Kareena Kapoor Khan: ಆ ಒಬ್ಬರಿಗೋಸ್ಕರ ಮಾತ್ರ ಕರೀನಾ ಕಪೂರ್ ಖಾನ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿದ್ರಂತೆ

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರು ಏನು ಓದಿದ್ದಾರೆ ಅಂತ ತಿಳಿದುಕೊಳ್ಳಲು ಅಭಿಮಾನಿಗಳಿಗೆ ತುಂಬಾನೇ ಕುತೂಹಲ ಇರಬೇಕಲ್ಲವೇ? ಇವರು 2000 ರಲ್ಲಿ ಜೆ ಪಿ ದತ್ತಾ ಅವರ ರೆಫ್ಯೂಜಿ ಚಿತ್ರದ ಮೂಲಕ ತಮ್ಮ 20ನೇ ವಯಸ್ಸಿನಲ್ಲಿಯೇ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮಾತ್ರವಲ್ಲದೆ, ವಿಶ್ವದಲ್ಲೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಓದಿದ್ದಾರೆ. ಆದರೆ ಅವರು ಅಧ್ಯಯನದಲ್ಲಿ ಎಂದಿಗೂ ಆಸಕ್ತಿ ಹೊಂದಿರಲಿಲ್ಲವಂತೆ.

ಕರೀನಾ ಕಪೂರ್

ಕರೀನಾ ಕಪೂರ್

  • Share this:
ಹಿಂದಿ ಚಲನಚಿತ್ರೋದ್ಯಮದಲ್ಲಿ ದೊಡ್ಡ ನಟ (Actor) ಮತ್ತು ನಟಿಯಾದವರಲ್ಲಿ (Actress) ಕೆಲವು ಜನರು ಚೆನ್ನಾಗಿ ಓದಿಕೊಂಡು ಬಂದವರಾಗಿದ್ದರೇ, ಇನ್ನೂ ಕೆಲವರು ಕಾಲೇಜು (College) ಮೆಟ್ಟಿಲನ್ನು ಸಹ ಹತ್ತಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಬಿಡಿ ಓದಿಗೂ ಮತ್ತು ಅವರು ಮಾಡುತ್ತಿರುವ ನಟನೆಯ ವೃತ್ತಿಗೂ ಅಷ್ಟೊಂದು ಸಂಬಂಧವಿಲ್ಲ, ಆದರೆ ಕೆಲವರು ಓದಿ ಮುಗಿಸಿ ಚಿತ್ರರಂಗಕ್ಕೆ ಬಂದಿದ್ದರೆ ಚೆನ್ನಾಗಿರುತ್ತಿತ್ತು ಅಂತ ಈಗ ಹೇಳುತ್ತಿದ್ದುದ್ದನ್ನು ನಾವು ನೋಡಬಹುದು. ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ (Kareena kapoor khan) ಅವರು ಏನು ಓದಿದ್ದಾರೆ ಅಂತ ತಿಳಿದುಕೊಳ್ಳಲು ಅಭಿಮಾನಿಗಳಿಗೆ ತುಂಬಾನೇ ಕುತೂಹಲ ಇರಬೇಕಲ್ಲವೇ? ಇವರು 2000 ರಲ್ಲಿ ಜೆ ಪಿ ದತ್ತಾ ಅವರ ರೆಫ್ಯೂಜಿ ಚಿತ್ರದ ಮೂಲಕ ತಮ್ಮ 20ನೇ ವಯಸ್ಸಿನಲ್ಲಿಯೇ ಹಿಂದಿ ಚಿತ್ರರಂಗಕ್ಕೆ (Hindi cinema) ಪಾದಾರ್ಪಣೆ ಮಾಡಿದರು.

ಕರೀನಾ ಕಪೂರ್ ಖಾನ್ ಅವರ ಶೈಕ್ಷಣಿಕ ಅರ್ಹತೆ ಏನು? 
ಕರೀನಾ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮಾತ್ರವಲ್ಲದೆ, ವಿಶ್ವದಲ್ಲೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಓದಿದ್ದಾರೆ. ಆದರೆ ಅವರು ಅಧ್ಯಯನದಲ್ಲಿ ಎಂದಿಗೂ ಆಸಕ್ತಿ ಹೊಂದಿರಲಿಲ್ಲವಂತೆ. ಅವರು ತನ್ನ ತಾಯಿ ಬಬಿತಾ ಕಪೂರ್ ಅವರ ಆಸೆಯನ್ನು ಪೂರೈಸಲು ಮಾತ್ರ ಸಂಸ್ಥೆಗೆ ಪ್ರವೇಶ ಪಡೆದಿದ್ದರಂತೆ ಎಂದು ಹೇಳಲಾಗುತ್ತಿದೆ.

ತನ್ನ ಅನೇಕ ಸಂದರ್ಶನಗಳಲ್ಲಿ, ಅವರು ತನ್ನ ಶಿಕ್ಷಣವನ್ನು ಮುಗಿಸಿದ ನಂತರ ತನ್ನ ಚಲನ ಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಬೇಕಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಪದವಿಯನ್ನು ಪೂರ್ಣಗೊಳಿಸದಿರುವುದಕ್ಕೆ ಇಂದಿಗೂ ಅವರು ವಿಷಾದಿಸುತ್ತಾರೆ. ಹಾಗಾದರೆ ಬನ್ನಿ ನಟಿ ಕರೀನಾ ಕಪೂರ್ ಖಾನ್ ಅವರ ಶೈಕ್ಷಣಿಕ ಅರ್ಹತೆಯನ್ನು ತಿಳಿದುಕೊಂಡು ಬರೋಣ.

ಮುಂಬೈ ಮತ್ತು ಡೆಹ್ರಾಡೂನ್ ನಿಂದ ಶಾಲಾ ಶಿಕ್ಷಣ ಮುಗಿಸಿದ ಕರೀನಾ
ಕರೀನಾ ಕಪೂರ್ ಖಾನ್ ಮುಂಬೈನ ಜಮ್ನಾಬಾಯಿ ನರ್ಸಿ ಶಾಲೆಯಲ್ಲಿ ತನ್ನ ಅಧ್ಯಯನವನ್ನು ಪ್ರಾರಂಭಿಸಿದರು. ಇದರ ನಂತರ, ತನ್ನ ತಾಯಿಯ ಆಸೆಯಂತೆ ಅವರು ಡೆಹ್ರಾಡೂನ್ ನ ವೆಲ್ಹ್ಯಾಮ್ ಗರ್ಲ್ಸ್ ಶಾಲೆಗೆ ಪ್ರವೇಶ ಪಡೆದರು. ಆದರೆ ನಂತರ ಅವರು ಅದನ್ನು ಅಲ್ಲಿ ಓದುವುದನ್ನು ಇಷ್ಟಪಡಲು ಪ್ರಾರಂಭಿಸಿದ್ದರು ಎಂದು ಒಪ್ಪಿಕೊಂಡರು.

ಇದನ್ನೂ ಓದಿ:  Keerthi Suresh: ಟ್ರೆಡಿಷನಲ್ ಲುಕ್​ನಲ್ಲಿ ಮಿಂಚಿದ ಮಹಾನಟಿ, ಕೀರ್ತಿ ಸುರೇಶ್ ನೋಟಕ್ಕೆ ಮನಸೋತ ಫ್ಯಾನ್ಸ್

ಕರೀನಾಗೆ ಗಣಿತ ವಿಷಯ ಎಂದರೆ ಕಷ್ಟವಿತ್ತಂತೆ
ಕರೀನಾ ಕಪೂರ್ ಖಾನ್ ತನ್ನ ಅನೇಕ ಸಂದರ್ಶನಗಳಲ್ಲಿ ಗಣಿತದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಹೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ಇದಲ್ಲದೆ, ಇತರ ವಿಷಯಗಳಲ್ಲಿ ಅವರ ಗ್ರೇಡ್ ಗಳು ಸಾಕಷ್ಟು ಉತ್ತಮವಾಗಿದ್ದವು. ಡೆಹ್ರಾಡೂನ್ ನ ವೆಲ್ಹ್ಯಾಮ್ ಗರ್ಲ್ಸ್ ಸ್ಕೂಲ್ ನಲ್ಲಿ ಓದಿದ ನಂತರ, ಅವರು ಮುಂಬೈಗೆ ಮರಳಿದರು.

ಕಾಲೇಜು ಅಧ್ಯಯನ ಮುಗಿಸಲಿಲ್ಲ ಕರೀನಾ
ಇತರ ಅನೇಕ ಬಾಲಿವುಡ್ ನಟಿಯರಂತೆ, ಕರೀನಾ ಕಪೂರ್ ಕೂಡ ತನ್ನ ಕಾಲೇಜು ಅಧ್ಯಯನವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಕರೀನಾ ಮೊದಲಿನಿಂದಲೂ ನಟನೆ ಮತ್ತು ಚಲನಚಿತ್ರಗಳ ವಾತಾವರಣದಲ್ಲಿದ್ದವರು. ಅದಕ್ಕಾಗಿಯೇ ಅವರ ಒಲವು ಸಹ ಆ ಕಡೆ ಇತ್ತು. ಮುಂಬೈಗೆ ಬಂದ ನಂತರ, ಕರೀನಾ ಮುಂಬೈನ ಮಿಥಿಬಾಯಿ ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ವಾಣಿಜ್ಯ ಅಧ್ಯಯನ ಮಾಡಿದರು, ಆದರೆ ಅವರು ತಮ್ಮ ಅಧ್ಯಯನವನ್ನು ಅಲ್ಲಿಗೆ ಬಿಟ್ಟರು.

ಅಧ್ಯಯನಕ್ಕಾಗಿ ಅಮೆರಿಕಕ್ಕೆ ಹೋದ ಕರೀನಾ
ಕರೀನಾಗೆ ಓದಲು ಇಷ್ಟವಿರಲಿಲ್ಲ, ಆದರೆ ಅವರು ಅದರಿಂದ ದೂರ ಓಡಿ ಹೋಗಲಿಲ್ಲ. ಮಿಥಿಬಾಯಿ ಕಾಲೇಜಿನ ನಂತರ, ಅವರು ಯುಎಸ್ ನ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಮೈಕ್ರೋ ಕಂಪ್ಯೂಟರ್ ಗಳಲ್ಲಿ ಮೂರು ತಿಂಗಳ ಕೋರ್ಸ್ ಮಾಡಿದರು. ಇದರ ನಂತರ, ಅವರು ಕಾನೂನಿನ ಅಧ್ಯಯನದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಅವರು ಮುಂಬೈನ ಸರ್ಕಾರಿ ಕಾನೂನು ಕಾಲೇಜಿಗೆ ಪ್ರವೇಶ ಪಡೆದರು, ಆದರೆ ಅಲ್ಲಿಯೂ ಸಹ ಅವರು ತನ್ನ ಪದವಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ಪುಸ್ತಕಗಳನ್ನು ಓದುವ ಹವ್ಯಾಸ
ಕಾಲೇಜಿನಲ್ಲಿ ಓದುತ್ತಿರುವಾಗ, ಕರೀನಾ ಕಪೂರ್ ಪುಸ್ತಕಗಳಿಂದ ಆಕರ್ಷಿತರಾದರು. ಓದುವ ಅಭ್ಯಾಸವನ್ನು ಬೆಳೆಸಿಕೊಂಡರು. ಅಷ್ಟೊತ್ತಿಗಾಗಲೇ ಅವರು ಚಲನಚಿತ್ರಗಳಲ್ಲಿ ಕೆಲಸ ಮಾಡಲು ಮನಸ್ಸು ಮಾಡಿದ್ದರು. ಆದ್ದರಿಂದ ಅವರು ಕಿಶೋರ್ ನಮಿತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಟನಾ ತರಬೇತಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು.

ಇದನ್ನೂ ಓದಿ:  Pooja Hegde: ಸೀತಾ ರಾಮಂ ಸಿನಿಮಾದ ಚಾನ್ಸ್ ಮಿಸ್ ಮಾಡಿಕೊಂಡ ಪೂಜಾ, ಈ ಒಂದೇ ಒಂದು ಕಾರಣಕ್ಕಂತೆ

ನಂತರದಲ್ಲಿ ಕರೀನಾ ಅವರು ತನ್ನ ಅಧ್ಯಯನವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ತುಂಬಾ ಸಾರಿ ಬೇಸರದಿಂದ ಹೇಳಿಕೊಂಡಿದ್ದರು.
Published by:Ashwini Prabhu
First published: