• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Taimur Ali Khan: ತೈಮೂರ್​​ಗಾಗಿ ಸೈಫ್-ಕರೀನಾ ಆಯೋಜಿಸಿದ ಬರ್ತ್​ಡೇ ಪಾರ್ಟಿ ವೈರಲ್ ಆಗಿದ್ಯಾಕೆ?

Taimur Ali Khan: ತೈಮೂರ್​​ಗಾಗಿ ಸೈಫ್-ಕರೀನಾ ಆಯೋಜಿಸಿದ ಬರ್ತ್​ಡೇ ಪಾರ್ಟಿ ವೈರಲ್ ಆಗಿದ್ಯಾಕೆ?

ತೈಮೂರ್ ಅಲಿ ಖಾನ್ - ಕರೀನಾ ಕಪೂರ್ - ಜೆಹ್ ಅಲಿ ಖಾನ್

ತೈಮೂರ್ ಅಲಿ ಖಾನ್ - ಕರೀನಾ ಕಪೂರ್ - ಜೆಹ್ ಅಲಿ ಖಾನ್

ತೈಮೂರ್ ತಾಯಿಯಾಗಿರುವ ನಟಿ ಕರೀನಾ ಕಪೂರ್ ಖಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸಮಾರಂಭದ ಅದ್ದೂರಿ ಚಿತ್ರಗಳನ್ನು ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದು ಅವು ಸಖತ್ ವೈರಲ್ ಆಗುತ್ತಿವೆ.

  • Trending Desk
  • 5-MIN READ
  • Last Updated :
  • Share this:

ಈ ಚಿತ್ರರಂಗದ ಸೆಲಿಬ್ರಿಟಿಗಳ (Celebrity), ಪ್ರಖ್ಯಾತ ನಟ-ನಟಿಯರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಆಯೋಜಿಸಲಾಗುವ ಔತಣಕೂಟಗಳ ಖದರ್‍ರೆ ವಿಶಿಷ್ಟವಾಗಿರುತ್ತದೆ. ಇಂತಹ ಸಮಾರಂಭಗಳು ಸಾಕಷ್ಟು ವೈರಲ್ (Viral) ಆಗುತ್ತವೆ ಅಂದರೆ ತಪ್ಪಾಗದು. ಅದರಲ್ಲೂ ಪ್ರಸಿದ್ಧ ಕಲಾವಿದರ ಮಕ್ಕಳ ಹುಟ್ಟುಹಬ್ಬದ (Birthday) ಸಮಾರಂಭ ಎಂದರೇ ಕೇಳಬೇಕೆ ಅದಕ್ಕೆ ತನ್ನದೆ ಆದ ವಿಶಿಷ್ಟತೆ ಇರುತ್ತದೆ. ಅದರಂತೆ ಆ ಮಗುವಿನ ಪೋಷಕರು ತಮ್ಮ ಸಾಮರ್ಥ್ಯಾನುಸಾರ ಪಾರ್ಟಿಗಳನ್ನು (Party) ಆಯೋಜಿಸುತ್ತಾರೆ.


ಸದ್ಯ, ಬಾಲಿವುಡ್ (Bollywood) ಚಿತ್ರರಂಗದ ಪ್ರಖ್ಯಾತ ಜೋಡಿಗಳಾದ ಕರೀನಾ ಕಪೂರ್ ಖಾನ್ (Kareen Kapoor Khan) ಹಾಗೂ ಸೈಫ್ ಅಲಿ ಖಾನ್ (Saif Ali Khan) ತಮ್ಮ ಮಗನಾದ ತೈಮೂರ್ ಅಲಿ ಖಾನ್ ಹುಟ್ಟು ಹಬ್ಬದ (Birthday) ಪೂರ್ವಭಾವಿಯಾಗಿ ಇವೆಂಟ್ ಒಂದನ್ನು ಆಯೋಜಿಸಿದ್ದು ಅದರ ಫೋಟೊಗಳು (Photos) ಈಗ ಎಲ್ಲೆಡೆ ಹರಿದಾಡುತ್ತಿವೆ. ವಿಶೇಷವೆಂದರೆ ಈ ಸಮಾರಂಭದ ಥೀಮ್ ಪ್ರಸಿದ್ಧ ಹಾಲಿವುಡ್ (Hollywood) ಚಿತ್ರ ಸ್ಟಾರ್ ವಾರ್ಸ್ ನಿಂದ ಪ್ರೇರಿತವಾಗಿದೆ.




ಈ ಬಗ್ಗೆ ತೈಮೂರ್ ತಾಯಿಯಾಗಿರುವ ನಟಿ ಕರೀನಾ ಕಪೂರ್ ಖಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸಮಾರಂಭದ ಅದ್ದೂರಿ ಚಿತ್ರಗಳನ್ನು ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದು ಅವು ಸಖತ್ ವೈರಲ್ ಆಗುತ್ತಿವೆ ಎನ್ನಬಹುದು.


ಇದನ್ನೂ ಓದಿ: Weight Loss Tips: ನಟಿ ಕರೀನಾ ಕಪೂರ್ 20 ಕೆಜಿ ತೂಕ ಇಳಿಸಿದ್ದು ಹೀಗಂತೆ, ನೀವೂ ಟ್ರೈ ಮಾಡಿ


ಇತ್ತೀಚೆಗೆ ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ತಮ್ಮ ಹಿರಿಯ ಮಗನಾಗಿರುವ ತೈಮೂರ್ ಅವರ ಹುಟ್ಟುಹಬ್ಬ ಸಮಾರಂಭವನ್ನು ಅದ್ದೂರಿಯಾಗಿಯೇ ಏರ್ಪಡಿಸಿದ್ದರು. ಇದೇ ಡಿಸೆಂಬರ್ 20 ರಂದು ತೈಮೂರ್ ಅಲಿ ಖಾನ್ ಆರು ವರ್ಷದವನಾಗಲಿದ್ದು ಅದರ ಪೂರ್ವಭಾವಿಯಾಗಿ ಈ ಔತಣಕೂಟವನ್ನು ಸ್ಟಾರ್ ದಂಪತಿಗಳು ಸ್ಟಾರ್ ವಾರ್ಸ್ ಥೀಮ್ ಅಡಿಯಲ್ಲಿ ಏರ್ಪಡಿಸಿದ್ದರು.




ಈ ಸಂದರ್ಭದಲ್ಲಿ ಸಮಾರಂಭದ ಅದ್ದೂರಿ ಫೋಟೋಗಳನ್ನು ಸೆರೆ ಹಿಡಿಯಲಾಗಿದ್ದು ಅವುಗಳನ್ನು ಕರೀನಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.




ಈ ಸಂದರ್ಭದಲ್ಲಿ ಕರೀನಾ ಅವರು ತೈಮೂರ್ ತಂದೆ ಸೈಫ್ ಅಲಿ ಖಾನ್ ಅವರು ತಮ್ಮ ಮಗನೊಂದಿಗೆ ಸಂತಸದ ಸಮಯ ಕಳೆಯುತ್ತಿರುವಂತಹ ಕುಟುಂಬ ಚಿತ್ರವನ್ನೂ ಸಹ ಹಂಚಿಕೊಂಡಿದ್ದಾರೆ.




ತಮ್ಮ ಇನ್ಸ್ಟಾಗ್ರಾಮ್ ರೀಲ್ ಬಳಸಿ ಅದರಲ್ಲಿ ಚಿತ್ರಗಳನ್ನು ಪೋಸ್ಟ್ ಮಾಡಿರುವ ಕರೀನಾ ಅವರು ಸ್ಲೀವ್ಲೆಸ್ ಬಿಳಿ ಟಾಪ್ ಧರಿಸಿದ್ದು ಕಪ್ಪು ಬಣ್ಣದ ಪ್ಯಾಂಟುಗಳನ್ನು ಹಾಕಿಕೊಂಡಿರುವುದನ್ನು ನೋಡಬಹುದಾಗಿದೆ. ಇನ್ನು, ಸೈಫ್ ಅವರು ನೀಲಿ ಬಣ್ಣದ ಶರ್ಟ್ ಹಾಗೂ ಜೀನ್ಸ್ ಪ್ಯಾಂಟನ್ನು ಧರಿಸಿ ಸಂತಸದ ಮೂಡ್ ನಲ್ಲಿರುವುದನ್ನು ಕಾಣಬಹುದು.


ಈ ನಡುವೆ ಕರೀನಾ ಅವರು ತಮ್ಮ ಮಗ ತೈಮೂರ್ ಆನಂದಿಸುತ್ತಿದ್ದ ಇನ್ನೊಂದು ಚಿತ್ರ ಹಂಚಿಕೊಂಡು ಅದಕ್ಕೆ, "ಪಾರ್ಟಿ ಹಿಟ್ ಆಗಿರುವ ಸ್ಪಷ್ಟ ಸಂಕೇತವಿದು ಟಿಮ್ ಎಂದು ಬರೆದುಕೊಂಡಿದ್ದಾರೆ.


ಇನ್ನು ಕರೀನಾ ಕಪೂರ್ ಅವರ ಈ ಪೋಸ್ಟಿಗೆ ಇತರೆ ಸೆಲೆಬ್ರಿಟಿಗಳು ಸಹ ಪ್ರತಿಕ್ರಯಿಸಿ ಶುಭ ಕೋರಿದ್ದಾರೆ. ಮಲೈಕಾ ಅರೋರಾ ಅವರು ಹೃದಯಗಳ ಸಂಕೇತದ ಮೂಲಕ ಪ್ರತಿಕ್ರಿಯೆ ನೀಡಿದ್ದರೆ, ಕರೀನಾ ಅವರ ಸಹೋದರಿ ಕರಿಷ್ಮಾ ಕಪೂರ್ ಅವರು ನೀಳ ಬಣ್ಣದ ಹೃದಯದ ಇಮೋಜಿಗಳನ್ನು ಪ್ರತಿಕ್ರಿಯೆಯಲ್ಲಿ ಹಂಚಿಕೊಂಡಿದ್ದಾರೆ. ಸೈಫ್ ಅವರ ಸಹೋದರಿಯಾದ ಸಬಾ ಅಲಿ ಖಾನ್ ಅವರು ಕೆಂಪು ಹೃದಯದ ಸಂಕೇತಗಳನ್ನು ತಮ್ಮ ಪ್ರತಿಕ್ರಿಯೆಯಾಗಿ ನೀಡಿದ್ದಾರೆ.

Published by:Divya D
First published: