• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Chetan Chandra: ರಾಜರಾಜೇಶ್ವರಿ ನಗರದಿಂದ ರಾಜಕೀಯ ಅಖಾಡಕ್ಕೆ ಇಳೀತಾರಾ ಚೇತನ್ ಚಂದ್ರ? ಮುನಿರತ್ನ ವಿರುದ್ಧ ಸ್ಪರ್ಧೆಗೆ ನಟ ರೆಡಿ

Chetan Chandra: ರಾಜರಾಜೇಶ್ವರಿ ನಗರದಿಂದ ರಾಜಕೀಯ ಅಖಾಡಕ್ಕೆ ಇಳೀತಾರಾ ಚೇತನ್ ಚಂದ್ರ? ಮುನಿರತ್ನ ವಿರುದ್ಧ ಸ್ಪರ್ಧೆಗೆ ನಟ ರೆಡಿ

ನಟ ಚೇತನ್ ಚಂದ್ರ, ಮುನಿರತ್ನ

ನಟ ಚೇತನ್ ಚಂದ್ರ, ಮುನಿರತ್ನ

ಒಂದು ವೇಳೆ ನನಗೆ ಅವಕಾಶ ಸಿಕ್ಕರೆ ನಾನು ಖಂಡಿತ ಚುನಾವಣೆಗೆ ನಿಲ್ತೀನಿ ಎಂದು ನಟ ಚೇತನ್ ಚಂದ್ರ ಹೇಳಿದ್ದಾರೆ. 

 • News18 Kannada
 • 2-MIN READ
 • Last Updated :
 • Karnataka, India
 • Share this:

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ (Karnataka Assembly Election 2023) ಕಾವು  ಜೋರಾಗಿದೆ. ಮತ ಬೇಟೆಯಾಡಲು ಸ್ಟಾರ್​ ನಟ-ನಟಿಯರನ್ನು (Film Stars) ಅಖಾಡಕ್ಕಿಳಿಸಲು ರಾಜಕೀಯ ಪಕ್ಷಗಳು (Political Party)  ಪ್ಲಾನ್ ಮಾಡಿಕೊಂಡಿದೆ.  ಈಗಾಗಲೇ ನಟ ಕಿಚ್ಚ ಸುದೀಪ್ (Kichcha Sudeep) ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ. ಇದೀಗ ಮತ್ತೊಬ್ಬ ನಟ ರಾಜಕೀಯಕ್ಕೆ ಎಂಟ್ರಿ ಕೊಡುವ ಸುಳಿವು ನೀಡಿದ್ದಾರೆ.  ಯುವನಟ ಚೇತನ್​ ಚಂದ್ರ (Chetan Chandra) ಎಲೆಕ್ಷನ್ ಅಖಾಡಕ್ಕೆ ಧುಮುಕಲು ನಾನು ರೆಡಿ ಎಂದಿದ್ದಾರೆ. 


ಮುನಿರತ್ನ ಭದ್ರಕೋಟೆಗೆ ನಟನ ಎಂಟ್ರಿ!?


ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ಭದ್ರಕೋಟೆ ರಾಜರಾಜೇಶ್ವರಿ ನಗರದಲ್ಲಿ ನಟ ಚೇತನ್ ಚಂದ್ರ ಅಖಾಡಕ್ಕೆ ಇಳೀತಾರೆ ಎನ್ನಲಾಗಿದೆ. ನಿರ್ಮಾಪಕ ಮುನಿರತ್ನ ವಿರುದ್ಧ ಸ್ಪರ್ಧಿಸಲು ನಾನು ರೆಡಿ ಎಂದು ನಟ ಚೇತನ್ ಚಂದ್ರ ಹೇಳಿದ್ದಾರೆ.
ಟಿಕೆಟ್​ ಕೊಟ್ಟರೆ ಚುನಾವಣೆಯಲ್ಲಿ ನಿಲ್ಲೋದು ಪಕ್ಕಾ!


ರಾಜಕೀಯ ನಡೆಯ ಬಗ್ಗೆ ನ್ಯೂಸ್ 18  ಜೊತೆ ಮಾತನಾಡಿದ ಚೇತನ್, ಅರ್ ಅರ್ ನಗರದಿಂದ‌ ಸ್ಪರ್ಧಿಸುವಂತೆ ನನಗೆ ಈಗಾಗಲೇ ಕರೆ ಬಂದಿದೆ. ಈ ಬಗ್ಗೆ ಹೆಚ್ಚು ಮಾತಾಡದಂತೆ ಹೈಕಮಾಂಡ್ ಸೂಚಿಸಿದೆ ಎಂದು ಚೇತನ್ ಚಂದ್ರ ಹೇಳಿದ್ದಾರೆ. ಒಂದು ವೇಳೆ ನನಗೆ ಅವಕಾಶ ಸಿಕ್ಕರೆ ನಾನು ಖಂಡಿತ ಚುನಾವಣೆಗೆ ನಿಲ್ತೀನಿ ಎಂದು ಚೇತನ್ ಚಂದ್ರ ಹೇಳಿದ್ದಾರೆ.


ಯುವಕರು ರಾಜಕೀಯಕ್ಕೆ ಎಂಟ್ರಿ ಕೊಡ್ಬೇಕು 


ಅರ್ ಅರ್ ನಗರದಲ್ಲಿ ವಿಧಾನಸಭೆ ಚುನಾವಣಾ ಕಾವು ಜೋರಾಗಿದೆ. ಮುನಿರತ್ನ ಮತದಾರರ ಮನ ಸೆಳೆಯಲು ರಣತಂತ್ರವನ್ನೇ ರೂಪಿಸಿದ್ದಾರೆ. ಮುನಿರತ್ನ ವಿರುದ್ಧ ಸ್ಪರ್ಧಿಸಲು ಚೇತನ್ ಚಂದ್ರ ಸಿದ್ಧರಾಗಿದ್ದಾರೆ. ಯುವಕರು ರಾಜಕೀಯದ ಬಗ್ಗೆ ತಿಳಿದುಕೊಳ್ಳಬೇಕು ಅವಕಾಶ ಸಿಕ್ಕರೆ ರಾಜಕೀಯಕ್ಕೆ ಬರಬೇಕು ಎಂದು ಕಿವಿಮಾತು ಹೇಳಿದ್ದಾರೆ.
ನಟ ಚೇತನ್​ ಚಂದ್ರಗೆ ಆಫರ್ ಕೊಟ್ಟಿದ್ದು ಯಾರು?  


ಈ ಬಾರಿ ವಿಧಾನಸಭೆ ಎಲೆಕ್ಷನ್​ನಲ್ಲಿ ಚಾನ್ಸ್​ ಸಿಕ್ಕರೆ ಸ್ಪರ್ಧಿಸುವುದಾಗಿ ಹೇಳಿದ ನಟ ಚೇತನ್ ಚಂದ್ರ, ಯಾವ ಪಕ್ಷದಿಂದ ಆಫರ್ ಬಂದಿದೆ ಎನ್ನುವುದನ್ನು ಮಾತ್ರ ಬಾಯ್ಬಿಟ್ಟಿಲ್ಲ. ಹೈಕಮಾಂಡ್​ ಈ ಬಗ್ಗೆ ಹೆಚ್ಚು ಮಾತಾಡದಂತೆ ಸೂಚಿಸಿದೆ ಎಂದು ಕೂಡ ನಟ ಹೇಳಿದ್ದಾರೆ. ನಟ ಚೇತನ್​ ಜೆಡಿಎಸ್​ ಅಥವಾ ಎಎಪಿಯಿಂದ ಮುನಿರತ್ನ ವಿರುದ್ಧ ಸ್ಪರ್ಧೆ ಮಾಡಬಹುದು ಎಂದು ಹೇಳಲಾಗ್ತಿದೆ.


ಸ್ಯಾಂಡಲ್​ವುಡ್ ಯುವನಟ ಚೇತನ್ ಚಂದ್ರ 


ನಟ ಚೇತನ್ ಚಂದ್ರ ಸ್ಯಾಂಡಲ್​ವುಡ್​ನಲ್ಲಿ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದು, ತನ್ನದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.  ಕುಂಭರಾಶಿ, ಶಾರ್ದೂಲ ಹಾಗೂ ಯಶ್ ಅಭಿನಯದ ರಾಜಧಾನಿ ಚಿತ್ರದಲ್ಲಿ ನಟಿಸಿದ್ದರು. ಸದ್ಯ ಚೇತನ್ ಚಂದ್ರ ರಾಜಕೀಯ ಹಿನ್ನೆಲೆಯ ಕಥೆಯುಳ್ಳ ಪ್ರಭುತ್ವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


ಪ್ರಭುತ್ವ ಸಿನಿಮಾದಲ್ಲಿ ನಟ ಬ್ಯುಸಿ


ಕನ್ನಡದ ನಾಯಕ ನಟ ಚೇತನ್ ಚಂದ್ರ ಸ್ಪೆಷಲ್ ಆಗಿಯೇ ಇದ್ದಾರೆ. ಅಳೆದು-ತೂಗಿ ಪಾತ್ರಗಳನ್ನ ಒಪ್ಪುತ್ತಾರೆ. ಏನೋ ಹೊಸದನ್ನ ಮಾಡಬೇಕು ಅನ್ನುವ ಹಂಬಲವನ್ನ ಕೂಡ ಇಟ್ಟುಕೊಂಡಿದ್ದಾರೆ. ಆ ಒಂದು ನಿಟ್ಟಿನಲ್ಲಿಯೇ ರಾಜಕೀಯ ಅಂಶಗಳನ್ನ ಇಟ್ಟುಕೊಂಡಿರೋ ಪ್ರಭುತ್ವ ಅನ್ನುವ ಸಿನಿಮಾ ಕೂಡ ಮಾಡಿದ್ದಾರೆ.
ಇದನ್ನೂ ಓದಿ: Tamannaah Bhatia: ಕೆಜಿಎಫ್ ಚೆಲುವೆಯ ಮದುವೆಗೆ ಮುಹೂರ್ತ ಫಿಕ್ಸ್, ತಮನ್ನಾ ವಯಸ್ಸೆಷ್ಟು?


ಈ ತಿಂಗಳೇ ಪ್ರಭುತ್ವ ಸಿನಿಮಾ ರಿಲೀಸ್​


ಏಪ್ರಿಲ್ ತಿಂಗಳಲ್ಲಿ ಈ ಚಿತ್ರವನ್ನ ರಿಲೀಸ್ ಮಾಡೋ ಪ್ಲಾನ್ ಕೂಡ ಇದೆ. ಇದರ ಬೆನ್ನಲ್ಲಿಯೇ ಚೇತನ್ ಚಂದ್ರ ರಾಜಕೀಯ ಎಂಟ್ರಿಯ ಸುದ್ದಿ ಬಲವಾಗಿಯೇ ಕೇಳಿ ಬರುತ್ತಿದೆ. ರಾಜರಾಜೇಶ್ವರಿ ನಗರದಿಂದಲೇ ಚೇತನ್ ಎಲೆಕ್ಷನ್ ನಿಲ್ತಾರೆ  ಎನ್ನಲಾಗ್ತಿದೆ.

First published: