ಹೊಸ ವರ್ಷವನ್ನು (New Year) ಬರಮಾಡಿಕೊಳ್ಳುವುದು ಎಂದರೆ ಎಲ್ಲರಿಗೂ ಒಂದು ಹೊಸ ರೀತಿಯ ಸಂಭ್ರಮ ಮತ್ತು ಖುಷಿ ಅಂತಾನೆ ಹೇಳಬಹುದು. ಅದರಲ್ಲೂ ಹೊಸ ವರ್ಷದ ಪಾರ್ಟಿಗಳು (Party) ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಕೆಲವರು ತಮ್ಮ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದರೆ, ಇನ್ನೂ ಕೆಲವರು ತಮ್ಮ ಕುಟುಂಬದೊಂದಿಗೆ ಮನೆಯಲ್ಲೇ ಎಂಜಾಯ್ ಮಾಡ್ತಾರೆ ಅಂತ ಹೇಳಬಹುದು. ಅದರಲ್ಲೂ ಈ ಬಾಲಿವುಡ್ ನಟ-ನಟಿಯರ (Bollywood Stars) ಪಾರ್ಟಿಗಳು ತುಂಬಾನೇ ಗ್ರ್ಯಾಂಡ್ ಆಗಿರುತ್ತವೆ ಅಂತ ಹೇಳಬಹುದು. ಬನ್ನಿ, ಹಾಗಾದರೆ ನಟಿ ಕರೀನಾ ಕಪೂರ್ (Kareena Kapoor) ಅವರ ಹೊಸ ವರ್ಷದ ಆಚರಣೆ ಹೇಗಿತ್ತು ಅಂತ ತಿಳಿದುಕೊಳ್ಳೋಣ.
ನಟಿ ಕರೀನಾ ಕಪೂರ್ ಮತ್ತು ಪತಿ ಮತ್ತು ನಟ ಸೈಫ್ ಅಲಿ ಖಾನ್ ಸ್ವಿಟ್ಜರ್ಲ್ಯಾಂಡ್ ನ ಸ್ಟಾಡ್ ನಲ್ಲಿ ಹೊಸ ವರ್ಷವನ್ನು ಆಚರಿಸಿದ್ದಾರೆ. ಕರೀನಾ ಅವರು ತಮ್ಮ ಹೊಸ ವರ್ಷದ ಆಚರಣೆಯ ಅಪ್ಡೇಟ್ ಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇದ್ದರು. ಅವರೊಂದಿಗೆ ಅವರ ಮಕ್ಕಳಾದ ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್ ಸಹ ಇದ್ದರು.
ಕರೀನಾ ಅವರ ಕುಟುಂಬದ ಫೋಟೋ ನೋಡಿ..
ಭಾನುವಾರ ರಾತ್ರಿ, ಕರೀನಾ ಪರಿಪೂರ್ಣ ಕುಟುಂಬ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಎಲ್ಲರಿಗೂ "2023 ಹೊಸ ವರ್ಷ ಎಲ್ಲರಿಗೂ ಶಾಂತಿ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡಲಿ" ಎಂದು ಹಾರೈಸಿದ್ದಾರೆ.
ಫೋಟೋದಲ್ಲಿ, ಕರೀನಾ ಮೆಟಾಲಿಕ್ ಗ್ರೀನ್ ಸ್ಲಿಟ್ ಉಡುಪನ್ನು ಧರಿಸಿದ್ದಾರೆ ಮತ್ತು ಕಿರಿಯ ಮಗ ಜೆಹ್ ನ ಕೈಯನ್ನು ಹಿಡಿದಿದ್ದಾರೆ. ಅವರ ಪಕ್ಕದಲ್ಲಿ ನಿಂತ ಪತಿ ಸೈಫ್ ಅಲಿ ಖಾನ್ ಅವರು ಕಪ್ಪು ಟಕ್ಸಿಡೋವನ್ನು ಧರಿಸಿದ್ದನ್ನು ಇದರಲ್ಲಿ ನೋಡಬಹುದು.
ಅವರ ಹಿರಿಯ ಮಗ ತೈಮೂರ್ ಕಪ್ಪು ಬ್ಲೇಜರ್, ಅದರ ಒಳಗೆ ಬಿಳಿ ಶರ್ಟ್, ಕಂದು ಬಣ್ಣದ ಪ್ಯಾಂಟ್ ಮತ್ತು ಟೈ ಧರಿಸಿದ್ದರು. ಜೆಹ್ ಕಪ್ಪು ಪ್ಯಾಂಟ್ ಧರಿಸಿ, ಜಾಕೆಟ್ ನ ಒಳಗೆ ಶರ್ಟ್ ಧರಿಸಿದ್ದರು.
ಈ ಫೋಟೋ ತುಂಬಾನೇ ಅವಸರದ ಸಮಯದಲ್ಲಿ ತೆಗೆಸಿಕೊಂಡಿದ್ದಿರಬೇಕು..
ತುಂಬಾನೇ ಅವಸರದಲ್ಲಿ ಈ ಫೋಟೋವನ್ನು ಕ್ಲಿಕ್ ಮಾಡಲಾಗಿದೆ ಅಂತ ತೋರುತ್ತದೆ. ಏಕೆಂದರೆ, ಕಲಾವಿದರು ಮತ್ತು ಮನೋರಂಜನಾಕಾರರು ಕುಟುಂಬದ ಫೋಟೋದ ಹಿನ್ನೆಲೆಯಲ್ಲಿ ಪೋಸ್ ನೀಡುತ್ತಿರುವುದು ಕಂಡುಬಂದಿದೆ.
ಈ ಫೋಟೋಗೆ ಪ್ರತಿಕ್ರಿಯಿಸಿರುವ ಕರಿಷ್ಮಾ ಕಪೂರ್ ಮತ್ತು ಮೊಝೆಜ್ ಸಿಂಗ್ ಅವರಂತಹ ಸೆಲೆಬ್ರಿಟಿಗಳು ನಟಿಯ ಈ ಫೋಟೋಗೆ ಪ್ರೀತಿ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿ "ನೀವು ತುಂಬಾ ಪರಿಪೂರ್ಣವಾಗಿ ಕಾಣುತ್ತಿದ್ದೀರಿ. ಸೆಲೆಬ್ರಿಟಿ ಫೋಟೋಗಳ ಬಗ್ಗೆ ನಾನು ಎಂದಿಗೂ ಪ್ರತಿಕ್ರಿಯಿಸುವುದಿಲ್ಲ. ಆದರೆ ಈ ಫೋಟೋ ನೋಡಿ ತುಂಬಾನೇ ಸಂತೋಷವಾಗಿದೆ" ಎಂದು ಹೇಳಿದ್ದಾರೆ.
ಇನ್ನೊಬ್ಬ ಬಳಕೆದಾರರು "ನೀವು ಇನ್ನೂ ಸುಂದರವಾಗಿ ಕಾಣುತ್ತಿದ್ದೀರಿ ಕರೀನಾ" ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕ ಜನ ನೆಟ್ಟಿಗರು ಪಟೌಡಿ ಕುಟುಂಬಕ್ಕೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ಸಹ ತಿಳಿಸಿದರು.
ಇದಕ್ಕೂ ಮುನ್ನ ಗ್ಲ್ಯಾಮ್ ಲುಕ್ ನ ಫೋಟೋಗಳನ್ನ ಹಂಚಿಕೊಂಡಿದ್ರು ಕರೀನಾ..
ಇದಕ್ಕೂ ಮೊದಲು, ಕರೀನಾ ತಮ್ಮ ಗ್ಲಾಮ್ ನ್ಯೂ ಇಯರ್ ಲುಕ್ ನಲ್ಲಿ ಕಾಣಿಸಿಕೊಂಡ ಫೋಟೋಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು ಮತ್ತು ಇದಕ್ಕೆ ಅಭಿಮಾನಿಗಳಿಂದ ಪ್ರಶಂಸೆಯನ್ನು ಸಹ ಗಳಿಸಿದರು.
ಒಟ್ಟಿನಲ್ಲಿ ಹೇಳುವುದಾದರೆ ಕರೀನಾ ಸ್ವಿಟ್ಜರ್ಲ್ಯಾಂಡ್ ನಲ್ಲಿ ತಮ್ಮ ಕುಟುಂಬದ ಜೊತೆ ಒಳ್ಳೆಯ ಸಮಯವನ್ನು ಕಳೆದಿದ್ದಾರೆ ಮತ್ತು ಆ ಫೋಟೋಗಳು ಮತ್ತು ವೀಡಿಯೋಗಳನ್ನು ಪೋಸ್ಟ್ ಮಾಡುವುದರೊಂದಿಗೆ ತಮ್ಮ ಅಭಿಮಾನಿಗಳನ್ನು ಸಹ ರಂಜಿಸುತ್ತಿದ್ದಾರೆ ಅಂತ ಹೇಳಬಹುದು.
ಫೆಬ್ರವರಿ 2021 ರಲ್ಲಿ ಕಿರಿಯ ಮಗ ಜೆಹ್ ಹುಟ್ಟಿದ ನಂತರ ಕುಟುಂಬವು ಮೊದಲ ಬಾರಿಗೆ ಸ್ಟಾಡ್ ಗೆ ಹೋಗಿದ್ದಾರೆ. ಇನ್ನೂ ಕೆಲಸದ ವಿಷಯಕ್ಕೆ ಬಂದರೆ, ಕರೀನಾ ಕೊನೆಯ ಬಾರಿಗೆ ಲಾಲ್ ಸಿಂಗ್ ಚಡ್ಡಾದಲ್ಲಿ ಕಾಣಿಸಿಕೊಂಡಿದ್ದರು.
ಮುಂಬರುವ ಹನ್ಸಾಲ್ ಮೆಹ್ತಾ ಅವರ ಹೆಸರಿಡದ ಚಿತ್ರದಲ್ಲಿ ಮತ್ತು ಸುಜೋಯ್ ಘೋಷ್ ಅವರ ಜಪಾನಿನ ಕಾದಂಬರಿ ‘ದಿ ಡಿವೋಶನ್ ಆಫ್ ಸಸ್ಪೆಕ್ಟ್ ಎಕ್ಸ್ ನ ಆಧಾರಿತ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ