Karishma - Kareena Kapoor ಸೇರಿ ಈ ಹಿರಿಯ ನಟನನ್ನು ದತ್ತು ತೆಗೆದುಕೊಂಡಿದ್ದಾರಂತೆ!

ನಾನು ನನ್ನ ಗೆಳತಿಯರು ಮತ್ತು ನನ್ನ ವ್ಯವಹಾರಗಳ ಬಗ್ಗೆ ಅವರೊಂದಿಗೆ ಮುಕ್ತವಾಗಿ ಮಾತನಾಡಬಹುದು. ಅವರು ಯಾವುದೇ ವಿಷಯದಲ್ಲಿ ಹಸ್ತಕ್ಷೇಪ ಮಾಡಲಿಲ್ಲ ಮತ್ತು ಒಂದು ಚಿತ್ರದಿಂದ ನಾನು ಎಷ್ಟು ಹಣವನ್ನು ಗಳಿಸುತ್ತೇನೆ ಅಥವಾ ನಾನು ಯಾವ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸಹ ಎಂದಿಗೂ ಕೇಳಲಿಲ್ಲ.

ತಂದೆಯೊಂದಿಗೆ ಕರಿಷ್ಮಾ-ಕರೀನಾ

ತಂದೆಯೊಂದಿಗೆ ಕರಿಷ್ಮಾ-ಕರೀನಾ

  • Share this:
ಬಾಲಿವುಡ್‌ನ ಹಿರಿಯ ನಟ ರಣಧೀರ್ ಕಪೂರ್ (Randhir Kapoor) ಅವರು ತಾವು ಅಭಿನಯಿಸಿದ ಚಿತ್ರಗಳಿಂದ ತುಂಬಾನೇ ಚಿರಪರಿಚಿತರಾಗಿದ್ದು, ನಿನ್ನೆ ಎಂದರೆ ಫೆಬ್ರುವರಿ 15ನೇ ತಾರೀಖಿನಂದು ತಮ್ಮ 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಆಗಿನ ಜೀವನದ ಬಗ್ಗೆ ಮತ್ತು ಅವರ ಮಡದಿ ಮತ್ತು ಇಬ್ಬರು ಪುತ್ರಿಯರು ಮತ್ತು ಸ್ಟಾರ್ ನಟಿಯರಾದ ಕರೀಷ್ಮಾ ಕಪೂರ್ (Karisma Kapoor) ಮತ್ತು ಕರೀನಾ ಕಪೂರ್ ಖಾನ್ (Kareena Kapoor Khan) ಅವರ ಬಗ್ಗೆ ತುಂಬಾನೇ ಮಾತಾಡಿದ್ದಾರೆ. 2014ರಲ್ಲಿ ಹೇಳಿದ ಒಂದು ಹೇಳಿಕೆಯನ್ನು ಇಲ್ಲಿ ನೆನಪಿಸಿಕೊಳ್ಳೋಣ, ತಮ್ಮ ಮಗಳು ಕರೀನಾ ಕಪೂರ್ ಮಕ್ಕಳನ್ನು ಹೊಂದಲು ಬಯಸುವುದಿಲ್ಲ (Kids) ಎಂದು ಹೇಳಿಕೊಂಡಾಗ, ತಂದೆ ರಣಧೀರ್ ಅವರು "ಈಗಿನ ಮಕ್ಕಳು ಯಾರಿಂದಲೂ ಸಲಹೆಯನ್ನು ಪಡೆಯಲು ಬಯಸುವುದಿಲ್ಲ. ಎಲ್ಲಿಯವರೆಗೆ ಅವಳು ತನ್ನ ಜೀವನದಲ್ಲಿ ಸಂತೋಷವಾಗಿರುತ್ತಾಳೋ, ಅಲ್ಲಿಯವರೆಗೆ ನಾನು ಕೂಡ ಸಂತೋಷವಾಗಿದ್ದೇನೆ" ಎಂದು ಹೇಳಿದ್ದರು.

ಆದರೆ 2022ರಲ್ಲಿ ಕರೀನಾ ಅವರು ಪತಿ ಸೈಫ್ ಅಲಿ ಖಾನ್ ಮತ್ತು ಅವರ ಇಬ್ಬರು ಪುತ್ರರಾದ ತೈಮೂರ್ ಮತ್ತು ಜೆಹ್ ಅವರೊಂದಿಗೆ ಆನಂದಮಯ ಸಾಂಸಾರಿಕ ಜೀವನವನ್ನು ಆನಂದಿಸುತ್ತಿದ್ದಾರೆ. ಇತ್ತೀಚೆಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ರಣಧೀರ್ ಅವರು ತಮ್ಮ ಕುಟುಂಬದ ವೆಚ್ಚಗಳನ್ನು ನಿರ್ವಹಿಸಲು ಹೇಗೆ ಶ್ರಮಿಸಬೇಕಾಗಿತ್ತು ಎಂಬುದನ್ನು ಹಂಚಿಕೊಂಡರು.

"ನಾನು ಇಂದು ಮತ್ತೊಮ್ಮೆ ಚಿಕ್ಕವನಾಗಿದ್ದರೆ ಚೆನ್ನಾಗಿತ್ತು. ಏಕೆಂದರೆ ಇಂದಿನ ನಟರು ತಮ್ಮ ನಟನೆಯಿಂದ ಸಾಕಷ್ಟು ಹಣ ಗಳಿಸುತ್ತಾರೆ. ನಾವು ಹಣವನ್ನು ಗಳಿಸಲು ನಿಜವಾಗಿಯೂ ತುಂಬಾ ಕಷ್ಟ ಪಟ್ಟಿದ್ದೇವೆ. ನನ್ನ ಮಕ್ಕಳ ಶಾಲೆ ಫೀಸ್, ನನ್ನ ಮನೆಯ ವಿದ್ಯುತ್ ಶಕ್ತಿ ಬಿಲ್‌ಗಳು, ನನ್ನ ಪತ್ನಿ ಬಬಿತಾಳ ಖರ್ಚು, ನನ್ನ ಸ್ಕಾಚ್, ಇವೆಲ್ಲದಕ್ಕೆ ನಾನು ಚಲನಚಿತ್ರಗಳಲ್ಲಿ ನಟಿಸುವುದರಿಂದ ಗಳಿಸಿದ ಹಣವೇ ಆಧಾರವಾಗಿತ್ತು" ಎಂದರು.

ನಮ್ಮದು ಸಾಮಾನ್ಯ ಕುಟುಂಬ

ರಣಧೀರ್ ತನ್ನ ಹೆಣ್ಣುಮಕ್ಕಳು ಮತ್ತು ಅಳಿಯ ಸೈಫ್ ಅಲಿ ಖಾನ್ ಅವರೊಂದಿಗಿನ ಬಾಂಧವ್ಯದ ಬಗ್ಗೆ ಹೇಳುತ್ತಾ "ನಾವು ಸಾಮಾನ್ಯ ಕುಟುಂಬದವರಂತೆ ಇದ್ದೇವೆ ಮತ್ತು ಅವರ ಕೆಲಸದ ಬಗ್ಗೆ ನಾನು ಮಾತನಾಡುವುದಿಲ್ಲ. ನಾವು ಯಾರಿಗೂ ಅವರ ವೃತ್ತಿ ಜೀವನದ ಬಗ್ಗೆ ಸಲಹೆ ನೀಡುವುದಿಲ್ಲ. ನಾವು ಜೊತೆ ಕೂತು ನಗುತ್ತೇವೆ, ಹಾಸ್ಯ ಮಾಡುತ್ತೇವೆ ಮತ್ತು ಪರಸ್ಪರರ ಕಾಲನ್ನು ಎಳೆಯುತ್ತೇವೆ ಮತ್ತು ನಮ್ಮ ಜೀವನದಲ್ಲಿ ನಡೆಯುತ್ತಿರುವ ವಿಷಯಗಳ ಬಗ್ಗೆ ಮಾತನಾಡುತ್ತೇವೆ" ಎಂದು ಹೇಳಿದರು.

ಇದನ್ನೂ ಓದಿ: ಗೆಳೆಯರ ಜೊತೆ ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯ, ಹರಾಜು ಹಾಕಲು ಯತ್ನ: ದಾಂಪತ್ಯ ಜೀವನದ ಸತ್ಯ ಬಿಚ್ಚಿಟ್ಟ Karishma Kapoor

ರಣಧೀರ್ ಅವರು ತಮ್ಮ ಪತ್ನಿ ಬಬಿತಾರಿಂದ ಬೇರ್ಪಟ್ಟಿದ್ದರೂ, ತನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದರಿಂದ ಎಂದಿಗೂ ಹಿಂದೆ ಸರಿದಿಲ್ಲ, ಇಬ್ಬರು ಹೆಣ್ಣುಮಕ್ಕಳನ್ನು ಬೆಳೆಸುತ್ತಾ ಮತ್ತು ವಿಚ್ಚೇದನ ಪಡೆದಿಲ್ಲದಿದ್ದರೂ ರಣಧೀರ್‌ ಮತ್ತು ಬಬಿತಾ ಪರಸ್ಪರರು ಗೌರವವನ್ನು ಹೊಂದಿದ್ದಾರೆ.

ನಾವೆಲ್ಲೇ ಇದ್ದರೂ ಒಂದೇ ಕುಟುಂಬ

ಇದರ ಬಗ್ಗೆ 2016ರಲ್ಲಿ ಸುದ್ದಿ ಮಾಧ್ಯಮದ ಸಂದರ್ಶನದಲ್ಲಿ ಮಾತಾಡುತ್ತಾ ರಣಧೀರ್ ಅವರು "ಸರಿ, ನನಗೆ ಇನ್ನೂ ಒಬ್ಬರು ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇಷ್ಟು ವರ್ಷಗಳಲ್ಲಿ ನನ್ನ ಸುತ್ತಮುತ್ತಲೂ ಯಾವುದೂ ಬದಲಾಗಿಲ್ಲ. ನಾನು ಇನ್ನು ಮುಂದೆ ಅವರೊಂದಿಗೆ ವಾಸಿಸುವುದಿಲ್ಲ ಎಂಬುದು ಮಾತ್ರ ಇದೆ.

ನನ್ನ ಮಕ್ಕಳು ಈಗ ಮದುವೆಯಾಗಿದ್ದಾರೆ ಮತ್ತು ತಮ್ಮದೇ ಆದ ಮನೆಗಳನ್ನು ಹೊಂದಿದ್ದಾರೆ. ಬಬಿತಾ ಒಬ್ಬಳೇ ಸಂತೋಷವಾಗಿದ್ದಾಳೆ, ಅವಳು ಮತ್ತೆ ಮದುವೆಯಾಗಿಲ್ಲ. ಅವಳು ನನ್ನ ಹೆಂಡತಿಯಾಗಿ ಮುಂದುವರಿಯುತ್ತಾಳೆ ಮತ್ತು ನಾನು ಅವಳ ಸರಿಪಡಿಸಲಾಗದ ಭಯಾನಕ ಗಂಡನಾಗಿದ್ದೇನೆ" ಎಂದು ಹೇಳಿದ್ದರು.

ನನ್ನ ಮಕ್ಕಳು ನನಗಿಂತ ಶ್ರೀಮಂತರು

"ನನ್ನ ಹೆಣ್ಣುಮಕ್ಕಳಿಬ್ಬರೂ ನನಗಿಂತ ಶ್ರೀಮಂತರಾಗಿದ್ದಾರೆ ಮತ್ತು ನಾನು ನನ್ನನ್ನು ಅವರ ತಂದೆಯಾಗಿ ದತ್ತು ತೆಗೆದುಕೊಳ್ಳಲು ಕೇಳುತ್ತೇನೆ, ಇದರಿಂದ ನಾನು ಸಹ ಶ್ರೀಮಂತನಾಗಬಹುದು. ನಾನು ಇನ್ನೂ ಕೆಲವೊಮ್ಮೆ ಊಟಕ್ಕೆ ಬಬಿತಾ ಅವರನ್ನು ಭೇಟಿಯಾಗುತ್ತೇನೆ. ನಾವು ಒಟ್ಟಾಗಿ ಕೂತು ಆಹಾರ ಸೇವಿಸುತ್ತೇವೆ ಮತ್ತು ನಗುತ್ತೇವೆ" ಎಂದು ಅವರು ಹೇಳಿದರು.

ಇದನ್ನೂ ಓದಿ: Kareena Kapoor: ಕರೀನಾ ಸ್ನೇಹಿತನಿಗೆ ಡ್ರೈವರ್​​ ಜೊತೆ ಕೂತು ಊಟ ಮಾಡು ಅಂದಿದ್ರಂತೆ ಅವ್ರ ಅಪ್ಪ!

ಬಾಲಿವುಡ್ ಐಕಾನ್ ರಾಜ್ ಕಪೂರ್ ಅವರ ಮಗ ರಣಧೀರ್ ಅವರು ತಮ್ಮ ತಂದೆ ತಮ್ಮ ಅತ್ಯುತ್ತಮ ಸ್ನೇಹಿತ, ಅವರೊಂದಿಗೆ ಯಾವುದೇ ವಿಷಯದ ಬಗ್ಗೆ ಮಾತನಾಡಬಹುದು ಎಂದು ಹೇಳಿದರು. "ನಾನು ನನ್ನ ಗೆಳತಿಯರು ಮತ್ತು ನನ್ನ ವ್ಯವಹಾರಗಳ ಬಗ್ಗೆ ಅವರೊಂದಿಗೆ ಮುಕ್ತವಾಗಿ ಮಾತನಾಡಬಹುದು. ಅವರು ಯಾವುದೇ ವಿಷಯದಲ್ಲಿ ಹಸ್ತಕ್ಷೇಪ ಮಾಡಲಿಲ್ಲ ಮತ್ತು ಒಂದು ಚಿತ್ರದಿಂದ ನಾನು ಎಷ್ಟು ಹಣವನ್ನು ಗಳಿಸುತ್ತೇನೆ ಅಥವಾ ನಾನು ಯಾವ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸಹ ಎಂದಿಗೂ ಕೇಳಲಿಲ್ಲ" ಎಂದು ಅವರು ಸಂದರ್ಶನದಲ್ಲಿ ತಿಳಿಸಿದರು.
Published by:Soumya KN
First published: