Kareena Kapoor: ಸೀತಾ ಪಾತ್ರಕ್ಕೆ 12 ಕೋಟಿ ಬೇಡಿಕೆ; ಟ್ರೋಲ್ ಪೇಜ್​ಗಳ ಬಗ್ಗೆ ಕರೀನಾ ಕಫೂರ್​ ಹೇಳಿದ್ದೇನು ಗೊತ್ತಾ?

ಸೈಫ್​ ಅಲಿಖಾನ್​ ಮಡದಿ ರಾಮಾಯಣ ಸಿನಿಮಾದಲ್ಲಿನ ಸೀತಾ ಪಾತ್ರಕ್ಕೆ 12 ಕೋಟಿ ಬೇಡಿಕೆ ಇಟ್ಟಿದ್ದಾರೆ ಎಂಬ ಬಗ್ಗೆ ವರದಿಯಾಗಿತ್ತು. ಸಾಕಷ್ಟು ಟ್ರೋಲ್​ ಪೇಜ್​ಗಳು ಕೂಡ ಈ ವಿಚಾರವನ್ನ ವೈರಲ್​ ಮಾಡಿದ್ದವು. ಆದರೀಗ ಕರೀನಾ ಇದೇ ವಿಚಾರಕ್ಕೆ ತುಟಿಬಿಚ್ಚಿದ್ದಾರೆ.

Kareena Kapoor

Kareena Kapoor

  • Share this:
    ನಟ-ನಟಿಯರ ಸಿನಿಮಾ ಮತ್ತು ಸಂಭಾವನೆ ಕುರಿತು ಆಗಾಗಾ ಏನಾದರೊಂದು ಸುದ್ದಿ ಹರಿದಾಡುತ್ತಲೇ ಇರುತ್ತದೆ. ಆ ನಟಿ ಪಾತ್ರವೊಂದಕ್ಕೆ ಅಷ್ಟೊಂದು ಸಂಭಾವನೆ ಪಡೆದರಂತೆ!. ಈ ನಟ ಮುಂದಿನ ಸಿನಿಮಾಗಾಗಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ..! ಹೀಗೆ ಸುದ್ದಿಗಳು ವರದಿ ಆಗುತ್ತಲೇ ಇರುತ್ತದೆ. ಅದರಂತೆ ಬೇಬೂ ಕರೀನಾ  ಸಂಭಾವನೆ ಹೆಚ್ಚಿಸಿರುವ ಬಗ್ಗೆಯೂ ಹಿಂದೊಮ್ಮೆ ವರದಿಯಾಗಿದ್ದು, ಸೈಫ್​ ಅಲಿಖಾನ್​ ಮಡದಿ ರಾಮಾಯಣ ಸಿನಿಮಾದಲ್ಲಿನ ಸೀತಾ ಪಾತ್ರಕ್ಕೆ 12 ಕೋಟಿ ಬೇಡಿಕೆ ಇಟ್ಟಿದ್ದಾರೆ ಎಂಬ ಬಗ್ಗೆ ವರದಿಯಾಗಿತ್ತು. ಸಾಕಷ್ಟು ಟ್ರೋಲ್​ ಪೇಜ್​ಗಳು ಕೂಡ ಈ ವಿಚಾರವನ್ನ ವೈರಲ್​ ಮಾಡಿದ್ದವು. ಆದರೀಗ ಕರೀನಾ ಇದೇ ವಿಚಾರಕ್ಕೆ ತುಟಿಬಿಚ್ಚಿದ್ದಾರೆ.

    ಗಾರ್ಡಿಯನ್​ ಸೈಟ್​ಗೆ ಸಂದರ್ಶನ ನೀಡಿದ ಬಾಲಿವುಡ್​ ನಟಿ ಕರೀನಾ ಕಪೂರ್,  ‘‘ಸಿನಿಮಾ ಹಾಗೂ ಪಾತ್ರಕ್ಕೆ ಸಿಗುವ​ ವೇತನದ ಕುರಿತು ಮಾತನಾಡಿದ್ದಾರೆ. ಸಮಾನ ವೇತನಕ್ಕೆ ಧ್ವನಿ ಎತ್ತುವ ಮಹಿಳಾ ಕಲಾವಿದರನ್ನು ಸಾಮಾನ್ಯಗೊಳಿಸಬೇಕು’’ ಎಂದು ಹೇಳಿದ್ದಾರೆ.

    ನಟರಂತೆ ನಟಿಯರು ಕೂಡ ಸಮಾನ ವೇತನ ಪಡೆಯುವ ಹಕ್ಕು ಹೊಂದಿದ್ದಾರೆ. ಸಿನಿಮಾಗಾಗಿ ಪುರುಷ ಅಥವಾ ಮಹಿಳೆ ಸಮಾನ ವೇತನವನ್ನು ಪಡೆಯುವ ಬಗ್ಗೆ ಯಾರೂ ಮಾತನಾಡುವುದಿಲ್ಲ. ಈಗ ನಮ್ಮಲ್ಲಿ ಬಹಳಷ್ಟು ಜನರು ಅದರ ಬಗ್ಗೆ  ಧ್ವನಿ ಎತ್ತುತ್ತಿದ್ದಾರೆ ಎಂದು ಹೇಳಿದರು.

    Read Also- Unsafe Apps: ಪ್ಲೇ ಸ್ಟೋರ್​ನಲ್ಲಿರುವ 19 ಸಾವಿರ ಆ್ಯಪ್​ಗಳು ಅಸುರಕ್ಷಿತ! ನಿಮ್ಮ ಸ್ಮಾರ್ಟ್​ಫೋನ್​ನಲ್ಲಿದೆಯಾ ಈ ಆ್ಯಪ್​ಗಳು!

    ರಾಮಾಯಣ ಸಿನಿಮಾದಲ್ಲಿ ಸೀತಾ ಪಾತ್ರಕ್ಕಾಗಿ ನಟಿ 12 ಕೋಟಿ ಪಡೆದಿದ್ದಾರೆ ಎಂಬ ವಿಚಾರ ಬಗ್ಗೆ ಮಾತನಾಡಿದ್ದ ಕರೀನಾ, ‘‘ನನಗೆ ಬೇಕಾದುದನ್ನು ನಾನು ಸ್ಪಷ್ಟಪಡಿಸುತ್ತೇನೆ ಮತ್ತು ಅದಕ್ಕೆ ಗೌರವ ಸಿಗಬೇಕು ಎಂದ ನಾನು ಭಾವಿಸುತ್ತೇನೆ. ಇದು ಬೇಡಿಕೆಯಲ್ಲ, ಮಹಿಳೆಯರ ಬಗ್ಗೆ ಗೌರವಯುತವಾಗಿರಬೇಕು. ಸೀತಾ ಪಾತ್ರದ ವಿಚಾರವನ್ನ  ಟ್ರೋಲ್ ಮಾಡಿದ ಟ್ರೋಲ್ ಪೇಜ್​ಗಳಿಗೆ ನಿಜವಾಗಿ ಗೌರವ ಸಮರ್ಪಿಸಬೇಕು ’’ ಎಂದು ಹೇಳಿದ್ದಾರೆ.

    ವಿವಾಹ ಮತ್ತು ತಾಯಿಯಾದ ನಂತರ ನಟಿಯರಿಗೆ ಸಿನಿಮಾ ಮತ್ತು ನಟನೆಯ ಅವಕಾಶಗಳು ಕಡಿಮೆಯಾಗುತ್ತಾ ಬರುತ್ತದೆ. ಸಾಕಷ್ಟು ತಾರೆಯರು ವಿವಾಹದ ನಂತರ ಸಿನಿಮಾಗೆ ಗುಡ್​ ಬಾಯ್​​ ಹೇಳಿದ ಘಟನೆಗಳು ಕಣ್ಣಮುಂದಿವೆ. ಆದರೆ ಕರೀನಾ ಮಾತ್ರ 2012ರಲ್ಲಿ ಸೈಫ್​ ಅಲಿ ಖಾನ್​ ಅವರನ್ನು ವಿವಾಹವಾದರು. ಆ ಬಳಿಕ ನಟನಾ ವೃತ್ತಿಯನ್ನು ಮುದುವರಿಸಿದರು. ಸದ್ಯ ಯಶಸ್ಸು ಪಡೆದ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

    ವಿವಾಹದ ನಂತರವೂ ನಟನೆ ಬಗ್ಗೆ ಮಾತನಾಡಿದ ಕರೀನಾ, ‘‘ನಾನು ಸೈಫ್​ನನ್ನು ಮದುವೆಯಾದಾಗ ನನ್ನ ವೃತ್ತಿ ಜೀವನವು ಮುಗಿಯುತ್ತದೆ ಎಂದು ಅನೇಕ ಜನರು ನನಗೆ ಹೇಳಿದರು. ಕೆಲವು ನಿರ್ಮಾಪಕರು ವಿವಾಹಿತ ನಟಿಯರೊಂದಿಗೆ ಕೆಲಸ ಮಾಡಲು ಬಯಸುತ್ತಿರಲಿಲ್ಲ. ಮತ್ತೊಂದು ವಿಚಾರವೆಂದರೆ ಆ ಸಮಯದಲ್ಲಿ ಯಾವುದೇ ಬಾಲಿವುಡ್​ ನಟಿಯರು ಮದುವೆಯಾಗಲು ಮತ್ತು ನಟಿಸಲು ಬಯಸುತ್ತಿರಲಿಲ್ಲ. ಆದರೆ ಈ ಬಗ್ಗೆ ನಾನು ಯೋಚಿಸಿದೆ. ನಾನು ವೃತ್ತಿಯನ್ನು ಕೊನೆಗೊಳಿಸಿದರೆ ಅದು ನನ್ನ ಹಣೆಬರಹ ಅಂದುಕೊಂಡೆ’’ ಎಂದು ಹೇಳಿದರು.

    ಸದ್ಯ ಕರೀನಾ ಎರಡು ಮಕ್ಕಳ ತಾಯಿಯಾಗಿದ್ದರು ನಟನೆಯನ್ನು ಮಾತ್ರ ಬಿಟ್ಟಿಲ್ಲ. ಬಾಲಿವುಡ್​ ಬೇಡಿಕೆಯ ನಟಿಯರಲ್ಲಿ ಕರೀನಾ ಕೂಡ ಒಬ್ಬರು. ಮತ್ತೊಂದೆಡೆ ಅಧಿಕ ಸಂಭಾವನೆ ಪಡೆಯುವ ನಟಿಯರ ಸಾಲಿನಲ್ಲೂ ಇದ್ದಾರೆ.

    ಕರೀನಾ ಕಪೂರ್ ಖಾನ್ ಸದ್ಯ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.  ಡಿಸೆಂಬರ್‌ನಲ್ಲಿ ಚಿತ್ರಮಂದಿರಗಳಿಗೆ ಬರಲಿದೆ. ಅದರೊಂದಿಗೆ ಬ್ಯಾಂಕ್‌ರೋಲಿಂಗ್ ನಿರ್ದೇಶಕ ಹಂಸಲ್ ಮೆಹ್ತಾ ಅವರ ಮುಂದಿನ ಸಿನಿಮಾದಲ್ಲಿ  ನಟಿಯಾಗಿ ಅಭಿನಯಿಸುತ್ತಿದ್ದಾರೆ.
    First published: