Samaira Kapur: ಬಣ್ಣದ ಲೋಕಕ್ಕೆ ಕಾಲಿಟ್ಟ ಕರಿಷ್ಮಾ ಕಪೂರ್​ ಮಗಳು ಸಮೈರಾ ಕಪೂರ್​..!

Samaira Kapur Bollywood Entry: ಕಪೂರ್​ ಕುಟುಂಬದ ಕುಡಿ ಹಾಗೂ ಕರಿಷ್ಮಾ ಕಪೂರ್ ಮಗಳು ಸಮೈರಾ ಕಪೂರ್​ ಕಡೆಗೂ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದಯ ಯಾವ ಸಿನಿಮಾ, ಯಾರ ಜೊತೆ ಅಭಿನಯ ಅನ್ನೋದ್ರ ಸಂಪೂರ್ಣ ಮಾಹಿತಿ ಮುಂದಿದೆ ಓದಿ...

ಕರಿಷ್ಮಾ ಹಾಗೂ ಅವರ ಮಗಳು ಸಮೈರಾ ಕಪೂರ್​

ಕರಿಷ್ಮಾ ಹಾಗೂ ಅವರ ಮಗಳು ಸಮೈರಾ ಕಪೂರ್​

  • Share this:
ಬಾಲಿವುಡ್​ನಲ್ಲಿ ಕಪೂರ್​ ಎಂದರೆ ಸಾಕು ಖಾನ್​ಗಳಿಗಿಂತ ದೊಡ್ಡ ಹೆಸರಿದೆ. ಕಪೂರ್​ ಕುಟುಂಬದಿಂದ ಯಾರಾದರೂ ಸಿನಿಮಾಗೆ ಎಂಟ್ರಿ ಕೊಡಲಿದ್ದಾರೆ ಅಂದರೆ ಅದು ದೊಡ್ಡ ವಿಷಯವೇ. ಇಂತಹ ಕುಟುಂಬದ ಹೊಸ ಪ್ರತಿಭೆ ಈಗ ಸಿನಿ ದುನಿಯಾಗೆ ಎಂಟ್ರಿ ಕೊಟ್ಟಿದೆ.

ಕಪೂರ್​ ಕುಟುಂಬದ ಕುಡಿ ಹಾಗೂ ಕರಿಷ್ಮಾ ಕಪೂರ್ ಮಗಳು ಸಮೈರಾ ಕಪೂರ್​ ಕಡೆಗೂ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದು ಯಾವ ಸಿನಿಮಾ, ಯಾರ ಜೊತೆ ಅಭಿನಯ ಅನ್ನೋದ್ರ ಸಂಪೂರ್ಣ ಮಾಹಿತಿ ಇಲ್ಲಿದೆ.

Armaan Jain and Annisa Malhotra wedding pictures Kareena Kapoor Karisma Kapoor Taimur
ಕರಿಷ್ಮಾ ತಮ್ಮ ಮಗಳು ಸಮೈರಾ ಕಪೂರ್​ ಜೊತೆ ಫೋಟೋಗೆ ಪೋಸ್​ ಕೊಟ್ಟಿದ್ದು ಹೀಗೆ.


ಕರಿಷ್ಮಾ ಕಪೂರ್ ವಿವಾಹವಾದ ನಂತರ ಸಿನಿಮಾಗಳಿಂದ ಸಂಪೂರ್ಣವಾಗಿ ದೂರ ಉಳಿದಿದ್ದರು. ಆದರೆ ಸಂಜಯ್​ ಕಪೂರ್ ಅವರೊಂದಿಗೆ ವಿಚ್ಛೇಧನ ಪಡೆದ ನಂತರ ಮತ್ತೆ ಸಿನಿಮಾಗಳಲ್ಲಿ ಅಭಿನಯಿಸೋಕೆ ಆರಂಭಿಸಿದರು. ಕರಿಷ್ಮಾಗೆ ಇಬ್ಬರು ಮಕ್ಕಳು ಅದರಲ್ಲಿ ದೊಡ್ಡಮಗಳು ಸಮೈರಾ ಕಪೂರ್​.ಸಮೈರಾ ಸದ್ಯ ಅನನ್ಯಾ ಪಾಂಡೆ ತಂಗಿ ರೈಸಾ ಪಾಂಡೆ ನಿರ್ದೇಶನದ ಕಿರುಚಿತ್ರ 'ದೌಡ್​'ನಲ್ಲಿ ನಟಿಸಿದ್ದಾರೆ. ಈ ಕಿರುಚಿತ್ರವನ್ನು ಚಂಕಿ ಪಾಂಡೆ ನಿರ್ಮಿಸಿದ್ದಾರೆ. ಇದರಲ್ಲಿ ಅನಿಲ್​ ಕಪೂರ್ ಅವರ ತಮ್ಮ ಸಂಜಯ್​ ಕಪೂರ್​ ಚಿಕ್ಕ ಮಗ ಜಹಾನ್​ ಕಪೂರ್ ಸಹ ನಟಿಸಿದ್ದಾರೆ. ಏಳುವರೆ ನಿಮಿಷದ ಈ ಕಿರುಚಿತ್ರವನ್ನು ಕಳೆದ ಭಾನುವಾರ ರಿಲೀಸ್ ಮಾಡಲಾಗಿದೆ. ಇದರಲ್ಲಿ ಸಮೈರಾ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಲ್ಲಾಳದೇವ ರಾಣಾರನ್ನೂ ಕಾಡಿದ ಕೊರೋನಾ: 'ಅರಣ್ಯ' ಸಿನಿಮಾ ರಿಲೀಸ್​ ಮುಂದಕ್ಕೆ..!

ಈ ಕಿರುಚಿತ್ರದಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟಪಡಬೇಕಾದ ಕುಟುಂಬದ ಹುಡುಗಿಗೆ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಮೂವರು ಶ್ರೀಮಂತ ಮನೆಯ ಮಕ್ಕಳು ಸಹಾಯ ಮಾಡುವುದೇ ಈ ಕಿರುಚಿತ್ರದ ಸಾರಾಂಶ.

Meghana Raj: ಮತ್ತೆ ಮದುಮಗಳಾದ ಮೇಘನಾರಾಜ್​: ವೈರಲ್​ ಆಯ್ತು ಫೋಟೋಗಳು..!
First published: