ಕೈ ಕೆಸರು ಮಾಡಿಕೊಂಡು ಮಗ ತೈಮೂರ್​ ಜೊತೆ ಮಡಿಕೆ ಮಾಡುತ್ತಿದ್ದಾರೆ ಕರೀನಾ ಕಪೂರ್​..!

Kareena Kapoor: ತೈಮೂರ್ ಅಲಿ ಖಾನ್​ ಹಾಗೂ ಸೈಫ್​ ಅಲಿ ಖಾನ್​ ಜೊತೆ ಕರೀನಾ ಸದ್ಯ ಪ್ರವಾಸದಲ್ಲಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಸುತ್ತಾಡುತ್ತಾ ಕರೀನಾ ಕಪೂರ್​ ಕಾಲ ಕಳೆಯುತ್ತಿದ್ದಾರೆ.

ತೈಮೂರ್​ ಜೊತೆ ಕರೀನಾ ಕಫೂರ್​

ತೈಮೂರ್​ ಜೊತೆ ಕರೀನಾ ಕಫೂರ್​

  • Share this:
ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಸೈಫ್​ ಅಲಿ ಖಾನ್​ ಹಾಗೂ ಕರೀನಾ ಕಪೂರ್​. ಗರ್ಭಿಣಿಯಾಗಿದ್ದರೂ ಕರೀನಾ ಶೂಟಿಂಗ್​ ಹಾಗೂ ಪ್ರವಾಸ ಅಂತ ಬ್ಯುಸಿಯಾಗಿದ್ದಾರೆ. ಲಾಲ್​ ಸಿಂಗ್​ ಚಡ್ಡಾ ಸಿನಿಮಾದ ಚಿತ್ರೀರಕಣ ಪೂರ್ಣಗೊಳಿಸಿದ ನಂತರ  ರೇಡಿಯೋದಲ್ಲಿ ಕರೀನಾ ನಡೆಸಿಕೊಡುವ ಖ್ಯಾತ ಕಾರ್ಯಕ್ರಮ ವಾಟ್​ ವುಮೆನ್​ ವಾಂಟ್​ನ  3ನೇ ಆವೃತ್ತಿಯ ಚಿತ್ರೀಕರಣ ಮತ್ತೆ ಆರಂಭವಾಗಿದೆ. ಇದರಲ್ಲಿ ಸೆಲೆಬ್ರಿಟಿಗಳ ಸಂದರ್ಶನ ಮಾಡುತ್ತಿರುವ ಬೇಬೊ ಸಾಲು ಸಾಲು ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಕಷ್ಟು ಜಾಹೀರಾತುಗಳು ಕೆಲಸ ನಡುವೆ  ಕರೀನಾ ಕಪೂರ್ ಈಗ ಬ್ರೇಕ್​ ಪಡೆದು ಮಗನ ಜೊತೆ ಪ್ರವಾಸದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸಕ್ರಿಯವಾಗಿರುವ ಕರೀನಾ ಕಪೂರ್​ ತಮ್ಮ ಪ್ರವಾಸದ ವಿಡಿಯೋ ಹಾಗೂ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕರೀನಾ ಹಾಗೂ ತೈಮೂರ್​ ಅವರ ವಿಡಿಯೋಗಳಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ತೈಮೂರ್ ಅಲಿ ಖಾನ್​ ಹಾಗೂ ಸೈಫ್​ ಅಲಿ ಖಾನ್​ ಜೊತೆ ಕರೀನಾ ಸದ್ಯ ಪ್ರವಾಸದಲ್ಲಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಸುತ್ತಾಡುತ್ತಾ ಕರೀನಾ ಕಪೂರ್​ ಕಾಲ ಕಳೆಯುತ್ತಿದ್ದಾರೆ.
ಈ ಪ್ರವಾಸದಲ್ಲಿ ಕರೀನಾ ಕಪೂರ್​ ಅವರ ಕುಟುಂಬದೊಂದಿಗೆ ಅರ್ಜುನ್​ ಕಪೂರ್ ಸಹ ಇದ್ದಾರೆ. ಕರೀನಾ ಹಾಗೂ ಸೈಫ್​ ಅವರ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ತಗೆಯುತ್ತಾ ಅಫಿಶಿಯಲ್​ ಫೋಟೋಗ್ರಾಫರ್ ಆಗಿಬಿಟ್ಟಿದ್ದಾರೆ.
ಮಗನ ಜೊತೆ ಹಿಮಾಚಲ ಪ್ರದೇಶದಲ್ಲಿ ಕರೀನಾ ಕಪೂರ್ ಕೈ ಕೆಸರು ಮಾಡಿಕೊಂಡು ಮಡಿಕೆ ಮಾಡುವುದನ್ನು ಕಲಿಯುತ್ತಿದ್ದಾರೆ. ಅದರ ಫೋಟೋ ಹಾಗೂ ವಿಡಿಯೋ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.
ಕರೀನಾ ಕಪೂರ್​ ತಮ್ಮ ಎರಡನೇ ಮಗುವಿನ ಬಗ್ಗೆ ವಿಷಯ ಹಂಚಿಕೊಂಡ ನಂತರ, ಈಗ ಬೇಬೊ ಸಹ ಪಾಪರಾಜಿಗಳ ಹಾಟ್​ ಫೇವರಿಟ್​ ಆಗಿದ್ದಾರೆ. ಕರೀನಾ ಮನೆಯಿಂದ ಹೊರ ಬಂದರೆ ಸಾಕು ಫೋಟೋಗ್ರಾಫರ್​ಗಳು ಹಿಂದೆ ಬೀಳುತ್ತಾರೆ. ಇದರಿಂದಾಗಿ ಕರೀನಾರ ನಿತ್ಯದ ಅಪ್ಡೇಟ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ.
Published by:Anitha E
First published: