Taimur Ali Khan‌ ಹೋಲುವ ಬಾಲಕ ವೈರಲ್‌..! ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ಹೀಗಿದೆ..

Zaryan Thapar: ಈ ಬಾರಿ ಕರೀನಾ ಕಪೂರ್ ಖಾನ್ (Kareena Kapoor Khan) ಮತ್ತು ಸೈಫ್ ಅಲಿ ಖಾನ್ (Saif Ali Khan) ಅವರ ಪುತ್ರ ತೈಮೂರ್ ಅಲಿ ಖಾನ್ ಅಭಿಮಾನಿಗಳಿಗೆ ಇದು ಟ್ರೀಟ್ ಆಗಿದೆ. ಗೊಂದಲವಾಯಿತೇ..? ಇಂಟರ್ನೆಟ್ ತನ್ನ ನೆಚ್ಚಿನ ಸ್ಟಾರ್‌ಗಳ ಮಗ ತೈಮೂರ್‌ ಅಲಿ ಖಾನ್‌ನಂತೆ ಕಾಣುವ ಬಾಲಕನೊಬ್ಬನನ್ನು ಗುರುತಿಸಿದೆ.

 Taimur Ali Khan

Taimur Ali Khan

  • Share this:
    Taimur Ali Khan‌: ಒಬ್ಬ ವ್ಯಕ್ತಿಗಳಂತೆ 7 ಜನರಿರುತ್ತಾರೆ ಎಂಬುದು ಹಿಂದಿನ ಕಾಲದಿಂದಲೂ ಬಂದಿರುವ ನಂಬಿಕೆ. ಅದು ಸತ್ಯವೆಂಬಂತೆ ಒಬ್ಬರನ್ನೊಬ್ಬರು ಹೋಲುವ ಫೋಟೋಗಳು ಹಾಗೂ ವಿಡಿಯೋಗಳನ್ನು ಇಂಟರ್‌ನೆಟ್‌ನಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ನೋಡುತ್ತಿರುತ್ತೀರಿ. ಅದರಲ್ಲೂ, ಸೆಲೆಬ್ರಿಟಿಗಳಂತೆ ಹೋಲುವ ಸಾಮಾನ್ಯ ವ್ಯಕ್ತಿಯ ಫೋಟೋಗಳು ವೈರಲ್‌ ಆಗುತ್ತಿರುತ್ತದೆ. ಅದರಂತೆ  ಇದೀಗ ಮತ್ತೊಂದು ಫೋಟೋ ಅಂತರ್ಜಾಲದಲ್ಲಿ ವೈರಲ್..! ಆದರೆ ಈ ಬಾರಿ ಕರೀನಾ ಕಪೂರ್ ಖಾನ್ (Kareena Kapoor Khan) ಮತ್ತು ಸೈಫ್ ಅಲಿ ಖಾನ್ (Saif Ali Khan) ಅವರ ಪುತ್ರ ತೈಮೂರ್ ಅಲಿ ಖಾನ್ ಅಭಿಮಾನಿಗಳಿಗೆ ಇದು ಟ್ರೀಟ್ ಆಗಿದೆ. ಗೊಂದಲವಾಯಿತೇ..? ಇಂಟರ್ನೆಟ್ ತನ್ನ ನೆಚ್ಚಿನ ಸ್ಟಾರ್‌ಗಳ ಮಗ ತೈಮೂರ್‌ ಅಲಿ ಖಾನ್‌ನಂತೆ ಕಾಣುವ ಬಾಲಕನೊಬ್ಬನನ್ನು ಗುರುತಿಸಿದೆ.

    ಬುಧವಾರ ಬೆಳಗ್ಗೆ, ಪಾಪರಾಜಿಯೊಬ್ಬರು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತೈಮೂರ್ ಮತ್ತು ಜರಿಯನ್ ಥಾಪರ್ ಎಂಬ ಪುಟ್ಟ ಮಗುವಿನ ಕೊಲಾಜ್ ಅನ್ನು ನೋಡಬಹುದಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಬಹುತೇಕ ಅವಳಿಗಳಂತೆ ಕಾಣುತ್ತಿದ್ದರು ಮತ್ತು ವಿಲಕ್ಷಣವಾದ ಹೋಲಿಕೆಯು ನೆಟ್ಟಿಗರನ್ನು ಸಹ ಅಚ್ಚರಿಗೀಡು ಮಾಡಿದೆ.

    ಪಾಪರಾಜೋ ಅವರು ಶೀರ್ಷಿಕೆಯೊಂದಿಗೆ ಕೊಲಾಜ್ ಅನ್ನು ಹಂಚಿಕೊಂಡಿದ್ದಾರೆ: "ಇಲ್ಲಿ ಪುಟ್ಟ ಜರಿಯನ್ ಥಾಪರ್ ಅವರು #taimuralikhan ಡೊಪ್ಪೆಲ್ ಗ್ಯಾಂಗರ್ (ಅವರಂತೆಯೇ ಕಾಣುವ ವ್ಯಕ್ತಿ) ಆಗಿದ್ದಾರೆ." ಎಂದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದಾರೆ.



    ಅವರು ಶೇರ್‌ ಮಾಡಿಕೊಂಡ ಫೋಟೋದಲ್ಲಿ, ಕರೀನಾ ಮತ್ತು ಸೈಫ್‌ರ ಪುಟ್ಟ ಮಗು ಕ್ಯಾಶುಯಲ್ ಟೀ ಧರಿಸಿ ಮತ್ತು ತಮ್ಮ ನೆಚ್ಚಿನ ಅಭಿವ್ಯಕ್ತಿಯನ್ನು ಮಾಡುತ್ತಿದ್ದರೆ, ಕೊಲಾಜ್‌ ಫೋಟೋದಲ್ಲಿರುವ ಜರಿಯನ್ ಫ್ಲೋರಲ್‌ ಪ್ರಿಂಟ್ ಕುರ್ತಾದಲ್ಲಿ ಅವರ ಸೈಡ್ ಪ್ರೊಫೈಲ್‌ನೊಂದಿಗೆ ಲೈಮ್‌ಲೈಟ್‌ನಲ್ಲಿ ಕಾಣಿಸಿಕೊಂಡರು. ತೈಮೂರ್ ಮತ್ತು ಜರಿಯನ್ ಇಬ್ಬರೂ ತಮ್ಮ ಫೋಟೋಗಳಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದರು ಮತ್ತು Instagramನಲ್ಲಿ ನಿಷ್ಠಾವಂತ ತೈಮೂರ್ ಅಭಿಮಾನಿಗಳ ಸಂಘವು ಇಬ್ಬರಿಗೂ ಪ್ರೀತಿಯ ಸುರಿಮಳೆಯನ್ನೇ ಸುರಿಸಿತು.

    ಇದನ್ನು ಓದಿ: Hrithik roshan ಮಾಜಿ ಪತ್ನಿಗೆ “ಡಾರ್ಲಿಂಗ್” ಎಂದ ಅರ್ಸ್ಲಾನ್ ಗೋನಿ..ಅವರಿಬ್ಬರ ಪ್ರೇಮ ಸಂಬಂಧ ನಿಜವೇ?

    ಈ ಸಂಬಂಧ ನೆಟ್ಟಿಗರೊಬ್ಬರು "mashallah" ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ಇನ್‌ಸ್ಟಾಗ್ರಾಮ್ ಬಳಕೆದಾರರು "ಉಫ್" ಎಂದು ಹೇಳಿದ್ದಾರೆ.. ಮತ್ತೊಬ್ಬ ಬಳಕೆದಾರರು ತೈಮೂರ್‌ಗೆ ಯಾರನ್ನೂ ಹೋಲಿಸಲಾಗುವುದಿಲ್ಲ ಎಂದು ಭಾವಿಸಿದರು ಮತ್ತು ಪೋಸ್ಟ್‌ನಲ್ಲಿ "ಟಿಮ್ ಈಸ್ ಟಿಮ್" ಎಂದು ಬರೆದಿದ್ದಾರೆ.

    ಈ ಮಧ್ಯೆ, ಅನೇಕ ಇಂಟರ್ನೆಟ್ ಬಳಕೆದಾರರು ಈ ಪೋಸ್ಟ್‌ಗೆ ಲವ್-ಸ್ಟ್ರಕ್ ಮತ್ತು ಹಾರ್ಟ್ ಎಮೋಟಿಕಾನ್‌ಗಳನ್ನು ಬರೆದಿದ್ದಾರೆ.

    ತೈಮೂರ್‌ ಅಲಿ ಖಾನ್ ಹಾಗೂ ಅವನಂತೆ ಕಾಣುವ ಮತ್ತೊಬ್ಬ ಬಾಲಕನನ್ನು ನೀವೇ ಪರಿಶೀಲಿಸಿ..






    ಈ ಹಿಂದೆ ಸೆಲೆಬ್ರಿಟಿಗಳಂತೆ ಕಾಣುವ ವ್ಯಕ್ತಿಗಳು ವೈರಲ್ ಆಗಿರುವ ಅನೇಕ ನಿದರ್ಶನಗಳು ಇದ್ದರೂ, ಬಹುಶಃ ಇದು ಸ್ಟಾರ್ ಕಿಡ್‌ನಂತೆ ಕಾಣುವ ಮಗು ಇನ್‌ಸ್ಟಾಗ್ರಾಮ್‌ನಲ್ಲಿ ಗಮನ ಸೆಳೆಯುತ್ತಿರುವ ಅಪರೂಪದ ಸಂದರ್ಭಗಳಲ್ಲಿ ಒಂದಾಗಿದೆ.

    ಇದನ್ನು ಓದಿ: ಕನ್ನಡ ಬಿಗ್ ಬಾಸ್​ ಖ್ಯಾತಿಯ ಗೀತಾ ಭಾರತಿ ಭಟ್​ Weight Loss Journey

    ತೈಮೂರ್‌ಗೆ ಸಂಬಂಧಿಸಿದಂತೆ, ಆತ ತನ್ನ ಹೆತ್ತವರು ಮತ್ತು ಕಿರಿಯ ಸಹೋದರ ಜೆಹ್ ಜತೆಗೆ ವಿಹಾರ ಮಾಡುತ್ತಿದ್ದಾನೆ. ಕರೀನಾ ತಮ್ಮ ಇತ್ತೀಚಿನ ಪ್ರವಾಸದ ಫೋಟೋಗಳನ್ನು ಇನ್ನೂ ಹಂಚಿಕೊಂಡಿಲ್ಲ, ಆದರೆ ಅನೇಕರನ್ನು ಮೆಚ್ಚಿಸುವ ಹಾಗೂ ತಲೆತಿರುಗುವ ಫೋಟೋಗಳ ಅಪ್‌ಲೋಡ್‌ಗಳ ಸರಣಿಯನ್ನು ಖಂಡಿತವಾಗಿಯೂ ಇನ್ಸ್ಟಾಗ್ರಾಮ್‌ನಲ್ಲಿ ನಿರೀಕ್ಷಿಸಬಹುದು..!
    First published: