Film Chamber Election: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಭಾ ಮಾ ಹರೀಶ್​ ಆಯ್ಕೆ - ಸಾ ರಾ ಗೋವಿಂದುಗೆ ಸೋಲು

Sandalwood: ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಮತದಾನ ನಡೆದಿದ್ದು, ನಟಿ ಲೀಲಾವತಿ, ರಾಘವೇಂದ್ರ ರಾಜ್​ಕುಮಾರ್, ಸೃಜನ್ ಲೋಕೇಶ್​, ದಿನಕರ್ ತೂಗುದೀಪ್, ನಟಿ ಜಯಮಾಲಾ, ವಿಜಯ್ ರಾಘವೇಂದ್ರ ಸೇರಿದಂತೆ ಸ್ಯಾಂಡಲ್​ವುಡ್​ನ ಗಣ್ಯಾತಿ ಗಣ್ಯರು ಬಂದು ಮತ ಚಲಾಯಿಸಿದ್ದರು.

ಭಾ.ಮಾ. ಹರೀಶ್​

ಭಾ.ಮಾ. ಹರೀಶ್​

  • Share this:
ಭಾರೀ ಕುತೂಹಲ ಮೂಡಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ (Karnataka Film Chamber Of Commerce) ಮಂಡಳಿಯ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಭಾ.ಮಾ ಹರೀಶ್​ (Bha.Ma.Harish) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಚಿತ್ರರಂಗದ ಹಲವಾರು ಜನರು ಶುಭಾಶಯಗಳನ್ನು ಕೋರಿದ್ದಾರೆ. ಇನ್ನು ಕಳೆದ ಮೂರು ವರ್ಷಗಳ ಕಾಲದಿಂದ ಸಾ.ರಾ.ಗೋವಿಂದು ಅವರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಬಾರಿ ಅವರ ಎದುರಾಳಿಯಾಗಿ ಭಾ.ಮಾ.ಹರೀಶ್​ ಅವರು ಚುನಾವಣೆಯಲ್ಲಿ ನಿಂತಿದ್ದರು. ನಿನ್ನೆ ನಡೆದ ಚುನಾವಣೆಯಲ್ಲಿ (Election) ಭಾ.ಮಾ. ಹರೀಶ್​ ಗೆಲುವು ಸಾಧಿಸಿದ್ದಾರೆ.   

ಚುನಾವಣೆಯಲ್ಲಿ ಸಾ.ರಾ. ಗೋವಿಂದು 371 ಮತಗಳನ್ನು ಪಡೆದಿದ್ದರೆ, ಭಾ. ಮಾ ಹರೀಶ್​ 781 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಸಾ.ರಾ ಹಾಗೂ ಭಾ.ಮಾ ನಡುವೆ 410 ಮತಗಳ ಅಂತರವಿದ್ದು,  ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾಗಿ ನಟ ಜೈಜಗದೀಶ್​​ ಹಾಗೂ ಖಜಾಂಚಿಯಾಗಿ ಟಿ.ಪಿ. ಸಿದ್ದರಾಜು ಆಯ್ಕೆ ಆಗಿದ್ದಾರೆ.  ಇನ್ನು ಈ ಚುನಾವಣೆಗೆ ಬಹಳ ದಿನಗಳಿಂದಲೇ ತಯಾರಿ ನಡೆದಿದ್ದು, ನಿನ್ನೆ ಬೆಳಗ್ಗೆಯಿಂದಲೇ ಕಾವು ಏರಿತ್ತು.

ಸಂಜೆ 7 ಗಂಟೆಗೆ ಮುಗಿದಿದ್ದ ಮತದಾನ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಹಿತಿಯ ಪ್ರಕಾರ ನಿರ್ಮಾಪಕರ ಕಡೆಯಿಂದ 910 ಮತಗಳು ಹಾಗೂ ವಿತರಕರ ತಂಡದಿಂದ ಸರಿ ಸುಮಾರು 200 ಮತಗಳು ಬಂದಿದ್ದವೂ ಎನ್ನಲಾಗಿದೆ. ಅಲ್ಲದೇ ಯಾವುದೇ ಪೇಪರ್ ಹರಿಯದೇ ಮತ ಏಣಿಕೆ ಮಾಡಲಾಗಿದ್ದು, ಮತ ಏಣಿಕೆ ಕಾರ್ಯದಲ್ಲಿ ಒಟ್ಟು 8 ಅಧಿಕಾರಿಗಳು ಭಾಗವಹಿಸಿದ್ದರು.

ವಿತರಕರ ವಲಯದಿಂದ ಉಪಾಧ್ಯಕ್ಷರಾಗಿ ಶಿಲ್ಪ ಶ್ರೀನಿವಾಸ್ ಆಯ್ಕೆ ಆಗಿದ್ದಾರೆ. ನಿರ್ಮಾಪಕರ ವಲಯದಿಂದ ಗೌರವ ಕಾರ್ಯದರ್ಶಿಯಾಗಿ ಹಿರಿಯ ನಟ ಸುಂದರ್ ರಾಜ್, ವಿತರಕರ ವಲಯದಿಂದ ಕುಮಾರ್ ಎಂ ಎನ್, ಪ್ರದರ್ಶಕರ ವಲಯದಿಂದ ಕುಶಾಲ್ ಎಲ್‌ ಸಿ ಆಯಾ ಸ್ಥಾನಗಳಿಗೆ ಆಯ್ಕೆ ಆಗಿದ್ದಾರೆ.

ಅಧ್ಯಕ್ಷ ಗಾದಿಗೆ ಪೈಟೋಟಿ ಇತ್ತು. ಸಾ.ರಾ. ಗೋವಿಂದು ಹಾಗೂ ಭಾ.ಮಾ. ಹರೀಶ್​ ನಿನ್ನೆ ಬೆಳಗ್ಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದರು. ಇನ್ನು ನನ್ನ ಮೇಲೆ ನಂಬಿಕೆ ಇಟ್ಟು ನನ್ನ ಆಯ್ಕೆ ಮಾಡಿರುವ ಮಂಡಳಿ ಸದಸ್ಯರಿಗೆ ತುಂಬು ಹೃದಯದ ಧನ್ಯವಾದಗಳು. ಮುಂದಿನ ದಿನಗಳಲ್ಲಿ ನಮ್ಮ ತಂಡದಿಂದ ಹಲವಾರು ಉತ್ತಮ ಕೆಲಸಗಳಾಗುತ್ತದೆ. ಮಂಡಳಿ ಸದಸ್ಯರ ಪ್ರತಿಯೊಂದು ಸಮಸ್ಯೆಗೆ ಪರಿಹಾರ ನೀಡಲಾಗುತ್ತದೆ ಎಂದು ಗೆಲುವಿನ ನಂತರ ಭಾ.ಮಾ. ಹರೀಶ್ ಹೇಳಿದ್ದಾರೆ.

ಇದನ್ನೂ ಓದಿ: ಹಸೆಮಣೆ ಏರಿದ ನಟಿ ಲಾವಣ್ಯಾ, ನಟ ಶಶಿ ಹೆಗ್ಡೆ ಜೊತೆ ಮದುವೆ

ದರ್ಶನ್ ಅಭಿನಯದ 'ಮೆಜೆಸ್ಟಿಕ್' ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಭಾ.ಮಾ.ಹರೀಶ್​ ಚಮಲಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದು, ಹಿರಿಯ ನಟಿ ಜಯಮಾಲಾ, ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಸುಂದರ್ ರಾಜ್, ಪ್ರಮಿಳಾ ಜೋಷಾಯ್ ಸೇರಿದಂತೆ ಹಲವು ಮಂದಿ ಚಿತ್ರರಂಗದ ಗಣ್ಯರು ಹರೀಶ್​ ಅವರಿಗೆ ಬೆಂಬಲ ನೀಡಿದ್ದರು.

ಹೊಸಬರಿಗೆ ಅವಕಾಶ 

ಕಳೆದ ಮೂರು ವರ್ಷದಿಂದ ಸಾ.ರಾ.ಗೋವಿಂದು ಅಧ್ಯಕ್ಷರಾಗಿದ್ದರು, ಹಾಗಾಗಿ ಈ ಬಾರೀ ಹೊಸಬರಿಗೆ ಅವಕಾಶ ನೀಡಬೇಕು ಎಂಬ ಕೂಗು ಬಹಳ ದಿನಗಳಿಂದ ಕೇಳಿ ಬಂದಿತ್ತು. ಅಲ್ಲದೇ, ಕೆಲ ದಿನಗಳಿಂದ ವಾಣಿಜ್ಯ ಮಂಡಳಿಯಲ್ಲಿ ಅವ್ಯವಹಾರಗಳು ನಡೆದಿದೆ ಎಂಬ ಗುಸು ಗುಸು ಸಹ ಕೇಳಿ ಬಂದಿದ್ದು, ಈ ಕಾರಣದಿಂದ ಸಾರ.ರಾ.ಗೋವಿಂದು ಸೋಲನ್ನು ಅನುಭವಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕಿಯಾರಾ ಅಡ್ವಾಣಿ ಸೂಪರ್ ಲುಕ್ - ಬೇಸಿಗೆಯಲ್ಲಿ ನೀವೂ ಈ ಸ್ಟೈಲ್​ ಟ್ರೈ ಮಾಡಿ

ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಮತದಾನ ನಡೆದಿದ್ದು, ನಟಿ ಲೀಲಾವತಿ, ರಾಘವೇಂದ್ರ ರಾಜ್​ಕುಮಾರ್, ಸೃಜನ್ ಲೋಕೇಶ್​, ದಿನಕರ್ ತೂಗುದೀಪ್, ನಟಿ ಜಯಮಾಲಾ, ವಿಜಯ್ ರಾಘವೇಂದ್ರ ಸೇರಿದಂತೆ ಸ್ಯಾಂಡಲ್​ವುಡ್​ನ ಗಣ್ಯಾತಿ ಗಣ್ಯರು ಬಂದು ಮತ ಚಲಾಯಿಸಿದ್ದರು.
Published by:Sandhya M
First published: