Bigg Boss 15 Couple: ತೇಜಸ್ವಿಯನ್ನು ಮೊದಲ ಬಾರಿ ತಬ್ಬಿಕೊಂಡಾಗ ಅನಿಸಿದ್ದೇನು ? ಸೀಕ್ರೆಟ್ ಹೇಳಿದ ಕರಣ್

ಮೊದಲ ಅಪ್ಪುಗೆ ಹೇಗಿತ್ತು ಎನ್ನುವುದನ್ನು ಬಿಗ್​ಬಾಸ್ ಖ್ಯಾತಿಯ ಕರಣ್ ಕುಂದ್ರಾ ರಿವೀಲ್ ಮಾಡಿದ್ದಾರೆ. ತೇಜಸ್ವಿಯನ್ನು ಮೊದಲ ಬಾರಿ ಹಗ್ ಮಾಡಿದ ಖುಷಿಯನ್ನು ನೆನಪಿಸಿಕೊಂಡಿದ್ದಾರೆ.

Karan Kundra Tejaswi Prakash

Karan Kundra Tejaswi Prakash

  • Share this:
ಬಿಗ್​ಬಾಸ್ 15ರಲ್ಲಿ (Bigg Boss 15) ಎಲ್ಲರ ಮನಸು ಗೆದ್ದ ಕ್ಯೂಟ್ ಜೋಡಿ ತೇಜಸ್ವಿ ಪ್ರಕಾಶ್(Tejaswi Prakash) ಹಾಗೂ ಕರಣ್ ಕುಂದ್ರಾ (Karan Kundra) ಈಗ ಪಾಪ್ಪರಾಜಿಗಳ ಹಾಟ್ ಫೇವರೇಟ್ ಜೋಡಿ. ಕಳೆದೊಂದು ವಾರದಿಂದ ವ್ಯಾಲೆಂಟೈನ್ಸ್ ವೀಕ್ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಬಿಗ್​ಬಾಸ್​ನಲ್ಲಿ ಸಖತ್ ರೊಮ್ಯಾಂಟಿಕ್ (Romantic) ಆಗಿದ್ದ ಕಿರುತೆರೆ(Small Screen) ಜೋಡಿಯ ಮದುವೆಗೆ ಅವರ ಮನೆಯವರಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಈ ಜೋಡಿ ಇನ್ನಷ್ಟು ಥ್ರಿಲ್ ಆಗಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಕರಣ್ ಕುಂದ್ರಾ ಗೇಮ್ ಗೊಡವೆ ಬಿಟ್ಟು ತೇಜಸ್ವಿ ಹಿಂದೆ ಸುತ್ತಿದ್ದನ್ನು ಎಲ್ಲರೂ ನೋಡಿದ್ದೇವೆ. ಅಂತೂ ಲವ್ ಸ್ಟೋರಿ (Love Story) ಜೊತೆ ಜೊತೆಗೇ ಟಾಸ್ಕ್, ವೋಟಿಂಗ್ ಎಲ್ಲದರಲ್ಲೂ ಗೆದ್ದ ತೇಜಸ್ವಿ ಪ್ರಕಾಶ್ ಗೆಲುವು ಬಹುತೇಕ ನಿರೀಕ್ಷಿತವಾಗಿತ್ತು. ಹಾಗೆಯೇ ನಟಿ (Actress) ಟ್ರೋಫಿ ಜೊತೆ ಮನೆಗೆ ಬಂದಿದ್ದು ಮಾತ್ರವಲ್ಲದೆ ಏಕ್ತಾ ಕಪೂರ್ ಅವರ ನಾಗಿನ್(Nagin) ಧಾರವಾಹಿಯ ಈ ಸೀಸನ್​ಗೆ ನಟಿ ಆಯ್ಕೆಯಾಗಿದ್ದಾರೆ. ಇದೀಗ ಕರಣ್ ಕುಂದ್ರಾ ತಮ್ಮ ರೊಮ್ಯಾಂಟಿಕ್ ರಿಲೇಷನ್​ಶಿಪ್ ಕುರಿತ ಕೆಲವೊಂದು ವಿಚಾರಗಳನ್ನು ಶೇರ್ ಮಾಡಿದ್ದಾರೆ.

ಕರಣ್ ಕುಂದ್ರಾ ಕಿರುತೆರೆಯ ಹೊಸ ಲವ್ ಬಾಯ್(Love Boy). ಕರಣ್ ಒಮ್ಮೆ ಕೋಪದಿಂದ ಹೆಸರುವಾಸಿಯಾಗಿದ್ದರು. ಆದರೆ ಈಗ ತೇಜಸ್ವಿ ಪ್ರಕಾಶ್ ಅವರೊಂದಿಗೆ ಲವ್​ನಲ್ಲಿ ಬಿದ್ದ ನಂತರ ಅವರು ತಮ್ಮ ಅನೇಕ ಮಹಿಳಾ ಅಭಿಮಾನಿಗಳಿಗೆ ಲವ್ಲೀ ಬಾಯ್ ಆಗಿದ್ದಾರೆ. ಬಾಲಿವುಡ್ ಹಂಗಾಮಾದೊಂದಿಗೆ ಮಾತನಾಡುವಾಗ, ಕರಣ್ ಅವರು 'ಬಿಗ್ ಬಾಸ್' ಮನೆಯಲ್ಲಿ ಮೊದಲ ಬಾರಿಗೆ ತೇಜಸ್ವಿ ಪ್ರಕಾಶ್​ನನ್ನು ತಬ್ಬಿಕೊಂಡಾಗ ಏನಾಯಿತು ಎನ್ನುವುದನ್ನು ಹೇಳಿದ್ದಾರೆ.

ಮೊದಲ ಅಪ್ಪುಗೆ

ಕಾರ್ಯಕ್ರಮದ ಸ್ಮರಣೀಯ ಕ್ಷಣಗಳ ಬಗ್ಗೆ ಕರಣ್ ಕುಂದ್ರಾ ಪ್ರತಿಕ್ರಿಯಿಸಿ, ತೇಜಸ್ವಿ ಅವರನ್ನು ಮೊದಲ ಬಾರಿಗೆ ತಬ್ಬಿಕೊಂಡ(Hugging) ಕ್ಷಣ ನೆನಪಿದೆ ಎಂದಿದ್ದಾರೆ. ತನ್ನ ಹೆಂಡತಿ ಅಥವಾ ಸಂಗಾತಿಯೊಂದಿಗೆ ಹಂಚಿಕೊಳ್ಳಬಹುದು ಎಂಬ ಭಾವನೆ ತೇಜಸ್ವಿಯನ್ನು ತಬ್ಬಿಕೊಂಡಾಗ ಬಂದಿತ್ತು ಎಂದಿದ್ದಾರೆ ಕರಣ್. ತೇಜಸ್ವಿ ಅವರನ್ನು ಭೇಟಿಯಾದ ನಂತರ, ಮದುವೆಯ ಬಗ್ಗೆ ಅವರ ಆಲೋಚನೆಗಳೇ ಬದಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Gehraiyaan Movie: ದೀಪಿಕಾ ಸಿನಿಮಾ ಕೆಟ್ಟದಾಗಿದೆ ಎಂದ ಕಂಗನಾ, ಮೈ ತೋರಿಸಿದ್ರೂ ಸಿನಿಮಾ ಬಚಾವಾಗ್ಲಿಲ್ಲ ಎಂದ ಕ್ವೀನ್

ಪ್ರಯಾಣದ ಕನಸಿಗೆ ಬ್ರೇಕ್, ನಾಗಿನ್​ನಲ್ಲಿ ಬ್ಯುಸಿ

'ಬಿಗ್ ಬಾಸ್ 15' ರ ನಂತರ ಇಬ್ಬರೂ ಟ್ರಾವೆಲ್ ಮಾಡುವ ಯೋಜನೆಯನ್ನು ಹೊಂದಿದ್ದ ಕಾರಣ, ಹೊಸ ಪ್ರಾಜೆಕ್ಟ್​ಗಳಿಗೆ ಸೈನ್ ಮಾಡಲು ಉತ್ಸುಕರಾಗಿಲ್ಲ ಎಂದಿದ್ದಾರೆ. ತೇಜಸ್ವಿನಿ 'ಬಿಗ್ ಬಾಸ್' 15 ನೇ ಸೀಸನ್ ಗೆದ್ದಿದ್ದಾರೆ. ಕಾರ್ಯಕ್ರಮದ ಸಮಯದಲ್ಲಿ, ಕರಣ್ ಮತ್ತು ತೇಜಾ ಇಬ್ಬರೂ ಪರಸ್ಪರ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ಅವರು ಬಿಗ್​ಬಾಸ್ ಮನೆಯೊಳಗೆ ಇದ್ದಾಗ ಕಾರ್ಯಕ್ರಮ ಮುಗಿದ ನಂತರ ಪರಸ್ಪರ ಗುಣಮಟ್ಟದ ಸಮಯವನ್ನು ಕಳೆಯಲು ಯೋಜಿಸುತ್ತಿದ್ದರು. ಆದರೂ ತೇಜಸ್ವಿ ಸೂರ್ಯಗೆ 'ನಾಗಿನ್ 6' (Nagin 6) ಆಫರ್ ಬಂದ ಕಾರಣ ನಟಿ ಈ ಪ್ರಾಜೆಕ್ಟ್ ಓಕೆ ಮಾಡಿದ್ದಾರೆ. ಸದ್ಯ ನಟಿ ಏಕ್ ಕಪೂರ್ ಅವರ ಕಾರ್ಯಕ್ರಮದ ಶೂಟಿಂಗ್‌ನಲ್ಲಿ(Shooting) ನಿರತರಾಗಿದ್ದಾರೆ.

ಲವ್ಲೀ ಪೋಸ್ಟ್ ಶೇರ್ ಮಾಡಿದ ಕರಣ್

ಕರಣ್ ಕುಂದ್ರಾ ಅವರು Instagram ನಲ್ಲಿ ಗೆಳತಿ ತೇಜಸ್ವಿ ಪ್ರಕಾಶ್ ಅವರೊಂದಿಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದು ಲಡ್ಡೂ ದಿನ.... ಕ್ಷಮಿಸಿ ನಾಗಿನ್ ದಿನ ಇಂದು!!! ಈ ರಾತ್ರಿ ಟ್ಯೂನ್ ಮಾಡಲು ಮರೆಯಬೇಡಿ. ಯಾರೆಲ್ಲ ಎಕ್ಸೈಟ್ ಆಗಿದ್ದೀರಿ ? ಎಂದು ಬರೆದಿದ್ದಾರೆ. ಈ ಪೋಸ್ಟ್‌ಗೆ ತೇಜಾ ಕೂಡ ಪ್ರತಿಕ್ರಿಯಿಸಿದ್ದಾರೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಕಮೆಂಟ್ ಸೆಕ್ಷನ್​ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: Malaika Arora: ಮಿರಿ ಮಿರಿ ಮಿಂಚಿದ ಮಲೈಕಾ ಅರೋರಾ..ಬೋಲ್ಡ್ ಸ್ಟೈಲ್ ಫೋಟೋಶೂಟ್​​ನಲ್ಲಿ ಹಾಟ್ ನಟಿ!

ನಾಗಿನ್ ಶೂಟ್ ನಂತರವೂ ಭೇಟಿ

ಕರಣ್ ಅವರು ತೇಜಸ್ವಿಯವರ ಚಿತ್ರೀಕರಣದ ನಂತರ ಪ್ರತಿದಿನ ಭೇಟಿಯಾಗುವುದನ್ನು ಮಿಸ್ ಮಾಡುವುದಿಲ್ಲ. ಇದನ್ನು ತೇಜಸ್ವಿ ಕೂಡಾ ತುಂಬಾ ಮೆಚ್ಚಿಕೊಳ್ಳುತ್ತಾರೆ. ತೇಜಸ್ವಿ ಅವರು ಸ್ವಲ್ಪ ಪ್ರೈವಸಿ ಬಯಸುತ್ತಿರುವುದರಿಂದ ಅವರು ಪಾಪ್‌ಗಳಿಂದ ದೂರವಿರಲು ಪ್ರಯತ್ನಿಸುತ್ತಿದ್ದಾರೆ ಎಂದು ರಿವೀಲ್ ಮಾಡಿದ್ದಾರೆ.
Published by:Divya D
First published: