National Film Award: 68ನೇ ರಾಷ್ಟ್ರೀಯ ಪ್ರಶಸ್ತಿ ವಿಜೇತರಿಗೆ ಫಿಲ್ಮ್ ಚೇಂಬರ್​​ನಿಂದ ಸನ್ಮಾನ

Karnataka Film Chamber: 68ನೇ ರಾಷ್ಟ್ರಪ್ರಶಸ್ತಿ ವಿಜೇತರಿಗೆ  ಫಿಲ್ಮ್ ಚೆಂಬರ್ ನಿಂದ ಸನ್ಮಾನ ಮಾಡಲಾಗಿದ್ದು, ಡೊಳ್ಳು, ತಲೆದಂಡ, ನಾದದ ನವನೀತ ಚಿತ್ರತಂಡಕ್ಕೆ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಭಾ.ಮಾ.ಹರೀಶ್ ಅವರ ನೇತೃತ್ವದಲ್ಲಿ ಸನ್ಮಾನ ಮಾಡಲಾಗಿದೆ.

ಸನ್ಮಾನ ಕಾರ್ಯಕ್ರಮ

ಸನ್ಮಾನ ಕಾರ್ಯಕ್ರಮ

  • Share this:
ಇತ್ತೀಚೆಗಷ್ಟೇ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ (National Film Award) ಕನ್ನಡದ ವಿಭಿನ್ನ ಕಥಾ ಹಂದರವನ್ನು ಹೊಂದಿರುವ 'ಡೊಳ್ಳು' (Dollu) ಚಿತ್ರಕ್ಕೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಸಿನಿಮಾ ಹಾಗೂ ಸಿಂಕ್ ಸೌಂಡ್ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಲಭಿಸಿತ್ತು, ಅಲ್ಲದೇ ದಿವಂಗತ ನಟ ಸಂಚಾರಿ ವಿಜಯ್ (Sanchari Vijay) ಅಭಿನಯದ  'ತಲೆದಂಡ' ಚಿತ್ರಕ್ಕೆಇನ್ನು ಪರಿಸರ ಕಾಳಜಿಯ ಕಥಾವಸ್ತುವುಳ್ಳ ರಾಷ್ಟ್ರ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಇದು ಕನ್ನಡಿಗರಿಗೆ ನಿಜಕ್ಕೂ ಹೆಮ್ಮೆಯ ವಿಚಾರ.

ಫಿಲ್ಮ್ ಚೆಂಬರ್ ನಿಂದ ಸನ್ಮಾನ

ಇನ್ನು  68ನೇ ರಾಷ್ಟ್ರಪ್ರಶಸ್ತಿ ವಿಜೇತರಿಗೆ  ಫಿಲ್ಮ್ ಚೆಂಬರ್ ನಿಂದ ಸನ್ಮಾನ ಮಾಡಲಾಗಿದ್ದು, ಡೊಳ್ಳು, ತಲೆದಂಡ, ನಾದದ ನವನೀತ ಚಿತ್ರತಂಡಕ್ಕೆ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಭಾ.ಮಾ.ಹರೀಶ್ ಅವರ ನೇತೃತ್ವದಲ್ಲಿ ಸನ್ಮಾನ ಮಾಡಲಾಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ ತಲೆದಂಡ ನಿರ್ಮಾಪಕ  ಡೊಳ್ಳು ನಿರ್ದೆಶಕ  ಸಾಗರ್ ಪುರಾಣಿಕ್, ನಿರ್ಮಾಪಕರಾದ ಪವನ್ ಒಡೆಯರ್ ಹಾಗು ಅಪೇಕ್ಷಾ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ರಿಲೀಸ್ ಆಯ್ತು ಅಪ್ಪು ನಟಿಸಿರುವ ಲಕ್ಕಿಮ್ಯಾನ್​ ಸಿನಿಮಾದ ಟೀಸರ್​, ಮತ್ತೆ ತೆರೆಯ ಮೇಲೆ ದೇವರ ದರ್ಶನ!

10 ಜನರ ಜೂರಿ ತಂಡ ಅಂತಿಮವಾಗಿ ಪ್ರಕಟಿಸಿದ ಪಟ್ಟಿಯಲ್ಲಿ ಕನ್ನಡದ ‘ಡೊಳ್ಳು‘ ಸಿನಿಮಾ ಕನ್ನಡದ ಅತ್ಯುತ್ತಮ ಚಿತ್ರ ಎಂಬ ರಾಷ್ಟ್ರ ಪ್ರಶಸ್ತಿ ದೊರಕಿದೆ. ಸಾಗರ್ ಪುರಾಣಿಕ್ ನಿರ್ದೇಶನದ ಈ ಚಿತ್ರ ಒಟ್ಟು 3 ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಕನ್ನಡದ ಅತ್ಯುತ್ತಮ ಸಿನಿಮಾ ಹಾಗೂ ಉತ್ತಮ ಆಡಿಯೋ ಪ್ರಶಸ್ತಿಗೆ ಭಾಜನವಾಗಿದೆ.  ಇದಲ್ಲದೇ ನಟ ಸಂಚಾರಿ ವಿಜಯ್ ಅಭಿನಯದ ‘ತಲೆದಂಡ‘ ಚಿತ್ರಕ್ಕೂ ಪ್ರಶಸ್ತಿ ದೊರಕಿದ್ದು, ಈ ಚಿತ್ರಕ್ಕೆ ಉತ್ತಮ ಪರಿಸರ ಕಾಳಜಿ ಸಿನಿಮಾ ಎಂಬ ಪ್ರಶಸ್ತಿಯನ್ನು ನೀಡಿದೆ.

ಗಿರೀಶ್ ಕಾಸರವಳ್ಳಿ ನಿರ್ದೇಶನದ ನಾದದ ನವನೀತ ಕಿರುಚಿತ್ರಕ್ಕೂ ರಾಷ್ಟ್ರ ಪ್ರಶಸ್ತಿ ದೊರಕುವ ಮೂಲಕ ಸ್ಯಾಂಡಲ್​ವುಡ್ ಈ ವರ್ಷ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಇನ್ನು ತುಳು ಭಾಷೆಯ 'ಜೀಟಿಗೆ' ಸಿನಿಮಾ ಕೂಡ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ.  ಇಂದಿನ ಸನ್ಮಾನ ಕಾರ್ಯಕ್ರಮದಲ್ಲಿ ತಲೆದಂಡ ಚಿತ್ರದ ನಿರ್ಮಾಪಕಿ ಡಾ. ಹೇಮಾಮಾಲಿನಿ ಕೃಪಾಕರ್ ಅವರನ್ನು ಸಹ ಸನ್ಮಾನಿಸಲಾಗಿದೆ.

ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ವಿಕ್ಕಿ- ಕತ್ರಿನಾಗೆ ಜೀವ ಬೆದರಿಕೆ, ತನಿಖೆ ಆರಂಭಿಸಿದ ಪೊಲೀಸರು

ಕನ್ನಡದ ಮೂರು ಸಿನಿಮಾಗೆ ಪ್ರಶಸ್ತಿ

ಇನ್ನು ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಭಾ. ಮಾ ಹರೀಶ್, ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಚಿನ್ನೇಗೌಡರು ಸೇರಿದಂತೆ ಪದಾಧಿಕಾರಿಗಳು ಭಾಗಿಯಾಗಿದ್ದರು.  ಇನ್ನು, 68ನೇ ರಾಷ್ಟ್ರ ಪ್ರಶಸ್ತಿ ಪಟ್ಟಿಯಲ್ಲಿ  ತಮಿಳಿನ ‘ಸೂರರೈ ಪೋಟ್ರು’ ಚಿತ್ರದ ನಟನೆಗಾಗಿ ತಮಿಳು ನಟ ಸೂರ್ಯ ಅವರಿಗೆಹಾಗೂ ‘ತಾನ್ಹಾಜಿ: ದಿ ಅನ್‌ಸಂಗ್ ವಾರಿಯರ್’ ಚಿತ್ರದ ನಟನೆಗಾಗಿ ಬಾಲಿವುಡ್ ನಟ ಅಜಯ್‌ ದೇವ್​ಗನ್ ಅವರಿಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ದೊರಕಿದೆ.
Published by:Sandhya M
First published: