ಸ್ಯಾಂಡಲ್‌ವುಡ್ ರಂಗದಲ್ಲಿ ಅನೇಕ ಕಲಾವಿದರು ರಾಜಕೀಯ ನಂಟು ಬೆಳೆಸಿಕೊಂಡಿದ್ದಾರೆ. ಆದರೆ ಇದು ರಾಜಕೀಯ ಎಂಟ್ರಿಗೆ ದಾರಿ (Kannada Star Election Campaign) ಮಾಡಿಕೊಳ್ಳುವ ಐಡಿಯಾ ಏನೂ ಅಲ್ಲ ಅನಿಸುತ್ತದೆ. ಸಿನಿಮಾದವರೂ ಮತ್ತು ರಾಜಕಾರಣಿಗಳ ನಡುವೆ ಒಳ್ಳೆ ಸ್ನೇಹ ಇದ್ದೇ ಇರುತ್ತದೆ. ಇದು ಎಲ್ಲ ಕಾಲಕ್ಕೂ ಇದೆ. ರಾಜಕುಮಾರ್ ಕಾಲದಿಂದಲೂ ಸಿನಿಮಾದವರೊಟ್ಟಿಗೆ ರಾಜಕೀಯ ಗಣ್ಯರು ಒಳ್ಳೆ ಸ್ನೇಹ ಸಂಬಂಧ (Kannada Film Stars Campaign) ಇಟ್ಟುಕೊಳ್ಳುತ್ತಲೇ ಬಂದಿದ್ದಾರೆ. ಆದರೆ ಚುನಾವಣೆ ಅಂತ ಬಂದ್ರೆ ಆ ಸ್ನೇಹ ಈಗ ಪ್ರಚಾರದ ಟ್ರಪ್ ಕಾರ್ಡ್ ರೀತಿಯಲ್ಲೂ ಬದಲಾಗುತ್ತಿದೆ. ಹಾಗಂತ ಸ್ಟಾರ್ ನಟರು ಎಲೆಕ್ಷನ್ ಪ್ರಚಾರಕ್ಕೆ ಫ್ರೀ ಆಗಿಯೇ ಹೋಗ್ತಾರಾ? ಇಲ್ಲವೇ ದುಡ್ಡು ಏನಾದ್ರೂ ಪಡೀತಾರಾ?
ಸರೀ ದುಡ್ಡು (Sandalwood Star in Campaign) ಪಡೆದ್ರೆ ಎಷ್ಟು ಪಡೆಯಬಹುದು? ಈ ಎಲ್ಲ ಕುತೂಹಲ ಇದ್ದೇ ಇದೆ. ಆದರೆ ಇದಕ್ಕೆ ಲೆಕ್ಕ ಸಿಗೋದಿಲ್ಲ. ಆದರೂ ಒಂದಷ್ಟು (Star Campaign Story) ಕುತೂಹಲದ ವಿಷಯಗಳು ಇಲ್ಲಿವೆ ಓದಿ.
ಕನ್ನಡ ಚಿತ್ರರಂಗದ ಕಲಾವಿದರನ್ನ ಜನ ಬೆಳ್ಳಿ ತೆರೆ ಮೇಲೆ ನೋಡೊಕೆ ಇಷ್ಟ ಪಡ್ತಾರೆ. ನೇರವಾಗಿ ಸಿಕ್ಕರೂ ಅವರಿಗೆ ಹಬ್ಬವೇ ಬಿಡಿ. ಆದರೆ ಯಾವುದೇ ಕಲಾವಿದನನ್ನ ಜನ ರಾಜಕೀಯ ಪ್ರಚಾರದಲ್ಲಿ ನೋಡೋಕೆ ಅಷ್ಟೇನೂ ಇಷ್ಟಪಡೋದಿಲ್ಲ.
ಸ್ಟಾರ್ ನಟರು ಎಲೆಕ್ಷನ್ ಕ್ಯಾಂಪೇನ್‌ಗೆ ಯಾಕ್ ಬರ್ತಾರೆ?
ಹಾಗಿರೋವಾಗಲೂ ಸಿನಿಮಾ ಮಂದಿ ಎಲೆಕ್ಷನ್ ಬಂದ್ರೆ ಮುಗೀತು, ಬೃಹತ್ ವಾಹನ ಏರಿ ಪ್ರಚಾರಕ್ಕೆ ನಿಂತು ಬಿಡುತ್ತಾರೆ. ಆಯಾ ಪಕ್ಷದ ರಾಜಕೀಯ ಆತ್ಮೀಯರ ಜೊತೆಗೆ ಎಲೆಕ್ಷನ್ ಕ್ಯಾಂಪೇನ್ ಮಾಡುತ್ತಾರೆ. ಸ್ಟಾರ್ ನಟರ ಪ್ರಚಾರದ ತಾಕತ್ತೇನೂ ಅನ್ನೋದು ರಾಜಕೀಯ ಮಂದಿಗೆ ಗೊತ್ತಿದೆ.
ಈ ಹಿನ್ನೆಲೆಯಲ್ಲಿ ಸ್ಟಾರ್ ನಟರನ್ನ ಪ್ರಚಾರಕ್ಕೆ ಕರೆದು ತರುತ್ತಾರೆ. ಹಾಗೆ ಬರೋ ಈ ಕಲಾವಿದರು ಸುಮ್ನೆ ಬರ್ತಾರಾ? ಇಲ್ಲ ದುಡ್ಡು-ಕಾಸು ಅಂತ ಏನಾದ್ರೂ ಪಡೀತಾರಾ? ಈ ಒಂದು ಪ್ರಶ್ನೆಗೆ ಉತ್ತರ ಕೊಡೊದು ಕಷ್ಟವೇ ಸರಿ. ಯಾಕೆಂದ್ರೆ, ಒಬ್ಬರದು ಒಂದೊಂದು ಥಿಯೇರಿ ಇರುತ್ತದೆ. ಅದರ ಆಧಾರದ ಮೇಲೆ ಇಲ್ಲಿ ಸ್ಟಾರ್ ನಟರು ಪ್ರಚಾರಕ್ಕೆ ಬಂದಿರುತ್ತಾರೆ.
ಬೊಮ್ಮಾಯಿ ಮಾಮನಿಗಾಗಿಯೇ ಪ್ರಚಾರಕ್ಕಿಳಿದ ಕಿಚ್ಚ ಸುದೀಪ್!
ಕಿಚ್ಚ ಸುದೀಪ್ ಅವರನ್ನೇ ತೆಗೆದುಕೊಂಡ್ರೆ, ಸಿ.ಎಂ. ಬೊಮ್ಮಾಯಿ ಮಾಮನಿಗಾಗಿಯೇ ಕಿಚ್ಚ ಪ್ರಚಾರಕ್ಕೆ ಬಂದಿದ್ದಾರೆ. ಬೊಮ್ಮಾಯಿ ಅವರು ಯಾರ ಪರ ಪ್ರಚಾರ ಮಾಡಿ ಅಂತಾರೋ ಆ ಅಭ್ಯರ್ಥಿಯ ಪರವಾಗಿಯೇ ಸುದೀಪ್ ಆಯಾ ಊರಿಗೆ ಪ್ರಚಾರಕ್ಕೆ ಹೋಗುತ್ತಿದ್ದಾರೆ.
ಹಾಗಂತ ಎಲ್ಲರೂ ಈ ರೀತಿ ಹೋಗೋಕೆ ಆಗುತ್ತದೆಯೇ? ಎಲ್ಲರನ್ನೂ ಸಿ.ಎಂ. ಬೊಮ್ಮಾಯಿ ಪ್ರಚಾರಕ್ಕೆ ಕರೆಯುತ್ತಾರೆಯೇ? ಇದನ್ನ ಹೇಳೋದು ನಿಜಕ್ಕೂ ಕಷ್ಟವೇ ಬಿಡಿ. ರಾಜಕೀಯ ವ್ಯಕ್ತಿಗಳೂ ಸ್ಟಾರ್ ವ್ಯಾಲ್ಯೂ ಅನ್ನ ನೋಡ್ತಾರೆ ಅನ್ನೋದು ಅಷ್ಟೇ ಸತ್ಯವಾದ ಮಾತಾಗಿದೆ.
ಸ್ಟಾರ್ ನಟರಿಗೆ ರಾಜಕೀಯ ವ್ಯಕ್ತಿಗಳು ಮಹತ್ವ ಕೊಡೋದೇಕೆ?
ಸ್ಟಾರ್ ನಟರ ಕ್ರೇಜ್ ನೋಡಿಯೇ ಅಂತಹ ಕಲಾವಿದರಿಗೆ ರಾಜಕೀಯ ವ್ಯಕ್ತಿಗಳು ಮಹತ್ವ ಕೊಟ್ಟಿರುತ್ತಾರೆ. ಅವರನ್ನೆ ಅಪ್ರೋಚ್ ಮಾಡುತ್ತಾರೆ. ಅದು ಬಿಟ್ರೆ ಯಾವ ಕಲಾವಿದರೂ ನಮ್ಮನ್ನ ಪ್ರಚಾರಕ್ಕೆ ಕರೆಯಿರಿ ಅಂತ ಹೇಳೋದಿಲ್ಲ. ಯಾರಿಗೂ ಕೇಳೋದಿಲ್ಲ ಅಂತಲೂ ಹೇಳಬಹುದು.
ರಾಜಕೀಯ ವ್ಯಕ್ತಿಗಳೇ ತಮ್ಮ ಅನುಕೂಲಕ್ಕೆ ಬೇಕಾಗೊ ಸ್ಟಾರ್ ನಟರನ್ನ ಪ್ರಚಾರಕ್ಕೆ ಆಹ್ವಾನಿಸುತ್ತಾರೆ. ಆಗ ಕೆಲವರು ಪ್ರಚಾರಕ್ಕೆ ಹೋಗ್ತಾರೆ. ಇನ್ನೂ ಕೆಲವರು ಪ್ರಚಾರದಿಂದ ದೂರವೇ ಉಳಿದು ಬಿಡುತ್ತಾರೆ. ಹಾಗೆ ಪ್ರಚಾರಕ್ಕೆ ಹೋದವರಲ್ಲಿ ಸ್ನೇಹಕ್ಕೂ ಕಟ್ಟು ಬಿದ್ದು ಪ್ರಚಾರ ಮಾಡುತ್ತಾರೆ. ಇನ್ನು ಕೆಲವು ಕಲಾವಿದರು ದುಡ್ಡು ಪಡೆಯುತ್ತಾರೆ ಅನ್ನುವ ಮಾತು ಇದೆ.
ಸ್ಟಾರ್ ನಟರು ಎಲೆಕ್ಷನ್ ಪ್ರಚಾರಕ್ಕೆ ಬಂದ್ರೆ ಏನ್ ಲಾಭ?
ಇದರ ಹೊರತಾಗಿ ಸಿನಿಮಾ ಮತ್ತು ರಾಜಕಾರಣಿಗಳ ನಂಟು ಎಲ್ಲೂ ಎಂದೂ ಕಟ್ ಆಗಿಲ್ಲ. ಅದು ನಿರಂತರವಾಗಿಯೇ ಇದೆ. ಎಲ್ಲ ಪಕ್ಷದ ಗಣ್ಯರೊಂದಿಗೆ ಕನ್ನಡದ ಸ್ಟಾರ್ ನಟರು ಚೆನ್ನಾಗಿಯೇ ಇದ್ದಾರೆ. ಅವರ ಆಸಕ್ತಿ ಮತ್ತು ಅವರ ಬೇಡಿಕೆ ಮೇರೆಗೆ ಸ್ಟಾರ್ ನಟರು ಪ್ರಚಾರ ಮಾಡುತ್ತಿದ್ದಾರೆ.
ಸದ್ಯ ಎಲೆಕ್ಷನ್ ಪ್ರಚಾರದಲ್ಲಿ ಕಿಚ್ಚ ಸುದೀಪ್, ಲವ್ಲಿ ಸ್ಟಾರ್ ಪ್ರೇಮ್, ದುನಿಯಾ ವಿಜಯ್, ಹರ್ಷಿಕಾ ಪೂಣಚ್ಚ-ಭುವನ್ ಪೊನ್ನಣ್ಣ ಹೀಗೆ ಇನ್ನೂ ಅನೇಕರು ಎಲೆಕ್ಷನ್ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ.
ಇದರಿಂದ ಸಾಮಾನ್ಯ ಜನರು ಸ್ಟಾರ್ ನಟರನ್ನ ನೋಡಲಿಕ್ಕೆ ಬಂದೇ ಬರ್ತಾರೆ. ಆಗ ಆಯಾ ಪಕ್ಷದ ಬಗ್ಗೆ ಅಷ್ಟೇ ಸುಲಭವಾಗಿಯೇ ಜನಕ್ಕೆ ತಲುಪುತ್ತದೆ ಅನ್ನೋ ಲೆಕ್ಕಾಚಾರವೂ ಸ್ಟಾರ್ ನಟರ ಕ್ಯಾಂಪೇನ್ ಹಿಂದೆ ಅಂತ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ