ಅಧ್ಯಕ್ಷಗಾದಿ ಮೇಲೆ ಖ್ಯಾತನಾಮರ ಕಣ್ಣು: ಡಿಸೆಂಬರ್​ನಲ್ಲಿ ಫಿಲ್ಮ್ ಚೇಂಬರ್ ಎಲೆಕ್ಷನ್?

ಕೊರೋನಾ ಹಿನ್ನೆಲೆ ಜೂನ್ ನಲ್ಲಿ ನಡೆಯ ಬೇಕಿದ್ದ ಚುನಾವಣೆಯನ್ನ  ಸರ್ಕಾರ ಮುಂದೂಡಿತ್ತು. ಮುಂದಿನ ಆದೇಶದವರೆಗೆ ಈಗಿನ ಅದ್ಯಕ್ಷರೇ ಮುಂದುವರೆಯೋ ಬಗ್ಗೆ ಆದೇಶ ಇತ್ತು.

KFCC

KFCC

  • Share this:
ಕೊರೋನಾ ಕಾರಣದಿಂದ ಸಿನಿಮಾ ರಂಗವೇ ತತ್ತರಿಸಿ ಹೋಗಿತ್ತು. ತಿಂಗಳಾನುಗಟ್ಟಲೇ ಶೂಟಿಂಗ್ ಇರಲಿಲ್ಲ. ಹೊಸ ಚಿತ್ರಗಳ ಮುಹೂರ್ತ ಆಗಲಿಲ್ಲ. ಆಡಿಯೋ ರಿಲೀಸ್, ಅಥವಾ ಇನ್ಯಾವುದೇ ಸಭೆ ಸಮಾರಂಭಗಳು ನಡೆಯಲಿಲ್ಲ. ಇನ್ನು ಸಿನಿಮಾ ರಿಲೀಸ್ ಬಗ್ಗೆ ಅಂತೂ ಮಾತನಾಡುವ ಹಾಗೆಯೇ ಇಲ್ಲ. 7 ತಿಂಗಳುಗಳ ಕಾಲ ಸರ್ಕಾರವೇ ಥಿಯೇಟರ್ ಗಳನ್ನ ಬಂದ್ ಮಾಡಿಸಿತ್ತು.  ಆದರೀಗ ಸರ್ಕಾರ ಥಿಯೇಟರ್ ರಿ-ಓಪನ್ ಮಾಡೋಕೆ ಅನುಮತಿ ಕೊಟ್ಟಿದ್ರೂ ಕೂಡ ಹೊಸ ಚಿತ್ರಗಳ ರಿಲೀಸ್​ಗೆ ನಿರ್ಮಾಪಕರು ರೆಡಿ ಇಲ್ಲ.

ಹೀಗಿರುವಾಗ ಚುನಾವಣೆ ಎಲ್ಲಿಂದ ಬಂತು? ಅದಕ್ಕಾಗಿಯೇ ಅವಧಿ ಮುಗಿದು 4 ತಿಂಗಳಾದ್ರೂ ಸಹ ಫಿಲಂ ಚೇಂಬರ್ ಅಧ್ಯಕ್ಷರಾಗಿ ಜೈ ರಾಜ್ ಮುಂದುವರೆದಿದ್ದಾರೆ. ಇನ್ನು ಒಂದು ತಿಂಗಳು ಕಾಲ ಅವರೇ ಅಧಿಕಾರ ನಡೆಸೋ ಸಾಧ್ಯತೆ ಇದೆ. ವರ್ಷದ ಅಂತ್ಯದಲ್ಲಿ ಚುನಾವಣೆ ನಡೆಯೋ ಎಲ್ಲಾ ಲಕ್ಷಣಗಳು ಈಗಿನಿಂದಲೇ ಗೋಚರಿಸುತ್ತಿದ್ದು, ಅದಕ್ಕಾಗಿ ತಯಾರಿ‌ ಕೂಡ ನಡೆದಿದೆ. ತೆರೆಮರೆಯಲ್ಲಿ ಅಧ್ಯಕ್ಷ ಗಾದಿಗೆ ಪೈಪೋಟಿ ಸಹ ಶುರುವಾಗಿದೆ.

ಸಾ.ರಾ ಗೋವಿಂದ್


ಅಂದಹಾಗೆ ಈಗಾಗಲೇ ಫಿಲಂ ಚೇಂಬರ್ ಅದ್ಯಕ್ಷರಾಗಿರೋ ಅನುಭವ ಉಳ್ಳ ಸಾ.ರಾ ಗೋವಿಂದ್ ಮತ್ತೊಮ್ಮೆ ಅದ್ಯಕ್ಷ ಗಾದಿ ಹಿಡಿಯೋ ಉತ್ಸಾಹದಲ್ಲಿದ್ದಾರೆ. ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಹಾಗೆ ನಿರ್ಮಾಪಕ ಬಾಮಾ ಹರೀಶ್ ಸಹ ಫಿಲಂ ಚೇಂಬರ್ ಸಾರಥ್ಯಕ್ಕಾಗಿ ಮುಂಚೂಣಿಯಲ್ಲಿದ್ದಾರೆ. ಅವರು ಸಹ ಚುನಾವಣೆಗಾಗಿತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಬಾಮಾ ಹರೀಶ್


ಇವರಿಬ್ಬರ ನಡುವೆ ಎನ್.ಎಂ ಸುರೇಶ್ ಸಹ ಈ ಬಾರಿ ನಾನೂ ಒಂದು ಕೈ ನೋಡೇ ಬಿಡುವ ಎಂಬ ಆಲೋಚನೆಯಲ್ಲಿದ್ದಾರೆ ಎಂಬ ಮಾತು ಫಿಲಂ ಚೇಂಬರ್ ಪಡಸಾಲೆಯಲ್ಲಿ ಕೇಳಿಬರುತ್ತಿವೆ. ಸದ್ಯಕ್ಕೆ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡ್ತಿರೋ ಎನ್.ಎಂ ಸುರೇಶ್ ಎಕ್ಸ್ ಕ್ಯೂಸ್ ಮಿ, ಚಪ್ಪಾಳೆ, ಸೆವೆನ್ ಓ ಕ್ಲಾಕ್ ನಂತಹ ಸದಭಿರುಚಿಯ ಚಿತ್ರಗಳನ್ನ ನಿರ್ಮಿಸಿದ್ದಾರೆ.

ಎನ್.ಎಂ ಸುರೇಶ್


ಕೊರೋನಾ ಹಿನ್ನೆಲೆ ಜೂನ್ ನಲ್ಲಿ ನಡೆಯ ಬೇಕಿದ್ದ ಚುನಾವಣೆಯನ್ನ  ಸರ್ಕಾರ ಮುಂದೂಡಿತ್ತು. ಮುಂದಿನ ಆದೇಶದವರೆಗೆ ಈಗಿನ ಅದ್ಯಕ್ಷರೇ ಮುಂದುವರೆಯೋ ಬಗ್ಗೆ ಆದೇಶ ಇತ್ತು. ಈಗ ಡಿಸೆಂಬರ್ ನಲ್ಲಿ ಫಿಲಂ ಚೇಂಬರ್ ಚುನಾವಣೆಗೆ ಸರ್ಕಾರದಿಂದ ಅನುಮತಿ ಸಿಗಬಹುದು ಎಂಬ ನಿರೀಕ್ಷೆಯೊಂದಿಗೆ ಅದ್ಯಕ್ಷಗಾದಿಗಾಗಿ ಪೈಪೋಟಿ ಶುರುವಾಗಿದೆ.

ಇದನ್ನೂ ಓದಿ: IPL 2020: ಆತನ ಭವಿಷ್ಯವಾಣಿ ಸುಳ್ಳಾಗಿರಬಹುದು, ಆದರೆ ಡೆಲ್ಲಿ ಬಗ್ಗೆ ಆತ ಹೇಳಿದ ಭವಿಷ್ಯ ನಿಜವಾಗಿದೆ..!
Published by:zahir
First published: