ಗೆಳೆಯರ ಜೊತೆ ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯ, ಹರಾಜು ಹಾಕಲು ಯತ್ನ: ದಾಂಪತ್ಯ ಜೀವನದ ಸತ್ಯ ಬಿಚ್ಚಿಟ್ಟ Karishma Kapoor

ಮಧುಚಂದ್ರದ ಸಮಯದಲ್ಲಿ ತನ್ನ ಗೆಳೆಯರ ಜೊತೆ ದೈಹಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದ. ಅದನ್ನು ಕರಿಷ್ಮಾ ನಿರಾಕರಿಸಿದಾಗ, ಆಕೆಗೆ ಚೆನ್ನಾಗಿ ಹೊಡೆದಿದ್ದ ಸಂಜಯ್, ತನ್ನ ಸ್ನೇಹಿತರೊಬ್ಬರಿಗೆ ಆಕೆಯನ್ನು ಮಾರಲು ಬೆಲೆ ಕಟ್ಟುವ ಮಟ್ಟಕ್ಕೆ ಹೋಗಿದ್ದ. ಆದರೆ ಇದೆಲ್ಲಾ ಅಲ್ಲಿಗೆ ಮುಗಿಯಲಿಲ್ಲ.

ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್

ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್

  • Share this:

ನಟಿ ಕರಿಷ್ಮಾ ಕಪೂರ್ (Bollywood Actress Karishma Kapoor) , ಹಿಂದೊಮ್ಮೆ ಬಾಲಿವುಡ್‍ನಲ್ಲಿ ಯಶಸ್ಸಿನ ತುತ್ತತುದಿಯಲ್ಲಿ ಮೆರೆದ ತಾರೆ. ಕಪೂರ್ ಕುಟುಂಬದ (Kapoor Family) ಈ ನೀಲಿ ಕಂಗಳ ಚೆಲುವೆ , ನೃತ್ಯ ಮತ್ತು ಅಭಿನಯ ಎರಡರಲ್ಲೂ ಸೈ ಎನಿಸಿಕೊಂಡವರು. ಕೂಲಿ ನಂ. 1 (coolie no 1), ದಿಲ್ ತೋ ಪಾಗಲ್ ಹೈ (Dil To Pagal Hai), ರಾಜಾ ಹಿಂದೂಸ್ತಾನಿ (Raja Hindustani ), ಬೀವಿ ನಂ.1 ಮತ್ತು ಹೀರೋ ನಂ.1ನಂತಹ ಹಿಟ್ ಚಿತ್ರಗಳಲ್ಲಿ ಅಮೋಘ ಅಭಿನಯ ನೀಡಿರುವ ಕರಿಷ್ಮಾ ಇಂದಿಗೂ ಅಭಿಮಾನಿಗಳ ಮನಸಿನಲ್ಲಿ ನೆಲೆಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ, ಭಾರತೀಯ ಉದ್ಯಮಿ ಸಂಜಯ್ ಕಪೂರ್ (Sunjay Kapur)‌ರನ್ನು ಮದುವೆಯಾದ ಕರಿಷ್ಮಾ ಕಪೂರ್, ಸುಂದರ ಸಂಸಾರದ ಕನಸು ಕಂಡು, ಸಿನಿಮಾ ರಂಗದಿಂದ ದೂರವಿದ್ದು ಬದುಕು ಕಟ್ಟಿಕೊಳ್ಳಲು ಬಯಸಿದ್ದರು. ಆದರೆ ಕರಿಷ್ಮಾ ಅಂದುಕೊಂಡಂತೆ ಯಾವುದೂ ನಡೆಯಲಿಲ್ಲ, ಮದುವೆಯಾಗುತ್ತಲೇ ಅವರ ದಾಂಪತ್ಯದಲ್ಲಿ ತೊಂದರೆಗಳು ಕಾಣಿಸಿಕೊಳ್ಳತೊಡಗಿದವು. ಮತ್ತು ಅವರು ಪತಿ ಸಂಜಯ್ ಕಪೂರ್ ಅವರಿಂದ ಅನುಭವಿಸಿದ ಕಷ್ಟಕೋಟಲೆಗಳ ವಿವರಗಳು ಬೆಚ್ಚಿ ಬೀಳಿಸುವಂತಿದೆ.


ವರದಿಗಳ ಪ್ರಕಾರ, ಕರಿಷ್ಮಾ ಪತಿ ಸಂಜಯ್ ಮತ್ತು ಆತನ ತಾಯಿಯಿಂದ ಕೌಟುಂಬಿಕ ದೌರ್ಜನ್ಯ ಎದುರಿಸಿದ್ದಾರೆ. ಮದುವೆಯ ನಂತರ ತನ್ನ ಜೀವನ ಸಂಪೂರ್ಣ ಬದಲಾಯಿತು ಮತ್ತು ತಾನು ಪ್ರತಿ ನಿತ್ಯವು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂದು ಕರಿಷ್ಮಾ ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.


ಮಧುಚಂದ್ರದಲ್ಲಿ ಹರಾಜು ಹಾಕಲು ಮುಂದಾಗಿದ್ದ ಪತಿ 

ಕರಿಷ್ಮಾ ಮದುವೆ 2016ರಲ್ಲಿ ಮುರಿದು ಬಿತ್ತು. ಅವರ ದಾಂಪತ್ಯದ ಪ್ರತಿಯೊಂದು ನೆನಪುಗಳು ನೋವುಂಟು ಮಾಡುವಂತದ್ದೇ. ಅದರಲ್ಲೂ, ಸಂಜಯ್ ತನ್ನನ್ನು ಮಧುಚಂದ್ರದ ಸಮಯದಲ್ಲಿಯೇ ಹರಾಜು ಹಾಕಲು ಪ್ರಯತ್ನಿಸಿದ್ದರು ಎಂದು ಕರಿಷ್ಮಾ ಬಿಚ್ಚಿಟ್ಟಿರುವ ತಮ್ಮ ಮದುವೆಯ ಕರಾಳ ನೆನಪೊಂದು ಬೆಚ್ಚಿ ಬೀಳಿಸುವಂತಿದೆ.
ಪತಿಯೊಬ್ಬ ಪತ್ನಿಯನ್ನು ಹರಾಜು ಹಾಕಲು ಪ್ರಯತ್ನಿಸುವ ವಿಷಯ ಓದುವುದು ಅಥವಾ ಕೇಳುವುದೇ ಕೆಟ್ಟದೆನಿಸುತ್ತದೆ, ಹಾಗಿರುವಾಗ ಕರಿಷ್ಮಾ ಕಪೂರ್ ಅಂತಹ ನರಕ ಸದೃಶ್ಯ ಸ್ಥಿತಿಯಲ್ಲಿ ಹೇಗೆ ನರಳಿರಬಹುದು ಊಹಿಸಿಕೊಳ್ಳಿ.


ಇದನ್ನೂ ಓದಿ:  Desert Safari ಆಯ್ತ, ಈಗ ಬಿಕಿನಿ ತೊಟ್ಟು ದುಬೈನಲ್ಲಿ ಬಿಸಿಯೇರಿಸಿದ Janhvi Kapoor

ಗೆಳೆಯರ ಜೊತೆ ದೈಹಿಕ ಸಂಬಂಧ ಹೊಂದಲು ಒತ್ತಾಯ


ಕರಿಷ್ಮಾ ಹೇಳುವ ಪ್ರಕಾರ, ಮದುವೆಯಾದ ದಿನದಿಂದಲೇ ಸಂಜಯ್ ಹಿಂಸೆ ಕೊಡುವುದನ್ನು ಆರಂಭಿಸಿದ್ದ ಮತ್ತು ಮಧುಚಂದ್ರದ ಸಮಯದಲ್ಲಿ ತನ್ನ ಗೆಳೆಯರ ಜೊತೆ ದೈಹಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದ. ಅದನ್ನು ಕರಿಷ್ಮಾ ನಿರಾಕರಿಸಿದಾಗ, ಆಕೆಗೆ ಚೆನ್ನಾಗಿ ಹೊಡೆದಿದ್ದ ಸಂಜಯ್, ತನ್ನ ಸ್ನೇಹಿತರೊಬ್ಬರಿಗೆ ಆಕೆಯನ್ನು ಮಾರಲು ಬೆಲೆ ಕಟ್ಟುವ ಮಟ್ಟಕ್ಕೆ ಹೋಗಿದ್ದ. ಆದರೆ ಇದೆಲ್ಲಾ ಅಲ್ಲಿಗೆ ಮುಗಿಯಲಿಲ್ಲ.


2012ರಲ್ಲಿ ಪತಿಯಿಂದ ದೂರವಾದ ಕರಿಷ್ಮಾ

ವರದಿಗಳ ಪ್ರಕಾರ, ಕರಿಷ್ಮಾರನ್ನು ಮದುವೆಯಾದ ಬಳಿಕವೂ ಸಂಜಯ್ ತನ್ನ ಮೊದಲ ಪತ್ನಿಯ ಜೊತೆಗೆ ದೈಹಿಕ ಸಂಬಂಧ ಹೊಂದಿದ್ದ, ಕರಿಷ್ಮಾ ಅದನ್ನು ಪ್ರಶ್ನಿಸಿದಾಗ ಅದಕ್ಕೆ ಪ್ರತಿಯಾಗಿ ಆಕೆಯ ಮೇಲೆ ಹಲ್ಲೆ ಮಾಡಿದ್ದ ಸಂಜಯ್ ಕಪೂರ್. ಪರಿಸ್ಥಿತಿ ತುಂಬಾ ಬಿಗಡಾಯಿಸಿದ ಬಳಿಕ, 2012ರಲ್ಲಿ ಕರಿಷ್ಮಾ ತನ್ನೆರಡು ಮಕ್ಕಳನ್ನು (Samiera Kapoor, Kiaan Raj Kapoor) ಕರೆದುಕೊಂಡು ಪತಿಯಿಂದ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದರು.


ಇದನ್ನೂ ಓದಿ:  ಲೆಹೆಂಗಾದಲ್ಲಿ ಮಿಂಚಿದ ಕರಾವಳಿ ಸುಂದರಿ Pooja Hegde ಸಿಂಪಲ್​ ಲುಕ್ಸ್​ಗೆ ಅಭಿಮಾನಿಗಳು ಫಿದಾ..!

ಮಕ್ಕಳ ಜೊತೆ ನೆಮ್ಮದಿ ಜೀವನ

ಬಳಿಕ ಪತಿಯಿಂದ ವಿಚ್ಚೇದನ ಪಡೆಯಲು ಅರ್ಜಿ ಸಲ್ಲಿಸಿದ ಕರಿಷ್ಮಾ, ಕೊನೆಗೂ ತಮ್ಮ 13 ವರ್ಷಗಳ ಕಹಿ ದಾಂಪತ್ಯದ ಸಂಕೋಲೆಯಿಂದ ಹೊರ ಬರುವುದು ಸಾಧ್ಯವಾಯಿತು. ಬಹಳಷ್ಟು ಕಷ್ಟಕೋಟಲೆಗಳನ್ನು ಸಹಿಸಿದ ಕರಿಷ್ಮಾ ಇಂದು ತನ್ನೆರಡು ಮಕ್ಕಳೊಂದಿಗೆ ನೆಮ್ಮದಿಯಿಂದ ಬದುಕುತ್ತಿದ್ದಾರೆ.

Published by:Mahmadrafik K
First published: