• Home
  • »
  • News
  • »
  • entertainment
  • »
  • Koffee with Karan 7: ಕತ್ರಿನಾ-ವಿಕ್ಕಿ ಮದುವೆಗೆ ಆಹ್ವಾನಿಸದಿರುವುದಕ್ಕೆ ಕರಣ್​ಗೆ ತುಂಬಾ ಮುಜುಗರವಾಗಿತ್ತಂತೆ!

Koffee with Karan 7: ಕತ್ರಿನಾ-ವಿಕ್ಕಿ ಮದುವೆಗೆ ಆಹ್ವಾನಿಸದಿರುವುದಕ್ಕೆ ಕರಣ್​ಗೆ ತುಂಬಾ ಮುಜುಗರವಾಗಿತ್ತಂತೆ!

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್

ಇಲ್ಲೂ ಸಹ ಹೀಗೆ ಆಗಿದೆ ನೋಡಿ.. ಬಾಲಿವುಡ್ ನಲ್ಲಿ ತುಂಬಾನೇ ಹ್ಯಾಪನ್ನಿಂಗ್ ಕಪಲ್ ಆಗಿರುವ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಅವರ ಮದುವೆಗೆ ಬಾಲಿವುಡ್ ನ ಜನಪ್ರಿಯ ನಿರ್ಮಾಪಕರಲ್ಲಿ ಒಬ್ಬರಾದ ಕರಣ್ ಜೋಹರ್ ಅವರನ್ನು ಆಹ್ವಾನಿಸಿರಲಿಲ್ಲ. ತಮ್ಮ ಜನಪ್ರಿಯ ಚಾಟ್ ಶೋ ‘ಕಾಫಿ ವಿತ್ ಕರಣ್’ ನ ಏಳನೇ ಸೀಸನ್ ಇನ್ನೇನು ಮುಗಿಸುತ್ತಾರೆ ಅಂತ ಹೇಳುವಾಗ ಅನೇಕ ಸತ್ಯ ಸಂಗತಿಗಳು ಮತ್ತು ತುಂಬಾ ದಿನಗಳಿಂದ ಮನಸ್ಸಿನಲ್ಲಿಯೇ ಉಳಿದಿರುವ ಅನೇಕ ಮಾತುಗಳು ಈಗ ಒಂದೊಂದಾಗಿ ಹೊರ ಬರುತ್ತಿವೆ

ಮುಂದೆ ಓದಿ ...
  • Share this:

ಮದುವೆ (Marriage) ಅಂದಮೇಲೆ ನಮ್ಮ ಹತ್ತಿರದ ಬಂಧು ಬಳಗದವರನ್ನು, ಸ್ನೇಹಿತರನ್ನು ಮತ್ತು ನಮ್ಮ ಜೊತೆಯಲ್ಲಿ ಕೆಲಸ ಮಾಡುವ ಸಹದ್ಯೋಗಿಗಳನ್ನು ಕರೆಯುವುದುಂಟು. ಹೀಗೆ ಮದುವೆ ತಯಾರಿಯಲ್ಲಿ ಇದ್ದಾಗ ನಾವು ಆ ಕೆಲಸದ ಒತ್ತಡದಲ್ಲಿ ಕೆಲವರನ್ನು ಮದುವೆಗೆ ಆಹ್ವಾನಿಸುವುದನ್ನೇ ಮರೆತು ಬಿಡುತ್ತೇವೆ. ಎಷ್ಟೋ ಸಾರಿ ನಾವು ಮದುವೆಯಾದ ಮೇಲೆ ನಮಗೆ ಸಿಗುವ ಅನೇಕ ಸ್ನೇಹಿತರು (Friends) ‘ಏನಪ್ಪಾ ಮದುವೆ ಮಾಡಿಕೊಂಡೆ, ನಮ್ಮನ್ನ ಕರೆಯೊದನ್ನ ಮರೆತು ಬಿಟ್ಟೆಯಾ ಹೇಗೆ’ ಅಂತ ಕೇಳಿದಾಗ ನಮಗೆ ಒಂದು ರೀತಿಯ ಮುಜುಗರದ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡ ಹಾಗೆ ಆಗಿ ಅವರಿಗೆ ತಕ್ಷಣಕ್ಕೆ ಏನು ಉತ್ತರ ನೀಡಬೇಕು ಅಂತ ಅರ್ಥವಾಗುವುದಿಲ್ಲ. ಹಾಗೆಯೇ ನಾವು ನಮ್ಮ ಮದುವೆಗೆ ನಮ್ಮ ಆಪ್ತರನ್ನು ಆಹ್ವಾನಿಸದೆ ಇದ್ದಾಗ ಅವರಿಗೂ ಅದೇ ರೀತಿಯ ಮುಜುಗರ (Embarrassment) ಆಗುವುದು ಸಹಜ.


ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿವಾಹದ ಬಗ್ಗೆ ಕರಣ್ ಏನು ಹೇಳಿದ್ರು ಗೊತ್ತಾ
ಇಲ್ಲೂ ಸಹ ಹೀಗೆ ಆಗಿದೆ ನೋಡಿ.. ಬಾಲಿವುಡ್ ನಲ್ಲಿ ತುಂಬಾನೇ ಹ್ಯಾಪನ್ನಿಂಗ್ ಕಪಲ್ ಆಗಿರುವ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಅವರ ಮದುವೆಗೆ ಬಾಲಿವುಡ್ ನ ಜನಪ್ರಿಯ ನಿರ್ಮಾಪಕರಲ್ಲಿ ಒಬ್ಬರಾದ ಕರಣ್ ಜೋಹರ್ ಅವರನ್ನು ಆಹ್ವಾನಿಸಿರಲಿಲ್ಲ. ತಮ್ಮ ಜನಪ್ರಿಯ ಚಾಟ್ ಶೋ ‘ಕಾಫಿ ವಿತ್ ಕರಣ್’ ನ ಏಳನೇ ಸೀಸನ್ ಇನ್ನೇನು ಮುಗಿಸುತ್ತಾರೆ ಅಂತ ಹೇಳುವಾಗ ಅನೇಕ ಸತ್ಯ ಸಂಗತಿಗಳು ಮತ್ತು ತುಂಬಾ ದಿನಗಳಿಂದ ಮನಸ್ಸಿನಲ್ಲಿಯೇ ಉಳಿದಿರುವ ಅನೇಕ ಮಾತುಗಳು ಈಗ ಒಂದೊಂದಾಗಿ ಹೊರ ಬರುತ್ತಿವೆ.


ಅಂತಿಮ ಎಪಿಸೋಡ್ ನಲ್ಲಿ ಕರಣ್ ಅವರು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ವಿವಾಹದ ಬಗ್ಗೆ ಮಾತನಾಡಿದರು. ಅವರನ್ನು ಮದುವೆಗೆ ಆಹ್ವಾನಿಸದೆ ಇರುವುದು ಹೇಗೆ ಅವರಿಗೆ ತುಂಬಾ ಮುಜುಗರವನ್ನುಂಟು ಮಾಡಿತು ಅಂತ ಹೇಳಿಕೊಂಡರು.


ಕತ್ರಿನಾ ಮತ್ತು ವಿಕ್ಕಿ ಮದುವೆಯ ನಂತರ, ಕರಣ್ ಮತ್ತು ಕತ್ರಿನಾ-ವಿಕ್ಕಿ ನಡುವೆ ಎಲ್ಲವೂ ಚೆನ್ನಾಗಿದೆಯೇ ಅಥವಾ ಏನಾದರೂ ಆಗಿದೆಯೇ ಎಂದು ಜನರು ಮಾತಾಡಲು ಶುರು ಮಾಡಿದ್ರಂತೆ ಮತ್ತು ಕರಣ್ ಅವರನ್ನ ಮದುವೆಗೆ ಏಕೆ ಆಹ್ವಾನಿಸಲಿಲ್ಲ ಎಂದು ಮಾತಾಡುತ್ತಿದ್ದರು ಅಂತ ಸುದ್ದಿ ಮಾಧ್ಯಮವೊಂದು ವರದಿ ಮಾಡಿತ್ತು.


ಮದುವೆಗೆ ಆಹ್ವಾನಿಸದೆ ಇದ್ದುದ್ದಕ್ಕೆ ಕರಣ್ ಗೆ ಮುಜುಗರವಾಗಿತ್ತಂತೆ..
"ವಿಕ್ಕಿ ಮತ್ತು ಕತ್ರಿನಾ ಮದುವೆಯಾಗುತ್ತಿದ್ದಾಗ, ಅದು ನನಗೆ ತುಂಬಾ ಮುಜುಗರವನ್ನುಂಟು ಮಾಡಿತು. ಜನರು ನೀವು ಅವರ ಬಗ್ಗೆ ನಮಗೆ ಹೇಳಲಿಲ್ಲ, ನೀವು ಮದುವೆಯಲ್ಲಿದ್ದೀರಿ ಮತ್ತು ಇನ್ನೂ ನಮಗೆ ಹೇಳುತ್ತಿಲ್ಲ ಇತ್ಯಾದಿಗಳನ್ನು ಕೇಳುವ ಹಂತಕ್ಕೆ ಇದು ತಲುಪಿತು.


ಇದನ್ನೂ ಓದಿ: Rashmika Mandanna - Vijay Deverakona: ವಿಜಯ್ ದೇವರಕೊಂಡ ಜೊತೆ ಮಾಲ್ಡೀವ್ಸ್​ಗೆ ಹಾರಿದ ರಶ್ಮಿಕಾ ಮಂದಣ್ಣ 


ಆದರೆ ನನ್ನನ್ನು ಮದುವೆಗೆ ಆಹ್ವಾನಿಸಲಾಗಿಲ್ಲ ಎಂದು ಒಪ್ಪಿಕೊಳ್ಳಲು ತುಂಬಾ ಮುಜುಗರವಾಯಿತು. ಮದುವೆಯ ನಂತರ ಸಹಾನುಭೂತಿ ಮತ್ತು ಸಂದೇಹಗಳು ಎರಡು ಬಂದವು. ನಿಮ್ಮನ್ನು ಏಕೆ ಆಹ್ವಾನಿಸಲಿಲ್ಲ ಎಂದು ಜನರು ಕೇಳಿದರು ಮತ್ತು ನಿಮ್ಮ ಮಧ್ಯೆ ಎಲ್ಲವೂ ಸರಿಯಾಗಿದೆಯೇ ಅಂತ ಕೇಳಿದರಂತೆ” ಎಂದು ಕರಣ್ ಜೋಹರ್ ಅವರನ್ನು ಉಲ್ಲೇಖಿಸಿ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.


ಆದರೆ "ಅನುರಾಗ್ ಕಶ್ಯಪ್ ಅವರನ್ನು ಸಹ ವಿಕ್ಕಿ ಮತ್ತು ಕ್ಯಾಟ್ ಅವರ ಮದುವೆಗೆ ಆಹ್ವಾನಿಸಿಲ್ಲ ಎಂದು ತಿಳಿದಾಗ, ನನ್ನ ಮನಸ್ಸಿಗೆ ಸ್ವಲ್ಪ ನೆಮ್ಮದಿ ಮತ್ತು ಶಾಂತಿ ಸಿಕ್ಕಿತು" ಎಂದು ಕರಣ್ ಹೇಳಿದರು.


ವಿಕ್ಕಿ ಹಿಂದೊಮ್ಮೆ ಅನುರಾಗ್ ಅವರ ಸಹಾಯಕ ನಿರ್ದೇಶಕರಾಗಿದ್ದರಂತೆ!
ವಿಕ್ಕಿ ಕೌಶಲ್ ‘ಗ್ಯಾಂಗ್ಸ್ ಆಫ್ ವಸೇಪುರ್’ ಚಿತ್ರದಲ್ಲಿ ಅನುರಾಗ್ ಕಶ್ಯಪ್ ಅವರ ಸಹಾಯಕ ನಿರ್ದೇಶಕರಾಗಿದ್ದರು. ಅಲ್ಲದೆ, ಅನುರಾಗ್ ಕಶ್ಯಪ್ ಅವರು ನಿರ್ಮಿಸಿದ ಹಲವಾರು ಚಿತ್ರಗಳಲ್ಲಿ ಅವರು ಭಾಗವಾಗಿದ್ದಾರೆ. ಕತ್ರಿನಾ ಮತ್ತು ವಿಕ್ಕಿ ಕಳೆದ ವರ್ಷ ಡಿಸೆಂಬರ್ 9 ರಂದು ರಾಜಸ್ಥಾನದ ಸವಾಯ್ ಮಾಧೋಪುರದಲ್ಲಿ ವಿವಾಹವಾಗಿದ್ದರು.


ಇದನ್ನೂ ಓದಿ: Adipurush: ಆದಿಪುರುಷ್ ಬಜೆಟ್​​ನಲ್ಲಿ ಸ್ಯಾಂಡಲ್​ವುಡ್​ನಲ್ಲಿ 9ಕ್ಕೂ ಹೆಚ್ಚು ಬ್ಲಾಕ್​ ಬಸ್ಟರ್ ಸಿನಿಮಾ!


ಏತನ್ಮಧ್ಯೆ, ಫಿನಾಲೆ ಸಂಚಿಕೆಯಲ್ಲಿ ‘ಕಾಫಿ ವಿತ್ ಕರಣ್’ ಅವಾರ್ಡ್ಸ್ ನ ತೀರ್ಪುಗಾರರಾಗಿ ತನ್ಮಯ್ ಭಟ್, ನಿಹಾರಿಕಾ ಎನ್ಎಂ, ಕುಶಾ ಕಪಿಲಾ ಮತ್ತು ಡ್ಯಾನಿಶ್ ಸೇಠ್ ಕಾಣಿಸಿಕೊಳ್ಳಲಿದ್ದಾರೆ. ಸೆಪ್ಟೆಂಬರ್ 29 ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನಲ್ಲಿ ಈ ಎಪಿಸೋಡ್ ಪ್ರಸಾರವಾಗಲಿದೆ.

Published by:Ashwini Prabhu
First published: