Kareena Kapoor: ಕರೀನಾ ಕಪೂರ್ ಗರ್ಭಿಣಿಯಾಗಿದ್ದಾಗ ಹೇಗಿತ್ತು ಲೈಂಗಿಕ ಜೀವನ? ಗುಟ್ಟು ರಟ್ಟು ಮಾಡಿದ ನಟಿ

ಇನ್​ಸ್ಟಾಗ್ರಾಂನಲ್ಲಿ ಕರೀನಾ ಕಪೂರ್ ಅವರ ಜತೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ ಎಡರನೇ ಪ್ರಸವದಲ್ಲಿ ಎದುರಾದ ಕಷ್ಟಗಳ ಕುರಿತಾಗಿ ಮಾತನಾಡಿದ್ದಾರೆ. ಜೊತೆಗೆ ಆಗ ತಮ್ಮ ಲೈಂಗಿಕ ಜೀವನ ಹೇಗಿತ್ತು ಎಂದು ಮುಕ್ತವಾಗಿ ಮಾತನಾಡಿದ್ದಾರೆ.

ಕರೀನಾ ಕಪೂರ್​

ಕರೀನಾ ಕಪೂರ್​

  • Share this:
ಕರೀನಾ ಕಪೂರ್  (Kareena Kapoor Khan) ಎರಡನೇ ಸಲ ಗರ್ಭಿಣಿಯಾದಾಗಿನಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಫೋಟೋಶೂಟ್​, ರೆಡಿಯೋ ಕಾರ್ಯಕ್ರಮ, ತಮ್ಮ ಪ್ರೆಗ್ನೆನ್ಸಿ ಬುಕ್​, ಎರಡನೇ ಮಗನಿಗೆ ನಾಮಕರಣ ಮಾಡಿದ್ದು, ಹೀಗೆ ಒಂದಲ್ಲಾ ಒಂದು ವಿಷಯಗಳಿಂದಾಗಿ ಬೇಬೋ ಸದ್ದು ಮಾಡುತ್ತಿದ್ದಾರೆ. ಕರೀನಾ ಕಪೂರ್​ ಅವರು ಎರಡನೇ ಸಲ ಗರ್ಭಿಣಿಯಾದ ಅನುಭವವನ್ನು ತಮ್ಮ ಕರೀನಾ ಕಪೂರ್ ಖಾನ್​ ಪ್ರೆಗ್ನೆನ್ಸಿ ಬೈಬಲ್​  (Kareena Kapoor Khan Pregnancy Bible) ಇದೇ ತಿಂಗಳ 9ರಂದು ಈ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಈ ಪುಸ್ತಕದಲ್ಲಿ ಕರೀನಾ ಕಪೂರ್ ಅವರ ಪ್ರೆಗ್ನೆನ್ಸಿ ಕುರಿತಾಗಿ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗಿತ್ತು. ಅದಕ್ಕೆ ಕರೀನಾ ಸಹ ಮುಕ್ತವಾಗಿ ಉತ್ತರ ನೀಡಿದ್ದಾರೆ. ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.ಈ ಪುಸ್ತಕದಲ್ಲೇ ಎರಡನೇ ಮಗನ ಫೋಟೋವನ್ನು ಮೊದಲು ರಿವೀಲ್ ಮಾಡಿದ್ದು ಕರೀನಾ. ಇನ್ನು ಪುಸ್ತಕದಲ್ಲಿ ಸಾಕಷ್ಟು ತಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಕರೀನಾ ಕಪೂರ್ ಬರೆದುಕೊಂಡಿದ್ದಾರೆ. 

ಇನ್​ಸ್ಟಾಗ್ರಾಂನಲ್ಲಿ ಕರೀನಾ ಕಪೂರ್ ಅವರ ಜತೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ ಎಡರನೇ ಪ್ರಸವದಲ್ಲಿ ಎದುರಾದ ಕಷ್ಟಗಳ ಕುರಿತಾಗಿ ಮಾತನಾಡಿದ್ದಾರೆ. ಮಗುವಿನ ಪ್ರಸವದ ಸಮಯದಲ್ಲಿ ಈ ಸಲ ತುಂಬಾ ಕಷ್ಟವಾಗಿತ್ತು. ತೈಮೂರ್ ಹುಟ್ಟಿದಾಗ ಅಷ್ಟು ಕಷ್ಟವಾಗಿರಲಿಲ್ಲ. ಆಗ ಸಖತ್ ಎಂಜಾಯ್ ಮಾಡಿದ್ದೆ. ಆ ಧೈರ್ಯದಲ್ಲೇ ಎರಡನೇ ಮಗು ಮಾಡಿಕೊಳ್ಳಲು ಸಿದ್ಧಳಾದೆ. ಆದರೆ ಈ ಸಲ ತುಂಬಾ ಕಷ್ಟಗಳನ್ನು ಎದುರಿಸಿದೆ. ತನ್ನಿಂದ ಇದು ಈ ಸಲ ಸಾಧ್ಯವಾಗುವುದಿಲ್ಲ ಎಂದೆನಿಸಿತ್ತು. ಕೆಲವೊಮ್ಮೆ ಖುಷಿಯಾಗಿದ್ದರೆ, ಮತ್ತೆ ಕೆಲವು ಸಲ ತುಂಬಾ ಸೆಕ್ಸಿಯಾಗಿದ್ದೀನಿ ಎಂದು ಅನಿಸುತ್ತಿತ್ತು. ಮತ್ತೆ ಕೆಲವು ಸಲ ನನ್ನ ಮೇಲೆ 100 ಕೆಜಿ ತೂ ಇಟ್ಟಂತೆ ಫೀಲ್​ ಆಗುತ್ತಿದ್ದೆ ಎಂದಿದ್ದಾರೆ.




ಇದೇ ವೇಳೆ ಕರೀನಾ ಕಪೂರ್ ಗರ್ಭಿಣಿಯಾಗಿದ್ದಾಗ ತಮ್ಮ ಲೈಂಗಿಕ ಜೀವನ ಹೇಗಿತ್ತು ಎಂದೂ ಹೇಳಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಗಂಡನ ಪಾತ್ರ ಬಹಳ ಮುಖ್ಯವಾಗುತ್ತದೆ. ಗಂಡನ ಸಹಕಾರ ಹಾಗೂ ಜೊತೆ ಇಲ್ಲದಿದ್ದರೆ ತುಂಬಾ ಕಷ್ಟವಾಗುತ್ತದೆ. ಈ ಸಮಯದಲ್ಲಿ ಹೆಣ್ಣು ಮಕ್ಕಳು ಸುಂದರವಾಗಿ ಕಾಣಬೇಕೆಂದು ಒತ್ತಡ ಹೇರಬಾರದು. ಅಲ್ಲದೆ ಚೆನ್ನಾಗಿ ಕಾಣುತ್ತಿಲ್ಲ ಎಂದು ಮನಸ್ಸು ನೋಯಿಸ ಬಾರದು ಎಂದು ಹೇಳಿದ್ದಾರೆ ಬೇಬೊ.

ಇದನ್ನೂ ಓದಿ: Rashmika Mandanna: ಹಾಟ್​ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ: ಇದರ ಹಿಂದಿದೆ ಒಂದು ಕಾರಣ..!

ಇನ್ನು ಆಗ ಲೈಂಗಿಕ ಕ್ರಿಯೆಯ ಬಗ್ಗೆ ನಮ್ಮ ಭಾವನೆಗಳು ಯಾವ ರೀತಿಯ ಇರುತ್ತದೆ ಎಂದು ನಮಗೆ ತಿಳಿಯುವುದಿಲ್ಲ. ಆಗ ಗಂಡನ ಸಹಕಾರ ಹಾಗೂ ಅವರು ಯಾವ ರೀತಿ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ ಅನ್ನೋದು ಬಹಳ ಮುಖ್ಯವನಾಗುತ್ತದೆ. ಸೈಫ್ ನನಗೆ ತುಂಬಾ ಸಹಕಾರಿಯಾಗಿದ್ದರು. ನನ್ನ ಭಾವನೆ ಹಾಗೂ ಮೂಡ್​ ಅನ್ನು ಅರ್ಥ ಮಾಡಿಕೊಂಡು ನನ್ನ ಜೊತೆಹೇಗಿರಬೇಕೆಂದು ತಾಳ್ಮೆಯಿಂದ ವರ್ತಿಸುತ್ತಿದ್ದರು. ಈ ಸಮಯದಲ್ಲಿ ನಮ್ಮ ಲೈಂಗಿಕ ಜೀವನ ಸೂಪ್ ಆ್ಯಕ್ಟೀವ್ ಆಗಿ ಇರಬೇಕು ಎಂದಿದ್ದಾರೆ ಕರೀನಾ.

ಇದನ್ನೂ ಓದಿ: BBK 8 Manju Pavagada: ಬಿಗ್​ ಬಾಸ್​ ಫಿನಾಲೆ ವೇದಿಕೆ ಮೇಲೆ ಅಪ್ಪ-ಅಮ್ಮನ ಹೆಸರು ಹೇಳದ ಬಗ್ಗೆ ಮಂಜು ಹೇಳಿದ್ದು ಹೀಗೆ..!

ಕರೀನಾ ಕಪೂರ್ ಅವರ ಇತ್ತೀಚೆಗೆ ಪ್ರಕಟವಾದ ಪುಸ್ತಕ, ಪ್ರೆಗ್ನೆನ್ಸಿ ಬೈಬಲ್‌ ಮೂಲಕ ಎರಡನೇ ಪುತ್ರನ ನಿಜವಾದ ಹೆಸರು ಬಹಿರಂಗವಾಗಿದೆ. ಮಗುವಿಗೆ ಜಹಾಂಗೀರ್ ಅಲಿ ಖಾನ್ ಎಂದು ಹೆಸರಿಟ್ಟಿದ್ದಾರೆ. ಜೆಹ್ ಸ್ಪಷ್ಟವಾಗಿ ಅದರ ಶಾರ್ಟ್‌ ಫಾರ್ಮ್ ಆಗಿದೆ.
Published by:Anitha E
First published: