Karnataka Budget 2022: ಬಜೆಟ್​ನಲ್ಲಿ ಅಪ್ಪು, ಸಂಚಾರಿ ವಿಜಯ್​ ಹೆಸರು ಪ್ರಸ್ತಾಪ, ಈ ಬಾರಿ ಚಿತ್ರರಂಗಕ್ಕೆ ಸಿಕ್ಕಿದೇನು?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಅವರ ಚೊಚ್ಚಲ ಬಜೆಟ್ ನಲ್ಲಿ ಪುನೀತ್ ರಾಜ್ ಕುಮಾರ್(Puneeth Rajkumar) ಮತ್ತು ಸಂಚಾರಿ ವಿಜಯ್(Sanchari Vijay) ಅವರನ್ನು ನೆನಪಿಸಿಕೊಳ್ಳಲಾಗಿದೆ.

ಪುನೀತ್​ ರಾಜ್​ಕುಮಾರ್​, ಸಂಚಾರಿ ವಿಜಯ್​

ಪುನೀತ್​ ರಾಜ್​ಕುಮಾರ್​, ಸಂಚಾರಿ ವಿಜಯ್​

  • Share this:
ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಬಹು ನಿರೀಕ್ಷಿತ ರಾಜ್ಯ ಬಜೆಟ್ ಮಂಡಿಸಿದ್ದಾರೆ. 2022-23 ನೇ ಸಾಲಿನ ಕರ್ನಾಟಕ ಬಜೆಟ್ (Karnataka Budget 2022) ಗಾತ್ರ 2,65,720 ಕೋಟಿ ರೂಪಾಯಿ ಆಗಿದೆ. ಈ ಬಾರಿಯ ಬಜೆಟ್​ನಲ್ಲಿ ಅನೇಕ ಜನಪ್ರಿಯ ಯೋಜನೆಗಳನ್ನು ಸೇರಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಅವರ ಚೊಚ್ಚಲ ಬಜೆಟ್ ನಲ್ಲಿ ಪುನೀತ್ ರಾಜ್ ಕುಮಾರ್(Puneeth Rajkumar) ಮತ್ತು ಸಂಚಾರಿ ವಿಜಯ್(Sanchari Vijay) ಅವರನ್ನು ನೆನಪಿಸಿಕೊಳ್ಳಲಾಗಿದೆ. ಈ ಇಬ್ಬರು ಕಲಾವಿದರು ನಿಧನರಾದಾಗ ಸಾರ್ಥಕ ಕೆಲಸಗಳನ್ನು ಮಾಡಿದ್ದಾರೆ. ಹಾಗಾಗಿ ಇವರ ಆ ಸೇವೆಯನ್ನು ಪರಿಗಣಿಸಿ, ಸಾರ್ವಜನಿಕರಿಗೆ ಪ್ರೇರೇಪಿಸುವಂತಹ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಈ ಬಗ್ಗೆ ಬಸವರಾಜ್​ ಬೊಮ್ಮಾಯಿ ಬಜೆಟ್​ನಲ್ಲಿ ತಿಳಿಸಿದ್ದಾರೆ. 

ಅಂಗಾಂಗ ಮರುಪಡೆಯುವಿಕೆ ಕೇಂದ್ರ ಪ್ರಾರಂಭ!

ಪವರ್​ ಸ್ಟಾರ್​ ​ ಪುನೀತ್ ರಾಜ್ ಕುಮಾರ್ ನಿಧನರಾದಾಗ ಅವರ ಕಣ್ಣುಗಳನ್ನು ದಾನ ಮಾಡಲಾಯಿತು. ನಟ ಸಂಚಾರಿ ವಿಜಯ್ ನಿಧನರಾದಾಗ ಅವರ ಅಂಗಾಂಗ ದಾನ ಮಾಡಿದ್ದರು. ಹೀಗಾಗಿ ಮರಣಾನಂತರ ಅಂಗಾಂಗಗಳನ್ನು ದಾನ ಮಾಡುವಂತೆ ಸಾರ್ವಜನಿಕರನ್ನು ಪ್ರೇರೇಪಿಸಲು, ಈಗಾಗಲೇ ಬೆಂಗಳೂರಿನಲ್ಲಿರುವ  Institute of Gastroenterology and Organ Transplant ಸಂಸ್ಥೆಯನ್ನು ಲೋಕಾರ್ಪಣೆ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ ನಿಮ್ಹಾನ್ಸ್ ಮೂಲಕ ಅಂಗಾಂಗ ಮರುಪಡೆಯುವಿಕೆ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಬಜೆಟ್​ನಲ್ಲಿ ಹೇಳಲಾಗಿದೆ.

ಈ ಬಜೆಟ್​ನಲ್ಲಿ ಚಿತ್ರರಂಗಕ್ಕೆ ಸಿಕ್ಕಿಲ್ಲ ಪ್ರಾಮುಖ್ಯತೆ

ಕೊರೋನಾದಿಂದ ತತ್ತರಿಸಿದ್ದ ಚಿತ್ರರಂಗ ಸಾಕಷ್ಟು ನಿರೀಕ್ಷೆಗಳನ್ನು ಬಜೆಟ್ ಮೇಲಿರಿಸಿತ್ತು. ಬಸವರಾಜ ಬೊಮ್ಮಾಯಿ ಅವರು ಚಿತ್ರರಂಗದ ಬಗ್ಗೆ ಪ್ರೀತಿ, ಗೌರವ ಹೊಂದಿರುವುದು ಚಿತ್ರರಂಗದ ನಿರೀಕ್ಷೆ ಹೆಚ್ಚಾಗಲು ಪ್ರಮುಖ ಕಾರಣವಾಗಿತ್ತು. ಆದರೆ ಈ ಬಾರಿಯೂ ನಿರೀಕ್ಷೆ ಹುಸಿಯಾಗಿದೆ. ಚಿತ್ರರಂಗದವರು ನಿರೀಕ್ಷೆ ಮಾಡಿದ ಯಾವುದ ಸೌಲಭ್ಯಗಳು ಸಿಕ್ಕಿಲ್ಲ. ಫಿಲಂ ಸಿಟಿ ನಿರ್ಮಾಣ, ಸಿನಿಮಾ ಕಾರ್ಮಿಕರಿಗೆ ಪ್ಯಾಕೇಜ್ ಘೋಷಣೆ, ಹೋಬಳಿ ಮಟ್ಟದಲ್ಲಿ ಮಿನಿ ಚಿತ್ರಮಂದಿರ ನಿರ್ಮಾಣ ಇನ್ನೂ ಹಲವಾರು ಬೇಡಿಕೆಗಳು ಇದ್ದವು, ಆದರೆ ಬಜೆಟ್‌ನಲ್ಲಿ ಇದ್ಯಾವುದಕ್ಕೂ ಪ್ರಾಮುಖ್ಯತೆ ಸಿಕ್ಕಿಲ್ಲ.

ಇದನ್ನೂ ಓದಿ : ಬೊಮ್ಮಾಯಿ ಬಜೆಟ್​ನಲ್ಲಿ ತವರು ಜಿಲ್ಲೆ ಹಾವೇರಿಗೆ ಬಂಪರ್ ಕೊಡುಗೆ

ಇಡೀ ಬಜೆಟ್​ನಲ್ಲಿ ಚಿತ್ರರಂಗಕ್ಕೆ ಒಂದೇ ಘೋಷಣೆ!

ಕೊರೋ ನಾದಿಂದಾಗಿ ಕನ್ನಡ ಚಿತ್ರರಂಗ ಹಾಗೂ ಸಿನಿಮಾ ನಿರ್ಮಾಪಕರಿಗೆ ದೊಡ್ಡ ನಷ್ಟವಾಗಿದೆ. ಈ ಕಾರಣಕ್ಕೆ 125 ಸಿನಿಮಾಗಳಿಗೆ ಸಬ್ಸಿಡಿ ಕೊಡ್ತಾ ಇದ್ದೀರಾ. ಈಗ 50 ಸಿನಿಮಾಗಳನ್ನು ಹೆಚ್ಚಿಸುವ ಮೂಲಕ ಒಟ್ಟು 175 ಸಿನಿಮಾಗಳಿಗೆ ಸಬ್ಸಿಡಿ ಕೊಟ್ಟಾಗ ಕೆಲ ನಿರ್ಮಾಪಕರಿಗೆ ಸಹಾಯ ಆಗುತ್ತಿತ್ತು. ಈ ಬೇಡಿಕೆಯನ್ನು ಚಿತ್ರರಂಗದವರು ಇಟ್ಟಿದ್ದರು. ಇದೀಗ  ಪ್ರತಿ ವರ್ಷ ಸರ್ಕಾರದಿಂದ 120 ಸಿನಿಮಾಗಳಿಗೆ ಸಬ್ಸಿಡಿ ನೀಡಲಾಗುತ್ತಿತ್ತು. ಆ ಸಂಖ್ಯೆಯನ್ನು 200 ಕ್ಕೆ ಹೆಚ್ಚಿಸಲಾಗಿದೆ. ಇ ಒಂದು ಘೋಷಣೆ ಬಿಟ್ಟರೆ ಇನ್ನಾವ ಹೊಸ ಕಾರ್ಯಕ್ರಮ, ಘೋಷಣೆ, ಕೊಡುಗೆಗಳು ಚಿತ್ರರಂಗದ ಪಾಲಿಗಿಲ್ಲ.

ಇದನ್ನೂ ಓದಿ : ಸರ್ಕಾರದ ಕ್ರಮಗಳಿಂದ ಆರ್ಥಿಕ ಚೇತರಿಕೆ; ಬಜೆಟ್ ಬಳಿಕ CM Bommai ಮಾತು

ನೆರವೇರದ ಫಿಲ್ಮ್​ ಸಿಟಿ ನಿರ್ಮಾಣ ಕನಸು!

ಕೊರೋನಾದಿಂದಾಗಿ ಕನ್ನಡ ಚಿತ್ರೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ರಾಜ್ಯ ಸರ್ಕಾರ ಕೆಲ ಬೇಡಿಕೆಗಳನ್ನು ಪೂರೈಸಲು ಆಗಿಲ್ಲ. ಬಹಳ ಮುಖ್ಯವಾಗಿ ಕನ್ನಡ ಚಿತ್ರರಂಗಕ್ಕೆ ಬೇಕಾಗಿರುವ ಚಿತ್ರ ನಗರಿ ಸ್ಥಾಪನೆಗೆ ಮೊದಲು ಆದ್ಯತೆ ಕೊಡಬೇಕು. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಬಜೆಟ್​​ನಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ 500 ಕೋಟಿ ರೂಪಾಯಿ ಅನುದಾನ ಘೋಷಣೆ​​ ಮಾಡಿದ್ದರು. ಆದರೆ ಇಲ್ಲಿವರೆಗೂ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಜಾಗ ಕೊಟ್ಟಿಲ್ಲ. ಮೊದಲು ಇದಕ್ಕೆ ಜಾಗ ನೀಡಿ, ಶಂಕುಸ್ಥಾಪನೆ ಮಾಡಬೇಕು ಎಂದು  ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜಯರಾಜ್  ಹೇಳಿದ್ದರು.
Published by:Vasudeva M
First published: