HOME » NEWS » Entertainment » KARAN JOHAR WAS RAGGED IN COLLEGE ABOUT HIS ACTING DEBUT AS CHILD ARTIST AE

Karan Johar: 15ನೇ ವಯಸ್ಸಿನಲ್ಲಿ ಮಾಡಿದ್ದ ಕೆಲಸದಿಂದ 18ನೇ ವರ್ಷದವರಾಗಿದ್ದಾಗ ಕಷ್ಟ ಅನುಭವಿಸಿದ್ದರಂತೆ ಕರಣ್​ ಜೋಹರ್..!

Indradhanush Serial: ದಿಲ್​ವಾಲೆ ದುಲ್ಹನಿಯಾ ಲೇಜಾಯೇಂಗೆ ಸಿನಿಮಾದಲ್ಲೇ ಕರಣ್​ ಮೊದಲು ಎಂದು ಅವರ ಅಭಿಮಾನಿಗಳು ತಿಳಿದಿದ್ದಾರೆ. ಆದರೆ ಅದಕ್ಕೂ ಮೊದಲು ಬಾಲ ನಟನಾಗಿ ಧಾರಾವಾಹಿಯಲ್ಲಿ ಕರಣ್​ ನಟಿಸಿದ್ದಾರೆ.

Anitha E | news18-kannada
Updated:May 25, 2020, 11:11 PM IST
Karan Johar: 15ನೇ ವಯಸ್ಸಿನಲ್ಲಿ ಮಾಡಿದ್ದ ಕೆಲಸದಿಂದ 18ನೇ ವರ್ಷದವರಾಗಿದ್ದಾಗ ಕಷ್ಟ ಅನುಭವಿಸಿದ್ದರಂತೆ ಕರಣ್​ ಜೋಹರ್..!
ಕರಣ್​ ಜೋಹರ್​
  • Share this:
ಕರಣ್​ ಜೋಹರ್​ ಬಾಲಿವುಡ್​ನ ಸ್ಟಾರ್​ ಫಿಲ್ಮ್​ ಮೇಕರ್​. ಸಿನಿಮಾ ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಮಾಡುವ ಕರಣ್​ ಜೋಹರ್​ ಆಗಾಗ ಬಣ್ಣ ಹಚ್ಚಿದ್ದೂ ಇದೆ. ಶಾರುಖ್​ ಖಾನ್​ ಹಾಗೂ ಕಾಜೋಲ್​ ನಟಿಸಿರುವ ದಿಲ್​ವಾಲೆ ದುಲ್ಹನಿಯಾ ಲೇಜಾಯೇಂಗೆ  ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ಬಾಂಬೆ ವೆಲ್ವೆಟ್​ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 

ದಿಲ್​ವಾಲೆ ದುಲ್ಹನಿಯಾ ಲೇಜಾಯೇಂಗೆ ಸಿನಿಮಾದಲ್ಲೇ ಕರಣ್​ ಮೊದಲು ಎಂದು ಅವರ ಅಭಿಮಾನಿಗಳು ತಿಳಿದಿದ್ದಾರೆ. ಆದರೆ ಅದಕ್ಕೂ ಮೊದಲು ಬಾಲ ನಟನಾಗಿ ಧಾರಾವಾಹಿಯಲ್ಲಿ ಕರಣ್​ ನಟಿಸಿದ್ದಾರೆ.

karan johar is ready to play father charecters in bollywood movies
ನಟ, ನಿರ್ಮಾಪಕ, ನಿರ್ದೇಶಕ ಹಾಗೂ ವಿತರಕ ಕರಣ್​ ಜೋಹರ್​ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿದ್ದಾರೆ.


ಹೌದು, ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಇಂದ್ರಧನುಷ್​ ಎಂಬ ಧಾರಾವಾಹಿಯಲ್ಲಿ ಕರಣ್​ ಬಾಲ ನಟನಾಗಿ ಎಂಟ್ರಿಕೊಟ್ಟಿದ್ದರು. ಅದು ಅವರು 15 ವರ್ಷದವರಿದ್ದಾಗ ಅದರಲ್ಲಿ ನಟಿಸಿದ್ದರು. ಅದೊಂದು ಸೈನ್ಸ್​ ಫಿಕ್ಷನ್​ ಆಗಿದ್ದು ಅನ್ಯಗ್ರಹದ ಜೀವಿಗಳ ಕುರಿತಾದ ಸ್ಟೋರಿ ಹೊಂದಿದ್ದ ಸೀರಿಯಲ್​ ಆಗಿತ್ತು. 
View this post on Instagram
 

On Karan Johar's birthday, here is something unknown about him.


A post shared by Latest Bollywood Videos (@bollywoodlatestvideos) on

ಆ ಧಾರಾವಾಹಿ ಕರಣ್​ ಕಾಲೇಜಿಗೆ ಅಂದರೆ ಸೆಕೆಂಡ್​ ಪಿಯುಸಿಗೆ ಬಂದಾಗ ಪ್ರಸಾರಗೊಂಡಿದೆ. ಇದರಿಂದಾಗಿ ಅವರಿಗೆ ಕಾಲೇಜ್​ನಲ್ಲಿ ರ‍್ಯಾಗಿಂಗ್​ ಮಾಡುತ್ತಿದ್ದರಂತೆ. ಅವರ ಅಭಿನಯವನ್ನು ನೋಡಿ ಬಂದವರೆಲ್ಲ ಕರಣ್​ಗೆ ರೇಗಿಸುತ್ತಿದ್ದರಂತೆ. ಹೀಗೆಂದು ರಿತೇಶ್​ ದೇಖ್​ಮುಖ್​ ಹಾಗೂ ಸಾಜಿದ್​ ಖಾನ್​ ಅವರ ಚಾಟ್ ಶೋನಲ್ಲಿ ಕರಣ್​ ಹೇಳಿಕೊಂಡಿದ್ದಾರೆ.ಆನಂದ್​ ಮಹೇಂದ್ರೂ ಅವರು ನಿರ್ದೇಶಿಸಿ ನಿರ್ಮಿಸಿದ್ದ ಧಾರಾವಾಹಿ ಇಂದ್ರಧನುಷ್​ನಲ್ಲಿ ಶ್ರೀಕಾಂತ್​ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಪ್ರೊಡಕ್ಷನ್​ ಕೆಲಸಗಳು ತಡವಾದ ಕಾರಣ ಅದು ತಡವಾಗಿ ಪ್ರಸಾರವಾಗಿತ್ತು. 15ನೇ ವಯಸ್ಸಿನಲ್ಲಿ ಮಾಡಿದ್ದ ಕೆಲಸದಿಂದ 18ನೇ ವರ್ಷದಲ್ಲಿ ಸಹ ವಿದ್ಯಾರ್ಥಿಗಳಿಂದ ರ‍್ಯಾಗಿಂಗ್ ಮಾಡಿಕೊಳ್ಳಬೇಕಾಗಿತ್ತು. ಈಗ ಅವುಗಳನ್ನು ನೋಡಿದರೆ ನನಗೆ ಮುಜುಗರವಾಗುತ್ತದೆ ಎಂದಿದ್ದಾರೆ ಕರಣ್​ ಜೋಹರ್​.

 

Renuka-Ashutosh Rana: ವಾಯ್ಸ್​ ಮೇಲ್​ನಿಂದ ಆರಂಭವಾದ ರೇಣುಕಾ-ಅಶುತೋಷ್​ರ ಕ್ಯೂಟ್​ ಲವ್​ ಸ್ಟೋರಿಗೆ 19 ವರ್ಷ..!​

First published: May 25, 2020, 10:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories