲೇ ಕಂಠೀರವ ಬಳಿ ಅಭಿಮಾನಿಗಳು ಸೇರಿದ್ದಾರೆ.
ಅಪ್ಪು ಜನ್ಮದಿನದ ಅಂಗವಾಗಿ ಅಭಿಮಾನಿಗಳಿಗೆ ಅನ್ನದಾನ ಕೂಡಾ ವ್ಯವಸ್ಥೆ ಮಾಡಲಾಗಿದೆ. ಗಂಧದಗುಡಿ ಕನಸು ಕಂಡಿದ್ದ ಅಪ್ಪು ನೆನಪಲ್ಲಿ 3000
ಗಿಡಗಳ ವಿತರಣೆ ಮಾಡಲಾಗಿದ್ದು ರಾಘವೇಂದ್ರ ರಾಜ್‍ಕುಮಾರ್ ತಮ್ಮನ ನೆನಪಲ್ಲಿ ಗಿಡಗಳ ಉಡುಗೊರೆ ಕೊಡಲಿದ್ದಾರೆ.
ಸಂಜೆ 6ಗಂಟೆ ವೇಳೆಗೆ ರಸಮಂಜರಿ ಕಾರ್ಯಕ್ರಮ ಹಾಗು ಸಮಾಧಿ ಬಳಿ ವಿದ್ಯುತ್ ದೀಪಾಲಂಕಾರ ಕೂಡಾ ವ್ಯವಸ್ಥೆ ಮಾಡಲಾಗಿದೆ. ಅಪ್ಪು ಮಾಲೆ ಧರಿಸಿ ಪವರ್ಸ್ಟಾರ್ ಫ್ಯಾನ್ಸ್ ಸಮಾಧಿ ಬಳಿ ಬರುತ್ತಿದ್ದಾರೆ. ಸ್ಮಾರಕದ ಬಳಿ ಬೆಳಗ್ಗೆ 10 ಗಂಟೆಯಿಂದ ನಿರಂತರವಾಗಿ ಅನ್ನದಾನ ನಡೆಯುತ್ತಿದೆ.
ಮಾಲೆ ಧರಿಸಿ ಬಂದ ಅಪ್ಪು ಫ್ಯಾನ್ಸ್
ಅಪ್ಪು ಮಾಲೆಧರಿಸಿ ಅಭಿಮಾನಿಗಳು ಹೊಸಪೇಟೆಯಿಂದ ಕಾಲ್ನಡಿಗೆಯಲ್ಲಿ ಬಂದಿದ್ದಾರೆ. ಮೂರುದಿನಗಳು ಪಾದಯಾತ್ರೆಯ ಮೂಲಕ ಕಂಠೀರವ ಸಮಾಧಿ ಬಳಿ ಬಂದಿರುವ ಅಪ್ಪು ಅಭಿಮಾನಿ ಅಪ್ಪು ನೆನಪಲ್ಲಿ ಹಗಲು ರಾತ್ರಿ ಪಾದಯಾತ್ರೆ ಮಾಡಿದ್ದಾರೆ.
ವಿವಿಧ ಹೂಗಳಿಂದ ಅಪ್ಪು ಸ್ಮಾರಕಕ್ಕೆ ಅಲಂಕಾರ ಮಾಡಲಾಗಿದೆ. 10ಗಂಟೆ ವೇಳೆಗೆ ಅಪ್ಪು ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹುಟ್ಟು ಹಬ್ಬ ಹಿನ್ನಲೆ ಅವರ ಅಭಿಮಾನಿ ಸುಮಿತ್ರ ಭಾಯಿ ಕಡಲೆಪುರಿ ಹಾರ ತಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಪ್ಪು ಅವರಿಗೆ ಕಡಲೆ ಪುರಿ ಹಾರ ತರುತ್ತಿದ್ದಾರೆ ಈ ಅಭಿಮಾನಿ.
ಇದನ್ನೂ ಓದಿ: Kabzaa Twitter Review: ಸ್ಯಾಂಡಲ್ವುಡ್ಗೆ ಮತ್ತೊಮ್ಮೆ ಹೆಮ್ಮೆ! ಕಬ್ಜ ಸೂಪರ್ ಎಂದ ನೆಟ್ಟಿಗರು
ಕಬ್ಜ ನಟ ಉಪೇಂದ್ರ ಅವರು ಇತ್ತೀಚೆಗೆ ಕಬ್ಜ ಸಿನಿಮಾದ ಮೂರನೇ ಹಾಡು ರಿಲೀಸ್ ಸಂದರ್ಭ ಅಪ್ಪು ಅವರ ಬಗ್ಗೆ ಮಾತನಾಡಿದ್ದರು. ಚಂದ್ರು ನಿರ್ದೇಶನದ ಸಿನಿಮಾ ಕಬ್ಜದಲ್ಲಿ ಉಪೇಂದ್ರ ಅವರ ಹೊಸ ಅವತಾರ ರಿವೀಲ್ ಆಗಿದ್ದು ಮೂರನೇ ಸಾಂಗ್ನಲ್ಲಿ ಉಪ್ಪಿ ಹಾಗೂ ತಾನ್ಯಾ ಡ್ಯಾನ್ಸ್ ಮಾಡಿದ್ದಾರೆ.
ಆ್ಯಕ್ಷನ್ ಕಟ್ ಹೇಳೋ ಆಸೆ ಹಾಗೆಯೇ ಉಳಿಯಿತು
ಈ ಹಾಡಿನ ಲಾಂಚ್ ಸಂದರ್ಭ ಉಪ್ಪಿ ಅಪ್ಪುವನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ವೇದಿಕೆಯಲ್ಲಿ ಪುನೀತ್ ರಾಜ್‍ಕುಮಾರ್ ಬಗ್ಗೆ ಮಾತನಾಡಿದ ನಟ, ನಾನು ಪುನೀತ್ ರಾಜ್ಕುಮಾರ್ಗೆ ಆ್ಯಕ್ಷನ್ ಕಟ್ ಎಂದು ಹೇಳಲು ಬಯಸಿದ್ದೆ. ಆದರೆ ಸಾಧ್ಯವಾಗಲಿಲ್ಲ. ಆದರೆ ಶೀಘ್ರ ಶಿವಣ್ಣ ಅವರಿಗೆ ಆ್ಯಕ್ಷನ್ ಕಟ್ ಹೇಳಿ ಅವರ ಬ್ಯಾನರ್ನಲ್ಲಿ ಸಿನಿಮಾ ಮಾಡುವ ಗೀತಕ್ಕ ಅವರ ಕನಸು ನನಸು ಮಾಡುತ್ತೇನೆ ಎಂದಿದ್ದಾರೆ.
ಕಿಚ್ಚ ಸುದೀಪ್, ಶಿವರಾಜ್ಕುಮಾರ್ ಅವರ ಜೊತೆ ಮಲ್ಟಿಸ್ಟಾರರ್ ಸಿನಿಮಾದಲ್ಲಿ ಉಪೇಂದ್ರ ಪ್ರೇಕ್ಷಕರ ಮುಂದೆ ಬರಲಿದ್ದು ಇದು ಪ್ರೇಕ್ಷಕರಿಗೆ ಸಿನಿ ಹಬ್ಬವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ