ಬಾಲಿವುಡ್ ನಟಿಯರಾದ ಕರೀನಾ ಕಪೂರ್ ಖಾನ್ ಮತ್ತು ಸೋಹಾ ಅಲಿ ಖಾನ್ ಅವರಿಬ್ಬರ ನಡುವಿನ ಬಾಂಧವ್ಯ ಎಂತಹದು ಎಂದು ಬಹುತೇಕವಾಗಿ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಒಬ್ಬರ ಬಗ್ಗೆ ಇನ್ನೊಬ್ಬರು ತಮಾಷೆ ಮಾಡುವುದು, ಒಬ್ಬರು ಇನ್ನೊಬ್ಬರ ಫೋಟೋಗಳನ್ನು ಹಂಚಿಕೊಳ್ಳುವುದು ಮತ್ತು ಅದನ್ನು ಇಷ್ಟಪಡುವುದು ಎಲ್ಲವೂ ನಡೆಯುತ್ತಲೇ ಇರುತ್ತದೆ. ಆದರೆ ಈಗ ಕರೀನಾ ಸೋಹಾ ಹುಟ್ಟುಹಬ್ಬದಂದು ತಮ್ಮ ಪೋಸ್ಟ್ನಲ್ಲಿ ಸಾರ್ವಜನಿಕವಾಗಿ ಯಾವ ವಿಷಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ ನೋಡಿ. ಸೋಮವಾರದಂದು ಅಂದರೆ ಅಕ್ಟೋಬರ್ 4ರಂದು ನಟ ಸೈಫ್ ಅಲಿ ಖಾನ್ ಸಹೋದರಿ ಸೋಹಾ ಅಲಿ ಖಾನ್ 43 ನೇ ವರ್ಷಕ್ಕೆ ಕಾಲಿಟ್ಟಿದ್ದು, ಸೋಹಾ ಪತಿ ಬಾಲಿವುಡ್ ನಟ ಕುನಾಲ್ ಖೇಮು ಮತ್ತು ಇತರರು ಸಾಮಾಜಿಕ ಮಾಧ್ಯಮದಲ್ಲಿ ಸೋಹಾ ಅಲಿ ಖಾನ್ಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.
ಸೋಹಾ ಅಲಿ ಖಾನ್ ಮತ್ತು ಕುನಾಲ್ ಖೇಮು ಅವರ ಮದುವೆಯ ಒಂದು ಫೋಟೋವನ್ನು
ಕರೀನಾ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿರುವ ಪುಟದಲ್ಲಿ ಹಂಚಿಕೊಂಡು ಮತ್ತು ಅದಕ್ಕೆ ಒಂದು ಶೀರ್ಷಿಕೆಯನ್ನೂ ಬರೆದಿದ್ದಾರೆ.
"ಸೋಹಾ ಅವರೊಂದಿಗೆ ಮಾಲ್ಡೀವ್ಸ್ಗೆ ಹೋದ ಸಮಯದಿಂದಲೂ ನನಗೆ ನೆನಪಿರುವ ಒಂದು ವಿಷಯ ಅಂದ್ರೆ, ಸೋಹಾ ಕೋಳಿ ಮಾಂಸವನ್ನು ಹೇಗೆ ಒಂದು ಲೋಟ ನೀರನ್ನು ಅದರ ಮೇಲೆ ಹಾಕಿ ಇದ್ದ ಮಸಾಲೆಯನ್ನು ತೆಗೆಯಲು ತೊಳೆದಿದ್ದರು. ನಂತರ ಅದನ್ನು ಹಾಗೆಯೇ ತಿನ್ನುವುದನ್ನು ನಾನು ನೋಡಿದ್ದು. ನೀನು ತುಂಬಾನೇ ಶಾಂತ ಸ್ವಭಾವದ ಮಹಿಳೆ ಎಂದು ನನಗೆ ತಿಳಿದಿದೆ ಮತ್ತು ನಿಮಗೆ ಜನ್ಮದಿನದ ಶುಭಾಶಯಗಳು” ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಇವರು ಹಂಚಿಕೊಂಡಂತಹ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ 7 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.
ಇದನ್ನೂ ಓದಿ: Kunal Kemmu Birthday: ಕುಟುಂಬದೊಂದಿಗೆ 38ನೇ ಹುಟ್ಟುಹಬ್ಬ ಆಚರಿಸಿಕೊಂಡ ಬಿ-ಟೌನ್ ನಟ ಕುನಾಲ್ ಖೇಮು..!
ಈ ಫೋಟೋದಲ್ಲಿ ನಾವೆಲ್ಲರೂ ಅದ್ಭುತವಾಗಿ ಕಾಣುತ್ತೇವೆ ಎಂದು ನಾನು ಭಾವಿಸುತ್ತೇನೆ ಮತ್ತು ಅದಕ್ಕಾಗಿಯೇ ಇದನ್ನು ನಾನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದೇನೆ" ಎಂದು ಕರೀನಾ ಬರೆದಿದ್ದಾರೆ.
ಕುನಾಲ್ ಮತ್ತು ತಮ್ಮ ಪತ್ನಿ ಸೋಹಾ ಒಟ್ಟಿಗೆ ಇರುವ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿ ತಮ್ಮ ಶೀರ್ಷಿಕೆಯಲ್ಲಿ ಜನ್ಮದಿನದ ಶುಭ ಕೋರಿದ್ದಾರೆ. ಸೋಹಾ ಸಹೋದರಿ ಸಬಾ ಅಲಿ ಖಾನ್ ಕೂಡ ಅವರೊಂದಿಗಿರುವ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಮತ್ತು "ಹುಟ್ಟುಹಬ್ಬದ ಶುಭಾಶಯಗಳು ನನ್ನ ಮುದ್ದಿನ ಸಹೋದರಿ. ನೀವು ಯಾವಾಗಲೂ ಹೀಗೆ ನಗು ನಗುತಾ ಇರಿ ಮತ್ತು ನಾನು ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಪಡುತ್ತೇನೆ” ಎಂದು ಬರೆದಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಅಂಗಳದ ತಾರೆಯರು ತಮ್ಮ ಮುದ್ದಿನ ಪುಟ್ಟ ತಾರೆಯರೊಂದಿಗೆ
ಸೋಹಾ ಇತ್ತೀಚೆಗೆ ತಮ್ಮ ಮಗಳು ಇನಾಯಾ ನೌಮಿ ಖೇಮು ಹುಟ್ಟುಹಬ್ಬದ ದಿನದಂದು ಒಂದು ಪಾರ್ಟಿ ಆಯೋಜಿಸಿದ್ದರು. ಕಳೆದ ತಿಂಗಳು ಇನಾಯಾಗೆ ನಾಲ್ಕು ವರ್ಷ ತುಂಬಿತ್ತು. ಇದಲ್ಲದೆ ನಟಿ ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಜನ್ಮದಿನದ ಒಂದು ದಿನ ಮೊದಲು ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡದ್ದಕ್ಕಾಗಿ ಸೋಹಾ ಅಭಿನಂದಿಸಿದರು.
ಕುನಾಲ್ ಖೇಮು ಸೋಹಾ ಅಲಿ ಖಾನ್ ಅವರಿಗಿಂತ ಚಿಕ್ಕವರು. ಪ್ರೀತಿಸಿ ವಿವಾಹವಾದ ಈ ಜೋಡಿಗೆ ಒಬ್ಬಳು ಮುದ್ದಾದ ಮಗಳಿದ್ದಾಳೆ. ಕುನಾಲ್ ಖೇಮು ಇತ್ತೀಚೆಗಷ್ಟೆ 38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈಗ ಸಫಹಾ ಅವರಿಗೆ 43 ವರ್ಷ ವಯಸ್ಸಾಗಿದೆ. ಈ ಜೋಡಿ ಮದುವೆಯಾದಾಗ ಸಾಕಷ್ಟು ಸುದ್ದಿಯಲ್ಲಿದ್ದರು. ಒಂದು ವಯಸ್ಸಿನ ಕಾರಣಕ್ಕೆ ಹಾಗೂ ಮತ್ತೊಂದು ಅನ್ಯ ಧರ್ಮವಾಗಿದ್ದರಿಂದ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ