Bollywood: ಕರೀನಾ ಕಪೂರ್ ಭಾವುಕರಾಗಿದ್ದು ಏಕೆ..? ಮಕ್ಕಳನ್ನು ಮಿಸ್‌ ಮಾಡ್ಕೊಂಡ ಬೆಬೋ..!

Kareena Kapoor: ನಾನು ನನ್ನ ಮಕ್ಕಳನ್ನು ಮಿಸ್ ಮಾಡಿಕೊಳ್ಳಬೇಕಾಯಿತು ಎಂದು ಹೃದಯ ಒಡೆದು ಹೋಗಿರುವ ಎಮೋಜಿಯೊಂದಿಗೆ ಸಿಟ್ಟು ವ್ಯಕ್ತಪಡಿಸಿದ್ದಾರೆ.

ಕರೀನಾ ಕಪೂರ್

ಕರೀನಾ ಕಪೂರ್

  • Share this:
ಈ ವಾರದ ಆರಂಭದಲ್ಲಿ ಚಿತ್ರ ನಿರ್ದೇಶಕ (Film director) ಕರಣ್ ಜೋಹರ್ ಆಯೋಜಿಸಿದ್ದ ಔತಣ ಕೂಟದಲ್ಲಿ ಭಾಗವಹಿಸಿದ್ದ ಕರೀನಾ ಕಪೂರ್ (Kareena Kapoor) ಹಾಗೂ ಆಕೆಯ ಸ್ನೇಹಿತೆ ಅಮೃತಾ ಅರೋರಾ (Amrita Arora) ಕೊರೋನಾಗೆ (Corona) ತಗಲಿರುವುದು ದೃಢಪಟ್ಟಿದೆ. ಹೀಗಾಗಿ ಕರೀನಾ ಕಪೂರ್ ಕನಿಷ್ಠ 14 ದಿನಗಳ ಕಾಲ ಪ್ರತ್ಯೇಕ ವಾಸ ಅನುಭವಿಸುವುದು ಅನಿವಾರ್ಯವಾಗಿದೆ. ತನಗೆ ಕೊರೊನಾ ದೃಢಪಟ್ಟಿದೆ ಎಂದು ತಿಳಿಯುತ್ತಲೇ ಕರೀನಾ ಭಾವುಕರಾದರು. ಏಕೆ ಗೊತ್ತೆ..? ತಮ್ಮ ಮುದ್ದಿನ ಮಕ್ಕಳಾದ (Young children) ತೈಮೂರ್ ಮತ್ತು ಜೇರಿದ 14 ದಿನಗಳ ದೀರ್ಘಾವಧಿ ಕಾಲ ದೂರ (Separately) ಉಳಿಯಬೇಕಾಗುತ್ತದಲ್ಲ ಎಂದು!!

ಭಾವನಾತ್ಮಕ ಪೋಸ್ಟ್
ಕಳೆದ ಒಂದು ವಾರದಿಂದ ಸ್ವಯಂ ಪ್ರತ್ಯೇಕವಾಸದಲ್ಲಿದ್ದ ಕರೀನಾ ಕಪೂರ್ ಖಾನ್, ಇದೀಗ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದರ ಬೆನ್ನಿಗೇ ಅವರು ತನ್ನ ಮುದ್ದು ಮಕ್ಕಳಾದ ತೈಮೂರ್ ಮತ್ತು ಜೇಯನ್ನು ಮಿಸ್ ಮಾಡಿಕೊಂಡ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ. ತಾನು ತನ್ನ ಮುದ್ದು ಮಕ್ಕಳನ್ನು ಎಷ್ಟು ತೀವ್ರವಾಗಿ ಮಿಸ್ ಮಾಡಿಕೊಂಡೆ ಎಂದು ಸಂದೇಶದಲ್ಲಿ ತಿಳಿಸಿರುವ ಆಕೆ, ಅದಕ್ಕಾಗಿ ಕೊರೊನಾ ವೈರಸ್ ಅನ್ನು ಶಪಿಸಿದ್ದಾರೆ. ಸೋಂಕಿಗೆ ತುತ್ತಾದ ಸಂದರ್ಭದಲ್ಲಿ ಆ ಸಂಕಷ್ಟದಿಂದ ಹೊರಬರಲು ಕರೀನಾ ನಿರಂತರವಾಗಿ ತಮ್ಮನ್ನು ತಾವು ಸ್ಫೂರ್ತಿಗೊಳಿಸಿಕೊಂಡಿದ್ದಾರೆ.

ಇದನ್ನೂ ಓದಿ: Bollywood: ಕರೀನಾ ಮತ್ತು ಕೊರೋನಾ ಬಗ್ಗೆ ಮಾತನಾಡಿದ ಅಮೀರ್ ಖಾನ್

ಕೊರೊನಾ ನಾನು ನಿನ್ನನ್ನು ದ್ವೇಷಿಸುತ್ತೇನೆ
ಈ ಕತೆಯನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕರೀನಾ, “ಕೊರೊನಾ ನಾನು ನಿನ್ನನ್ನು ದ್ವೇಷಿಸುತ್ತೇನೆ…” “ನಾನು ನನ್ನ ಮಕ್ಕಳನ್ನು ಮಿಸ್ ಮಾಡಿಕೊಳ್ಳಬೇಕಾಯಿತು ಎಂದು ಹೃದಯ ಒಡೆದು ಹೋಗಿರುವ ಎಮೋಜಿಯೊಂದಿಗೆ ಸಿಟ್ಟು ವ್ಯಕ್ತಪಡಿಸಿದ್ದಾರೆ. “ಆದರೆ.. ಶೀಘ್ರವಾಗಿ ಇದನ್ನು ಮಾಡುತ್ತೇನೆ ಎಂದು ಸ್ನಾಯುಗಳನ್ನು ಹುರಿಗೊಳಿಸುವ ಎಮೋಜಿ ಹಾಕಿದ್ದಾರೆ.

ಇದಕ್ಕೂ ಮುನ್ನ ಗುರುವಾರ ತಾನು ಪ್ರತ್ಯೇಕವಾಸ ಅನುಭವಿಸುತ್ತಿರುವ ಕೊಠಡಿಯಿಂದ ತೆಗೆದಿದ್ದ ತನ್ನ ಪತಿ ಹಾಗೂ ನಟ ಸೈಫ್ ಅಲಿ ಖಾನ್‌ನ ಭಾವಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿ ಕರೀನಾ ಕೊಠಡಿ ಎದುರಿಗಿರುವ ಕಟ್ಟಡದ ಟೆರೇಸ್ ಮೇಲೆ ನಿಂತಿರುವ ಸೈಫ್ ಅಲಿ ಖಾನ್ ಕಪ್‌ನಲ್ಲಿ ಚಹಾ ಕುಡಿಯುತ್ತಿರುವ ದೃಶ್ಯವಿದೆ.

ಮರೆಯಬೇಡಿ ಗೆಳೆಯರೇ
“ಓಕೆ.. ನಾವು ಈ ಕೊರೊನಾ ಯುಗದಲ್ಲಿ ಪ್ರೀತಿಯಿಂದ ಇದ್ದೇವೆ. ಮರೆಯಬೇಡಿ ಗೆಳೆಯರೇ.. ಇದು ಸುಪ್ತವಾಗಿದೆ” ಎಂದು ಇನ್ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಕರೀನಾ ಸೈಫ್ ಅಲಿ ಖಾನ್ ಕುರಿತು ಬರೆದುಕೊಂಡಿದ್ದಾರೆ. ಈ ವಾರದ ಆರಂಭದಲ್ಲಿ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ಮುಂಬೈನ ಬಾಂದ್ರಾದ ತಮ್ಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಔತಣ ಕೂಟದಲ್ಲಿ ಭಾಗವಹಿಸಿದ್ದ ಕರೀನಾ ಕಪೂರ್ ಮತ್ತು ಆಕೆಯ ಸ್ನೇಹಿತೆ ಅಮೃತಾ ಅರೋರಾಗೆ ಕೊರೊನಾ ದೃಢಪಟ್ಟಿತ್ತು. ಔತಣ ಕೂಟದಲ್ಲಿ ಭಾಗವಹಿಸಿದ್ದ ಮತ್ತಿಬ್ಬರು ಅತಿಥಿಗಳಾದ ಸೀಮಾ ಕಪೂರ್ ಮತ್ತು ಮಹೀಪ್ ಕಪೂರ್‌ಗೂ ಕೊರೊನಾ ದೃಢಪಟ್ಟಿತ್ತು.

ಕೆಲವೇ ದಿನಗಳಲ್ಲಿ ವರದಿ
ಮಾಧ್ಯಮ ವರದಿಗಳ ಪ್ರಕಾರ, ಅವರ ರಕ್ತದ ಮಾದರಿಗಳನ್ನು ಜೆನೋಮ್ ಸೀಕ್ವೆನ್ಸಿಂಗ್‌ಗಾಗಿ ಮುಂಬೈನ ಕಸ್ತೂರಬಾ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ವರದಿ ಬರುವ ನಿರೀಕ್ಷೆಯಿದೆ. ನಾನು ಮತ್ತು ನನ್ನ ಕುಟುಂಬದ ಸದಸ್ಯರೂ ಕೂಡಾ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಸೋಂಕು ದೃಢಪಟ್ಟಿಲ್ಲ ಎಂದು ಚಿತ್ರ ನಿರ್ಮಾಪಕ ಕರಣ್ ಜೋಹರ್ ಬುಧವಾರ ಪ್ರಕಟಿಸಿದ್ದಾರೆ. “ನಾನು 2 ಬಾರಿ ಪರೀಕ್ಷೆಗೊಳಗಾಗಿದ್ದು, 2 ಬಾರಿಯೂ ಕೊರೊನಾ ಸೋಂಕಿಗೆ ಒಳಗಾಗದಿರುವುದು ದೃಢಪಟ್ಟಿದೆ” ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Kareena Kapoor Khan: ರಿವೀಲ್ ಆಯ್ತು ಕರೀನಾ ಕಪೂರ್ ಫಿಟ್‌ನೆಸ್ ರಹಸ್ಯ

ಸೆಲೆಬ್ರಿಟಿಗಳಿಗಾಗಿ ಔತಣ ಕೂಟ
ಡಿಸೆಂಬರ್ 8ರಂದು ಕರಣ್ ಜೋಹರ್ ತಮ್ಮ ನಿವಾಸದಲ್ಲಿ ಕರೀನಾ ಮತ್ತು ಇತರ ಸೆಲೆಬ್ರಿಟಿಗಳಿಗಾಗಿ ಔತಣ ಕೂಟ ಆಯೋಜಿಸಿದ್ದರು. ಓಮಿಕ್ರಾನ್ ವೈರಸ್ ಭೀತಿಯಿರುವಾಗ ಕರಣ್ ಜೋಹರ್ ಔತಣಕೂಟ ಏರ್ಪಡಿಸಿದ್ದು ತೀವ್ರ ಟೀಕೆಗೆ ಗುರಿಯಾಗಿತ್ತು. ಆದರೆ, ಟೀಕಾಕಾರರ ಮಾತುಗಳನ್ನು ಅಲ್ಲಗಳೆದಿದ್ದ ಕರಣ್ ಜೋಹರ್, “ಕೇವಲ 8 ಮಂದಿಗೆ ಔತಣ ಕೂಟ ಏರ್ಪಡಿಸುವುದು ಸಮಾರಂಭ ಎನ್ನಿಸಿಕೊಳ್ಳುವುದಿಲ್ಲ” ಎಂದು ತಿರುಗೇಟು ನೀಡಿದ್ದರು. ಅಲ್ಲದೆ ತಮ್ಮ ಮನೆ ಕೊರೊನಾ ಹಾಟ್ ಸ್ಪಾಟ್ ಆಗಿದೆ ಎಂಬ ವಿರೋಧಿಗಳ ಟೀಕೆಯನ್ನು ಅಲ್ಲಗಳೆದಿದ್ದರು.
Published by:vanithasanjevani vanithasanjevani
First published: