ಕಾಂತರಾ (Kantara) ಸಿನಿಮಾ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದ ನಟ ಚೇತನ್ ಕುಮಾರ್ (Actor Chetan Kumar) ವಿರುದ್ಧ ದೂರು (Case) ದಾಖಲಾಗಿತ್ತು. ಚೇತನ್ ಕುಮಾರ್ ಅವರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ (High Court) ನಿರಾಕರಿಸಿದೆ. ಎಫ್ಐಆರ್ ರದ್ದುಪಡಿಸಲು ಮತ್ತು ಮುಂದುವರಿಯಲು ನಿರಾಕರಿಸಿರುವ ಹೈಕೋರ್ಟ್, ಕನ್ನಡ ಚಿತ್ರರಂಗದ ನಟ ಚೇತನ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದೆ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ ನಕಲಿ/ಪರವರ ಬಹುಜನ ಸಂಪ್ರದಾಯಗಳು ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದು ನಟ ಚೇತನ್ ಹೇಳಿದ್ದರು. ಅದಕ್ಕೆ ತೀವ್ಯ ವಿರೋಧ ವ್ಯಕ್ತವಾಗಿತ್ತು.
ಹೈಕೋರ್ಟ್ ಹೇಳಿರುವುದೇನು?
'ಅರ್ಜಿದಾರರ ವಿರುದ್ಧ ಆರೋಪ ಮಾಡಲಾಗಿದೆ. ಚೇತನ್ ಅವರು ಅಪರಾಧದ ಆಯೋಗದ ಹೇಳಿಕೆಗಳನ್ನು ನೀಡಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 (2) ಅಡಿಯಲ್ಲಿ, ನಟ ಚೇತನ್ ಕುಮಾರ್ ನೀಡಿದ ಹೇಳಿಕೆಗಳು ಪರಿಗಣಿಸಿದಂತೆ ಅಪರಾಧವಾಗಿದೆಯೇ ಅಥವಾ ಇಲ್ಲವೇ ಎಂಬ ಕುರಿತು ತನಿಖೆ ನಡೆಯುತ್ತಿತ್ತು.
ಮೊದಲ ಪ್ರತಿವಾದಿ, ಪೊಲೀಸ್ ಸರಿಯಾದ ತನಿಖೆಯಿಲ್ಲದೆ ಯಾಂತ್ರಿಕವಾಗಿ ಆರೋಪಪಟ್ಟಿ ಸಲ್ಲಿಸುವುದಿಲ್ಲ ಎಂದು ಹೇಳಬೇಕಾಗಿಲ್ಲ. ಅರ್ಜಿದಾರರು ಅಗತ್ಯ ಜಾಮೀನು ಪಡೆಯಲು ಸೂಕ್ತವಾದ ನ್ಯಾಯಾಲಯವನ್ನು ಸಂಪರ್ಕಿಸಲು ಯಾವಾಗಲೂ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಮತ್ತು ಅದನ್ನು ಕಾನೂನಿನ ಪ್ರಕಾರ ಸಂಬಂಧಪಟ್ಟ ನ್ಯಾಯಾಲಯವು ಪರಿಗಣಿಸುತ್ತದೆ' ಎಂದು ನ್ಯಾಯಮೂರ್ತಿ ಎಂಐ ಅರುಣ್ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Actor Chetan: ನಟ ಚೇತನ್ ವಿರುದ್ಧ ದೈವನರ್ತಕರ ಆಕ್ರೋಶ, ಪಂಜುರ್ಲಿ ಮೊರೆ ಹೋಗಲು ನಿರ್ಧಾರ
ಶಿವಕುಮಾರ್ ಎಂಬುವವರಿಂದ ದೂರು
ಬೆಂಗಳೂರಿನ ನಿವಾಸಿ ಶಿವಕುಮಾರ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಶೇಷಾದ್ರಿಪುರಂ ಪೊಲೀಸರು ಚೇತನ್ ವಿರುದ್ಧ ಐಪಿಸಿ ಸೆಕ್ಷನ್ 505(2) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಕಾಂತಾರದಲ್ಲಿ ಚಿತ್ರಿಸಲಾದ ಭೂತ ಕೋಲ ಸಂಪ್ರದಾಯದ ಬಗ್ಗೆ ಪ್ರತಿಕ್ರಿಯಿಸುವಾಗ ಚೇತನ್ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಚೇತನ್ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದು, ಅದು ಸಮಾಜದಲ್ಲಿ ದ್ವೇಷ ಅಥವಾ ದುಷ್ಟಶಕ್ತಿಯನ್ನು ಸೃಷ್ಟಿಸಲು ಅಥವಾ ಉತ್ತೇಜಿಸಲು ಪ್ರಯತ್ನಿಸುತ್ತಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಚೇತನ್ ಹೇಳಿಕೆಗೆ ಆಕ್ರೋಶ
ಚೇತನ್ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ರಿಷಬ್ ತಂದೆ ಭಾಸ್ಕರ್ ಶೆಟ್ಟಿ ಸೇರಿದಂತೆ ಕರಾವಳಿಯ ದೈವಾರಾಧಕರು, ದೈವ ನರ್ತಕರು, ರಿಷಬ್ ಶೆಟ್ಟಿ ಅಭಿಮಾನಿಗಳು ಚೇತನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಮಂಗಳೂರಿಗೆ ಬಂದು ಈ ರೀತಿಯ ಹೇಳಿಕೆ ನೀಡಿ ಅಂತ ಸವಾಲು ಹಾಕಿದ್ದರು.
ಇದನ್ನೂ ಓದಿ: Actor Chetan: ಟೀಂ ಇಂಡಿಯಾದಲ್ಲೂ ಎಸ್ಸಿ-ಎಸ್ಟಿಗೆ ಮೀಸಲಾತಿ ಕೊಡಿ! ಆ ದಿನಗಳ ನಟ ಚೇತನ್ ಆಗ್ರಹ
ಚೇತನ್ ವಿರುದ್ಧ ಪಂಜುರ್ಲಿ ದೈವದ ಮೊರೆ
ಇನ್ನು ಈ ಸಂಬಂಧ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ್ದ ಹಿರಿಯ ದೈವರಾಧಕ ಕುಮಾರ ಪಂಬದ, ಸಂಸ್ಕೃತಿಯ ಅವಹೇಳನ ಆದಾಗೆಲ್ಲ ನಾವು ದೈವದ ಮುಂದೆ ಪ್ರಾರ್ಥನೆ ಮಾಡುತ್ತೇವೆ. ನಾವು ಸೇವೆ ಕೊಡುವ ದೈವಗಳ ಮುಂದೆಯೇ ನಾವು ಪ್ರಾರ್ಥನೆ ಮಾಡುತ್ತೇವೆ. ನಮ್ಮ ಮೂಲ ಆರಾಧನೆಯ ಪಂಜುರ್ಲಿ ದೈವದ ಮುಂದೆ ಈ ಬಗ್ಗೆ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ