Kareena Kapoor: ಸೀತೆಯ ಪಾತ್ರಕ್ಕೆ 12 ಕೋಟಿ ಬೇಡಿಕೆ ಇಟ್ಟಿದ್ರಾ ಕರೀನಾ ಕಪೂರ್? ಅವರೇ ಹೇಳಿದ್ದಾರೆ ನೋಡಿ

ಸಿನಿಮಾ ಒಂದರಲ್ಲಿ ಸೀತೆಯ ಪಾತ್ರಕ್ಕೆ ಬಣ್ಣ ಹಚ್ಚುವುದಕ್ಕೆ ಅವರು ಭಾರಿ ಮೊತ್ತವನ್ನು ಬೇಡಿಕೆ ಇಟ್ಟಿದ್ದಾರೆ ಎಂಬ ವದಂತಿಗಳು ತಿಂಗಳು ಕಾಲ ಹಬ್ಬಿದ್ದವು. ಆದರೆ ಈಗ ಕರೀನಾ ಕಪೂರ್‌ ಅವೆಲ್ಲ ವದಂತಿಗಳ ಬಗ್ಗೆ ಮೌನ ಮುರಿದು ಸೀತಾ ಪಾತ್ರಕ್ಕೆ ನಾನು ಭಾರಿ ಮೊತ್ತದ ಬೇಡಿಕೆ ಇಟ್ಟಿರುವೇನೆ? ಎಂಬುದರ ಬಗ್ಗೆ ಮಾತನಾಡಿದ್ದಾರೆ.

 ಕರೀನಾ ಕಪೂರ್ ಖಾನ್

ಕರೀನಾ ಕಪೂರ್ ಖಾನ್

  • Share this:
ಸಿನಿಮಾ (Movie) ಒಂದರಲ್ಲಿ ಸೀತೆಯ  ಪಾತ್ರಕ್ಕೆ  ಬಣ್ಣ ಹಚ್ಚುವುದಕ್ಕೆ ಅವರು ಭಾರಿ ಮೊತ್ತವನ್ನು ಬೇಡಿಕೆ ಇಟ್ಟಿದ್ದಾರೆ ಎಂಬ ವದಂತಿಗಳು ತಿಂಗಳು ಕಾಲ ಹಬ್ಬಿದ್ದವು. ಆದರೆ ಈಗ ಕರೀನಾ ಕಪೂರ್‌ (Kareena Kapoor) ಅವೆಲ್ಲ ವದಂತಿಗಳ (Rumores) ಬಗ್ಗೆ ಮೌನ ಮುರಿದು ಸೀತಾ ಪಾತ್ರಕ್ಕೆ ನಾನು ಭಾರಿ ಮೊತ್ತದ ಬೇಡಿಕೆ ಇಟ್ಟಿರುವೇನೆ? ಎಂಬುದರ ಬಗ್ಗೆ ಮಾತನಾಡಿದ್ದಾರೆ. ಮೊದಲಿನಿಂದಲೂ ನನಗೆ ಈ ಸೀತಾ ಸಿನಿಮಾದ (Sita Movie) ಆಫರ್‌ಗಳು ಬಂದಿರಲಿಲ್ಲ ಎಂದು ಕರೀನಾ ಕಪೂರ್‌ ಹೇಳಿದ್ದಾರೆ. ಕರೀನಾ ತನ್ನ ನಟನಾ ಮೊತ್ತವನ್ನು (Acting Amount) ಹೆಚ್ಚಿಸಿದ್ದಾರೆ ಎಂಬ ವದಂತಿಗಳಿವೆ ಮತ್ತು ಹಿಂದೂ ಪುರಾಣವಾದ ಮಹಾಕಾವ್ಯ ರಾಮಾಯಣದ ಪ್ರಮುಖ ಪಾತ್ರವಾದ ಸೀತಾ ಪಾತ್ರಕ್ಕೆ ರೂ. 12 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿತ್ತು.

ಕರೀನಾ ತನ್ನ ನಟನಾ ಮೊತ್ತವನ್ನು ಹೆಚ್ಚಿಸಿಕೊಳ್ಳಲು ನಿಜವಾದ ಕಾರಣವೇನು?
ಬಾಲಿವುಡ್ ಹಂಗಾಮದ ವರದಿಯೊಂದು ಕಳೆದ ವರ್ಷ ಕರೀನಾ ಕಪೂರ್‌ ಈ ಹಿಂದೆ ರೂ 6 ಕೋಟಿಯಿಂದ 8 ಕೋಟಿವರೆಗೆ ಸಿನಿಮಾ ನಟನಾ ಮೊತ್ತವನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಿಕೊಂಡಿತ್ತು. ಆದರೆ ಅವರು ಈ ಸಲ ಸೀತಾ ಪಾತ್ರಕ್ಕಾಗಿ ತಮ್ಮ ಸಿನಿಮಾ ಶುಲ್ಕವನ್ನು ದ್ವಿಗುಣಗೊಳಿಸಿದ್ದಾರೆ. ಈ ಸೀತಾ ಪಾತ್ರದ ಶೂಟಿಂಗ್‌ ಹಲವು ತಿಂಗಳುಗಳ ಕಾಲ ನಡೆಯುವುದರಿಂದ ಕರೀನಾ ಕಪೂರ್‌ ತಮ್ಮ ಶುಲ್ಕವನ್ನು ಹೆಚ್ಚಿಸಿಕೊಂಡಿದ್ದಾರೆ.

ಇದನ್ನೂ ಓದಿ: Urfi Javed: ಅಂಥ ಡ್ರೆಸ್ ಧರಿಸಿ ರಸ್ತೆಯಲ್ಲಿ ಯಾರು ಹೋಗ್ತಾರೆ? ಉರ್ಫಿ ಜೊತೆ ಬಾಲಿವುಡ್ ನಟಿಯ ಕ್ಯಾಟ್​ಫೈಟ್!

ಕರೀನಾ ಕಪೂರ್‌ ತಮ್ಮ ಶುಲ್ಕವನ್ನು ಏಕೆ ಹೆಚ್ಚಿಸಿಕೊಂಡಿದ್ದಾರೆ ಅದು ನಮ್ಮ ದೇಶದ ಮಹಾಕಾವ್ಯ ರಾಮಾಯಣದ ಸೀತಾ ಪಾತ್ರಕ್ಕೆ ಎಂದು ಗೊತ್ತಾದ ಮೇಲೂ ತಮ್ಮ ಶುಲ್ಕ ಏರಿಸಿಕೊಂಡಿರುವುದು ಸರಿಯಲ್ಲ ಎಂದು ಹಲವು ವದಂತಿಗಳು ಹಬ್ಬಿದ್ದವು. ಇಲ್ಲಿ ಧರ್ಮದ ವಿಚಾರವನ್ನು ತೆಗೆದುಕೊಂಡು ಅನೇಕ ವದಂತಿಗಳನ್ನು ಸುಖಾ ಸುಮ್ಮನೇ ಸೃಷ್ಟಿಸಿದ್ದಾರೆ.

ವದಂತಿಗಳ ಬಗ್ಗೆ ಕರೀನಾ ಏನು ಹೇಳಿದ್ದಾರೆ
ಈ ವಿಷಯ ಭಾರಿ ಟ್ರೋಲಿಂಗ್‌ ಆದ ಕಾರಣ ಕರೀನಾ ಕಪೂರ್‌ “ ನಾನು ಯಾವುದಕ್ಕೂ ವಿವರಣೆ ನೀಡಿಲ್ಲ. ಮುಂದೆನೂ ನೀಡುವುದಿಲ್ಲ. ನಿಜ ಹೇಳಬೇಕೆಂದರೆ ಆ ಸೀತಾ ಪಾತ್ರಕ್ಕೆ ನಾನು ಆಯ್ಕೆಯೇ ಆಗಿಲ್ಲ. ಅದು ಏಕೆ ಎಂದು ನನಗೆ ತಿಳಿದಿಲ್ಲ. ಆ ಪಾತ್ರಕ್ಕೆ ಆಯ್ಕೆ ಆಗದ ಕಾರಣ ಕೆಲವರು ಇಂತಹ ಕಥೆ ಸೃಷ್ಟಿ ಮಾಡಿದ್ದಾರೆ. ಕೆಲವರಿಗೆ ಇಂತಹ ಕಥೆಗಳೇ ಬೇಕಿರುತ್ತವೆ. ಆ ಕಥೆ ಈ ಸಲ ನನ್ನನ್ನು ಸುತ್ತುವರಿದಿದೆ. ಅಷ್ಟೆ. ಇದರಿಂದ ನನಗೇನು ಬೇಜಾರು ಇಲ್ಲ. ಈ ಬಗ್ಗೆ ನಾನು ಏನು ಹೇಳುವುದಿಲ್ಲ. ಈ ವದಂತಿ ಮೊದಲು ಕಾಣಿಸಿಕೊಂಡಿದ್ದು, ಇನ್ಸ್‌ಟಾಗ್ರಾಮ್‌ ಜಾಲತಾಣದಲ್ಲಿ ಆಗಿದೆ. ಆದರೆ ಅದನ್ನು ಯಾರು ಪೋಸ್ಟ್‌ ಮಾಡಿದ್ದಾರೆ ಎಂಬುದು ಇನ್ನು ತಿಳಿದು ಬಂದಿಲ್ಲ” ಎಂದು ಹೇಳಿದರು.

ಕರೀನಾ ಅವರ ನಟ-ಪತಿ ಸೈಫ್ ಅಲಿ ಖಾನ್ ಅವರು ರಾಮಾಯಣ, ಆದಿಪುರುಷನಿಂದ ಸ್ಫೂರ್ತಿ ಪಡೆದ ಮತ್ತೊಂದು ಚಿತ್ರದಲ್ಲಿ ಲಂಕೇಶ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಮಾಯಣದಲ್ಲಿ ರಾವಣನ ಇನ್ನೊಂದು ಹೆಸರು ಲಂಕೇಶ್ ಎಂದು ಆಗಿರುತ್ತದೆ.

ಇದನ್ನೂ ಓದಿ:  Samantha Ruth Prabhu: ಕನಸುಗಳನ್ನು ಬೆನ್ನತ್ತಿ, ಅವುಗಳೇ ನಿಮ್ಮನ್ನು ರೂಪಿಸುತ್ತವೆ; ವಿದ್ಯಾರ್ಥಿಗಳಿಗೆ ಸಮಂತಾ ಕಿವಿಮಾತು

ಕಳೆದ ವರ್ಷ ವದಂತಿಗಳು ಹರಿದಾಡಲು ಪ್ರಾರಂಭಿಸಿದ ನಂತರ, ಕೆಲವು ಟ್ವಿಟರ್ ಬಳಕೆದಾರರು “ಕರೀನಾ ಕಪೂರ್‌ ಖಾನ್‌ ಅವರು, ಸೀತಾ ಪಾತ್ರಕ್ಕಾಗಿ ತನ್ನ ಶುಲ್ಕವನ್ನು ಹೆಚ್ಚಿಸಿದ್ದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿದೆ ಎಂದು ಹೇಳಿದ್ದಾರೆ. ಪುರುಷ ನಟರು ತಮ್ಮ ಶುಲ್ಕವನ್ನು ಹೆಚ್ಚಿಸುವ ಬಗ್ಗೆ ಇದೇ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆಯೇ ” ಎಂಬ ಚರ್ಚೆಗೆ ಈ ವಿಷಯ ಮುನ್ನಡಿ ಬರೆಯಿತು ಎಂದು ಹೇಳಬಹುದು.

ಕರೀನಾ ಅವರ ಪ್ರಸ್ತುತ ಸಿನೆಮಾ  
ಕರೀನಾ ಪ್ರಸ್ತುತ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ, ಇದು ಅಮೀರ್ ಖಾನ್ ಲಾಲ್ ಪಾತ್ರದಲ್ಲಿ ನಟಿಸಿದರೆ, ಕರೀನಾ ಕಪೂರ್‌ ರೂಪಾ ಪಾತ್ರಕ್ಕೆ ಬಣ್ನ ಹಚ್ಚಿದ್ದಾರೆ. ಅದ್ವೈತ್ ಚೌಹಾಣ್ ನಿರ್ದೇಶನದ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಮೋನಾ ಸಿಂಗ್ ಅಮೀರ್ ಅವರ ತಾಯಿಯಾಗಿ ನಟಿಸಿದ್ದಾರೆ.
Published by:Ashwini Prabhu
First published: