ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇದೀಗ ದಕ್ಷಿಣ ಭಾರತದ ಊಟವನ್ನು ಸವಿಯುವ ಮೂಲಕ ಸುದ್ದಿಯಾಗಿದ್ದಾರೆ. ಈ ಬಗ್ಗೆ ನಟಿ ಹಂಚಿಕೊಂಡಿರುವ ಖುಷಿ ಸಂಗತಿ ಏನೆಂದು ತಿಳಿಯೋಣ..!
ದಕ್ಷಿಣ ಭಾರತದ ಆಹಾರವು ವಿಶ್ವದ ಅತ್ಯಂತ ಜನಪ್ರಿಯ ಆಹಾರಗಳಲ್ಲಿ ಒಂದು. ಏಕೆಂದರೆ ಅದು ಯಾವುದೇ ಅಡ್ಡಪರಿಣಾಮಗಳನ್ನು ಬೀರುವುದಿಲ್ಲ ಹಾಗೂ ಮನಸ್ಸು ಖುಷಿಯಾಗುತ್ತದೆ, ಹೊಟ್ಟೆ ಹಾಯಗಿರುತ್ತದೆ. ಮೃದುವಾದ ಮತ್ತು ತುಪ್ಪದಲ್ಲಿ ಮಾಡಿರುವ ಇಡ್ಲಿಗಳು ಆಗಿರಬಹುದು ಅಥವಾ ಗರಿಗರಿ ಅಪ್ಪಂ ಆಗಿರಬಹುದು ಎಂದಿಗೂ ಅತ್ಯುತ್ತಮ ರುಚಿಯನ್ನು ನೀಡುವಲ್ಲಿ ಹಿಂದೆ ಸರಿದಿಲ್ಲ.
ವಿವಿಧ ಪಾಕಪದ್ಧತಿಯಿಂದ ಹಾಗೂ ವಿವಿಧ ಸೂಕ್ತವಾದ ಆಯ್ಕೆಯಿಂದ ಮನೆ ಮಾತಾಗಿರುವ ದಕ್ಷಿಣ ಭಾರತದ ಊಟವು ಶೆಫ್‌ಗಳಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಇಷ್ಟವಾಗುತ್ತದೆ. ಹಾಗಾಗಿ ಇದನ್ನು ಸವಿದ ನಂತರ ಪ್ರೀತಿಯನ್ನು ವ್ಯಕ್ತಪಡಿಸುವುದನ್ನು ನಾವು ಹೆಚ್ಚಾಗಿ ನೋಡುತ್ತೇವೆ. ನಟಿ ಕರೀನಾ ಕಪೂರ್ ಖಾನ್ ಅವರು ಇತ್ತೀಚೆಗೆ ಮನೆಯಲ್ಲಿ ಆನಂದಿಸಿದ ರುಚಿಯಾದ ದಕ್ಷಿಣ ಭಾರತದ ಊಟದ ಒಂದು ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಕರೀನಾ ಕಪೂರ್ ಖಾನ್ ಫೋಟೋ ಹಂಚಿಕೊಳ್ಳುವ ಮೂಲಕ ಸಾಂಪ್ರದಾಯಿಕ ದಕ್ಷಿಣ ಶೈಲಿಯಲ್ಲಿ ಬಾಳೆ ಎಲೆಯ ಮೇಲೆ ವಿವಿಧ ಐಟಂಗಳೊಂದಿಗೆ, "ಎಂತಹ ಅದ್ಭುತ ಊಟ" ಕ್ಯಾಪ್ಶನ್ ಬರೆದಿದ್ದಾರೆ. ಚಿತ್ರದಲ್ಲಿ, ನಾವು ಅಕ್ಕಿ ಹಪ್ಪಳ, ಏವಿಯಲ್ ಕರಿ, ಕಾಯಿ ಚಟ್ನಿ, ಬಾಳೆಕಾಯಿ ಚಿಪ್ಸ್ ಹಾಗೂ ಬಾಳೆಹಣ್ಣನ್ನು ಕಾಣಬಹುದು. ಸಾಂಬಾರ್, ರಸಂ, ಮತ್ತು ಕೆಲವು ದಕ್ಷಿಣ ಶೈಲಿಯ ತರಕಾರಿ ಐಟಂಗಳು ಕೆಂಪು ಅನ್ನದೊಂದಿಗೆ ಬಡಿಸಲಾಗುತ್ತದೆ. ಇಡೀ ಊಟವೂ ನಿಜವಾಗಿಯೂ ಅತ್ಯುತ್ತಮ ಮತ್ತು ರುಚಿಕರವಾಗಿ ಕಾಣುತ್ತಿತ್ತು. ಅದನ್ನು ನೋಡಿ ನಾವು ಹೇಳಬಹುವುದು ಕರೀನಾ ಕಪೂರ್ ಖಾನ್ ಅದನ್ನು ಆನಂದಿಸಿದ್ದಾರೆ ಎಂದು!
ಕರೀನಾ ಕಪೂರ್ ಖಾನ್ ಸ್ವಯಂ ಘೋಷಿತ ಆಹಾರ ಪ್ರೇಮಿ. ನಟಿ ಕಾಲಕಾಲಕ್ಕೆ ತನ್ನ ಆಹಾರ ಡೈರಿಯ ತುಣುಕನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ, ಡಿಸೈನರ್ ಮತ್ತು ನಿರ್ಮಾಪಕ ರಿಯಾ ಕಪೂರ್, ಕರೀನಾಗೆ ವಿಶೇಷವಾಗಿ ತಯಾರಿಸಿದ ರುಚಿಕರವಾದ ಬರ್ಗರ್ ಅನ್ನು ಕಳುಹಿಸಿದ್ದಾರೆ. ಅದು ತುಂಬಾ ಅದ್ಭುತವಾಗಿದೆ. ಹೇಳಲು ಪದಗಳೇ ಸಾಲುತ್ತಿಲ್ಲ ಎಂದು ತಮ್ಮ ಖುಷಿಯನ್ನು ಕರೀನಾ ಕಪೂರ್ ಖಾನ್ ವ್ಯಕ್ತಪಡಿಸಿದ್ದರು.
ಇನ್ನು ನಟನೆಯ ವಿಚಾರಕ್ಕೆ ಬಂದರೆ, 2020 ರಲ್ಲಿ ಕರೀನಾ ಕಪೂರ್ ಖಾನ್ ಕೊನೆಯ ಬಾರಿಗೆ 'ಅಂಗ್ರೇಜಿ ಮೀಡಿಯಂ' ನಲ್ಲಿ ಇರ್ಫಾನ್ ಖಾನ್ ಅವರೊಂದಿಗೆ ಬಿಡುಗಡೆಯಾದ ಚಿತ್ರದಲ್ಲಿ ನಟಿಸಿದ್ದಾರೆ. ಅವರ ಮುಂದಿನ ಚಿತ್ರ ಆಮೀರ್ ಖಾನ್ ಜತೆಗೆ ಲಾಲ್ ಸಿಂಗ್ ಚಡ್ಡಾ. ಇದು 1994 ರ ಕ್ಲಾಸಿಕ್ 'ಫಾರೆಸ್ಟ್ ಗಂಪ್' ಅನ್ನು ಆಧರಿಸಿದೆ. ಈ ಚಿತ್ರವು 2021 ರಲ್ಲಿ ಬಿಡುಗಡೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ