Kareena Kapoor- Saif Ali Khan ಮನೆಯಲ್ಲಿ ಗಣಪತಿ ಹಬ್ಬದ ಸಂಭ್ರಮ

ಕರೀನಾ ಕಪೂರ್ ಖಾನ್​ ತಮ್ಮ ಮನೆಯಲ್ಲಿ ಪುಟ್ಟ ಗಣಪತಿಗೆ ಪೂಜೆ ಮಾಡಿರುವ ಕೆಲವು ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪುಟ್ಟ ಗಣಪನ ಜೊತೆಗೆ ತೈಮೂರ್​ ತಯಾರಿಸಿರುವ ಕ್ಲೇ ಗಣಪತಿಗಳನ್ನೂ ಪೂಜೆಗೆ ಇಡಲಾಗಿದೆ. ಇನ್ನು ಮಗ ತೈಮೂರ್​ ಹಾಗೂ ಪತಿ ಸೈಫ್ ಅಲಿ ಖಾನ್​ ಸಹ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಗಣಪತಿ ಪೂಜೆ ಮಾಡಿದ ಕರೀನಾ-ಸೈಫ್​

ಗಣಪತಿ ಪೂಜೆ ಮಾಡಿದ ಕರೀನಾ-ಸೈಫ್​

  • Share this:
ಇಂದು ಇಡೀ ದೇಶದಲ್ಲಿ ಎಲ್ಲೆಡೆ ಸಂಭ್ರಮದಿಂದ ಗಣೇಶ ಹಬ್ಬವನ್ನು (Ganesh Chaturthi 2021) ಆಚರಿಸಲಾಗುತ್ತಿದೆ. ಇದಕ್ಕೆ ಸೆಲೆಬ್ರಿಟಿಗಳೂ ಹೊರತಾಗಿಲ್ಲ. ಬಾಲಿವುಡ್​ ಸೆಲೆಬ್ರಿಟಿಗಳ ಮನೆಯಲ್ಲೂ ಸಹ ಅದ್ಧೂರಿಯಾಗಿ ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಶಿಲ್ಪಾ ಶೆಟ್ಟಿ (Shilpa Shetty), ಸಲ್ಮಾನ್ ಖಾನ್​  (Salman Khan)ಅವರ ಮನೆಗಳಲ್ಲಿ ಇದನ್ನು ತುಂಬಾ ದೊಡ್ಡದಾಗಿಯೇ ಸಂಭ್ರಮಿಸಲಾಗುತ್ತದೆ. ಇನ್ನು ನಟಿ ಕರೀನಾ ಕಪೂರ್ (Kareena Kapoor) ಸಹ ತಮ್ಮ ಮನೆಯಲ್ಲಿ ಪತಿ ಸೈಫ್ ಅಲಿ ಖಾನ್​ (Saif Ali Khan) ಹಾಗೂ ಮಗನ ಜೊತೆ ಗಣಪತಿಯ ಪೂಜೆ ಮಾಡಿದ್ದಾರೆ. ಹೌದು, ಮನೆಯಲ್ಲಿ ಪುಟ್ಟ ಗಣಪತಿಯನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದ್ದಾರೆ.

ಕರೀನಾ ಕಪೂರ್ ಖಾನ್​ ತಮ್ಮ ಮನೆಯಲ್ಲಿ ಪುಟ್ಟ ಗಣಪತಿಗೆ ಪೂಜೆ ಮಾಡಿರುವ ಕೆಲವು ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪುಟ್ಟ ಗಣಪನ ಜೊತೆಗೆ ತೈಮೂರ್​ ತಯಾರಿಸಿರುವ ಕ್ಲೇ ಗಣಪತಿಗಳನ್ನೂ ಪೂಜೆಗೆ ಇಡಲಾಗಿದೆ. ಇನ್ನು ಮಗ ತೈಮೂರ್​ ಹಾಗೂ ಪತಿ ಸೈಫ್ ಅಲಿ ಖಾನ್​ ಸಹ ಪೂಜೆಯಲ್ಲಿ ಭಾಗಿಯಾಗಿದ್ದಾರೆ.






ಕರೀನಾ ಕಪೂರ್ ಶೇರ್ ಮಾಡಿರುವ ಚಿತ್ರಗಳಲ್ಲಿ ಎರಡನೇ ಮಗ ಜಹಾಂಗೀರ್ ಮಾತ್ರ ಕಾಣಿಸುತ್ತಿಲ್ಲ. ನೆಟ್ಟಿಗರು ಪೂಜೆಯಲ್ಲಿ ಜೇ ಕಾಣಿಸುತ್ತಿಲ್ಲ ಎಂದೂ ಪ್ರಶ್ನಿಸುತ್ತಿದ್ದಾರೆ. ಇನ್ನು ತೈಮೂರ್ ಹಾಗೂ ಸೈಫ್ ಅಲಿ ಖಾನ್​ ಬಿಳಿ ಬಣ್ಣದ ಖುರ್ತಾದಲ್ಲಿ ಕಾಣಿಸಿಕೊಂಡಿದ್ದಾರೆ.

ಮಕ್ಕಳ ಹೆಸರಿನ ವಿಷಯದಿಂದ ಟ್ರೋಲ್​ ಮಾಡಿದ ವಿಷಯ: ಕರೀನಾ ಹೇಳಿದ್ದು ಹೀಗೆ...

ಮಾಧ್ಯಮವೊಂದರ ಜೊತೆ ಮಾತನಾಡುತ್ತಾ, ಕರೀನಾ ತನ್ನ ಮಕ್ಕಳಾದ ತೈಮೂರ್ ಅಲಿ ಖಾನ್​ ಮತ್ತು ಜಹಾಂಗೀರ್​ ಅಲಿ ಖಾನ್​ ಹೆಸರಿನ ಕುರಿತು ಆಗುತ್ತಿರುವ ಟ್ರೋಲ್​ಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಈ ಟ್ರೋಲ್​ಗಳಿಂದ ನಿಜಕ್ಕೂ ನೋವಾಗಿದೆ ಎಂದು ಹೇಳಿದ್ದಾರೆ. ಜನರು ಮಕ್ಕಳನ್ನು ಹೇಗೆ ಟ್ರೋಲ್ ಮಾಡಲು ಸಾಧ್ಯ, ಅದು ತಪ್ಪು ಎಂಬುದು ಜನರಿಗೆ ಅರ್ಥವಾಗುವುದಿಲ್ಲವಾ ಎಂಬುದು ನನಗೆ ಅರ್ಥ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಡಿಲಿನಲ್ಲಿ ಗಣಪನನ್ನು ಕೂರಿಸಿಕೊಂಡ ಕುಲವಧು ಖ್ಯಾತಿಯ ನಟಿ ತುಂಬು ಗರ್ಭಿಣಿ Amrutha Ramamoorthy

ನಿಜವಾಗಿಯೂ ಹೇಳಬೇಕು ಎಂದರೆ ಮಕ್ಕಳಿಗೆ ಏನು ತಿಳಿಯುವುದಿಲ್ಲ. ಆ ಹೆಸರು ನನಗೆ ಮತ್ತು ಸೈಫ್​ಗೆ ಇಷ್ಟವಾಗಿದೆ ಎನ್ನುವುದು ಮಾತ್ರ ಮುಖ್ಯವಾಗುತ್ತದೆ. ಅಲ್ಲದೆ ಮಕ್ಕಳನ್ನು ಟ್ರೋಲ್ ಮಾಡಲು ಅವರಿಗೆ ಮನಸ್ಸು ಹೇಗೆ ಬರುತ್ತದೆ. ಕೆಲವೊಮ್ಮೆ ಟ್ರೋಲ್​ಗಳನ್ನು ನೋಡಿದಾಗ ನಗು ಬರುತ್ತದೆ. ಮುಗ್ಧ ಮಕ್ಕಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ಮಕ್ಕಳನ್ನು ಏಕೆ ಟ್ರೋಲ್ ಮಾಡುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ. ನನಗೆ ಅದರ ಬಗ್ಗೆ ಭಯಇದ್ದೇ ಇರುತ್ತದೆ. ಇವುಗಳಿಂದ ಹೇಗೆ ಹೊರಬರುವುದು ಎಂಬುದನ್ನ ಮಾತ್ರ ಗಮನಿಸಿಬೇಕು. ಏಕೆಂದರೆ ಅದನ್ನೇ  ಇಟ್ಟುಕೊಂಡಯ ಜೀವನ ನಡೆಸಲು ಸಾಧ್ಯವಿಲ್ಲ. ಹೆಚ್ಚು ಟ್ರೋಲ್​ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದು ಕರೀನಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Love Me Or Hate Me Movie: ಡಾರ್ಲಿಂಗ್ ಕೃಷ್ಣ-ರಚಿತಾ ರಾಮ್​ ಅಭಿನಯದ ಸಿನಿಮಾಗೆ ಕ್ಲ್ಯಾಪ್​ ಮಾಡಿದ ಮಿಲನಾ ನಾಗರಾಜ್​

ಕರೀನಾ ಕಪೂರ್​, ಸೈಫ್ ಅಲಿ ಖಾನ್​, ತೈಮೂರ್ ಅಲಿ ಖಾನ್​ ಮತ್ತು ಜಹಾಂಗೀರ್​ ಕಳೆದ ತಿಂಗಳಷ್ಟೆ ಮಾಲ್ಡೀವ್ಸ್ ಪ್ರವಾಸದಿಂದ ಮರಳಿದ್ದಾರೆ. ಇನ್ನು, ಕರೀನಾ ಈಗ ಆಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ನಟಿಸಿಲಿದ್ದಾರೆ. ಈ ಚಿತ್ರವನ್ನು ಅದ್ವೈತ್ ಚಂದನ್ ನಿರ್ದೇಶಿಸಿದ್ದು, ಕ್ರಿಸ್ಮಸ್ ಸಮಯದಲ್ಲಿ ರಿಲೀಸ್​ ಆಗಲಿದೆ.
Published by:Anitha E
First published: