ಬಾಲಿವುಡ್ ಬೇಬೊ... ನವಾಬನ ರಾಣಿ ಕರೀನಾ ಕಪೂರ್ ಕಡೆಗೂ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಖ್ಯಾತ ನಟಿಯಾಗಿದ್ದರೂ ಕರೀನಾ ಕಪೂರ್ ಇಲ್ಲಿವರೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದೂ ಖಾತೆ ಹೊಂದಿರಲಿಲ್ಲ. ಆದರೂ ಅವರು ಸದಾ ಟ್ರೆಂಡಿಂಗ್ನಲ್ಲಿರುತ್ತಿದ್ದರು.
ಕರೀನಾರ ಪ್ರತಿಯೊಂದು ಸುದ್ದಿ ಅವರ ಅಭಿಮಾನಿಗಳ ಪುಟಗಳಲ್ಲಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪ್ರಕಟವಾಗುತ್ತಿತ್ತು. ಸದಾ ಸಿನಿಮಾ ಬಿಟ್ಟರೆ ಕುಟುಂಬ ಅಂತ ಇರುತ್ತಿದ್ದ ಬೇಬೊ ಕಡೆಗೂ ಇನ್ಸ್ಟಾಗ್ರಾಂಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.
![Kareena Kapoor Khan Ruled the Lakme Fashion Week Runway in a Stunning 3D Outfit]()
ಕರೀನಾ ಕಪೂರ್ ವಿವಾಹವಾಗಿ ಒಂದು ಮಗುವಿನ ತಾಯಿಯಾದ ನಂತರವೂ ಬ್ಯುಸಿಯಾಗಿರುವ ಕೆಲವೆ ಕೆಲವು ನಟಿಯರಲ್ಲಿ ಒಬ್ಬರು.
ಇನ್ಸ್ಟಾಗ್ರಾಂನಲ್ಲಿ ನಿನ್ನೆಯಷ್ಟೆ ಖಾತೆ ತೆರೆದಿರುವ ಕರೀನಾ ಮೊದಲು ಒಂದು ಬೆಕ್ಕಿನ ವಿಡಿಯೋ ಪೋಸ್ಟ್ ಮಾಡಿದ್ದು... ಕಮಿಂಗ್ ಸೂನ್ ಎಂದು ಶೀರ್ಷಿಕೆ ಕೊಟ್ಟಿದ್ದರು.
ನಂತರ ಇಂದು ತಮ್ಮ ಮೊದಲ ಸಿಂಗಲ್ ಫೋಟೋ ಹಂಚಿಕೊಂಡಿದ್ದಾರೆ. ಕಪ್ಪುಬಣ್ಣದ ಸ್ಪೋರ್ಟ್ಸ್ ಔಟ್ಫಿಟ್ನಲ್ಲಿ ಸಖತ್ ಸ್ಟೈಲಿಶ್ ಆಗಿ ಕುಳಿತಿರುವ ಚಿತ್ರ ನೋಡಿದರೆ, ಇದು ಖಾಸಗಿ ಕಂಪೆನಿಯೊಂದರ ಜಾಹೀರಾತಿಗಾಗಿ ತೆಗೆದಿರುವ ಚಿತ್ರ ಅನ್ನೋದು ತಿಳಿಯುತ್ತದೆ. ಇದಕ್ಕೆ 'ದ ಕ್ಯಾಟ್ ಇಸ್ ಔಟ್ ಆಫ್ ದ ಬ್ಯಾಗ್' #HelloInstagram ಎಂದು ಬರೆದುಕೊಂಡಿದ್ದಾರೆ.
ಕರೀನಾ ಕಪೂರ್ ಇನ್ಸ್ಟಾಗ್ರಾಂಗೆ ಬಂದು 24 ಗಂಟೆ ಕಳೆಯುವಷ್ಟರಲ್ಲೇ 7 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಸಂಪಾದಿಸಿಕೊಂಡಿದ್ದಾರೆ. ಬಿ-ಟೌನ್, ಸ್ಯಾಂಡಲ್ವುಡ್ ಸೇರಿದಂತೆ ಸಾಕಷ್ಟು ಮಂದಿ ಸಿನಿ ಸೆಲೆಬ್ರಿಟಿಗಳು ಬೋಬೊರನ್ನು ಫಾಲೋ ಮಾಡುತ್ತಿದ್ದಾರೆ.
Sara Ali Khan: ಬಿಕಿನಿ ತೊಟ್ಟು ಸಹೋದರನ ಜೊತೆ ಪೋಸ್ ಕೊಟ್ಟ ಸಾರಾ ಅಲಿಖಾನ್: ಟ್ರೋಲ್ ಮಾಡಿದ ಟ್ರೋಲಿಗರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ