Karisma Kapoor: ಅಮೀರ್ ಜೊತೆಗಿನ ಕಿಸ್ಸಿಂಗ್ ಸೀನ್ ಅನುಭವ ಹಂಚಿಕೊಂಡ ಕರಿಷ್ಮಾ ಕಪೂರ್

ಸಾಮಾನ್ಯವಾಗಿ ತೆರೆ ಮೇಲೆ ಇಂಟಿಮೇಟ್​ ದೃಶ್ಯಗಳಲ್ಲಿ ಹಾಗೂ ಚುಂಬನದ ಸೀನ್​ಗಳಲ್ಲಿ ಕಾಣಿಸಿಕೊಳ್ಳುವ ನಟ-ನಟಿಯರ ಪರಿಸ್ಥಿತಿ ಹೇಳುವಷ್ಟು ಸುಲಭವಾಗಿರುವುದಿಲ್ಲ. ಸುತ್ತಲ್ಲೂ ಇರುವ ಶೂಟಿಂಗ್​ ತಂಡದ ಸದಸ್ಯರ ಮುಂದೆ ಇಂತಹ ದೃಶ್ಯಗಳಲ್ಲಿ ನಟಿಸುವಾದ ಎಂತಹವರಿಗೂ ಮುಜುಗರವಾಗುತ್ತದೆಯಂತೆ. ಈ ಬಗ್ಗೆ ಸಾಕಷ್ಟು ಮಂದಿ ತುಂಬಾ ಸಲ ಹೇಳಿಕೊಂಡಿದ್ದಾರೆ. ಇಂತಹದ್ದೇ ಅನುಭವ ಕರಿಷ್ಮಾ ಅವರೂ ಎದುರಿಸಿದ್ದರಂತೆ. 

ಕರಿಷ್ಮಾ ಕಪೂರ್​

ಕರಿಷ್ಮಾ ಕಪೂರ್​

  • Share this:
ಕಾಲವೊಂದಿತ್ತು... ಆಗ ಬಾಲಿವುಡ್​ನಲ್ಲಿ ಕಪೂರ್​ ಕುಟುಂಬದ ಕುಡಿ ಕರಿಷ್ಮಾರ ಹೆಸರು ಬಿಟ್ಟರೆ ಮತ್ತಾವೂದೂ ಕೇಳಿಸುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಕರಿಷ್ಮಾ ಫೇಮಸ್​ ಆಗಿದ್ದರು. ಬಿಡುವಿಲ್ಲದಂತೆ ದಿನಕ್ಕೆ ಮೂರು-ನಾಲ್ಕು ಶಿಫ್ಟ್​ಗಳಲ್ಲಿ ಸಿನಿಮಾಗಳ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದರಂತೆ. ಇಂತಹ ನಾಯಕಿ ಕರಿಷ್ಮಾ ಅವರೂ ಕಿಸ್ಸಿಂಗ್​ ದೃಶ್ಯವನ್ನು ಮಾಡಿದ್ದಾರೆ. ಅದು ಬಾಲಿವುಡ್​ ಪರ್ಫೆಕ್ಷನಿಸ್ಟ್​ ಅಮೀರ್​ ಖಾನ್​ ನಟನೆಯ 'ರಾಜ ಹಿಂದೂಸ್ತಾನಿ' ಸಿನಿಮಾದಲ್ಲಿ. ಹೌದು, ಕರಿಷ್ಮಾ ಅದೇ ಮೊದಲ ಬಾರಿಗೆ ಇಂತಹ ದೃಶ್ಯಗಳಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದು. 

ಸಾಮಾನ್ಯವಾಗಿ ತೆರೆ ಮೇಲೆ ಇಂಟಿಮೇಟ್​ ದೃಶ್ಯಗಳಲ್ಲಿ ಹಾಗೂ ಚುಂಬನದ ಸೀನ್​ಗಳಲ್ಲಿ ಕಾಣಿಸಿಕೊಳ್ಳುವ ನಟ-ನಟಿಯರ ಪರಿಸ್ಥಿತಿ ಹೇಳುವಷ್ಟು ಸುಲಭವಾಗಿರುವುದಿಲ್ಲ. ಸುತ್ತಲ್ಲೂ ಇರುವ ಶೂಟಿಂಗ್​ ತಂಡದ ಸದಸ್ಯರ ಮುಂದೆ ಇಂತಹ ದೃಶ್ಯಗಳಲ್ಲಿ ನಟಿಸುವಾದ ಎಂತಹವರಿಗೂ ಮುಜುಗರವಾಗುತ್ತದೆಯಂತೆ. ಈ ಬಗ್ಗೆ ಸಾಕಷ್ಟು ಮಂದಿ ತುಂಬಾ ಸಲ ಹೇಳಿಕೊಂಡಿದ್ದಾರೆ. ಇಂತಹದ್ದೇ ಅನುಭವ ಕರಿಷ್ಮಾ ಅವರೂ ಎದುರಿಸಿದ್ದರಂತೆ.

Kareena Kapoor, Happy Birthday Lolo, Krishma Kapoor, Saif Ali Khan, Bollywood, Taimur Ali Khan, ಕರಿಷ್ಮಾ ಕಪೂರ್​, ಕರೀನಾ ಕಪೂರ್​, ಹುಟ್ಟುಹಬ್ಬದ ಸಂಭ್ರಮದಲ್ಲಿ ಕರಿಷ್ಮಾ ಕಪೂರ್​, ಕರೀನಾ ಕಪೂರ್​, ಕರಿಷ್ಮಾ ಕಪೂರ್ ಹುಟ್ಟುಹಬ್ಬದ ಫೋಟೋಗಳು, Karisma Kapoor celebrated her birthday with Kareena Kapoor Saif ali khan and other family members ae
ನಟಿ ಕರೀನಾ ಕಪೂರ್​


ನ್ಯೂಸ್​ 18ಗೆ ಈ ಹಿಂದೆ ಕೊಟ್ಟಿರುವ ಸಂದರ್ಶನದಲ್ಲಿ ಕರಿಷ್ಮಾ ಕಪೂರ್​ ಆ ಸಿನಿಮಾದ ಕಿಸ್ಸಿಂಗ್​ ದೃಶ್ಯದ ಚಿತ್ರೀಕರಣದ ಬಗ್ಗೆ ವಿವರಿಸಿದ್ದಾರೆ. ಈ ಸಿನಿಮಾ ಬಿಡುಗಡೆಯಾಗಿ 25 ವರ್ಷಗಳಾಗಿವೆ.ಈಗ ಕರಿಷ್ಮಾ ಅಂದು ಆ ದೃಶ್ಯಕ್ಕಾಗಿ ಅವರು ಪಟ್ಟಿದ್ದ ಕಷ್ಟವನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss 8 Kannada: ಬಿಗ್ ಬಾಸ್​ ಮನೆಯಲ್ಲಿ ಭೂತದ ಕಾಟ: ಕ್ಯಾಪ್ಟನ್​ ಕೋಣೆಯಲ್ಲಿ ಏನನ್ನು ನೋಡಿ ಹೆದರಿದ್ರು ಬ್ರೋ ಗೌಡ..!

ಕಿಸ್ಸಿಂಗ್​ ದೃಶ್ಯವೊಂದನ್ನು ಚಿತ್ರೀಕರಿಸಲು ಸತತ 3 ದಿನಗಳ ಕಾಲ ತೆಗೆದುಕೊಂಡಿದ್ದರಂತೆ. ಅದರಲ್ಲೂ ಅದು ಫೆಬ್ರವರಿ ತಿಂಗಳು. ಕೊರೆಯುವ ಚಳಿ ಅದರಲ್ಲೂ ಮಳೆಯಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಬೇಕಿತ್ತಂತೆ. ಆ ಚಳಿಯಲ್ಲಿ ಎಷ್ಟೇ ಮಾಡಿದರೂ ಆ ಟೇಕ್​ ಓಕೆ ಆಗುತ್ತಲೇ ಇರಲಿಲ್ಲವಂತೆ. ಯಾವಾಗ ಮುಗಿಯುತ್ತೋ ಇದು ಎಂದೆನಿಸಿತ್ತಂತೆ.
ಈ ಸಿನಿಮಾದಲ್ಲಿನ ಕಿಸ್ಸಿಂಗ್​ ಸೀನ್​ ತುಂಬಾ ದೀರ್ಘವಾಗಿದ್ದು, ಈಗಲೂ ದೀರ್ಘಸಮಯದ ಚುಂಬನದ ದೃಶ್ಯಗಳ ಸಾಲಿನಲ್ಲಿ ನಿಲ್ಲುತ್ತದೆ. ಯಾವುದೇ ನಟ-ನಟಿಯರು ಇಂತಹ ದೃಶ್ಯಗಳಲ್ಲಿ ಅಭಿನಯಿಸುವಾಗ ಖುಷಿಯಾಗಿರುವುದಿಲ್ಲ. ಬದಲಿಗೆ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿರುತ್ತಾರೆ ಎಂದಿದ್ದಾರೆ ಕರಿಷ್ಮಾ.

ಕರಿಷ್ಮಾ ಕಪೂರ್​ 14ನೇ ವಯಸ್ಸಿಗೆ ಸಿನಿರಂಗಕ್ಕೆ ಕಾಲಿಟ್ಟವರು. ಕಪೂರ್​ ವಂಶದ ಕುಡಿಯಾಗಿ ಕಾಲಿಟ್ಟ ಕರಿಷ್ಮಾ ಅವರಿಗೆ ಮೊದಲು ಅಂದುಕೊಂಡಂತೆ ಯಶಸ್ಸು ಸಿಗಲಿಲ್ಲ. ಸಾಕಷ್ಟು ಸ್ಟಾರ್​ ನಟರ ಜತೆ ವಿಭಿನ್ನ ಪಾತ್ರಗಳಲ್ಲಿ ನಟಿಸಿದರು. ಆದರೆ ಕರಿಷ್ಮಾ  ಹಾಗೂ ಗೋವಿಂದ ಅವರ ಜೋಡಿ ಮಾತ್ರ ತುಂಬಾ ವರ್ಷಗಳು ತೆರೆ ಮೇಲೆ ರಾಜ್ಯಭಾರ ಮಾಡಿದ್ದರು. ಕಾಮಿಡಿ ಸಿನಿಮಾಗಳು ಹಾಗೂ ಹಾಸ್ಯ ಪಾತ್ರಗಳಲ್ಲಿ ಈ ಜೋಡಿ ಮಿಂಚಿತ್ತು. ಇನ್ನು ಗೋವಿಂದ ಅವರ ನೈಜ ನೃತ್ಯಕ್ಕೆ ಯಾರಾದರೂ ಸ್ಟೆಪ್​ ಹಾಕುತ್ತಿದ್ದರು ಅಂದರೆ ಅದು ಕರಿಷ್ಮಾ ಕಪೂರ್ ಎನ್ನುವಷ್ಟರ ಮಟ್ಟಿಗೆ ಈ ಜೋಡಿ ಫೇಮಸ್​ ಆಗಿತ್ತು.

ಇದನ್ನೂ ಓದಿ: Happy Birthday Karisma Kapoor: ಅಮ್ಮನಂತಿರುವ ಅಕ್ಕ ಕರಿಷ್ಮಾರ ಹುಟ್ಟುಹಬ್ಬ ಆಚರಿಸಿದ ಕರೀನಾ ಕಪೂರ್​..!

ಇನ್ನು ಜೋ ಜೀತಾ ವಹೀ ಸಿಖಂಧರ್​ ಸಿನಿಮಾದಲ್ಲೂ ಅಮೀರ್​ ಖಾನ್​ ಹಾಗೂ ಪೂಜಾ ಬೇಡಿ ಅವರ ನಡುವೆಯೂ ಒಂದು ಕಿಸ್ಸಿಂಗ್ ಸೀನ್​ ಇದೆ. ಈ ದೃಶ್ಯದ ಚಿತ್ರೀಕರಣದ ಬಗ್ಗೆಯೂ ಪೂಜಾ ಬೇಡಿ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. ಆ ದೃಶ್ಯ ಶೂಟ್​ ಮಾಡುವಾಗ ನಿಜಕ್ಕೂ ಬಹಳ ಕಷ್ಟವಾಗಿತ್ತು. ಇಡೀ ಚಿತ್ರತಂಡ ನಮ್ಮನ್ನೇ ನೋಡುತ್ತಿರುತ್ತದೆ. ಇಂತಹ ಮುಜಗರದ ಕ್ಷಣಗಳು ಅವು. ಯಾರೂ ಇಷ್ಟಪಟ್ಟು ಅಂತಹ ದೃಶ್ಯಗಳನ್ನು ಮಾಡುವುದಿಲ್ಲ ಎಂದಿದ್ದರು.
Published by:Anitha E
First published: